ಹುಡುಕಿ

Il Papa rientrato a Roma dalla Corsica, niente conferenza stampa

ಜಗದ್ಗುರು ಫ್ರಾನ್ಸಿಸ್ ರವರನ್ನು ಸ್ಮರಿಸಲು ಮಾಲ್ಟಾದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವವನ್ನು ಗುರುತಿಸುವ ಸಂಗೀತ ಓರೇಟೋರಿಯೋವನ್ನು ಮಾಲ್ಟಾದ ಮ್ದಿನಾ ನಗರದಲ್ಲಿ ಪ್ರದರ್ಶಿಸಲಾಗುವುದು ಇದರ ಆದಾಯವನ್ನು ಅಗತ್ಯವಿರುವವರಿಗೆ ಸಹಾಯ ಮಾಡುವ ಧರ್ಮ ಸಭೆ ನಡೆಸುವ ಆಶ್ರಯ ಗೃಹಕ್ಕೆ ನೀಡಲಾಗುತ್ತದೆ.

ವ್ಯಾಟಿಕನ್ ವರದಿ

ಜಗದ್ಗುರು ಫ್ರಾನ್ಸಿಸ್ ರವರ ಸ್ಮರಣಾರ್ಥವಾಗಿ ಒಂದು ಸ್ಮಾರಕ ಸಂಗೀತ ಕಾರ್ಯಕ್ರಮವು ಏಪ್ರಿಲ್ 24 ರಂದು ಸಂಜೆ 7:30ಕ್ಕೆ ಮಾಲ್ಟಾದ ಮ್ದಿನಾ ನಗರದ ಮೆಟ್ರೋಪಾಲಿಟನ್ ಸೆಂಟ್ ಪಾಲ್ ಕ್ಯಾಥೀಡ್ರಲ್‌ನಲ್ಲಿ ನಡೆಯಲಿದೆ. ಇದು ಅವರ ನಿಧನದ ಮೊದಲ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ.

ಮಾಲ್ಟಾ ಪೊಲೀಸ್ ಪಡೆ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಸಂಬಂಧಿಸಿದ ಮಾಲ್ಟೀಸ್ ರಾಯಭಾರ ಕಚೇರಿಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಿಂದ ಲಭ್ಯವಾಗುವ ಆದಾಯವನ್ನು ಅಗತ್ಯವಿರುವವರಿಗೆ ನೆರವಾಗುವ ಧರ್ಮ ಸಭೆ ನಡೆಸುವ ಆಶ್ರಯ ಗೃಹವಾದ “ಇಡ್-ದಾರ್ ತಲ್ ಪ್ರೊವಿಡೆಂಝಾ”ಗೆ ದೇಣಿಗೆಯಾಗಿ ನೀಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಎರಡು ಗಂಟೆಗಳ ಸಂಗೀತ ಓರೇಟೋರಿಯೋ “ಫ್ರಾನ್ಚೆಸ್ಕೊ: ಶೆಫರ್ಡ್ ಆಫ್ ಮರ್ಸಿ” ಪ್ರದರ್ಶಿಸಲಿದ್ದು, ಇದು ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾರಾವಧಿಯನ್ನು ಪ್ರತಿಬಿಂಬಿಸುತ್ತದೆ.

ಈ ಕೃತಿಯ ಲಿಬ್ರೆಟ್ಟೋವನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಮಾಲ್ಟಾದ ರಾಯಭಾರಿಯಾಗಿರುವ ಶ್ರೀ ಫ್ರಾಂಕ್ ಜಮ್ಮಿಟ್ ರವರು ರಚಿಸಿದ್ದು, ಸಂಗೀತವನ್ನು ಮಾಲ್ಟಾ ಪೊಲೀಸ್ ಪಡೆ ವಾದ್ಯವೃಂದದ ಸಂಚಾಲಕರಾದ ಮಾಸ್ಟ್ರೋ ಆಂಥನಿ ಕ್ಯಾಸರ್ ರವರು ಸಂಯೋಜಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಮಾಲ್ಟಾದ ಪೊಲೀಸ್ ಆಯುಕ್ತ ಆಂಜೆಲೋ ಗಫಾ, ಆರ್ಚ್‌ಬಿಷಪ್ ಚಾರ್ಲ್ಸ್ ಜೂಡ್ ಸ್ಕಿಕ್ಲುನಾ, ಪ್ರೇಷಿತರ ರಾಯಭಾರಿ ಪ್ರತಿನಿಧಿಗಳು ಹಾಗೂ ಇತರ ನಾಗರಿಕ ಮತ್ತು ಧಾರ್ಮಿಕ ಅಧಿಕಾರಿಗಳು ಹಾಜರಾಗುವ ನಿರೀಕ್ಷೆಯಿದೆ.

22 ಏಪ್ರಿಲ್ 2026, 18:03