Aftermath of an Israeli strike, following an escalation between Hezbollah and Israel, in Beirut Aftermath of an Israeli strike, following an escalation between Hezbollah and Israel, in Beirut 

ಇರಾನ್ ಗುಪ್ತಚರ ಮುಖ್ಯಸ್ಥರ ಹತ್ಯೆ, ಲೆಬನಾನ್ ಮೇಲೆ ದಾಳಿ ಹೆಚ್ಚಳ:ತೀವ್ರಗೊಳ್ಳುತ್ತಲೇ ಇರುವ ಅಮೆರಿಕಾ–ಇಸ್ರಾಯೇಲ್–ಇರಾನ್ ಯುದ್ಧ

ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ನಡುರಾತ್ರಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರಾಯೇಲ್ ಹೇಳಿದೆ ಮತ್ತು ಹೆಜ್ಬೊಲ್ಲಾ ಮತ್ತು ಟೆಲ್ ಅವೀವ್ ನಡುವಿನ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಬೈರುತ್ ಮೇಲೆ ತನ್ನ ದಾಳಿಯನ್ನು ಇಸ್ರಾಯೇಲ್ ತೀವ್ರಗೊಳಿಸಿದೆ.

ಲೇಖಕರು: ನೇತನ್ ಮಾರ್ಲೆ

ಅಮೆರಿಕಾ–ಇಸ್ರಾಯೇಲ್–ಇರಾನ್ ಯುದ್ಧದ ದಾಳಿಯಲ್ಲಿ, ಇಸ್ರಾಯೇಲ್ ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರನ್ನು ರಾತ್ರಿ ನಡೆದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ. ಈ ವರದಿ, ಇರಾನ್‌ನ ಪ್ರಮುಖ ಭದ್ರತಾ ಅಧಿಕಾರಿಯಾಗಿದ್ದ ಅಲಿ ಲಾರಿಜಾನಿ ಅವರು ಇಸ್ರಾಯೇಲ್‌ನ ಮತ್ತೊಂದು ದಾಳಿಯಲ್ಲಿ ಹತ್ಯೆಯಾದ ಒಂದು ದಿನದ ನಂತರ ಬಂದಿದೆ.

ಇದರ ಮಧ್ಯೆ, ಇರಾನ್ ಹಾಗೂ ಅದರ ಮೈತ್ರಿ ಸಶಸ್ತ್ರ ಗುಂಪುಗಳಿಂದ ಪ್ರತಿದಾಳಿ ಕ್ರಮಗಳು ಮಧ್ಯಪ್ರಾಚ್ಯದ ವಿವಿಧ ಭಾಗಗಳಲ್ಲಿ ಮುಂದುವರಿಯುತ್ತಿವೆ. ಇಸ್ರಾಯೇಲ್‌ನ ಟೆಲ್ ಅವೀವ್‌ನಲ್ಲಿ ಇಬ್ಬರು ಸಾವಿಗೀಡಾದರೆ, ದುಬೈ, ಕತಾರ್, ಕುವೈತ್, ಇರಾಕ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಸ್ಫೋಟಗಳು ಮತ್ತು ಡ್ರೋನ್ ತಡೆ ಕಾರ್ಯಾಚರಣೆಗಳು ವರದಿಯಾಗಿವೆ.

ಇದಕ್ಕೂ ಮೊದಲು, ಅಮೆರಿಕಾ ಸೇನೆ ಹೋರ್ಮುಜ್ ಜಲಸಂಧಿಯ ಬಳಿ ಇರುವ ಇರಾನ್ ಕ್ಷಿಪಣಿ ಕೇಂದ್ರಗಳನ್ನು ಹೊಡೆಯಲು “ಡೀಪ್ ಪೆನೆಟ್ರೇಟರ್” ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿದುದಾಗಿ ತಿಳಿಸಿದೆ. ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯನ್ನು ಯುದ್ಧ ಆರಂಭವಾದ ನಂತರ ಇರಾನ್ ಬಹುತೇಕ ಬಂದ್ ಮಾಡಿದೆ.

ಇದರ ನಡುವೆ, ಹೆಜ್ಬೊಲ್ಲಾ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಇಸ್ರಾಯೇಲ್, ಲೆಬನಾನ್ ರಾಜಧಾನಿ ಬೈರೂತ್ ಮೇಲೆ ದಾಳಿಗಳನ್ನು ಹೆಚ್ಚಿಸಿದೆ. ಒಂದು ಸ್ಫೋಟವು ನಗರದ ಮಧ್ಯಭಾಗದಲ್ಲಿರುವ ವ್ಯಾಪಾರ ಮಳಿಗೆಗಳು ಮತ್ತು ಹೋಟೆಲ್‌ಗಳಿಂದ ಆವೃತವಾದ ಪ್ರದೇಶದ ಕಟ್ಟಡವೊಂದನ್ನು ನೆಲಸಮಗೊಳಿಸಿದೆ.

"ಈ ವಾರದ ಆರಂಭದಲ್ಲಿ, ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ  ನೆಲೆಗಳ ವಿರುದ್ಧ 'ಸೀಮಿತ ಮತ್ತು ಉದ್ದೇಶಿತ ಭೂ ಕಾರ್ಯಾಚರಣೆಗಳನ್ನು' ಪ್ರಾರಂಭಿಸಿರುವುದಾಗಿ ಇಸ್ರಾಯೇಲ್ ಸೇನೆ ತಿಳಿಸಿದೆ.

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಪ್ರಕಾರ, ಅಮೆರಿಕಾ ಮತ್ತು ಇಸ್ರಾಯೇಲ್ ಪಡೆಗಳು ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಲೆಬನಾನ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಸ್ಥಳಚ್ಯುತರಾಗಿದ್ದಾರೆ.

ಇದರ ನಡುವೆ, ವಾಣಿಜ್ಯ ನೌಕಾಯಾನದ ಮೇಲೆ ಈ ಸಂಘರ್ಷದ ಪರಿಣಾಮ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಸಮುದ್ರ ಸಂಸ್ಥೆ ಲಂಡನ್‌ನಲ್ಲಿ ತುರ್ತು ಸಭೆ ಕರೆದಿದೆ. ಪರ್ಶಿಯನ್ ಕೊಲ್ಲಿ ಮತ್ತು ಅದರ ಸಮೀಪ ಸಾವಿರಾರು ನಾವಿಕರು ಮತ್ತು ಹಡಗುಗಳು ಸಿಲುಕಿಕೊಂಡಿವೆ. ಎರಡು ದಿನಗಳ ಈ ಸಭೆಯಲ್ಲಿ, ಹಡಗುಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು “ಸುರಕ್ಷಿತ ಸಮುದ್ರ ಮಾರ್ಗ” ನಿರ್ಮಿಸುವ ಕುರಿತು ಪ್ರಸ್ತಾವನೆಗಳನ್ನೂ ಪರಿಗಣಿಸಲಾಗುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಮಾರ್ಚ್ 2026, 16:18