ಹುಡುಕಿ

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಛೇರಿ. ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಛೇರಿ.  (Copyright (c) 2025 BalkansCat/Shutterstock. No use without permission.)

ಮ್ಯಾಟಿಯೊ ಬ್ರೂನಿ: ರೂಪ್ನಿಕ್ ಕುರಿತು ಹರಿದಾಡುತ್ತಿರುವ ವರದಿಗಳು ಸಂಪೂರ್ಣ ಆಧಾರರಹಿತ ಪರಿಶೀಲನೆ ಇನ್ನೂ ಮುಂದುವರಿದಿದೆ.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮತ್ತೆಯೊ ಬ್ರೂನಿ ಅವರು, ವಂ.ಸ್ವಾಮಿ ಮಾರ್ಕೊ ಇವಾನ್ ರೂಪ್ನಿಕ್ ರವರ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಯಾವುದೇ ತೀರ್ಮಾನ ಕೈಗೊಂಡಿದ್ದಾರೆ ಎಂಬುದಾಗಿ ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿರುವ ವರದಿಗಳು "ಸಂಪೂರ್ಣವಾಗಿ ಆಧಾರರಹಿತವಾಗಿವೆ" ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಪರಿಶೀಲನೆ ಇನ್ನೂ ನಡೆಯುತ್ತಿದ್ದು, ವಿಚಾರಣಾ ಮಂಡಳಿಯು ಸಂಬಂಧಿತ ಧರ್ಮಪ್ರಾಂತಗಳಿಂದ, ಜೆಸ್ಯೂಟ್ ಸಂಸ್ಥೆಯಿಂದ, ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ಹಾಗೂ ಮಾಧ್ಯಮ ವರದಿಗಳಿಂದ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.

ವ್ಯಾಟಿಕನ್ ವರದಿ

"ರೆವರೆಂಡ್ ಮಾರ್ಕೊ ಇವಾನ್ ರೂಪ್ನಿಕ್ ರವರ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಯಾವುದೇ ರೀತಿಯ ತೀರ್ಮಾನ ಕೈಗೊಂಡಿದ್ದಾರೆ ಎಂಬುದಾಗಿ ಹರಿದಾಡುತ್ತಿರುವ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ."

ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗೆ ಸಂಬಂಧಿಸಿದಂತೆ ಪತ್ರಕರ್ತರೊಂದಿಗೆ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮತ್ತೆಯೊ ಬ್ರೂನಿ ರವರು ಈ ವಿಷಯವನ್ನು ಸ್ಪಷ್ಟಪಡಿಸಿದರು.

ಅವರು, "ಪ್ರಕರಣದ ಪರಿಶೀಲನೆ ಇನ್ನೂ ಮುಂದುವರಿದಿದೆ. ವಿಚಾರಣಾ ಮಂಡಳಿಯು ಸಂಬಂಧಿತ ಧರ್ಮಪ್ರಾಂತಗಳಿಂದ, ಜೆಸ್ಯೂಟ್ ಸಂಸ್ಥೆಯಿಂದ, ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಂದ ಹಾಗೂ ಮಾಧ್ಯಮ ವರದಿಗಳಿಂದ ಸ್ವೀಕರಿಸಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ" ಎಂದು ಹೇಳಿದರು.

ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ

ಬ್ರೂನಿರವರು, "ಯಾವುದೇ ನ್ಯಾಯಾಂಗ ಪ್ರಕ್ರಿಯೆಯಂತೆ, ಈ ವಿಚಾರಣೆಯು ನಡೆಯುತ್ತಿರುವ ಅವಧಿಯಲ್ಲಿ ಅದರ ಪ್ರಗತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಇದು ನ್ಯಾಯಾಂಗ ಪ್ರಕ್ರಿಯೆಯ ಗೌರವವನ್ನು ಕಾಪಾಡುವುದಕ್ಕಾಗಿ ಅಗತ್ಯವಾಗಿದೆ" ಎಂದು ತಿಳಿಸಿದರು.

ಅಲ್ಲದೆ, "ಇತ್ತೀಚಿನ ದಿನಗಳಲ್ಲಿ ನಡೆದಂತೆಯೇ, ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಮತ್ತಷ್ಟು ನೋವುಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದಲೂ ಈ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ" ಎಂದು ಅವರು ಹೇಳಿದರು.

"ವಿಚಾರಣಾ ಮಂಡಳಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ಅನಿಸಿದರೆ, ಅದನ್ನು ಪಡೆಯಲು ಅಗತ್ಯ ಕ್ರಮಗಳನ್ನು ಅದು ಸ್ವತಃ ಕೈಗೊಳ್ಳಲಿದೆ" ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು ಹೇಳಿದರು.

ಕ್ಯಾನನ್ ಕಾನೂನಿನ ಪ್ರಕಾರದ ಅಪರಾಧ ವಿಚಾರಣೆ

ಪತ್ರಕರ್ತರಿಗೆ ನೀಡಿದ ಪ್ರಕಟಣೆಯಲ್ಲಿ, "ಕ್ಯಾನನ್ ಕಾನೂನಿನ ಪ್ರಕಾರ ನಡೆಯುವ ಅಪರಾಧ ವಿಚಾರಣೆಯು ನ್ಯಾಯಾಂಗ ಸ್ವರೂಪದ್ದಾಗಿದೆ" ಎಂದು ವಿವರಿಸಲಾಗಿದೆ. ಅಲ್ಲದೆ, "ಆರೋಪಿತ ಅಪರಾಧಗಳಿಗೆ ನಾಗರಿಕ ಕಾನೂನಿನ ಪ್ರಕಾರ ಕಾಲಮಿತಿ ಅನ್ವಯವಾಗಿದ್ದರೂ ಸಹ, ಈ ಕ್ಯಾನನ್ ನ್ಯಾಯಾಂಗ ವಿಚಾರಣೆ ಮುಂದುವರಿಯುತ್ತಿದೆ" ಎಂದು ತಿಳಿಸಲಾಗಿದೆ.

ಈ ವಿಚಾರಣೆಯು "ಕ್ಯಾನನ್ ಕಾನೂನಿನ ಪ್ರಕಾರ ಆರೋಪಿಯು ತಪ್ಪಿತಸ್ಥನೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲಿದೆ" ಎಂದು ಪ್ರಕಟಣೆ ತಿಳಿಸಿದೆ.

ಮುಂದುವರಿದು, "ಕ್ಯಾನನ್ ಕಾನೂನಿನ ವ್ಯಾಪ್ತಿಯು ಧರ್ಮ ಸಭೆಯ ಆಂತರಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತೀರ್ಪು ನೀಡಲು ಹಾಗೂ ಶಿಕ್ಷೆ ವಿಧಿಸಲು ಮಾತ್ರ ಸೀಮಿತವಾಗಿದೆ" ಎಂದು ವಿವರಿಸಲಾಗಿದೆ.

ಆದರೆ, ರೂಪ್ನಿಕ್ ರವರು ಆರೋಪಿತ ಅಪರಾಧಗಳು ನಡೆದಿರಬಹುದಾದ ದೇಶಗಳ ನಾಗರಿಕ ಕಾನೂನುಗಳಿಗೆ ಇನ್ನೂ ಒಳಪಟ್ಟವರಾಗಿದ್ದಾರೆ. ಆದ್ದರಿಂದ, ಅಂತಹ ಅಪರಾಧಗಳಿಗೆ ಅನ್ವಯಿಸುವ ಕಾಲಮಿತಿಯನ್ನು ಪ್ರತಿಯೊಂದು ದೇಶದ ಕಾನೂನುಗಳು ಸ್ವತಂತ್ರವಾಗಿ ನಿರ್ಧರಿಸುತ್ತವೆ ಅದು ಧರ್ಮ ಸಭೆಯ ಅಧಿಕಾರದಿಂದ ಪ್ರತ್ಯೇಕವಾಗಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

22 ಜುಲೈ 2026, 17:32