ಜಗದ್ಗುರು ಫ್ರಾನ್ಸಿಸ್ ರವರ ಸ್ಮರಣಾರ್ಥ ಆಚರಣೆಗಳು
ವ್ಯಾಟಿಕನ್ ವರದಿ
ಜಗದ್ಗುರು ಫ್ರಾನ್ಸಿಸ್ ರವರ ನಿಧನಕ್ಕೆ ಈಗ ಒಂದು ವರ್ಷವಾಗಿದೆ. ಅವರು 2025ರ ಏಪ್ರಿಲ್ 21ರಂದು ಬೆಳಿಗ್ಗೆ 7:35ಕ್ಕೆ ಕಾಸಾ ಸಾಂತಾ ಮಾರ್ತಾದಲ್ಲಿ ನಿಧನರಾದರು. ಐದು ದಿನಗಳ ನಂತರ ಅವರ ಅಂತ್ಯಕ್ರಿಯೆ ನಡೆಯಿತು. ಅವರ ಇಚ್ಛೆಯಂತೆ, ಅವರ ಅವಶೇಷಗಳು ಆಗಿನಿಂದಲೇ ಸಾಂತಾ ಮಾರಿಯಾ ಮಜ್ಜಿಯೋರೆ ಎಂಬ ಮೇರಿಯನ್ ಬಾಸಿಲಿಕಾದಲ್ಲಿ ಸಮಾಧಿಯಾಗಿವೆ ಈಗ ಆ ಬಾಸಿಲಿಕಾ ಈ ವಾರ್ಷಿಕೋತ್ಸವವನ್ನು ಗಂಭೀರವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕಾರ್ಯಕ್ರಮ
ಬಸಿಲಿಕಾ ಪ್ರಕಟಿಸಿದಂತೆ, ಸಂಜೆ 5 ಗಂಟೆಗೆ ಪೌಲಿನ್ ಚಾಪೆಲ್‌ನಲ್ಲಿ ಜಪಸರ ಪ್ರಾರ್ಥನೆಯೊಂದಿಗೆ ಸ್ಮರಣಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಜಗದ್ಗುರು ಫ್ರಾನ್ಸಿಸ್ ರವರ ಅನೇಕ ಬಾರಿ ಭೇಟಿ ನೀಡಿದ ಈ ಚಾಪೆಲ್ ಅವರಿಗೆ ವಿಶೇಷವಾದ ಸ್ಥಳವಾಗಿದೆ.
ನಂತರ, ಚಾಪೆಲ್‌ನ ಬಲಭಾಗದಲ್ಲಿ, ಜಗದ್ಗುರು ಫ್ರಾನ್ಸಿಸ್ ಮತ್ತು “ಮೇರಿ ಸಲೂಸ್ ಪೋಪುಲಿ ರೋಮಾನಿ” ಎಂಬ ಮೇರಿಯವರ ಐಕಾನ್ ನಡುವಿನ ವಿಶೇಷ ಬಾಂಧವ್ಯವನ್ನು ಸ್ಮರಿಸುವ ಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಗುತ್ತದೆ.
ಈ ಕಂಚಿನ ಫಲಕದಲ್ಲಿ ಎರಡು ವಿಭಿನ್ನ ಅಕ್ಷರ ಗಾತ್ರಗಳಲ್ಲಿ 160 ಅಕ್ಷರಗಳ ಲ್ಯಾಟಿನ್ ಶಾಸನವಿದ್ದು, ಅದರ ಅರ್ಥ ಹೀಗಿದೆ “ಫ್ರಾನ್ಸಿಸ್ ಮಹಾ ಜಗದ್ಗುರುಗಳು, ಸಲೂಸ್ ಪೋಪುಲಿ ರೋಮಾನಿ ರವರ ಪಾದಗಳಲ್ಲಿ 126 ಬಾರಿ ಭಕ್ತಿಯಿಂದ ಪ್ರಾರ್ಥನೆ ಮಾಡಿದವರು ಅವರ ಇಚ್ಛೆಯಂತೆ, ಈ ಜಗದ್ಗುರುಗಳ ಬಸಿಲಿಕಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ನೇರ ಪ್ರಸಾರದ ಮೂಲಕ ಕಾರ್ಯಕ್ರಮವನ್ನು ಅನುಸರಿಸಲು ಲಿಂಕ್
ಜಪಸರ ಪ್ರಾರ್ಥನೆಯ ನಂತರ ಸಂಜೆ 6 ಗಂಟೆಗೆ ಪವಿತ್ರ ಬಲಿಪೂಜೆ ಆಚರಿಸಲಾಗುತ್ತದೆ. ಈ ವೇಳೆ, ಪ್ರಸ್ತುತ ಆಫ್ರಿಕಾದಲ್ಲಿ ತಮ್ಮ ಪ್ರೇಷಿತರ ಪ್ರವಾಸದಲ್ಲಿರುವ ಜಗದ್ಗುರು XIVನೇ ಲಿಯೋರವರ ಸಂದೇಶವನ್ನು ವಾಚಿಸಲಾಗುತ್ತದೆ. ಈ ಆಚರಣೆಯನ್ನು ಬಸಿಲಿಕಾ ಎದುರಿನ ಸಾಂತಾ ಮಾರಿಯಾ ಮಜ್ಜಿಯೋರೆ ಚೌಕದಲ್ಲಿರುವ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ ಹಾಗೂ ವ್ಯಾಟಿಕನ್ ನ್ಯೂಸ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.
ವ್ಯಾಟಿಕನ್ ಡಾಕ್ಯುಮೆಂಟರಿ
ಈ ವಾರ್ಷಿಕೋತ್ಸವದ ಅಂಗವಾಗಿ, ವ್ಯಾಟಿಕನ್ ಮೀಡಿಯಾ ನಾಳೆ ಬೆಳಿಗ್ಗೆ 26 ನಿಮಿಷಗಳ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಲಿದೆ. ಇಟಾಲಿಯನ್, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಉಪಶೀರ್ಷಿಕೆಗಳಿರುವ ಈ ಚಿತ್ರದಲ್ಲಿ, ಆರ್ಕೈವ್ ದೃಶ್ಯಗಳು ಮತ್ತು ಪ್ರತೀಕಾತ್ಮಕ ಭಾಗಗಳ ಮೂಲಕ “ಕರುಣೆಯ ಜಗದ್ಗುರುಗಳು” ಮತ್ತು “ಅಂಚಿನವರ ಜಗದ್ಗುರುಗಳು” ಎಂದು ಕರೆಯಲ್ಪಡುವ ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾವದಿಯನ್ನು, ಅವರ ಪ್ರಮುಖ ಮಾತುಗಳು ಮತ್ತು ಸಂಕೇತಾತ್ಮಕ ಕ್ರಿಯೆಗಳೊಂದಿಗೆ ಚಿತ್ರಿಸಲಾಗಿದೆ.
ನವೀಕರಣ: ಏಪ್ರಿಲ್ 20, 2026 – ಬೆಳಿಗ್ಗೆ 11:00
