ಮೊನಾಕೊ ಯುವರಾಣಿ ಶಾರ್ಲಿನ್ ಪ್ರತಿಷ್ಠಾನದ ಕೇಂದ್ರದಲ್ಲಿ ಕ್ರೀಡೆ ಮತ್ತು ಐಕ್ಯತೆ
ಲೇಖಕರು: ಎಡೋಆರ್ಡೊ ಗಿರಿಬಾಲ್ಡಿ (ಮೊನಾಕೊ) ಮತ್ತು ಲಿಂಡಾ ಬೊರ್ಡೋನಿ
ಮಾರ್ಚ್ 28ರ ಶನಿವಾರ ನಡೆಯಲಿರುವ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮೊನಾಕೊ ಭೇಟಿ ಕುರಿತು ಮಾತನಾಡಿದ ಆನ್ ಬೊಗ್ಗಿಯೋ ಅವರು, ಈ ಕ್ಷಣವು ಮೊನಾಕೊ ರಾಜ್ಯಕ್ಕೂ ಹಾಗೂ ಪ್ರತಿಷ್ಠಾನದ ಕಾರ್ಯಕ್ಕೂ ಮಹತ್ವದ್ದಾಗಿದೆ ಎಂದು ಹೇಳಿದರು. “ಈ ಭೇಟಿಯನ್ನು ನಾವು ಮಹತ್ವದ ಗೌರವವಾಗಿ ಸ್ವೀಕರಿಸುತ್ತೇವೆ,” ಎಂದು ಅವರು ಹೇಳಿದರು.
“ಇದು ಗಡಿಗಳನ್ನು ಮೀರುವ ಸಂದೇಶವಾಗಿದೆ,” ಎಂದು ಹೇಳಿ, “ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ಈ ಭೇಟಿ ಅತ್ಯಂತ ಸ್ವಾಗತಾರ್ಹವಾಗಿದೆ.” ಬೊಗ್ಗಿಯೋ ಅವರು, ಈ ಭೇಟಿ ಪ್ರತಿಷ್ಠಾನದ ಮೌಲ್ಯಗಳಾದ “ಅತೀ ದುರ್ಬಲರ ಪಾಲನೆ” ಮತ್ತು “ಭವಿಷ್ಯದ ತಲೆಮಾರುಗಳತ್ತ ಸಮೂಹ ಹೊಣೆಗಾರಿಕೆ” ಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಒತ್ತಿ ಹೇಳಿದರು.
ಅದೇ ವೇಳೆ, ಈ ಭೇಟಿ ವ್ಯಾಪಕ ಪರಿಣಾಮ ಬೀರುತ್ತದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದರು: “ನಾವು ಕೈಗೊಳ್ಳುತ್ತಿರುವ ಕಾರ್ಯಗಳಿಗೆ ಹೆಚ್ಚಿನ ಬೆಳಕು ಚೆಲ್ಲುವಂತೆ ಈ ಭೇಟಿ ನೆರವಾಗಲಿ ಮತ್ತು ಇನ್ನಷ್ಟು ಜನರನ್ನು ನಮ್ಮ ಪ್ರಯತ್ನಗಳಿಗೆ ಸೇರಲು ಪ್ರೇರೇಪಿಸಲಿ,” ಎಂದು ಅವರು ಹೇಳಿದರು. ಇದು ಈಗಿರುವ ಸಹಭಾಗಿತ್ವಗಳನ್ನು ಬಲಪಡಿಸುವುದರ ಜೊತೆಗೆ ಹೊಸ ಸಹಭಾಗಿತ್ವಗಳಿಗೆ ದಾರಿ ತೆರೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಷ್ಠಾನ
ಸುಮಾರು 14 ವರ್ಷಗಳ ಹಿಂದೆ ಸ್ಥಾಪಿತವಾದ ಈ ಪ್ರತಿಷ್ಠಾನವು ಮೂರು ಪ್ರಮುಖ ಆಧಾರಗಳ ಮೇಲೆ ನಿರ್ಮಿತವಾಗಿದೆ:
ಮುಳುಗು ತಡೆಗಟ್ಟುವಿಕೆ
ಈಜು ಕಲಿಕೆ
ಕ್ರೀಡೆಯ ಮೂಲಕ ಮೌಲ್ಯ ಶಿಕ್ಷಣ
“ಕ್ರೀಡೆ ಈ ಪ್ರತಿಷ್ಠಾನದ ಕಾರ್ಯದ ಹೃದಯದಲ್ಲಿದೆ,” ಎಂದು ಬೊಗ್ಗಿಯೋ ವಿವರಿಸಿದರು."ಆದರೆ ಒಬ್ಬರು ಶಿಕ್ಷಣ ನೀಡಬೇಕು, ಪ್ರೇರೇಪಿಸಬೇಕೆಂದರೆ ಮತ್ತು ನಿಮಗೆ ಯುವಜನರು ಬೇಕು.
“ಯುವರಾಣಿ ಶಾರ್ಲಿನ್ ಸದಾ ಕ್ರೀಡೆ ಅತ್ಯಂತ ಶಕ್ತಿಯುತ ಸಾಧನಗಳಲ್ಲಿ ಒಂದಾಗಿದೆ ಎಂದು ನಂಬಿದ್ದಾರೆ,
ಕೇವಲ ಕ್ರೀಡೆ ಸಾಕಾಗುವುದಿಲ್ಲ; “ಶಿಕ್ಷಣ ನೀಡಬೇಕು, ಪ್ರೇರೇಪಿಸಬೇಕು, ಮತ್ತು ಯುವಜನರನ್ನು ರೂಪಿಸಬೇಕು,” ಎಂದು ಅವರು ಹೇಳಿದರು. ಈ ನಂಬಿಕೆಯನ್ನು ಯುವರಾಜ ಅಲ್ಬರ್ಟ್ ಮತ್ತು ಯುವರಾಣಿ ಶಾರ್ಲಿನ್ ಇಬ್ಬರೂ ಹಂಚಿಕೊಂಡಿದ್ದಾರೆ. “ಇದು ನಿಜಕ್ಕೂ ವಿಶ್ವವ್ಯಾಪಿ ಭಾಷೆ ಎಂದು ಅವರು ನಂಬುತ್ತಾರೆ,” ಎಂದು ಅವರು ಹೇಳಿದರು.
ಪ್ರತಿಷ್ಠಾನವು ಅತಿ ಕಿರಿಯ ವಯಸ್ಸಿನಿಂದಲೇ ಯುವಜನರೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು. “ನಾವು ಅವರಿಗೆ ಗೌರವ, ತಂಡದ ಮನೋಭಾವ, ಆರೋಗ್ಯಕರ ಜೀವನಶೈಲಿ ಇಂತಹ ಮೌಲ್ಯಗಳನ್ನು ಕಲಿಸುತ್ತೇವೆ,” ಎಂದು ಅವರು ಹೇಳಿದರು. “ನಾವು ಕೇವಲ ಈಜು ಅಥವಾ ಕ್ರೀಡೆ ಕಲಿಸುವುದಲ್ಲ; ಅವರಲ್ಲಿ ಆತ್ಮವಿಶ್ವಾಸವನ್ನು ನಿರ್ಮಿಸುತ್ತೇವೆ. ಅದು ಅವರ ಜೀವನದ ಪೂರ್ತಿಯಲ್ಲೂ ಉಪಯೋಗವಾಗುತ್ತದೆ,” ಎಂದು ಅವರು ಹೇಳಿದರು.
ಮುಳುಗು ತಡೆಗಟ್ಟುವಿಕೆ
ಮುಳುಗು ಅಪಾಯದ ಕುರಿತು ಮಾತನಾಡಿದ ಬೊಗ್ಗಿಯೋ ಅವರು, ಇದರ ಪ್ರಮಾಣ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದರು. “ಇದು ಒಂದು ದೊಡ್ಡ ದುರಂತ,” ಎಂದು ಅವರು ಹೇಳಿದರು. “ಜಗತ್ತಿನಾದ್ಯಂತ ಆಕಸ್ಮಿಕ ಸಾವಿನ ಪ್ರಮುಖ ಕಾರಣಗಳಲ್ಲಿ ಮುಳುಗು ಒಂದಾಗಿದೆ,” ಎಂದು ಅವರು ಹೇಳಿದರು. ಈ ವಿಷಯಕ್ಕೆ ಸಾರ್ವಜನಿಕ ಗಮನ ಕಡಿಮೆ ಇದೆ ಎಂದು ಅವರು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 2.4 ಲಕ್ಷ ಮಂದಿ ಮುಳುಗುವಿಕೆಯಿಂದ ಸಾವನ್ನಪ್ಪುತ್ತಾರೆ, ವಿಶೇಷವಾಗಿ ಯುವಜನ ಹೆಚ್ಚು ಪರಿಣಾಮಕ್ಕೊಳಗಾಗುತ್ತಾರೆ.
“ಅಭಿವೃದ್ಧಿಶೀಲ ದೇಶಗಳಲ್ಲಿ, ಮಕ್ಕಳ ಸಾವಿನ ಪ್ರಮುಖ ಕಾರಣಗಳಲ್ಲಿ ಮುಳುಗು ಮೊದಲ ಸ್ಥಾನದಲ್ಲಿದೆ,” ಎಂದು ಅವರು ಹೇಳಿದರು. ಈ ಸಮಸ್ಯೆಗೆ ಪ್ರತಿಷ್ಠಾನವು ನೇರವಾಗಿ ಪ್ರತಿಕ್ರಿಯಿಸುತ್ತಿದೆ.
ಈಜು ಕಲಿಕೆಯ ಅವಕಾಶವಿಲ್ಲದ ಪ್ರದೇಶಗಳಲ್ಲಿ, ಯುವಜನರಿಗೆ ನೇರವಾಗಿ ಈಜು ತರಬೇತಿ ಮತ್ತು ನೀರಿನ ಸುರಕ್ಷತಾ ಶಿಕ್ಷಣ ನೀಡಲಾಗುತ್ತಿದೆ. “ಮೊದಲು ಮುಳುಗದಂತೆ ಕಲಿಸುತ್ತೇವೆ; ನಂತರ ಈಜುವುದು ಕಲಿಸುತ್ತೇವೆ,” ಎಂದು ಅವರು ಹೇಳಿದರು.
ಕುಟುಂಬ ಮತ್ತು ಸಮುದಾಯದ ಸುರಕ್ಷತೆ
“ನಮ್ಮ ಗುರಿ ಕೇವಲ ಈಜು ಕಲಿಸುವುದಲ್ಲ, ಕುಟುಂಬ ಮತ್ತು ಸಮುದಾಯವನ್ನು ರಕ್ಷಿಸುವ ನೀರಿನ ಸುರಕ್ಷತಾ ಸಂಸ್ಕೃತಿಯನ್ನು ನಿರ್ಮಿಸುವುದೇ ನಮ್ಮ ಗುರಿ,” ಎಂದು ಅವರು ಹೇಳಿದರು. ಈ ಪ್ರತಿಷ್ಠಾನವು ಆಫ್ರಿಕಾ, ಏಷ್ಯಾ, ಯುರೋಪ್, ಲ್ಯಾಟಿನ್ ಅಮೆರಿಕಾ ಮತ್ತು ಪೆಸಿಫಿಕ್ ಸೇರಿದಂತೆ ಎಲ್ಲಾ ಖಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
“ನಾವು ಪ್ರತಿಯೊಂದು ಖಂಡದಲ್ಲೂ ಇದ್ದೇವೆ,2025ರಲ್ಲಿ ನಾವು ಜಗತ್ತಿನಾದ್ಯಂತ 82 ಯೋಜನೆಗಳನ್ನು ಜಾರಿಗೊಳಿಸಿದ್ದೇವೆ,” ಎಂದು ಅವರು ವಿವರಿಸಿದರು.
ಪ್ರತಿಷ್ಠಾನವು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. “ಒಂದೇ ಮಾದರಿಯನ್ನು ಎಲ್ಲೆಡೆ ಹೇರಿಕೆಯಾಗುವುದಿಲ್ಲ,”ಸ್ಥಳೀಯ ಸಹಭಾಗಿತ್ವ, ಸರ್ಕಾರಗಳು, ಶಾಲೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳೊಂದಿಗೆ ನಾವು ನಿಕಟವಾಗಿ ಕೆಲಸ ಮಾಡುತ್ತೇವೆ,” ಎಂದು ಅವರು ಹೇಳಿದರು.
“ಮೊನಾಕೊ ನಮ್ಮ ಮನೆ”
ಮೊನಾಕೊ ಈ ಪ್ರತಿಷ್ಠಾನದ ಗುರುತಿನ ಕೇಂದ್ರವಾಗಿದೆ, ಮೊನಾಕೊ ನಮ್ಮ ಮನೆ,” ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳು ಮತ್ತು ಸಂಘಟನೆಗಳೊಂದಿಗೆ ಸಹಕಾರ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಒತ್ತಿ ಹೇಳಿದರು.
ಯುವರಾಣಿ ಶಾರ್ಲಿನ್ ಅವರ ದೃಷ್ಟಿಕೋನ
ಯುವರಾಣಿ ಶಾರ್ಲಿನ್ ಅವರ ವೈಯಕ್ತಿಕ ಪ್ರಭಾವದ ಬಗ್ಗೆ ಮಾತನಾಡಿದ ಬೊಗ್ಗಿಯೋ ಅವರು, “ಪ್ರತಿಷ್ಠಾನವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟ ದೃಷ್ಟಿಕೋನವಿದೆ,” ಎಂದು ಹೇಳಿದರು.
ಒಲಿಂಪಿಕ್ ಈಜುಗಾರ್ತಿಯಾಗಿ, ಅವರ ಶಿಸ್ತು ಮತ್ತು ಕ್ರೀಡೆಯಿಂದ ದೊರೆಯುವ ಸಂತೋಷ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು. ತಾಯಿಯಾಗಿ, ಮಕ್ಕಳ ಸುರಕ್ಷತೆಯ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇದೆ. “ಯಾವುದೇ ಮಗು ಮುಳುಗುವುದನ್ನು ಅವರು ಸಹಿಸಲಾರರು,” ಎಂದು ಅವರು ಹೇಳಿದರು.
ಅಂತಿಮವಾಗಿ, ಮೊನಾಕೊ ದೇಶದ ಮಾನವೀಯ ಪಾತ್ರವನ್ನು ಅವರು ಉಲ್ಲೇಖಿಸಿದರು. “ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಅನೇಕ ಸಂಸ್ಥೆಗಳನ್ನು ನೋಡಿದಾಗ ಅದು ಗಮನಾರ್ಹವಾಗಿದೆ,” ಎಂದು ಅವರು ಹೇಳಿದರು. “ನಮ್ಮ ಕಾರ್ಯಗಳ ಮೂಲಕ ಮೊನಾಕೊದ ಮೌಲ್ಯಗಳನ್ನು ಜಗತ್ತಿಗೆ ಪ್ರತಿಬಿಂಬಿಸುವುದರಲ್ಲಿ ನಾವು ಹೆಮ್ಮೆಪಡುತ್ತೇವೆ,” ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).