ಪೋಪ್ ಲಿಯೋ: ನಮ್ಮ ಲೋಕಕ್ಕೂ ನಮ್ಮ ಕುಟುಂಬಗಳಿಗೂ ಶಾಂತಿಗಾಗಿ ಪ್ರಾರ್ಥಿಸೋಣ
ವ್ಯಾಟಿಕನ್ ವರದಿ
ಶಾಂತಿ ದಿನದ ಅಂಗವಾಗಿ ನಡೆದ ದೇವದೂತರ ಪ್ರಾರ್ಥನೆಯಲ್ಲಿ, ಜಗದ್ಗುರು ಲಿಯೋ ರವರು ಮೊದಲು ಸಂಘರ್ಷ ಮತ್ತು ಯಾತನೆಯಿಂದ ರಕ್ತಸಿಕ್ತಗೊಂಡ ರಾಷ್ಟ್ರಗಳ ನಡುವೆ, ಹಾಗೆಯೇ ಹಿಂಸೆ ಮತ್ತು ನೋವಿನಿಂದ ಗಾಯಗೊಂಡಿರುವ ನಮ್ಮ ಮನೆಗಳಲ್ಲಿ, ಕುಟುಂಬಗಳೊಳಗೂ ಒಟ್ಟಾಗಿ ಶಾಂತಿಗಾಗಿ ಪ್ರಾರ್ಥಿಸಲು ವಿಶ್ವಾಸಿಗಳಿಗೆ ಕರೆ ನೀಡಿದರು.
ಹೊಸ ವರ್ಷದ ಆಗಮನದೊಂದಿಗೆ, ಎಲ್ಲಾ ಜನಾಂಗಗಳ ನಡುವೆ ಶಾಂತಿ ಮತ್ತು ಸ್ನೇಹದ ಯುಗವನ್ನು ಅಂತಿಮವಾಗಿ ಆರಂಭಿಸುವ ಮೂಲಕ ನಮ್ಮ ಕಾಲವನ್ನು ನವೀಕರಿಸಲು ಪ್ರಭು ನಮ್ಮನ್ನು ಆಹ್ವಾನಿಸುತ್ತಿದ್ದಾರೆ ಎಂದು ಜಗದ್ಗುರುಗಳು ಹೇಳಿದರು.
ದೇವರ ಕಡೆಗೆ ಹೃದಯಗಳನ್ನು ಪರಿವರ್ತಿಸುವ ಮೂಲಕ ನಿರೀಕ್ಷೆಯನ್ನು ಬೆಳೆಸೋಣ ಎಂದು ಮುಂದುವರಿದು ಜಗದ್ಗುರು ಲಿಯೋರವರು, ಜುಬಿಲಿ ವರ್ಷವು ನಮಗೆ ಹೊಸ ಲೋಕದ ನಿರೀಕ್ಷೆಯನ್ನು ಹೇಗೆ ಬೆಳೆಸಬೇಕು ಎಂಬುದನ್ನು ಕಲಿಸಿದೆ ಎಂದು ಹೇಳಿದರು. ಅದು ಹೇಗೆಂದರೆ, ನಮ್ಮ ಹೃದಯಗಳನ್ನು ದೇವರ ಕಡೆಗೆ ಪರಿವರ್ತಿಸುವ ಮೂಲಕ—ಅನ್ಯಾಯಗಳನ್ನು ಕ್ಷಮೆಯಾಗಿ, ನೋವನ್ನು ಸಾಂತ್ವನವಾಗಿ, ಮತ್ತು ಸತ್ಪ್ರತಿಜ್ಞೆಗಳನ್ನು ಸತ್ಕರ್ಮಗಳಾಗಿ ಪರಿವರ್ತಿಸುವುದರಿಂದ ಎಂದು ಹೇಳಿದರು.
ಈ ದಿನವನ್ನು ಅತ್ಯಂತ ಪರಿಶುದ್ಧ ದೇವಮಾತೆ ಮರಿಯಮ್ಮನ ಮಹೋತ್ಸವವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಕ್ರಿಸ್ತನ ಹೃದಯವನ್ನು ಮೊದಲಾಗಿ ಅನುಭವಿಸಿದವಳು ಮರಿಯಮ್ಮನ ಕಡೆಗೆ ದೃಷ್ಟಿ ನೆಟ್ಟಲು ಧರ್ಮಸಭೆ ನಮಗೆ ಆಹ್ವಾನಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಗಾಗಿ ಕ್ರಿಸ್ತನ ಹೃದಯ ಬಡಿದುಕೊಳ್ಳುತ್ತದೆ
ಪೋಪ್ ವಿವರಿಸಿದಂತೆ, ಮರಿಯಮ್ಮನವರು ನಮ್ಮ ಹೃದಯವನ್ನೂ ಸದಾ ಅರಿತಿರುವ ದೇವರು, ಮಾನವನಾಗಿ ಅವತರಿಸುವ ಮೂಲಕ ತನ್ನ ಹೃದಯವನ್ನು ನಮಗೆ ಪ್ರಕಟಿಸುತ್ತಾರೆ ಆದ್ದರಿಂದ, ಯೇಸು ಕ್ರಿಸ್ತನ ಹೃದಯವು ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಗಾಗಿ ಬಡಿದುಕೊಳ್ಳುತ್ತದೆ—ಒಳ್ಳೆಯವರಿಗಾಗಿಯೂ ದುಷ್ಟರಿಗಾಗಿಯೂ,ಅದು ಸಜ್ಜನರಿಗಾಗಿ ಬಡಿದುಗೊಳ್ಳುತ್ತದೆ, ಅವರು ತಮ್ಮ ನಿಷ್ಠೆಯಲ್ಲಿ ಸ್ಥಿರವಾಗಿರಲೆಂದು ಹಾಗೆಯೇ ದುರ್ಜನರಿಗಾಗಿ , ಅವರು ತಮ್ಮ ಜೀವನವನ್ನು ಬದಲಿಸಿ ಶಾಂತಿಯನ್ನು ಕಂಡುಕೊಳ್ಳಲೆಂದು ಕೂಡ ಬಡಿದುಗೊಳ್ಳುತ್ತದೆ ಎಂದು ಹೇಳಿದರು.
