ಹುಡುಕಿ

Il Papa, auguri di Natale ai cristiani d'Oriente

ಪೋಪ್: ಹೊಸ ವರ್ಷವು ಅನ್ವೇಷಿಸಬೇಕಾದ ಒಂದು ಯಾತ್ರೆ

ಜಗದ್ಗುರು XIV ನೇ ಲಿಯೋರವರು 2026ರ ತಮ್ಮ ಮೊದಲ ಸಾರ್ವಜನಿಕ ಬಲಿಪೂಜೆಯನ್ನು ದೇವಮಾತೆ ಮರಿಯಮ್ಮನವರ ಮಹೋತ್ಸವದಂದು ಆಚರಿಸಿದರು. ಈ ಸಂದರ್ಭದಲ್ಲಿ, ದೇವಮಾತೆ ಮರಿಯಮ್ಮನವರು ದೇವರ ಅಸ್ತ್ರವಿಲ್ಲದ ಮತ್ತು ಅಸ್ತ್ರರಹಿತಗೊಳಿಸುವ ಮುಖವನ್ನು ನಮಗೆ ಪ್ರಕಟಿಸಿದ್ದಾರೆ ಎಂದು ಅವರು ವಿಶ್ವಾಸಿಗಳಿಗೆ ಹೇಳಿದರು.

ವ್ಯಾಟಿಕನ್ ವರದಿ

ಪ್ರಭು ನಿನ್ನನ್ನು ಆಶೀರ್ವದಿಸಲಿ ಮತ್ತು ರಕ್ಷಿಸಲಿ.

ಪ್ರಭು ತನ್ನ ಮೊಗವನ್ನು ನಿನ್ನ ಮೇಲೆ ಪ್ರಕಾಶಿಸಲಿ ಮತ್ತು ನಿನಗೆ ಕೃಪೆ ತೋರಿಸಲಿ.

ಪ್ರಭು ತನ್ನ ಮೊಗವನ್ನು ನಿನ್ನ ಕಡೆ ತಿರುಗಿಸಿ ನಿನಗೆ ಶಾಂತಿ ನೀಡಲಿ.

ಈ ವಚನಗಳೊಂದಿಗೆ ಜಗದ್ಗುರು XIVನೇ ಲಿಯೋ ರವರು 2026ರ ತಮ್ಮ ಮೊದಲ ಬಲಿ ಪೂಜೆಯ ಪ್ರಭೋಧನೆಯನ್ನು ಆರಂಭಿಸಿದರು. ಇವು ಆ ದಿನದ ಮೊದಲ ವಾಚನವಾಗಿದ್ದ ಸಂಖ್ಯಾಕಾಂಡದಿಂದ  ತೆಗೆದುಕೊಳ್ಳಲಾದ ಆಶೀರ್ವಾದದ ಮಾತುಗಳಾಗಿವೆ.

ಈ ಆಶೀರ್ವಾದವು ಈಜಿಪ್ಟ್‌ನ ದಾಸ್ಯದಿಂದ ಬಿಡುಗಡೆಗೊಂಡ ಇಸ್ರಾಯೇಲ್ ಜನರಿಗೆ ಉದ್ದೇಶಿತವಾಗಿದ್ದು, ಅವರಿಗೆ ಮರುಜನ್ಮ ಮತ್ತು ಭವಿಷ್ಯದತ್ತ ತೆರೆಯಲ್ಪಟ್ಟ ಮಾರ್ಗವನ್ನು ನೀಡಿತ್ತು ಎಂದು ಜಗದ್ಗುರುಗಳು ಹೇಳಿದರು.

ಈ ರೀತಿಯಲ್ಲಿ, ಆ ದಿನದ ಧರ್ಮಾಚರಣೆ ನಮಗೆ ನೆನಪಿಸುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

ದೇವರ ಉದಾರ ಪ್ರೀತಿಯೂ, ಕರುಣೆಯೂ ಮತ್ತು ನಮ್ಮ ಸ್ವಾತಂತ್ರ್ಯದ ಪ್ರತಿಕ್ರಿಯೆಯೂ ಇದ್ದರೆ, ಪ್ರತಿದಿನವೂ ಹೊಸ ಜೀವನದ ಆರಂಭವಾಗಬಹುದು.ಆದ್ದರಿಂದ, ಮುಂದಿನ ವರ್ಷವನ್ನು—ಸುಮಾರು 5,500 ಮಂದಿ ವಿಶ್ವಾಸಿಗಳ ಸಮ್ಮುಖದಲ್ಲಿ ಜಗದ್ಗುರುಗಳು ಅನ್ವೇಷಿಸಬೇಕಾದ ತೆರೆದ ಯಾತ್ರೆಯಂತೆ ನೋಡಬೇಕು ಎಂದು ಹೇಳಿದರು.

ಮರಿಯಮ್ಮ ಮತ್ತು ಅಸ್ತ್ರವಿಲ್ಲದ ದೇವರು

ಆ ದಿನದ ದೈವಾರಾಧನ ವಿಧಿ ದೇವಮಾತೆ ಮರಿಯಮ್ಮನ ಮಹೋತ್ಸವವೂ ಹಾಗೂ ವಿಶ್ವ ಶಾಂತಿ ದಿನವೂ ಆಗಿತ್ತು.

ಈ ಎರಡೂ ಆಚರಣೆಗಳ ನಡುವೆ ಇರುವ ಆಳವಾದ ಸಂಬಂಧವನ್ನು ಜಗದ್ಗುರುಗಳು ತಮ್ಮ ಉಪದೇಶದಲ್ಲಿ ವಿವರಿಸಿದರು. ಮರಿಯಮ್ಮನವರ  ಸಹಕಾರದೊಂದಿಗೆ ದೇವರು ನಗ್ನ ಮತ್ತು ನಿರಾಯುಧನಾಗಿ ಪಾಲನೆಗೃಹದಲ್ಲಿರುವ ನವಜಾತ ಶಿಶುವಾಗಿ ನಮ್ಮ ನಡುವೆ ಬಂದನು ಎಂದು ಅವರು ಹೇಳಿದರು.

ಇದನ್ನು ದೇವರು ಮಾಡಿದ್ದು, ಎಂದು ಜಗದ್ಗುರುಗಳು ವಿವರಿಸಿದರು, ಜಗತ್ತು ಹಿಂಸೆಯಿಂದ ರಕ್ಷಿಸಲ್ಪಡುವುದಿಲ್ಲ, ಆದರೆ ಎಲ್ಲರನ್ನೂ ಅರ್ಥಮಾಡಿಕೊಳ್ಳಲು, ಕ್ಷಮಿಸಲು, ಮುಕ್ತಗೊಳಿಸಲು ಮತ್ತು ಭಯವಿಲ್ಲದೆ, ಲೆಕ್ಕಾಚಾರವಿಲ್ಲದೆ ಸ್ವೀಕರಿಸಲು ನಿರಂತರ ಪ್ರಯತ್ನಿಸುವುದರಿಂದ ರಕ್ಷಿಸಲ್ಪಡುತ್ತದೆ ಎಂಬುದನ್ನು ನಮಗೆ ಕಲಿಯುವುದು ಮರಿಯಮ್ಮನವರ  ದೈವಿಕ ಮಾತೃತ್ವದಲ್ಲಿ ಎಂದು ಪೋಪ್ ಒತ್ತಿಹೇಳಿದರು.

ಈ ಬಲಿಪೂಜೆಯಲ್ಲಿ ಸುಮಾರು 5,500 ಮಂದಿ ಭಾಗವಹಿಸಿದ್ದರು

2025 ಜುಬಿಲಿ: ಸ್ವೀಕರಿಸಿದ ಮತ್ತು ನೀಡಿದ ಕ್ಷಮೆ

ಜಗದ್ಗುರುಗಳು ತಮ್ಮ ಪ್ರಭೋಧನೆಯನ್ನು 2025ರ ಜುಬಿಲಿ ವರ್ಷದ ಕುರಿತು ಚಿಂತನೆ ಮಾಡುವ ಮೂಲಕ ಸಮಾಪ್ತಿಗೊಳಿಸಿದರು. ಈ ಜುಬಿಲಿ ವರ್ಷವು ಜನವರಿ 6ರಂದು ಅಂತ್ಯಗೊಳ್ಳಲಿದೆ.ಈ ಸಂದರ್ಭದಲ್ಲಿ ಅವರು ತಮ್ಮ ಪೂರ್ವಾಧಿಕಾರಿ ಸಂತ ಜಗದ್ಗುರು II ನೇ ಜಾನ್ ಪಾಲ್  ರವರು 2000ದ ಮಹಾ ಜುಬಿಲಿ ಸಮಾಪ್ತಿಯಲ್ಲಿ ಹೇಳಿದ ಮಾತುಗಳನ್ನು ಉಲ್ಲೇಖಿಸಿದರು.

ಮಹಾ ಜುಬಿಲಿಯು ವಿಶ್ವಾಸಿಗಳಿಗೆ ಎಷ್ಟೋ ಅದ್ಭುತ ಅವಕಾಶಗಳನ್ನು ನೀಡಿದೆ!

ಸ್ವೀಕರಿಸಿದ ಮತ್ತು ನೀಡಿದ ಕ್ಷಮೆಯ ಅನುಭವದಲ್ಲಿ, ಸ್ಮರಣೆಯಲ್ಲಿ, ಲೋಕದ ಬಡವರ ಆಕ್ರಂದನವನ್ನು ಆಲಿಸುವಲ್ಲಿ ಇತಿಹಾಸದಲ್ಲಿ ದೇವರ ರಕ್ಷಣಾತ್ಮಕ ಸಾನ್ನಿಧ್ಯವನ್ನು ನಾವು ಕೂಡ ಕಂಡಿದ್ದೇವೆ. ಭೂಮಿಯ ಮೊಗವನ್ನು ನವೀಕರಿಸುವ ಆತನ ಪ್ರೀತಿಯನ್ನು ನಾವು  ಶಾರೀರಿಕವಾಗಿ ಅನುಭವಿಸಿದ್ದೇವೆ ಎಂದರು.

07 ಜನವರಿ 2026, 17:22

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >