ಹುಡುಕಿ

ಏಪ್ರಿಲ್ 16 ರಂದು ಪೋಪ್ ಲಿಯೋ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಮೆಂಡಾ ವಿಮಾನ ನಿಲ್ದಾಣದಲ್ಲಿ ವ್ಯಾಟಿಕನ್ ಮತ್ತು ಕ್ಯಾಮರೂನ್ ಧ್ವಜಗಳು ಏಪ್ರಿಲ್ 16 ರಂದು ಪೋಪ್ ಲಿಯೋ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಮೆಂಡಾ ವಿಮಾನ ನಿಲ್ದಾಣದಲ್ಲಿ ವ್ಯಾಟಿಕನ್ ಮತ್ತು ಕ್ಯಾಮರೂನ್ ಧ್ವಜಗಳು  (AFP or licensors)

ಕ್ಯಾಮರೂನ್: ಪೂಜ್ಯ ಜಗದ್ಗುರು ಅವರ ಭೇಟಿಯ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳಿಂದ ಹೋರಾಟ ತಾತ್ಕಾಲಿಕವಾಗಿ ಸ್ಥಗಿತ

ಇಂಗ್ಲಿಷ್ ಭಾಷಿಕ ಕ್ಯಾಮರೂನ್ ಪ್ರತ್ಯೇಕತಾವಾದಿ ಗುಂಪುಗಳನ್ನು ಒಗ್ಗೂಡಿಸುವ ಯುನಿಟಿ ಅಲಯನ್ಸ್ ಪ್ರಕಟಣೆ ಪ್ರಕಾರ, ಸಂಘರ್ಷಪೀಡಿತ ಪ್ರದೇಶಕ್ಕೆ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಭೇಟಿಯ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಲಾಗಿದೆ.

ವ್ಯಾಟಿಕನ್ ವರದಿ

ಕ್ಯಾಮರೂನ್‌ನ ಅಶಾಂತ ಇಂಗ್ಲಿಷ್ ಭಾಷಿಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿ ಗುಂಪುಗಳು ಮಂಗಳವಾರ, ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಮುಂಬರುವ ಭೇಟಿಯನ್ನು ಗಮನದಲ್ಲಿಟ್ಟು, ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸುವುದಾಗಿ ಘೋಷಿಸಿವೆ.

ಪೂಜ್ಯ ಜಗದ್ಗುರು ಲಿಯೋ ಅವರು ಬುಧವಾರ, ಏಪ್ರಿಲ್ 15ರಂದು ರಾಜಧಾನಿ ಯೌಂಡೇಗೆ ಆಗಮಿಸುವ ನಿರೀಕ್ಷೆಯಿದೆ; ಇದು ಆಫ್ರಿಕಾ ಖಂಡದ ನಾಲ್ಕು ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿದೆ. ಅವರು ಗುರುವಾರ ಪಶ್ಚಿಮ ಇಂಗ್ಲಿಷ್ ಭಾಷಿಕ ಪ್ರದೇಶದ ಪ್ರಮುಖ ನಗರ ಬಮೆಂಡಾಕ್ಕೆ ತೆರಳಿ, ಅಲ್ಲಿ ಶಾಂತಿ ಸಭೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.

“ಯುನಿಟಿ ಅಲಯನ್ಸ್” ಎಂಬ ಸಂಘಟನೆಯ ಈ ಘೋಷಣೆ, ಸುಮಾರು ಒಂದು ದಶಕದಿಂದ ದೇಶದ ಉತ್ತರ-ಪಶ್ಚಿಮ ಮತ್ತು ದಕ್ಷಿಣ-ಪಶ್ಚಿಮ ಪ್ರದೇಶಗಳನ್ನು ತೀವ್ರವಾಗಿ ಹಿಂಸಿಸುತ್ತಿರುವ ಸಂಘರ್ಷದಲ್ಲಿ ಅಪರೂಪದ ಉದ್ವಿಗ್ನತೆ ಇಳಿಕೆಯ ಕ್ಷಣವೆಂದು ಪರಿಗಣಿಸಲಾಗುತ್ತಿದೆ.

ಪ್ರತ್ಯೇಕತಾವಾದಿಗಳು “ಅಂಬಜೋನಿಯಾ” ಎಂದು ಕರೆಯುವ ಸ್ವತಂತ್ರ ರಾಷ್ಟ್ರಕ್ಕಾಗಿ ನಡೆದ ಹೋರಾಟ ಹಲವು ವರ್ಷಗಳಿಂದ ವ್ಯಾಪಕ ಹಿಂಸೆ, ಸ್ಥಳಾಂತರ ಮತ್ತು ಲಕ್ಷಾಂತರ ಜನರನ್ನು  ಗಂಭೀರ ಮಾನವೀಯ ಸಂಕಷ್ಟಕ್ಕೆ ಕಾರಣವಾಗಿದೆ.

ಪ್ರಕಟಣೆಯಲ್ಲಿ, ಈ ನಿರ್ಧಾರವನ್ನು “ಹೊಣೆಗಾರಿಕೆ, ಸಂಯಮ ಮತ್ತು ಮಾನವ ಗೌರವದ ಗೌರವ” ಎಂಬ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿ, ಆಧ್ಯಾತ್ಮಿಕ ನಾಯಕನ ಆಗಮನ ಮತ್ತು ಕಾರ್ಯಕ್ರಮಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

14 ಏಪ್ರಿಲ್ 2026, 20:09