ಹುಡುಕಿ

ಕೊಲಂಬಿಯಾದ ಚೊಕೊ ವಿಭಾಗದ ಕ್ವಿಬ್ಡೊದಲ್ಲಿರುವ ಮೆಡ್ರಾನೊ ಪ್ರದೇಶದಲ್ಲಿ, ಆಗಸ್ಟ್ 15 ರಂದು ಧ್ವಂಸಗೊಂಡ ಕಟ್ಟಡವೊಂದರ ಮುಂದೆ ಹಾದುಹೋಗುತ್ತಿರುವ  ಮೋಟಾರ್‌ಸೈಕಲ್ ಸವಾರರು (AFP ಅಥವಾ ಪರವಾನಗಿದಾರರು). ಕೊಲಂಬಿಯಾದ ಚೊಕೊ ವಿಭಾಗದ ಕ್ವಿಬ್ಡೊದಲ್ಲಿರುವ ಮೆಡ್ರಾನೊ ಪ್ರದೇಶದಲ್ಲಿ, ಆಗಸ್ಟ್ 15 ರಂದು ಧ್ವಂಸಗೊಂಡ ಕಟ್ಟಡವೊಂದರ ಮುಂದೆ ಹಾದುಹೋಗುತ್ತಿರುವ ಮೋಟಾರ್‌ಸೈಕಲ್ ಸವಾರರು (AFP ಅಥವಾ ಪರವಾನಗಿದಾರರು).  (AFP or licensors)

ಕೊಲಂಬಿಯಾ ಭೂಕಂಪ: ಮಕ್ಕಳ ಕಳ್ಳಸಾಗಣೆ ಅಪಾಯದ ಬಗ್ಗೆ NGO ಎಚ್ಚರಿಕೆ

ಸಮುದಾಯಗಳ ಮೇಲೆ ಭೀಕರ ಪರಿಣಾಮ ಬೀರಿರುವುದರ ಜೊತೆಗೆ, ಕೊಲಂಬಿಯಾದ ಭೂಕಂಪವು ಹಲವು ವರ್ಷಗಳಿಂದ ದೇಶವನ್ನು ಕಾಡುತ್ತಿರುವ ಸಾಮಾಜಿಕ ತುರ್ತು ಪರಿಸ್ಥಿತಿಗಳನ್ನು ಮತ್ತಷ್ಟು ಗಂಭೀರಗೊಳಿಸುವ ಅಪಾಯವನ್ನೂ ಉಂಟುಮಾಡಿದೆ.

ಲೇಖಕರು:  ಬಿಯಾಂಕಾ ತೊಂಬಿನಿ

“ಲ್ಯಾಟಿನ್ ಅಮೆರಿಕಾದಲ್ಲಿ ಮಕ್ಕಳ ಕಳ್ಳಸಾಗಣೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆ,” ಎಂದು ಪಿಜಿಯಾಲಿ ಎಚ್ಚರಿಸುತ್ತಾರೆ. ಕೊಲಂಬಿಯಾದ ಮಕ್ಕಳು ಸಶಸ್ತ್ರ ಗುಂಪುಗಳು, ಅರೆಸೈನಿಕ ಸಂಘಟನೆಗಳು ಮತ್ತು ಅಪರಾಧ ಜಾಲಗಳಿಂದ ನಡೆಯುವ ಶೋಷಣೆಗೆ ವಿಶೇಷವಾಗಿ ದುರ್ಬಲರಾಗಿದ್ದಾರೆ.

“ಕುಟುಂಬ ವ್ಯವಸ್ಥೆಗಳು ಕುಸಿದಾಗ ಮಕ್ಕಳ ಕಳ್ಳಸಾಗಣೆ ಹೆಚ್ಚಾಗುತ್ತದೆ. ಭೂಕಂಪದ ನಂತರ ದೇಶದಲ್ಲಿ ಉಂಟಾಗಿರುವ ಗೊಂದಲವು ಈ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಿದೆ,” ಎಂದು ನಿರ್ದೇಶಕರು ವಿವರಿಸಿದ್ದಾರೆ

ಈ ಅಪಾಯವನ್ನು ನಿಯಂತ್ರಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು,“ಇಂತಹ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವವರು ಮಕ್ಕಳೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ತಿಳಿದವರಾಗಿರುವುದು ಅತ್ಯಂತ ಮುಖ್ಯ. ಅವರು ಮಕ್ಕಳಿಗೆ ನೆರವು ದೊರೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬೇಕು, ತಮ್ಮ ಮಾತುಗಳನ್ನು ಮುಕ್ತವಾಗಿ ಹೇಳುವಂತೆ ಪ್ರೋತ್ಸಾಹಿಸಬೇಕು ಮತ್ತು ತಾವು ಕಾಳಜಿ ಹಾಗೂ ರಕ್ಷಣೆಯಲ್ಲಿದ್ದೇವೆ ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕು” ಎಂದು ಹೇಳಿದರು.

ಸಾರ್ವಜನಿಕ ಜಾಗೃತಿಯ ಮಹತ್ವ

ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವ್ಯಾಪಕವಾಗಿ ವಾಸಿಸುವ ಸ್ಥಳೀಯ ಮೂಲನಿವಾಸಿ ಸಮುದಾಯಗಳ ಮೇಲೂ ಮಾನವೀಯ ಬಿಕ್ಕಟ್ಟು ಪರಿಣಾಮ ಬೀರಿದೆ.“ಈ ಆಘಾತಕಾರಿ ಘಟನೆ ಸ್ಥಳೀಯ ಮೂಲನಿವಾಸಿ ಸಮುದಾಯಗಳ ನಡುವಿನ ಬಂಧವನ್ನು ಮತ್ತಷ್ಟು ದುರ್ಬಲಗೊಳಿಸುವುದೇ ಅತ್ಯಂತ ದೊಡ್ಡ ಅಪಾಯ,” ಎಂದು ಸೆಸ್ವಿ ಸಂಸ್ಥೆಯ ನಿರ್ದೇಶಕರು ಎಚ್ಚರಿಸಿದ್ದಾರೆ. ಪಿಜಿಯಾಲಿ ಅವರ ಪ್ರಕಾರ, ಪರಿಹಾರ ಕಾರ್ಯವು ಅಲ್ಪಾವಧಿಯ ಪ್ರಯತ್ನವಾಗಿರಲು ಸಾಧ್ಯವಿಲ್ಲ. ಏಕೆಂದರೆ ಇಂತಹ ವಿಪತ್ತುಗಳ ಪರಿಣಾಮಗಳು ಭೂಕಂಪನಗಳು ನಿಂತ ಕೂಡಲೇ ಕೊನೆಗೊಳ್ಳುವುದಿಲ್ಲ.

ಸೆಸ್ವಿ ಸಂಸ್ಥೆಯು ಜನರ ಪುನಶ್ಚೇತನದ ಸಂಪೂರ್ಣ ಪಯಣದಲ್ಲಿ ಅವರೊಂದಿಗೆ ನಿಲ್ಲಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಅವರು ಭರವಸೆ ನೀಡುತ್ತಾರೆ. ಈ ಕಾರ್ಯದಲ್ಲಿ ಪರಿಸರ ಸಂಬಂಧಿತ ವಿಚಾರಗಳು ಮತ್ತು ಸ್ಥಳೀಯ ಮೂಲನಿವಾಸಿ ಸಮುದಾಯಗಳ ರಕ್ಷಣೆಗೆ ವಿಶೇಷ ಗಮನ ನೀಡಲಾಗುವುದು. ಆದರೆ ಎಲ್ಲಕ್ಕಿಂತ ಮುಖ್ಯವಾದ ಕಾಳಜಿ ಎಂದರೆ, ಕೊಲಂಬಿಯಾದಲ್ಲಿ ಮಾನವೀಯ ನೆರವು ನೀಡುತ್ತಿರುವ ಸಂಸ್ಥೆಗಳ ಕಾರ್ಯದತ್ತ ಅಂತರರಾಷ್ಟ್ರೀಯ ಸಮುದಾಯದ ಗಮನ ನಿರಂತರವಾಗಿ ಕೇಂದ್ರೀಕೃತವಾಗಿರುವಂತೆ ನೋಡಿಕೊಳ್ಳುವುದು. ಜನರು ಅನೇಕ ಅಪಾಯಗಳಿಗೆ ಒಳಗಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರವಾಗಿ ಬಳಲುತ್ತಿರುವ ಈ ಪರಿಸ್ಥಿತಿಯಲ್ಲಿ, ಈ ಮಾನವೀಯ ಸಂಸ್ಥೆಗಳೇ “ಭರವಸೆಯ ಏಕೈಕ ಬೆಳಕು” ಎಂದು ನಿರ್ದೇಶಕರು ಅಂತಿಮವಾಗಿ ಒತ್ತಿಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

19 ಆಗಸ್ಟ್ 2026, 20:33