ಹುಡುಕಿ

ಸಂತ ಪೇತ್ರರ ಚೌಕ. ಸಂತ ಪೇತ್ರರ ಚೌಕ. 

ಎಪಿಎಸ್ಎ: 2025ರ ಹಣಕಾಸು ಹೇಳಿಕೆಗಳು ಬಲಿಷ್ಠ ನಿವ್ವಳ ಆಸ್ತಿಯನ್ನು ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳದ ನಿರಂತರ ಸೇವೆಯನ್ನು ತೋರಿಸುತ್ತವೆ.

ಜಗದ್ಗುರುಗಳ ಉತ್ತರಾಧಿಕಾರ ಬದಲಾವಣೆಯಿಂದ ಗುರುತಿಸಲ್ಪಟ್ಟ ಈ ವರ್ಷದಲ್ಲಿ,ಪ್ರೇಷಿತರ ಪೀಠದ ಆಸ್ತಿ ನಿರ್ವಹಣಾ ಆಡಳಿತ ಮಂಡಳಿ (ಎಪಿಎಸ್ಎ) ತನ್ನ ಸಾಮಾನ್ಯ ಹಣಕಾಸು ವರ್ಷವನ್ನು 2.686 ಬಿಲಿಯನ್ ಯೂರೋಗಳ ನಿವ್ವಳ ಆಸ್ತಿಯೊಂದಿಗೆ ಮುಕ್ತಾಯಗೊಳಿಸಿದೆ. ಧರ್ಮ ಸಭೆಯ ಆಸ್ತಿಪಾಸ್ತಿಯನ್ನು ಸಂರಕ್ಷಿಸಿ ಮತ್ತಷ್ಟು ಬಲಪಡಿಸುವುದರ ಜೊತೆಗೆ, ರೋಮಿನ ಪ್ರಾಂತ್ಯ ಅವಲಂಬಿಸಿರುವ ಅಗತ್ಯ ಸೇವೆಗಳನ್ನು ಖಚಿತಪಡಿಸುವುದು ಎಪಿಎಸ್ಎಯ ಎರಡು ಪ್ರಮುಖ ಆದ್ಯತೆಗಳಾಗಿ ಮುಂದುವರಿದಿವೆ.

ವ್ಯಾಟಿಕನ್ ವರದಿ 

ಒಂದು ವಿಶೇಷ ವರ್ಷಕ್ಕೆ ಸಂಬಂಧಿಸಿದ ಹಣಕಾಸು ಹೇಳಿಕೆಗಳಿವು—2025ರ ಪ್ರೇಷಿತರ ಪೀಠದ ಆಸ್ತಿ ನಿರ್ವಹಣಾ ಆಡಳಿತ ಮಂಡಳಿ (ಎಪಿಎಸ್ಎ)ಯ ಹಣಕಾಸು ಹೇಳಿಕೆಗಳು. ಜಗದ್ಗುರು ಫ್ರಾನ್ಸಿಸ್ ರವರ ನಿಧನ ಮತ್ತು ಜಗದ್ಗುರು XIVನೇ ಲಿಯೋರವರ ಆಯ್ಕೆಯಿಂದ ಗುರುತಿಸಲ್ಪಟ್ಟ ಈ ವರ್ಷದಲ್ಲಿ, ಆಡಳಿತ ಮಂಡಳಿಯು ತನ್ನ ಸೇವೆಯಲ್ಲಿ ಸಂಪೂರ್ಣ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿತು. ಜಗದ್ಗುರುಗಳ ಅಧಿಕಾರ ಸ್ಥಳದ ಸೇವೆಗಾಗಿ ಕಾರ್ಯನಿರ್ವಹಿಸುವ ಒಂದು ಸಾಂಸ್ಥಿಕ ಸಂಸ್ಥೆಯಾಗಿ ತನ್ನ ಪಾತ್ರವನ್ನು ಅದು ಮತ್ತೊಮ್ಮೆ ದೃಢಪಡಿಸಿದೆ ಎಂದು ಎಪಿಎಸ್ಎ ಅಧ್ಯಕ್ಷ ಆರ್ಚ್‌ಬಿಷಪ್ ಜಿಯೊರ್ಡಾನೊ ಪಿಕ್ಕಿನೊಟ್ಟಿ ವ್ಯಾಟಿಕನ್ ಮೀಡಿಯಾಗೆ ತಿಳಿಸಿದ್ದಾರೆ.

ಹಣಕಾಸು ವರ್ಷದ ಕಾರ್ಯಾಚರಣಾ ಫಲಿತಾಂಶವು 2.28 ಕೋಟಿ ಯೂರೋಗಳು. 2024ರಲ್ಲಿ ದಾಖಲಾಗಿದ್ದ 6.22 ಕೋಟಿ ಯೂರೋಗಳ ಫಲಿತಾಂಶದೊಂದಿಗೆ ಇದನ್ನು ಹೋಲಿಸುವಾಗ ಸೂಕ್ತವಾದ ದೃಷ್ಟಿಕೋನವನ್ನು ಹೊಂದಿರಬೇಕು ಎಂದು ಆರ್ಚ್‌ಬಿಷಪ್ ಪಿಕ್ಕಿನೊಟ್ಟಿ ವಿವರಿಸಿದರು. “ಹಿಂದಿನ ವರ್ಷ ಅಸಾಧಾರಣವಾಗಿತ್ತು, ಹೂಡಿಕೆ ಬಂಡವಾಳದ ಪುನರ್‌ರಚನೆಗೆ ಸಂಬಂಧಿಸಿದ ಆದಾಯದಿಂದಾಗಿ ಅಂತಹ ಫಲಿತಾಂಶ ದೊರೆತಿತ್ತು. ಅದನ್ನು ಮರುಕಳಿಸಲಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, 2025 ಸಾಮಾನ್ಯ ಕಾರ್ಯಾಚರಣಾ ಪರಿಸ್ಥಿತಿಗಳಿಗೆ ಮರಳಿದ ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸೂಚಕಗಳು ಸಕಾರಾತ್ಮಕವಾಗಿವೆ” ಎಂದು ಅವರು ಹೇಳಿದರು.

ನಿವ್ವಳ ಆಸ್ತಿಗೆ ವರ್ಗಾಯಿಸಲಾದ 1.6 ಕೋಟಿ ಯೂರೋಗಳ ಪ್ರಶ್ನೆ

ಎಪಿಎಸ್ಎ ಅಧ್ಯಕ್ಷರ ಪ್ರಕಾರ, ಅತ್ಯಂತ ಗಮನಹರಿಸಬೇಕಾದ ಅಂಶವೆಂದರೆ ಹೂಡಿಕೆ ಬಂಡವಾಳದ ಸ್ಥಿತಿ. ಹಣಕಾಸು ಹೇಳಿಕೆಗಳಲ್ಲಿ ಇದರಿಂದ 37 ಲಕ್ಷ ಯೂರೋಗಳ ಲೆಕ್ಕಪತ್ರ ನಷ್ಟ ತೋರಿಸಲಾಗಿದೆ. ಆದರೆ ಈ ಅಂಕಿಯನ್ನು ಪ್ರತ್ಯೇಕವಾಗಿ ನೋಡಿದರೆ ತಪ್ಪು ಅರ್ಥವಾಗುವ ಸಾಧ್ಯತೆಯಿದೆ.

“ಈ ಲೆಕ್ಕಪತ್ರ ನಷ್ಟವು ಬಹುಮಟ್ಟಿಗೆ ಜಗದ್ಗುರುಗಳ ಅಧಿಕಾರ ಸ್ಥಳದ ಹೊಸ ಲೆಕ್ಕಪತ್ರ ಮಾನದಂಡಗಳಾದ ವ್ಯಾಟಿಕನ್ ಹಣಕಾಸು ನಿರ್ವಹಣಾ ನೀತಿ (ವಿಎಫ್ಎಂಪಿ)ಯ ಅನ್ವಯದಿಂದ ಉಂಟಾಗಿದೆ. ಈ ನೀತಿಯ ಪ್ರಕಾರ, ಹೂಡಿಕೆ ಬಂಡವಾಳದ ಮೌಲ್ಯದಲ್ಲಾಗುವ ಬದಲಾವಣೆಗಳನ್ನು ಆದಾಯ-ವೆಚ್ಚದ ಲೆಕ್ಕದಲ್ಲಿ ತೋರಿಸುವ ಬದಲು ನೇರವಾಗಿ ನಿವ್ವಳ ಆಸ್ತಿಯಲ್ಲಿ ದಾಖಲಿಸಬೇಕು” ಎಂದು ಅವರು ವಿವರಿಸಿದರು.

ಪ್ರಾಯೋಗಿಕವಾಗಿ ಹೇಳುವುದಾದರೆ, ನಿರ್ವಹಿಸಲ್ಪಟ್ಟ ಹೂಡಿಕೆ ಬಂಡವಾಳದಿಂದ ನಿಜವಾಗಿ ಗಳಿಸಲಾದ ಸುಮಾರು 1.6 ಕೋಟಿ ಯೂರೋಗಳ ಧನಾತ್ಮಕ ಆದಾಯವು ಇನ್ನು ಮುಂದೆ ಆದಾಯ-ವೆಚ್ಚದ ಲೆಕ್ಕದ ಮೂಲಕ ಸಾಗುವುದಿಲ್ಲ. ಬದಲಾಗಿ, ಅದನ್ನು ನಿವ್ವಳ ಆಸ್ತಿಯೊಳಗಿನ ಮೀಸಲು ನಿಧಿಗಳಲ್ಲಿ ನೇರವಾಗಿ ದಾಖಲಿಸಲಾಗುತ್ತದೆ.

ಇದರಿಂದ ಲೆಕ್ಕಪತ್ರದ ಫಲಿತಾಂಶ –37 ಲಕ್ಷ ಯೂರೋಗಳು ಆಗಿದ್ದರೂ, ಹೂಡಿಕೆ ಬಂಡವಾಳದ ವಾಸ್ತವಿಕ ಫಲಿತಾಂಶವು ಸುಮಾರು 1.26 ಕೋಟಿ ಯೂರೋಗಳಷ್ಟು ಧನಾತ್ಮಕವಾಗಿರುತ್ತದೆ.

“ಇದು ಪಾರದರ್ಶಕತೆ ಮತ್ತು ವಿವೇಕಪೂರ್ಣ ಲೆಕ್ಕಪತ್ರ ನಿರ್ವಹಣೆಯ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರವಾಗಿದೆ” ಎಂದು ಆರ್ಚ್‌ಬಿಷಪ್ ಹೇಳಿದರು. “ಆ 1.6 ಕೋಟಿ ಯೂರೋಗಳು ನಷ್ಟವಾಗಿಲ್ಲ, ಬದಲಾಗಿ, ಆಡಳಿತ ಮಂಡಳಿಯ ನಿವ್ವಳ ಆಸ್ತಿಯನ್ನು ಬಲಪಡಿಸುವ ಸಲುವಾಗಿ ಅವುಗಳನ್ನು ನೇರವಾಗಿ ದಾಖಲಿಸಲಾಗಿದೆ.”

ಹಣಕಾಸು ಹೇಳಿಕೆಗಳನ್ನು ಒಟ್ಟಾರೆಯಾಗಿ ಅರ್ಥಮಾಡಿಕೊಳ್ಳಲು ಇದೇ ಪ್ರಮುಖ ಅಂಶವಾಗಿದೆ. ಏಕೆಂದರೆ, “ಎಪಿಎಸ್ಎಯ ಉದ್ದೇಶ ವಾರ್ಷಿಕ ಲಾಭವನ್ನು ಗಳಿಸುವುದಲ್ಲ, ಬದಲಾಗಿ ಅದರ ವಶಕ್ಕೆ ಒಪ್ಪಿಸಲಾದ ಆಸ್ತಿಯನ್ನು ಸಂರಕ್ಷಿಸಿ ಬಲಪಡಿಸುವುದಾಗಿದೆ.”

ಹೂಡಿಕೆಗಳು ಊಹಾತ್ಮಕ ಲಾಭದ ಉದ್ದೇಶವನ್ನು ಹೊಂದಿಲ್ಲ ಮತ್ತು ಅವುಗಳನ್ನು ಎಂದಿಗೂ ಹೆಚ್ಚಿನ ಅಪಾಯಕ್ಕೆ ಒಳಪಡಿಸಲಾಗುವುದಿಲ್ಲ. 2025ರ ಹೂಡಿಕೆ ಕಾರ್ಯತಂತ್ರವು ಅತ್ಯಂತ ಹೆಚ್ಚಿನ ವಿವೇಕದಿಂದ ರೂಪಿಸಲ್ಪಟ್ಟಿತ್ತು. ಷೇರುಗಳಲ್ಲಿ ಹೂಡಿಕೆಯ ಪ್ರಮಾಣವನ್ನು ಸುಮಾರು 17 ಪ್ರತಿಶತಕ್ಕೆ ಸೀಮಿತಗೊಳಿಸಲಾಗಿತ್ತು,ಬಾಂಡ್‌ಗಳಲ್ಲಿ 32 ಪ್ರತಿಶತ, ಭೌತಿಕ ಚಿನ್ನದಲ್ಲಿ 29 ಪ್ರತಿಶತ ಹೂಡಿಕೆ ಮಾಡಲಾಗಿತ್ತು. ಜೊತೆಗೆ, ಸಾಕಷ್ಟು ದ್ರವ್ಯಲಭ್ಯತೆಯ ಮೀಸಲನ್ನೂ ಕಾಯ್ದುಕೊಳ್ಳಲಾಗಿತ್ತು. ಸ್ವಂತ ಹೂಡಿಕೆ ಬಂಡವಾಳದ ಒಟ್ಟಾರೆ ಆದಾಯವು 14.37 ಪ್ರತಿಶತವಾಗಿತ್ತು.

ನಿವ್ವಳ ಆಸ್ತಿಯಲ್ಲಿ 8.9 ಕೋಟಿ ಯೂರೋಗಳ ಹೆಚ್ಚಳ

ಈ ಸಮಗ್ರ ಮತ್ತು ಬಲಪಡಿಸುವ ಕಾರ್ಯತಂತ್ರಕ್ಕೆ ಹಣಕಾಸು ವರ್ಷದ ಅತ್ಯಂತ ಮಹತ್ವದ ಅಂಕಿ ಸಾಕ್ಷಿಯಾಗಿದೆ: ನಿವ್ವಳ ಆಸ್ತಿ 2.686 ಬಿಲಿಯನ್ ಯೂರೋಗಳಿಗೆ ಏರಿದೆ. 2024ರಲ್ಲಿ ದಾಖಲಾಗಿದ್ದ 2.597 ಬಿಲಿಯನ್ ಯೂರೋಗಳಿಗೆ ಹೋಲಿಸಿದರೆ ಇದು ಸುಮಾರು 8.9 ಕೋಟಿ ಯೂರೋಗಳ ಹೆಚ್ಚಳವಾಗಿದೆ.

ಈ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಹೂಡಿಕೆ ಬಂಡವಾಳದಲ್ಲಿದ್ದ ಭೌತಿಕ ಚಿನ್ನದ ಮೌಲ್ಯಮರುಮೌಲ್ಯಮಾಪನದಿಂದಾದ 4.08 ಕೋಟಿ ಯೂರೋಗಳ ಹೆಚ್ಚಳ, ಸ್ಥಿರಾಸ್ತಿಗಳ ಮೌಲ್ಯದಲ್ಲಾದ 3.92 ಕೋಟಿ ಯೂರೋಗಳ ಹೆಚ್ಚಳ, ಹಾಗೂ ಭದ್ರತಾ ಪತ್ರಗಳ ಮೌಲ್ಯಮಾಪನದಿಂದ ದೊರೆತ 1.63 ಕೋಟಿ ಯೂರೋಗಳ ಧನಾತ್ಮಕ ಕೊಡುಗೆ. ಇವುಗಳನ್ನು ಇತರ ಕೆಲವು ಋಣಾತ್ಮಕ ಅಂಶಗಳು ಭಾಗಶಃ ತಗ್ಗಿಸಿದವು.

ಸ್ಥಿರಾಸ್ತಿ ಕ್ಷೇತ್ರವು ಸಾಮಾನ್ಯ ಕಾರ್ಯಾಚರಣೆಯ ಪ್ರಮುಖ ಚಾಲಕವಾಗಿತ್ತು. ಇದರ ಫಲಿತಾಂಶವು 94 ಲಕ್ಷ ಯೂರೋಗಳಷ್ಟು ಸುಧಾರಿಸಿ 4.45 ಕೋಟಿ ಯೂರೋಗಳಿಗೆ ತಲುಪಿತು. ಹೆಚ್ಚು ಪರಿಣಾಮಕಾರಿ ನಿರ್ವಹಣೆ, ಹೆಚ್ಚಿದ ಕಾರ್ಯಾಚರಣಾ ಆದಾಯ ಮತ್ತು ನಿರ್ವಹಣಾ ವೆಚ್ಚಗಳ ತರ್ಕಬದ್ಧೀಕರಣ ಇದಕ್ಕೆ ಕಾರಣವಾಗಿವೆ.

ಇಟಲಿಯಲ್ಲಿ ಆಡಳಿತ ಮಂಡಳಿಯು 4,281 ಸ್ಥಿರಾಸ್ತಿ ಘಟಕಗಳನ್ನು ನಿರ್ವಹಿಸುತ್ತದೆ. ಇದಕ್ಕೆ ಲಂಡನ್, ಪ್ಯಾರಿಸ್, ಜಿನೀವಾ ಮತ್ತು ಲೊಸಾನ್ ನಗರಗಳಲ್ಲಿರುವ ಸುಮಾರು 1,200 ಸ್ಥಿರಾಸ್ತಿ ಘಟಕಗಳು ಸೇರುತ್ತವೆ. ಇವುಗಳನ್ನು ಸಂಪೂರ್ಣ ಸ್ವಾಮ್ಯ ಹೊಂದಿರುವ ಕಂಪನಿಗಳ ಮೂಲಕ ನಿರ್ವಹಿಸಲಾಗುತ್ತದೆ.

ವರ್ಷದ ಅವಧಿಯಲ್ಲಿ, ಸ್ಥಿರಾಸ್ತಿ ಬಂಡವಾಳದ ಮೌಲ್ಯವರ್ಧನೆ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಲಾಯಿತು. ಇದರ ಭಾಗವಾಗಿ 2025–2027ರ ಮೂರು ವರ್ಷಗಳ ಯೋಜನೆ ಆರಂಭಿಸಲಾಯಿತು. ಕಾರ್ಯತಂತ್ರದ ದೃಷ್ಟಿಯಿಂದ ಅಗತ್ಯವಿಲ್ಲದ ಆಸ್ತಿಗಳನ್ನು ವಿಲೇವಾರಿ ಮಾಡುವುದು ಹಾಗೂ ಕಟ್ಟಡ ಯೋಜನೆ ಮತ್ತು ಕದಾಸ್ತ್ರ ದಾಖಲೆಗಳನ್ನು ನಿಯಮಿತಗೊಳಿಸುವುದು ಇದರ ಉದ್ದೇಶವಾಗಿದೆ. ಇದರಿಂದ ದೊರೆಯುವ ಬಂಡವಾಳವನ್ನು ಹೆಚ್ಚಿನ ಆದಾಯ ನೀಡುವ ಆಸ್ತಿಗಳಲ್ಲಿ ಮರುಹೂಡಿಕೆ ಮಾಡಲು ಸಾಧ್ಯವಾಗಲಿದೆ.

ಜಗದ್ಗುರುಗಳ ಸೇವೆ: ಕೊಡುಗೆ ಮತ್ತು ಹಣಕಾಸು ಹೇಳಿಕೆಗಳಲ್ಲಿ ಕಾಣಿಸದ ಸೇವೆಗಳು

“ಎಪಿಎಸ್ಎಯ ಮೊದಲ ಕಾಳಜಿ ಆಸ್ತಿಯನ್ನು ಸಂರಕ್ಷಿಸುವುದಾದರೆ, ಅದಕ್ಕೆ ಅವಿಭಾಜ್ಯವಾಗಿ ಸಂಬಂಧಿಸಿದ ಎರಡನೇ ಜವಾಬ್ದಾರಿ ಪವಿತ್ರ ಸಿಂಹಾಸನ ಅವಲಂಬಿಸಿರುವ ಸೇವೆಗಳನ್ನು ಖಚಿತಪಡಿಸುವುದಾಗಿದೆ” ಎಂದು ಆರ್ಚ್‌ಬಿಷಪ್ ಪಿಕ್ಕಿನೊಟ್ಟಿ ಹೇಳಿದರು.

ಸಾಮಾನ್ಯ ಹಣಕಾಸು ವರ್ಷವಾಗಿದ್ದರೂ, ರೋಮನ್ ಪ್ರಾಂತ್ಯದ ಅಗತ್ಯಗಳನ್ನು ಪೂರೈಸಲು ಕೇಳಲಾಗಿದ್ದ 2.27 ಕೋಟಿ ಯೂರೋಗಳ ಸಂಪೂರ್ಣ ಕೊಡುಗೆಯನ್ನು ಆಡಳಿತ ಮಂಡಳಿಯು ಪಾವತಿಸಿತು. “ಧಮ೯ಸಭೆಯ ಧ್ಯೇಯಕ್ಕೆ ಅದು ನೀಡುತ್ತಿರುವ ಮೂಲಭೂತ ಬೆಂಬಲಕ್ಕೆ ಇದು ಸ್ಪಷ್ಟವಾದ ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.

ಈ ಅಂಕಿಯಿಂದಲೇ ಹಣಕಾಸು ವರ್ಷದ ಕಾರ್ಯಾಚರಣಾ ಫಲಿತಾಂಶ ರೂಪುಗೊಂಡಿದೆ: 1.55 ಲಕ್ಷ ಯೂರೋಗಳ ಸಾಂಕೇತಿಕ ಹೆಚ್ಚುವರಿ ಮೊತ್ತ. ಇದನ್ನು ಸಂಪೂರ್ಣವಾಗಿ ನಿವ್ವಳ ಆಸ್ತಿಯ ಹೆಚ್ಚಳಕ್ಕೆ ಮೀಸಲಿಡಲಾಗಿದೆ.

ಆದರೆ, ಬಹುಶಃ ಈ ಸೇವೆಯ ಅತ್ಯಂತ ಮಹತ್ವದ ಭಾಗವು ಹಣಕಾಸು ಹೇಳಿಕೆಗಳ ಅಂಕಿಅಂಶಗಳಲ್ಲಿ ಕಾಣಿಸುವುದಿಲ್ಲ” ಎಂದು ಆರ್ಚ್‌ಬಿಷಪ್ ಮತ್ತಷ್ಟು ಹೇಳಿದರು.

ಆಡಳಿತ ಮಂಡಳಿಯ ಮಾನವ ಸಂಪನ್ಮೂಲದ ಸುಮಾರು 40 ಪ್ರತಿಶತ ಮಂದಿ ಜಗದ್ಗುರುಗಳ ಅಧಿಕಾರ ಸ್ಥಳದ ಇತರ ಸಂಸ್ಥೆಗಳಾದ ಡಿಕಾಸ್ಟರಿಗಳು, ಕಚೇರಿಗಳು ಮತ್ತು ಪ್ರತಿಷ್ಠಾನಗಳ ಹಿತಕ್ಕಾಗಿ ಕೆಲಸ ಮಾಡುತ್ತಾರೆ. ಈ ಸೇವೆಗಳಲ್ಲಿ ಬಹುಪಾಲು ಉಚಿತವಾಗಿವೆ.

ಎಪಿಎಸ್ಎ ಜಗದ್ಗುರುಗಳ ಅಧಿಕಾರ ಸ್ಥಳದ ಕೇಂದ್ರ ಖರೀದಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. 2025ರಲ್ಲಿ ಅದು 4,417 ಖರೀದಿ ವಿನಂತಿಗಳನ್ನು ನಿರ್ವಹಿಸಿತು; ಅವುಗಳಲ್ಲಿ ಕೇವಲ ನಾಲ್ಕನೇ ಒಂದು ಭಾಗ ಮಾತ್ರ  ಎಪಿಎಸ್ಎಯ ಸ್ವಂತ ಅಗತ್ಯಗಳಿಗೆ ಸಂಬಂಧಿಸಿದ್ದಾಗಿತ್ತು.

ಅದು 77 ಸಂಸ್ಥೆಗಳ ಲೆಕ್ಕಪತ್ರಗಳನ್ನು ನಿರ್ವಹಿಸುತ್ತದೆ, 50,000ಕ್ಕೂ ಹೆಚ್ಚು ಪಾವತಿಗಳನ್ನು ಪ್ರಕ್ರಿಯೆಗೊಳಿಸಿದೆ ಮತ್ತು ಇತರ ಡಿಕಾಸ್ಟರಿಗಳು ಬಳಸುವ ಕಟ್ಟಡಗಳನ್ನೂ ಒಳಗೊಂಡಂತೆ ಸಂಪೂರ್ಣ ಸ್ಥಿರಾಸ್ತಿ ಬಂಡವಾಳದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ.

“ಈ ಚಟುವಟಿಕೆಗಳಿಗೆ ಸಮಯ ಮತ್ತು ಸಿಬ್ಬಂದಿಯ ಅಗತ್ಯವಿದೆ. ಆದರೆ ಹಣಕಾಸು ಹೇಳಿಕೆಗಳಲ್ಲಿ ದಾಖಲಿಸಬಹುದಾದ ಯಾವುದೇ ಆದಾಯವನ್ನು ಅವು ಸೃಷ್ಟಿಸುವುದಿಲ್ಲ. ಆದರೂ, ಅವು ಪ್ರಾಂತ್ಯದ ಆಡಳಿತಾತ್ಮಕ ಬೆನ್ನೆಲುಬಾಗಿವೆ” ಎಂದು ಅವರು ಹೇಳಿದರು.

ಕೇವಲ ಸಂರಕ್ಷಣೆ ಮಾತ್ರವಲ್ಲ, ನಿರ್ಮಾಣವೂ

ಕೊನೆಯಲ್ಲಿ ಎಪಿಎಸ್ಎ ಅಧ್ಯಕ್ಷರ ಪ್ರಕಾರ, “2025 ಕೇವಲ ನಿರ್ವಹಣೆಯ ವರ್ಷವಾಗಿರಲಿಲ್ಲ, ಅದು ನಿರ್ಮಾಣದ ವರ್ಷವೂ ಆಗಿತ್ತು.”

ಪೂರ್ವದ ಚರ್ಚೆಗಳಿಗಾಗಿ ಇರುವ ಡಿಕಾಸ್ಟರಿಯ ಸ್ಥಿರಾಸ್ತಿ ಬಂಡವಾಳದ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿರುವುದು, ಸ್ಥಿರಾಸ್ತಿ ಮೌಲ್ಯವರ್ಧನೆ ಯೋಜನೆ ಆರಂಭಿಸಿರುವುದು ಮತ್ತು 2026ರ ಸಾಲಿನಲ್ಲಿ ಕೈಗೊಳ್ಳಲಿರುವ ಯೋಜನೆಗಳು—ಅವುಗಳಲ್ಲಿ ಲೋದಾತೋ ಸಿ ವಿಶ್ವಕೋಶದಿಂದ ಪ್ರೇರಣೆ ಪಡೆದ ಸಾಂತಾ ಮರಿಯಾ ದಿ ಗಲೇರಿಯಾದ “ಫ್ರಾಟೆಲ್ಲೊ ಸೋಲೆ” ಕೃಷಿ-ಸೌರ ವಿದ್ಯುತ್ ಯೋಜನೆ, ಹಾಗೆಯೇ  VIನೇ ಡೊಮಸ್ ಪಾವೊಲೊ ಯ ಪುನರ್ವಿಕಾಸ ಯೋಜನೆಯೂ ಸೇರಿವೆ—“ಸುಸ್ಥಿರತೆ ಮತ್ತು ನೈತಿಕ ತತ್ವಗಳಿಂದ ಮಾರ್ಗದರ್ಶಿಸಲ್ಪಡುವ, ಭವಿಷ್ಯದ ಆದಾಯದತ್ತ ಕೇಂದ್ರೀಕೃತವಾದ ದೃಷ್ಟಿಕೋನಕ್ಕೆ” ಸಾಕ್ಷಿಯಾಗಿವೆ.

ಆಡಳಿತ ಮಂಡಳಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆಯೂ ಇರುವ ಸಾಮಾನ್ಯ ಸೂತ್ರವೆಂದರೆ “ವಿವೇಕ, ಪಾರದರ್ಶಕತೆ ಮತ್ತು ಸೇವೆ.”

ಎಪಿಎಸ್ಎಗೆ ವಹಿಸಲಾದ ಆಸ್ತಿ ಧರ್ಮ ಸಭೆಯ ಧ್ಯೇಯದ “ಅಂತಿಮ ಗುರಿಯಲ್ಲ”; ಅದು ಆ ಧ್ಯೇಯದ ಸಾಧನವಾಗಿದೆ.

ಈ ದೃಷ್ಟಿಕೋನದಿಂದಲೇ ಮೀಸಲು ನಿಧಿಗಳಲ್ಲಿ ನೇರವಾಗಿ ದಾಖಲಿಸಲಾದ 1.6 ಕೋಟಿ ಯೂರೋಗಳನ್ನೂ ಅರ್ಥಮಾಡಿಕೊಳ್ಳಬೇಕು. “ಅದು ಕಳೆದುಹೋದ ಫಲಿತಾಂಶವಲ್ಲ; ಬದಲಾಗಿ, ಇಂದು ಮತ್ತು ನಾಳೆ ವಿಶ್ವದಾದ್ಯಂತ ಜಗದ್ಗುರುಗಳ ಅಧಿಕಾರ ಸ್ಥಳದ ಕಾರ್ಯಗಳು ಮತ್ತು ಸಾನ್ನಿಧ್ಯವನ್ನು ನಿರಂತರವಾಗಿ ಬೆಂಬಲಿಸಲು ಬಲಪಡಿಸಲಾದ ಆಸ್ತಿಯಾಗಿದೆ” ಎಂದು ಆರ್ಚ್‌ಬಿಷಪ್ ಪಿಕ್ಕಿನೊಟ್ಟಿ ಹೇಳಿದರು.

31 ಜುಲೈ 2026, 10:41