2026ರ ಜುಲೈ 28ರಂದು ರಾಷ್ಟ್ರೀಯ ಸಭೆಯಲ್ಲಿ ಪ್ರಸ್ತಾವಿತ ಸಂವಿಧಾನ ತಿದ್ದುಪಡಿಗಳ ಕುರಿತು ಚರ್ಚೆ ನಡೆಸುತ್ತಿರುವ ಸಂಸತ್ ಸದಸ್ಯರು 2026ರ ಜುಲೈ 28ರಂದು ರಾಷ್ಟ್ರೀಯ ಸಭೆಯಲ್ಲಿ ಪ್ರಸ್ತಾವಿತ ಸಂವಿಧಾನ ತಿದ್ದುಪಡಿಗಳ ಕುರಿತು ಚರ್ಚೆ ನಡೆಸುತ್ತಿರುವ ಸಂಸತ್ ಸದಸ್ಯರು 

ನಿಕರಾಗುವಾದಲ್ಲಿ ರಾಷ್ಟ್ರಪತಿ ಅವಧಿಯನ್ನು ವಿಸ್ತರಿಸುವ ಸಂವಿಧಾನ ತಿದ್ದುಪಡಿಯನ್ನು ಮಂಡಿಸಿದ ಸಂಸತ್ತು

ನಿಕರಾಗುವಾದ ರಾಷ್ಟ್ರೀಯ ಸಭೆಯು, ಮರುಆಯ್ಕೆಗೆ ಅವಕಾಶವಿರುವ ರಾಷ್ಟ್ರಪತಿಯ ಅಧಿಕಾರಾವಧಿಯನ್ನು ಐದು ವರ್ಷಗಳಿಂದ ಏಳು ವರ್ಷಗಳಿಗೆ ವಿಸ್ತರಿಸುವ ಸಂವಿಧಾನ ತಿದ್ದುಪಡಿಯನ್ನು ಸೆಪ್ಟೆಂಬರ್‌ನಲ್ಲಿ ಅನುಮೋದಿಸುವ ಯೋಜನೆ ಹೊಂದಿದೆ.

ವ್ಯಾಟಿಕನ್ ವರದಿ

ನಿಕರಾಗುವಾದ ರಾಷ್ಟ್ರೀಯ ಸಭೆಯಲ್ಲಿ ರಾಷ್ಟ್ರಪತಿಯ ಅಧಿಕಾರಾವಧಿಯನ್ನು ಐದು ವರ್ಷಗಳಿಂದ ಏಳು ವರ್ಷಗಳಿಗೆ ವಿಸ್ತರಿಸುವ ಹಾಗೂ ಮರುಆಯ್ಕೆಗೆ ಹೆಚ್ಚಿನ ಅವಕಾಶ ನೀಡುವ ಸಂವಿಧಾನ ತಿದ್ದುಪಡಿಯನ್ನು ಮಂಡಿಸಲಾಗಿದೆ. ಈ ಪ್ರಸ್ತಾವನೆಯನ್ನು ಸಂಸತ್ತಿನ ಸಭಾಧ್ಯಕ್ಷ ಗುಸ್ತಾವೊ ಪೊರಾಸ್ ಅವರು ಸದನದಲ್ಲಿ ಮಂಡಿಸಿದರು.

ಮನಾಗುವಾದ ನಿಲುವು

ಪ್ರಸ್ತಾವನೆಯ ಪಠ್ಯದ ಪ್ರಕಾರ, ರಾಷ್ಟ್ರಪತಿಯ ಅಧಿಕಾರಾವಧಿಯನ್ನು ವಿಸ್ತರಿಸುವುದರಿಂದ ದೇಶದ ತುರ್ತು ಅಗತ್ಯಗಳಿಗೆ ಸ್ಪಂದಿಸುವಲ್ಲಿ "ದೂರದೃಷ್ಟಿಯ ಸ್ಥಿರತೆ, ಪರಿಣಾಮಕಾರಿ ಕಾರ್ಯಾಚರಣೆ ಮತ್ತು ನಿರಂತರತೆ" ಖಚಿತವಾಗುತ್ತದೆ ಎಂದು ತಿಳಿಸಲಾಗಿದೆ. "ಮಾನವ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯ ರಾಷ್ಟ್ರೀಯ ಯೋಜನೆ"ಯಲ್ಲಿ ನಿಗದಿಪಡಿಸಲಾದ ಆದ್ಯತೆಗಳು ಮತ್ತು ಕಾಲಮಿತಿಯ ಪ್ರಕಾರ ಸರ್ಕಾರವು ತನ್ನ ಕಾರ್ಯವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಶ್ರೀ ಪೊರಾಸ್ ಅವರು ಸದನಕ್ಕೆ ತಿಳಿಸಿದರು. ಈ ಪ್ರಸ್ತಾವನೆಯು ರಾಷ್ಟ್ರಪತಿ ಡೇನಿಯಲ್ ಒರ್ಟೆಗಾ ಅವರು ಚುನಾವಣೆಗಳನ್ನು ರದ್ದುಗೊಳಿಸುವ ಸಾಧ್ಯತೆಯ ಕುರಿತು ಸೂಚನೆ ನೀಡಿದ ಕೆಲವೇ ದಿನಗಳ ನಂತರ ಬಂದಿದೆ.

ಸೆಪ್ಟೆಂಬರ್‌ನಲ್ಲಿ ಅನುಮೋದನೆಯ ನಿರೀಕ್ಷೆ

ಒರ್ಟೆಗಾ ಅವರ ಪತ್ನಿ ಹಾಗೂ ಸಹ-ರಾಷ್ಟ್ರಪತಿ ರೊಸಾರಿಯೊ ಮುರಿಲ್ಲೊ ಅವರು, ಈ ಸಂವಿಧಾನ ತಿದ್ದುಪಡಿಗೆ ಸಂಸತ್ತಿನ ಅನುಮೋದನೆ ಸೆಪ್ಟೆಂಬರ್‌ನಲ್ಲಿ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಈ ಕ್ರಮಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ . ಅಮೆರಿಕ ಸಂಯುಕ್ತ ಸಂಸ್ಥಾನ, ಯುರೋಪಿಯನ್ ಒಕ್ಕೂಟ, ವಿಶ್ವಸಂಸ್ಥೆ ಹಾಗೂ ಲ್ಯಾಟಿನ್ ಅಮೆರಿಕದ ಹಲವಾರು ರಾಷ್ಟ್ರಗಳು, ಈ ಕ್ರಮವನ್ನು ‘ಪ್ರಜಾಪ್ರಭುತ್ವಕ್ಕೆ ಗಂಭೀರ ಹಿನ್ನಡೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿ ತೀವ್ರ ಕಳವಳ ತೋರಿಸಿವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

29 ಜುಲೈ 2026, 16:49