ಹುಡುಕಿ

ಇಂಡೋನೇಷ್ಯಾದ ಜಕಾರ್ತಾದಲ್ಲಿ ಏಷ್ಯನ್ ಬಿಷಪ್‌ಗಳ ಸಮ್ಮೇಳನಗಳ ಒಕ್ಕೂಟದ 12ನೇ ಸರ್ವಸದಸ್ಯರ ಅಧಿವೇಶನ. ಇಂಡೋನೇಷ್ಯಾದ ಜಕಾರ್ತಾದಲ್ಲಿ ಏಷ್ಯನ್ ಬಿಷಪ್‌ಗಳ ಸಮ್ಮೇಳನಗಳ ಒಕ್ಕೂಟದ 12ನೇ ಸರ್ವಸದಸ್ಯರ ಅಧಿವೇಶನ. 

ಏಷ್ಯಾದ ಧರ್ಮ ಸಭೆಯ ಸಿನೋಡಲ್ ಪಯಣದ ಕುರಿತು ಕಾರ್ಡಿನಲ್ ಗ್ರೆಕ್ ಅವಲೋಕನ.

ಬಿಷಪ್‌ಗಳ ಸಿನೋಡ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಮಾರಿಯೋ ಗ್ರೆಕ್ ರವರು, ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಫೆಡರೇಷನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸಸ್ (ಎಫ್ಎಬಿಸಿ) ನ 12ನೇ ಮಹಾಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಿನೋಡಲ್ ಪಯಣವನ್ನು ಮುಂದುವರಿಸುವಲ್ಲಿ ಸ್ಥಳೀಯ ಧರ್ಮ ಸಭೆಗಳು ವಹಿಸುವ ಮಹತ್ವದ ಪಾತ್ರವನ್ನು ವಿವರಿಸಿದರು.

ವ್ಯಾಟಿಕನ್ ವರದಿ

"ಸಿನೋಡಾಲಿಟಿ ಬಗ್ಗೆ ಕೇವಲ ಮಾತನಾಡುವುದಲ್ಲ ನಮ್ಮ ಧರ್ಮ ಸಭೆಗಳ ದೈನಂದಿನ ಜೀವನದಲ್ಲಿ ಅದನ್ನು ಹೇಗೆ ಬದುಕಬೇಕು ಎಂಬುದನ್ನು ಅರಸುವುದೇ ಮುಖ್ಯ." ಈ ಮಾತುಗಳೊಂದಿಗೆ ಬಿಷಪ್‌ಗಳ ಸಿನೋಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಕ್ ರವರು, ಸಿನೋಡಾಲಿಟಿಯ ನಂತರದ ಹಂತದ ಮೂಲ ದೃಷ್ಟಿಕೋನವನ್ನು ವಿವರಿಸಿದರು. ಅದರ ಕೇಂದ್ರಬಿಂದುವೇ ಸ್ಥಳೀಯ ಧರ್ಮ ಸಭೆಗಳ ಪ್ರಮುಖ ಪಾತ್ರ ಎಂದು ಅವರು ಹೇಳಿದರು. ಇಂಡೋನೇಷ್ಯಾದ ಜಕಾರ್ತಾದಲ್ಲಿ ಜುಲೈ 26ರ ಭಾನುವಾರದವರೆಗೆ ನಡೆಯುತ್ತಿರುವ ಫೆಡರೇಷನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸಸ್ (ಎಫ್ಎಬಿಸಿ) ನ 12ನೇ ಮಹಾಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದರು.

ಸ್ಥಳೀಯ ಧರ್ಮ ಸಭೆಗಳೇ ಸಿನೋಡಲ್ ಪಯಣದ ಹೃದಯ

"ಅನುಷ್ಠಾನದ ಹಂತಕ್ಕೂ ಹಾಗೂ ಸಭೆಗಳ ಪಯಣಕ್ಕೂ ಮೊದಲ ಮತ್ತು ಪ್ರಮುಖ ವಿಷಯವೇ ಸ್ಥಳೀಯ ಧರ್ಮ ಸಭೆ" ಎಂದು ಕಾರ್ಡಿನಲ್ ಗ್ರೆಕ್ ಜುಲೈ 24ರ ಶುಕ್ರವಾರ ಹೇಳಿದರು. ಇದು ಕೇವಲ ಆಡಳಿತಾತ್ಮಕ ವ್ಯವಸ್ಥೆಗೆ ಸಂಬಂಧಿಸಿದ ಹೇಳಿಕೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿಶ್ವಧಮ೯ಸಭೆಯ ಒಂದು ಆಡಳಿತಾತ್ಮಕ ವಿಭಾಗ ಮಾತ್ರವಲ್ಲದೆ, ಸ್ಥಳೀಯ ಧರ್ಮ ಸಭೆ"ನಿರ್ದಿಷ್ಟ ಪ್ರದೇಶದಲ್ಲಿ ಧರ್ಮ ಸಭೆಯ ನೈಜ ಅಭಿವ್ಯಕ್ತಿಯಾಗಿದೆ. ಅಲ್ಲಿ ಸುವಾರ್ತೆ ಘೋಷಿಸಲ್ಪಡುತ್ತದೆ, ಸಂಸ್ಕಾರಗಳು ಆಚರಿಸಲ್ಪಡುತ್ತವೆ ಮತ್ತು ವಿಶ್ವಾಸಿಗಳು ಕ್ರಿಸ್ತನಲ್ಲಿ ಐಕ್ಯತೆಯೊಳಗೆ ಒಂದಾಗುತ್ತಾರೆ" ಎಂದು ಅವರು ಹೇಳಿದರು.

ವರಗಳು, ಅನುಭವಗಳು ಮತ್ತು ಸಾಕ್ಷ್ಯವನ್ನು ಹಂಚಿಕೊಳ್ಳುವುದು

"ಸಿನೋಡಲ್ ಪರಿವರ್ತನೆಗೆ ಕರೆಯು ಮತ್ತು ಏಷ್ಯಾದಲ್ಲಿ ಸೇತುವೆಗಳಾಗುವ ಹಾಗೂ ಸೇತುವೆ ನಿರ್ಮಿಸುವವರಾಗುವ ಧ್ಯೇಯ" ಎಂಬ ವಿಷಯದ ಕುರಿತು ಮಾತನಾಡಿದ ಕಾರ್ಡಿನಲ್ ಗ್ರೆಕ್, ವಿಶ್ವಧರ್ಮಸಭೆಯನ್ನು ಅದರಲ್ಲಿರುವ ನೈಜ ಸ್ಥಳೀಯ ಸಮುದಾಯಗಳಿಂದ ಪ್ರತ್ಯೇಕವಾದ ಅಮೂರ್ತ ವಾಸ್ತವಿಕತೆಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನೆನಪಿಸಿದರು.

"ಯಾವುದೇ ಒಂದು ಸ್ಥಳೀಯ ಧರ್ಮ ಸಭೆ ತನ್ನ ಕೊಡುಗೆಯನ್ನು ನೀಡದಿದ್ದರೆ, ಅದು ವಿಶ್ವಧರ್ಮಸಭೆಗೆ ಅತ್ಯಂತ ಅಮೂಲ್ಯವಾದದ್ದನ್ನು ಕಳೆದುಹೋಗುವಂತೆ ಮಾಡುತ್ತದೆ" ಎಂದು ಅವರು ಹೇಳಿದರು. ಏಕೆಂದರೆ ಪ್ರತಿಯೊಂದು ಸ್ಥಳೀಯ ಧರ್ಮ ಸಭೆ ತನ್ನದೇ ಆದ ವಿಶಿಷ್ಟ ವರಗಳು, ಅನುಭವಗಳು, ಸಂಪನ್ಮೂಲಗಳು ಹಾಗೂ ದೇವರು ಇಡೀ ಕ್ರಿಸ್ತನ ದೇಹವನ್ನು ಸಮೃದ್ಧಗೊಳಿಸಲು ಉದ್ದೇಶಿಸಿರುವ ಅನನ್ಯ ಸಾಕ್ಷ್ಯವನ್ನು ಹೊತ್ತು ತರುತ್ತದೆ ಎಂದು ಅವರು ವಿವರಿಸಿದರು.

'ಕೇಳುವ ಧರ್ಮಸಭೆ' ಎಂಬ ಸಿನೋಡಲ್ ದೃಷ್ಟಿಕೋನ

2021ರಲ್ಲಿ ಆರಂಭವಾದ ಸಿನೋಡಲ್ ಪಯಣವನ್ನು ಸ್ಮರಿಸಿದ ಕಾರ್ಡಿನಲ್ ಗ್ರೆಕ್, ಈ ಪ್ರಕ್ರಿಯೆಯ ಮಾರ್ಗದರ್ಶಕ ಪ್ರಶ್ನೆ "ದೇವಜನರನ್ನು ನಾವು ಹೇಗೆ ತಲುಪಬಹುದು?" ಎಂಬುದಾಗಿತ್ತು ಎಂದರು.

ಈ ಪ್ರಶ್ನೆಯಿಂದ ಒಂದು ಮಹತ್ವದ ನಿರ್ಧಾರ ಹೊರಹೊಮ್ಮಿತು. "ಎಲ್ಲರ ಪಾಲ್ಗೊಳ್ಳುವಿಕೆ ಕೇವಲ ವಿಷಯವಾಗಿರಬಾರದು; ಅದು ಮೊದಲನೆಯದಾಗಿ ವಿಧಾನವಾಗಿರಬೇಕು. ಅದೇ ರೀತಿ ದೇವಜನರು ಕೇವಲ ಅಧ್ಯಯನದ ವಿಷಯವಾಗಿರದೆ, ಈ ಪಯಣದ ನಿಜವಾದ ಕರ್ತೃಗಳಾಗಿರಬೇಕು" ಎಂದು ಅವರು ಹೇಳಿದರು.

"ಧರ್ಮ ಸಭೆಯ ಮಾತನ್ನು ಕೇಳುವುದು ಏಕೆಂದರೆ 'ಸಿನೋಡಲ್ ಧರ್ಮ ಸಭೆ ಎಂದರೆ ಕೇಳುವ ಧರ್ಮಸಭೆ' ಎಂದರೆ ನಿಜವಾಗಿ ಸ್ಥಳೀಯ ಚರ್ಚುಗಳ ಮಾತನ್ನು ಕೇಳುವುದೇ ಆಗಿದೆ" ಎಂದು ಅವರು ವಿವರಿಸಿದರು.

ಐಕ್ಯತೆಯನ್ನು ಬಲಪಡಿಸಿ, ಧ್ಯೇಯವನ್ನು ಬೆಂಬಲಿಸುವುದು

ಧರ್ಮ ಸಭೆಗಳ ನಡುವಿನ ಪರಸ್ಪರ ವಿನಿಮಯದ ಮಹತ್ವವನ್ನು ಕಾರ್ಡಿನಲ್ ಗ್ರೆಕ್ ರವರು ಒತ್ತಿಹೇಳಿದರು. ಪ್ರತಿಯೊಂದು ಧರ್ಮ ಸಭೆ ತನ್ನ ಅನುಭವಗಳು ಮತ್ತು ವರಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಕರೆಯಲ್ಪಟ್ಟಿದೆ ಎಂದರು.

ಸಿನೋಡಲ್ ಪ್ರಕ್ರಿಯೆಯ ಮುಖ್ಯ ಉದ್ದೇಶ ಹೊಸ ದಾಖಲೆಗಳನ್ನು ಸೃಷ್ಟಿಸುವುದಲ್ಲ ಬದಲಾಗಿ "ವರಗಳ ಪರಸ್ಪರ ವಿನಿಮಯದ ಮೂಲಕ ಐಕ್ಯತೆಯನ್ನು ಬಲಪಡಿಸುವುದು ಹಾಗೂ ಧರ್ಮ ಸಭೆಯ ಧ್ಯೇಯವನ್ನು ಬೆಂಬಲಿಸುವುದು" ಎಂದು ಅವರು ಹೇಳಿದರು.

ನಿರಂತರ ಪ್ರತಿಕ್ರಿಯೆಯ ಹೊಸ ವಿಧಾನ

ಸಿನೋಡಲ್ ಪಯಣದಿಂದ ಹೊರಹೊಮ್ಮಿದ ಹೊಸ ಅಂಶಗಳಲ್ಲಿ ಒಂದು 'ರೆಸ್ಟಿಟ್ಯೂಟಿಯೋ' ಅಥವಾ ನಿರಂತರ ಪ್ರತಿಕ್ರಿಯೆಯ ವಿಧಾನ ಎಂದು ಅವರು ವಿವರಿಸಿದರು. ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಮತ್ತೆ ಸ್ಥಳೀಯ ಸಮುದಾಯಗಳಿಗೆ ಹಿಂತಿರುಗಿಸಲಾಗುತ್ತಿತ್ತು, ಇದರಿಂದ ಅವರು ಅದನ್ನು ಸ್ವೀಕರಿಸಿ, ಪುನಃ ಚಿಂತನೆ ನಡೆಸಲು ಸಾಧ್ಯವಾಯಿತು.

"ಈ ಪ್ರಕ್ರಿಯೆ ಏಕಮುಖವಾಗಿರಲಿಲ್ಲ ಅದು ದ್ವಿಮುಖವಾಗಿತ್ತು, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ವೃತ್ತಾಕಾರದ ವಿನಿಮಯವಾಗಿತ್ತು" ಎಂದು ಕಾರ್ಡಿನಲ್ ಗ್ರೆಕ್ ಹೇಳಿದರು.

ಈ ವಿಧಾನವು ಸಿನೋಡಲ್ ಪ್ರಕ್ರಿಯೆಯನ್ನು ಸಮುದಾಯಗಳ ನೈಜ ಜೀವನಕ್ಕೆ ನಿಕಟವಾಗಿ ಜೋಡಿಸಿಡಲು ಅತ್ಯಗತ್ಯವಾಗಿತ್ತು. "ಸ್ಥಳೀಯ ಧರ್ಮ ಸಭೆಗಳನ್ನೂ, ಅಂದರೆ ರಕ್ತಮಾಂಸದೊಂದಿಗೆ ಬದುಕುತ್ತಿರುವ, ದೀಕ್ಷಾಸ್ನಾನ ಪಡೆದ ದೇವಜನರನ್ನೂ ಪುನಃ ಪುನಃ ಆಲಿಸುವುದರ ಮೂಲಕವೇ, ಕೆಲವೇ 'ತಜ್ಞರ' ಕೆಲಸವು ಧರ್ಮ ಸಭೆಯ ಮೂಲಮಟ್ಟದ ಅನುಭವವನ್ನು ಮೀರಿಸಿ ಹೋಗದಂತೆ ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು" ಎಂದು ಅವರು ಹೇಳಿದರು.

ಏಷ್ಯಾದ ಧರ್ಮ ಸಭೆಯ ವಿಶಿಷ್ಟ ಕೊಡುಗೆ

ವಿಶೇಷವಾಗಿ ಏಷ್ಯಾದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಡಿನಲ್ ಗ್ರೆಕ್, ಅದರ ಅನುಭವವು ವಿಶ್ವಧರ್ಮ ಸಭೆಗೆ ಅಪಾರ ಮಹತ್ವದ್ದಾಗಿದೆ ಎಂದು ಹೇಳಿದರು.

ಇತರ ಧರ್ಮಗಳೊಂದಿಗಿನ ಸಂವಾದ, ಸಾಂಸ್ಕೃತಿಕ ವೈವಿಧ್ಯತೆ, ಅನೇಕ ಕಡೆಗಳಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಿರುವ ಪರಿಸ್ಥಿತಿ ಹಾಗೂ ಬಡವರೊಂದಿಗಿನ ನಿಕಟ ಸಂಬಂಧ ಇವೆಲ್ಲವೂ ಪವಿತ್ರಾತ್ಮನು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳಾಗಿವೆ ಎಂದು ಅವರು ತಿಳಿಸಿದರು.

"ಮುಖ್ಯ ಪ್ರಶ್ನೆಯೆಂದರೆ, ಏಷ್ಯಾದ ಧರ್ಮ ಸಭೆಗಳು ಸಿನೋಡ್‌ನಿಂದ ಏನು ಪಡೆಯುತ್ತವೆ ಎಂಬುದಲ್ಲ ಪವಿತ್ರಾತ್ಮನು ಅವುಗಳ ಮೂಲಕ ಇಡೀ ವಿಶ್ವಧಮ೯ಸಭೆಗೆ ಯಾವ ವರವನ್ನು ನೀಡಲು ಬಯಸುತ್ತಾನೆ ಎಂಬುದಾಗಿದೆ" ಎಂದು ಅವರು ಹೇಳಿದರು.

ಸ್ವೀಕಾರದ ಹಂತ ಅತ್ಯಂತ ನಿರ್ಣಾಯಕ

ಪ್ರಸ್ತುತ ನಡೆಯುತ್ತಿರುವ ಸ್ವೀಕಾರದ ಹಂತ ಅತ್ಯಂತ ಮಹತ್ವದ್ದಾಗಿದೆ ಎಂದು ಕಾರ್ಡಿನಲ್ ಗ್ರೆಕ್ ಹೇಳಿದರು.

"ಹಲವು ದೃಷ್ಟಿಗಳಿಂದ ನೋಡಿದರೆ, ಇದೇ ಅತ್ಯಂತ ಪ್ರಮುಖ ಹಂತವಾಗಿದೆ" ಎಂದು ಅವರು ಒತ್ತಿ ಹೇಳಿದರು. ಸಿನೋಡ್ ಕೇವಲ ದಾಖಲೆಗಳು ಅಥವಾ ಅಧಿಕೃತ ನಿರ್ಣಯಗಳಲ್ಲಿ ಸೀಮಿತವಾಗದೆ, ಧರ್ಮ ಸಭೆಯ ಜೀವನದಲ್ಲಿ ಬದುಕಲ್ಪಡುವ ಅನುಭವವಾಗಬೇಕು ಎಂದು ಅವರು ಕರೆ ನೀಡಿದರು.

ಬಿಷಪ್‌ಗಳ ಪಾತ್ರ

ಸಿನೋಡಾಲಿಟಿಯ ಬೆಳಕಿನಲ್ಲಿ ಬಿಷಪ್‌ಗಳ ಪಾತ್ರವೂ ಹೊಸ ಅರ್ಥವನ್ನು ಪಡೆಯುತ್ತದೆ ಎಂದು ಕಾರ್ಡಿನಲ್ ಗ್ರೆಕ್ ರವರು ಹೇಳಿದರು.

"ಸಿನೋಡಾಲಿಟಿ ಕೇವಲ ಎಲ್ಲರ ಪಾಲ್ಗೊಳ್ಳುವಿಕೆಯ ವಿಷಯವಲ್ಲ ಅದು ಧರ್ಮಪ್ರಾಂತ್ಯದ ಬಿಷಪ್‌ಗೆ ವಹಿಸಲಾದ ಅಧಿಕಾರದ ಸೇವೆಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಅವಕಾಶವೂ ಆಗಿದೆ" ಎಂದು ಅವರು ಹೇಳಿದರು.

ಬಿಷಪ್ ದೇವಜನರ ಮಾತನ್ನು ಆಲಿಸಬೇಕು, ಧರ್ಮ ಸಭೆಯ ವಿವೇಚನೆಯ ಪಯಣದಲ್ಲಿ ಜೊತೆಯಾಗಬೇಕು ಮತ್ತು ಅದೇ ಸಮಯದಲ್ಲಿ ಧರ್ಮ ಸಭೆಯ ಐಕ್ಯತೆಯನ್ನು ಕಾಪಾಡಬೇಕು ಎಂದು ಅವರು ತಿಳಿಸಿದರು.

ತಮ್ಮ ಭಾಷಣದ ಕೊನೆಯಲ್ಲಿ ಕಾರ್ಡಿನಲ್ ಗ್ರೆಕ್ ರವರು, "ಪ್ರತಿಯೊಂದು ಸ್ಥಳೀಯ ಧರ್ಮ ಸಭೆ ತನ್ನನ್ನು ಒಂದೇ ಸಮಯದಲ್ಲಿ ದೇವರ ವರವನ್ನು ಸ್ವೀಕರಿಸುವವಳಾಗಿಯೂ ಮತ್ತು ಆ ವರವನ್ನು ಇತರರಿಗೆ ನೀಡುವವಳಾಗಿಯೂ ಗುರುತಿಸಿಕೊಂಡಾಗ ಮಾತ್ರ ಸಿನೋಡ್‌ನ ಅನುಷ್ಠಾನವು ತನ್ನ ಪೂರ್ಣ ಫಲವನ್ನು ನೀಡುತ್ತದೆ" ಎಂದು ಹೇಳಿದರು.

ಧರ್ಮ ಸಭೆಗಳ ನಡುವಿನ ಈ ಸಮೃದ್ಧ ವರಗಳ ವಿನಿಮಯದ ಮೂಲಕವೇ "ಧರ್ಮ ಸಭೆಯ ಐಕ್ಯತೆಯಲ್ಲಿಯೂ ಧ್ಯೇಯದಲ್ಲಿಯೂ ನಿರಂತರವಾಗಿ ಬೆಳೆಯುತ್ತಿರುತ್ತದೆ" ಎಂದು ಅವರು ಒತ್ತಿಹೇಳಿದರು.

24 ಜುಲೈ 2026, 17:50