ರೋಮ್‌ನಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿನ ಬೆಲೆ (AFP ಅಥವಾ ಪರವಾನಗಿದಾರರು) ರೋಮ್‌ನಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿನ ಬೆಲೆ (AFP ಅಥವಾ ಪರವಾನಗಿದಾರರು)  (AFP or licensors)

ಕತಾರ್ ಅನಿಲ ಸಂಕೀರ್ಣದ ಮೇಲಿನ ದಾಳಿಯ ಹಿನ್ನೆಲೆ- ಅನಿಲ ಬೆಲೆ ಏರಿಕೆ

ಇರಾನ್ ಇಸ್ರಾಯೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆ, ಪಶ್ಚಿಮ ತೀರದಲ್ಲಿ ನಾಲ್ಕು ಪ್ಯಾಲೆಸ್ತೀನಿಯ ಮಹಿಳೆಯರು ಮತ್ತು ಇಸ್ರಾಯೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಥಾಯ್ಲ್ಯಾಂಡ್ ಮೂಲದ ಒಬ್ಬ ಕಾರ್ಮಿಕರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಲೇಖಕರು: ನೇತನ್ ಮಾರ್ಲೆ

ದಕ್ಷಿಣ ಪಶ್ಚಿಮ ತೀರದ ಬೆತ್ ಅವ್ವಾ ಪಟ್ಟಣದಲ್ಲಿ ಕೂದಲು ಅಲಂಕರಿಸುವ ಸಲೂನಾಗಿ ಬಳಸಲಾಗುತ್ತಿದ್ದ ಒಂದು ಕಾರವಾನ್ ಮೇಲೆ ದಾಳಿ ನಡೆದಿದ್ದು, ಅದೇ ಘಟನೆಯಲ್ಲಿ ಈ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಈ ಸ್ಫೋಟಕ್ಕೆ ಇರಾನ್ ಕ್ಷಿಪಣಿಯೇ ಕಾರಣವೆಂದು ಇಸ್ರಾಯೇಲ್ ಸೇನೆ ಹೇಳಿದರೆ, ಪ್ಯಾಲೆಸ್ತೀನಿಯ ಅಧಿಕಾರಿಗಳು ಇದನ್ನು ಇಇಸ್ರಾಯೇಲ್ ವಾಯು ರಕ್ಷಣಾ ವ್ಯವಸ್ಥೆಯ ತಪ್ಪಾದ ಪ್ರತಿರೋಧ ಕ್ಷಿಪಣಿಯ ಪರಿಣಾಮ ಎಂದು ತಿಳಿಸಿದ್ದಾರೆ.

ಅನಿಲ ಮಾರುಕಟ್ಟೆಯಲ್ಲಿ ತೀವ್ರ ಪ್ರತಿಕ್ರಿಯೆ

ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಕತಾರ್‌ನ ರಾಸ್ ಲಾಫ್ಫಾನ್ ಅನಿಲ ಸಂಕೀರ್ಣದ ಮೇಲೆ ನಡೆದ ದಾಳಿಯ ನಂತರ UK ಮತ್ತು ಯುರೋಪಿನಲ್ಲಿ ಅನಿಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದೆ.

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಕತಾರ್‌ನ ಮೇಲಿನ ಮುಂದಿನ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕೆಂದು ಹೇಳಿದ್ದಾರೆ. ಇಸ್ರಾಯೇಲ್ ಇರಾನ್‌ನ ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ನಡೆಸಿದ ದಾಳಿಯ ಬಗ್ಗೆ ಅಮೇರಿಕಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಪಾರ್ಸ್ ವಿಶ್ವದಲ್ಲಿಯೇ ಅತಿ ದೊಡ್ಡ ಅನಿಲ ಕ್ಷೇತ್ರಗಳಲ್ಲೊಂದು ಆಗಿದ್ದು, ಇದನ್ನು ಇರಾನ್ ಮತ್ತು ಕತಾರ್ ಸಂಯುಕ್ತವಾಗಿ ಬಳಸುತ್ತಿವೆ. ಈ ಹಿನ್ನೆಲೆ, ಅರಬ್ ರಾಷ್ಟ್ರಗಳು ಕೂಡ ಒಟ್ಟಾಗಿ ಪ್ರಕಟಣೆ ನೀಡಿ ಇರಾನ್‌ನ ಕ್ರಮವನ್ನು ಖಂಡಿಸಿವೆ.

ಪರ್ಷಿಯನ್ ಕೊಲ್ಲಿಯಲ್ಲಿ ಉದ್ವಿಗ್ನತೆ

ಇದರ ಮಧ್ಯೆ ಪರ್ಷಿಯನ್ ಕೊಲ್ಲಿಯಲ್ಲಿ ಮತ್ತೊಂದು ಹಡಗು “ಅಪರಿಚಿತ ಕ್ಷಿಪಣಿ”ಯ ದಾಳಿಗೆ ಗುರಿಯಾಗಿದೆ ಎಂದು UK ಸಮುದ್ರ ವ್ಯಾಪಾರ ಕಾರ್ಯಾಚರಣೆ ಸಂಸ್ಥೆ ತಿಳಿಸಿದೆ. ಹಡಗಿನ ಸಿಬ್ಬಂದಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ರಾಸ್ ಲಾಫ್ಫಾನ್ ಸಮೀಪದ ಪ್ರದೇಶದಲ್ಲೇ ನಡೆದಿದ್ದು, ಇದೇ ಪ್ರದೇಶದ ಮೇಲೆ ಹಿಂದಿನ ರಾತ್ರಿ ದಾಳಿ ನಡೆದಿತ್ತು.

ಯುದ್ಧ ವೆಚ್ಚ ಹೆಚ್ಚಳದ ಸಾಧ್ಯತೆ

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ 200 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹಣವನ್ನು ಅನುಮೋದಿಸಲು ಪೆಂಟಗನ್ ಶ್ವೇತ ಭವನಕ್ಕೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ಈ ಮೊತ್ತ ಇದುವರೆಗೆ ನಡೆದ ಕಾರ್ಯಾಚರಣೆಗಳ ವೆಚ್ಚವನ್ನು ಬಹಳ ಮಟ್ಟಿಗೆ ಮೀರಿಸಲಿದೆ. ಈಗಾಗಲೇ ಬಳಕೆಯಾದ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ತುರ್ತುವಾಗಿ ಹೆಚ್ಚಿಸಲು ಈ ನಿಧಿಯನ್ನು ಬಳಸುವ ಉದ್ದೇಶವಿದೆ ಎಂದು ವರದಿ ತಿಳಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

19 ಮಾರ್ಚ್ 2026, 17:46