ಆರ್ಚ್‌ಬಿಷಪ್ ಕ್ರಿಸ್ಟೋಫ್-ಜಖಿಯಾ ಎಲ್-ಕಾಸಿಸ್ ರವರು. ಆರ್ಚ್‌ಬಿಷಪ್ ಕ್ರಿಸ್ಟೋಫ್-ಜಖಿಯಾ ಎಲ್-ಕಾಸಿಸ್ ರವರು.  (ANSA)

ನ್ಯೂಯಾರ್ಕ್‌ನ ವಿಶ್ವಸಂಸ್ಥೆಗೆ (ಯುಎನ್) ಜಗದ್ಗುರುಗಳ ಅಧಿಕಾರ ಸ್ಥಳದ ನೂತನ ಶಾಶ್ವತ ವೀಕ್ಷಕರನ್ನು ಜಗದ್ಗುರುಗಳು ನೇಮಿಸಿದರು.

ಜಗದ್ಗುರು ಲಿಯೋರವರು ಆರ್ಚ್‌ಬಿಷಪ್ ಕ್ರಿಸ್ಟೋಫ್-ಜಖಿಯಾ ಎಲ್-ಕಾಸಿಸ್ ರವರನ್ನು ನ್ಯೂಯಾರ್ಕ್‌ನ ವಿಶ್ವಸಂಸ್ಥೆ (ಯುಎನ್)ಗೆ ಜಗದ್ಗುರುಗಳ ಅಧಿಕಾರ ಸ್ಥಳದ ನೂತನ ಶಾಶ್ವತ ವೀಕ್ಷಕರಾಗಿ ನೇಮಿಸಿದ್ದಾರೆ. ಈ ಹುದ್ದೆಯಲ್ಲಿ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳವು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಆರ್ಚ್‌ಬಿಷಪ್ ಕ್ರಿಸ್ಟೋಫ್-ಜಖಿಯಾ ಎಲ್-ಕಾಸಿಸ್ ರವರನ್ನು ನ್ಯೂಯಾರ್ಕ್‌ನ ವಿಶ್ವಸಂಸ್ಥೆ (ಯುಎನ್)ಗೆ ಜಗದ್ಗುರುಗಳ ಅಧಿಕಾರ ಸ್ಥಳದ ನೂತನ ಶಾಶ್ವತ ವೀಕ್ಷಕರಾಗಿ ನೇಮಿಸಿದ್ದಾರೆ.

ಈ ನೇಮಕಾತಿಯನ್ನು ಶನಿವಾರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿತು.

ಲೆಬನಾನ್ ಮೂಲದವರಾದ ರೊಸೆಲ್ಲೆಯ ನಾಮಮಾತ್ರ ಆರ್ಚ್‌ಬಿಷಪ್ ಕ್ರಿಸ್ಟೋಫ್-ಜಖಿಯಾ ಎಲ್-ಕಾಸಿಸ್ ರವರು ಇದುವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ದೇಶಗಳಿಗೆ ಪ್ರೇಷಿತರ ರಾಯಭಾರಿ ಆಗಿಯೂ, ಅರೇಬಿಯನ್ ಪರ್ಯಾಯದ್ವೀಪಕ್ಕೆ ಪ್ರೇಷಿತರ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಅವರು 1994ರಲ್ಲಿ ಯಾಜಕರಾಗಿ ದೀಕ್ಷೆ ಪಡೆದರು. 2000ರಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ರಾಜತಾಂತ್ರಿಕ ಸೇವೆಗೆ ಸೇರ್ಪಡೆಗೊಂಡ ಅವರು, ಇಂಡೋನೇಷ್ಯಾ, ಸುಡಾನ್ ಮತ್ತು ಟರ್ಕಿಯಲ್ಲಿ, ಹಾಗೆಯೇ ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯ ಕಾರ್ಯದರ್ಶಿಯ ಕಚೇರಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಜಗದ್ಗುರುಗಳ ಅಧಿಕಾರ ಸ್ಥಳವು ವಿಶ್ವಸಂಸ್ಥೆಯಲ್ಲಿ ಶಾಶ್ವತ ವೀಕ್ಷಕ ಸ್ಥಾನಮಾನವನ್ನು ಹೊಂದಿದ್ದು, ಇದರ ಮೂಲಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹಾಗೂ ಇತರ ಯುಎನ್ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿದೆ.

25 ಜುಲೈ 2026, 15:56