ಹುಡುಕಿ

ಸಾಂತಾ ಮಾರಿಯಾ ಮ್ಯಾಗಿಯೋರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ವಿಶ್ರಾಂತಿ ಸ್ಥಳ ಸಾಂತಾ ಮಾರಿಯಾ ಮ್ಯಾಗಿಯೋರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ವಿಶ್ರಾಂತಿ ಸ್ಥಳ  (ANSA)

ಜಗದ್ಗುರು ಫ್ರಾನ್ಸಿಸ್ ರವರ ಸ್ಮರಣಾರ್ಥ ಆಚರಣೆಗಳು

ನಾಳೆ, ಏಪ್ರಿಲ್ 21ರಂದು, ಜಗದ್ಗುರು ಫ್ರಾನ್ಸಿಸ್ ಅವರ ನಿಧನದ ಮೊದಲ ವರ್ಷದ ಸಂಭ್ರಮದ ಸಂದರ್ಭದಲ್ಲಿ, ವ್ಯಾಟಿಕನ್ ನ್ಯೂಸ್ ಮತ್ತು ವ್ಯಾಟಿಕನ್ ರೇಡಿಯೋದಲ್ಲಿ ನೇರ ಪ್ರಸಾರವಾಗುವ ಜಪಸರ ಪ್ರಾರ್ಥನೆ ಮತ್ತು ಪವಿತ್ರ ಬಲಿಪೂಜೆಯನ್ನು ಸಂತಾ ಮಾರಿಯಾ ಮಜ್ಜಿಯೋರೆ ಬಸಿಲಿಕಾದಲ್ಲಿ ಆಚರಿಸಲಾಗುತ್ತದೆ, ನಿಧನರಾದ ಜಗದ್ಗುರುಗಳನ್ನು ಸ್ಮರಿಸಲು. ಇದೇ ಸಂದರ್ಭದಲ್ಲಿ, ಜಗದ್ಗುರು ಫ್ರಾನ್ಸಿಸ್ ರವರ ಜೀವನವನ್ನು ಸ್ಮರಿಸುವ ಡಾಕ್ಯುಮೆಂಟರಿ ಚಿತ್ರವೂ ಬಿಡುಗಡೆಯಾಗಲಿದೆ.

ವ್ಯಾಟಿಕನ್ ವರದಿ

ಜಗದ್ಗುರು ಫ್ರಾನ್ಸಿಸ್ ರವರ ನಿಧನಕ್ಕೆ ಈಗ ಒಂದು ವರ್ಷವಾಗಿದೆ. ಅವರು 2025ರ ಏಪ್ರಿಲ್ 21ರಂದು ಬೆಳಿಗ್ಗೆ 7:35ಕ್ಕೆ ಕಾಸಾ ಸಾಂತಾ ಮಾರ್ತಾದಲ್ಲಿ ನಿಧನರಾದರು. ಐದು ದಿನಗಳ ನಂತರ ಅವರ ಅಂತ್ಯಕ್ರಿಯೆ ನಡೆಯಿತು. ಅವರ ಇಚ್ಛೆಯಂತೆ, ಅವರ ಅವಶೇಷಗಳು ಆಗಿನಿಂದಲೇ ಸಾಂತಾ ಮಾರಿಯಾ ಮಜ್ಜಿಯೋರೆ ಎಂಬ ಮೇರಿಯನ್ ಬಾಸಿಲಿಕಾದಲ್ಲಿ ಸಮಾಧಿಯಾಗಿವೆ ಈಗ ಆ ಬಾಸಿಲಿಕಾ ಈ ವಾರ್ಷಿಕೋತ್ಸವವನ್ನು ಗಂಭೀರವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಾರ್ಯಕ್ರಮ

ಬಸಿಲಿಕಾ ಪ್ರಕಟಿಸಿದಂತೆ, ಸಂಜೆ 5 ಗಂಟೆಗೆ ಪೌಲಿನ್ ಚಾಪೆಲ್‌ನಲ್ಲಿ ಜಪಸರ ಪ್ರಾರ್ಥನೆಯೊಂದಿಗೆ ಸ್ಮರಣಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಜಗದ್ಗುರು ಫ್ರಾನ್ಸಿಸ್ ರವರ ಅನೇಕ ಬಾರಿ ಭೇಟಿ ನೀಡಿದ ಈ ಚಾಪೆಲ್ ಅವರಿಗೆ ವಿಶೇಷವಾದ ಸ್ಥಳವಾಗಿದೆ.

ನಂತರ, ಚಾಪೆಲ್‌ನ ಬಲಭಾಗದಲ್ಲಿ, ಜಗದ್ಗುರು ಫ್ರಾನ್ಸಿಸ್ ಮತ್ತು “ಮೇರಿ ಸಲೂಸ್ ಪೋಪುಲಿ ರೋಮಾನಿ” ಎಂಬ ಮೇರಿಯವರ ಐಕಾನ್ ನಡುವಿನ ವಿಶೇಷ ಬಾಂಧವ್ಯವನ್ನು ಸ್ಮರಿಸುವ ಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಗುತ್ತದೆ.

ಈ ಕಂಚಿನ ಫಲಕದಲ್ಲಿ ಎರಡು ವಿಭಿನ್ನ ಅಕ್ಷರ ಗಾತ್ರಗಳಲ್ಲಿ 160 ಅಕ್ಷರಗಳ ಲ್ಯಾಟಿನ್ ಶಾಸನವಿದ್ದು, ಅದರ ಅರ್ಥ ಹೀಗಿದೆ “ಫ್ರಾನ್ಸಿಸ್ ಮಹಾ ಜಗದ್ಗುರುಗಳು, ಸಲೂಸ್ ಪೋಪುಲಿ ರೋಮಾನಿ ರವರ ಪಾದಗಳಲ್ಲಿ 126 ಬಾರಿ ಭಕ್ತಿಯಿಂದ ಪ್ರಾರ್ಥನೆ ಮಾಡಿದವರು ಅವರ ಇಚ್ಛೆಯಂತೆ, ಈ ಜಗದ್ಗುರುಗಳ ಬಸಿಲಿಕಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ನೇರ ಪ್ರಸಾರದ ಮೂಲಕ ಕಾರ್ಯಕ್ರಮವನ್ನು ಅನುಸರಿಸಲು ಲಿಂಕ್

ಜಪಸರ ಪ್ರಾರ್ಥನೆಯ ನಂತರ ಸಂಜೆ 6 ಗಂಟೆಗೆ ಪವಿತ್ರ ಬಲಿಪೂಜೆ ಆಚರಿಸಲಾಗುತ್ತದೆ. ಈ ವೇಳೆ, ಪ್ರಸ್ತುತ ಆಫ್ರಿಕಾದಲ್ಲಿ ತಮ್ಮ ಪ್ರೇಷಿತರ ಪ್ರವಾಸದಲ್ಲಿರುವ ಜಗದ್ಗುರು XIVನೇ ಲಿಯೋರವರ ಸಂದೇಶವನ್ನು ವಾಚಿಸಲಾಗುತ್ತದೆ. ಈ ಆಚರಣೆಯನ್ನು ಬಸಿಲಿಕಾ ಎದುರಿನ ಸಾಂತಾ ಮಾರಿಯಾ ಮಜ್ಜಿಯೋರೆ ಚೌಕದಲ್ಲಿರುವ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ ಹಾಗೂ ವ್ಯಾಟಿಕನ್ ನ್ಯೂಸ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

ವ್ಯಾಟಿಕನ್ ಡಾಕ್ಯುಮೆಂಟರಿ

ಈ ವಾರ್ಷಿಕೋತ್ಸವದ ಅಂಗವಾಗಿ, ವ್ಯಾಟಿಕನ್ ಮೀಡಿಯಾ ನಾಳೆ ಬೆಳಿಗ್ಗೆ 26 ನಿಮಿಷಗಳ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಲಿದೆ. ಇಟಾಲಿಯನ್, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಉಪಶೀರ್ಷಿಕೆಗಳಿರುವ ಈ ಚಿತ್ರದಲ್ಲಿ, ಆರ್ಕೈವ್ ದೃಶ್ಯಗಳು ಮತ್ತು ಪ್ರತೀಕಾತ್ಮಕ ಭಾಗಗಳ ಮೂಲಕ “ಕರುಣೆಯ ಜಗದ್ಗುರುಗಳು” ಮತ್ತು “ಅಂಚಿನವರ ಜಗದ್ಗುರುಗಳು” ಎಂದು ಕರೆಯಲ್ಪಡುವ ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾವದಿಯನ್ನು, ಅವರ ಪ್ರಮುಖ ಮಾತುಗಳು ಮತ್ತು ಸಂಕೇತಾತ್ಮಕ ಕ್ರಿಯೆಗಳೊಂದಿಗೆ ಚಿತ್ರಿಸಲಾಗಿದೆ.

ನವೀಕರಣ: ಏಪ್ರಿಲ್ 20, 2026 – ಬೆಳಿಗ್ಗೆ 11:00

20 ಏಪ್ರಿಲ್ 2026, 15:13