ಹುಡುಕಿ

ವ್ಯಾಟಿಕನ್‌ನಲ್ಲಿ ಬಿಷಪ್‌ಗಳ ಸಿನೊಡ್‌ನ 16 ನೇ ಸಾಮಾನ್ಯ ಸಾಮಾನ್ಯ ಸಭೆ. ವ್ಯಾಟಿಕನ್‌ನಲ್ಲಿ ಬಿಷಪ್‌ಗಳ ಸಿನೊಡ್‌ನ 16 ನೇ ಸಾಮಾನ್ಯ ಸಾಮಾನ್ಯ ಸಭೆ.  (ANSA)

2027-2028ರ ಸಿನೋಡ್ ಮಹಾಸಭೆಗಳ ಸಿದ್ಧತೆಗಾಗಿ ಧರ್ಮ ಸಭೆಯ ನಾಯಕರು ರೋಮಿನಲ್ಲಿ ಒಗ್ಗೂಡಿದರು.

ಸಿನೋಡ್‌ನ ಪ್ರಧಾನ ಕಾರ್ಯದರ್ಶಿ ಕಚೇರಿಯು, ಸಿನೋಡಾಲಿಟಿ ಕುರಿತ ಸಿನೋಡ್‌ನ ಅನುಷ್ಠಾನ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಹಾಗೂ 2027–2028ರ ಚರ್ಚ್ ಮಹಾಸಭೆಗಳ ಸಿದ್ಧತೆಗಾಗಿ ಚರ್ಚ್‌ನ ಖಂಡಮಟ್ಟದ ಸಂಸ್ಥೆಗಳ ನಾಯಕರು ರೋಮ್‌ನಲ್ಲಿ ಒಗ್ಗೂಡುತ್ತಿದ್ದಾರೆ ಎಂದು ಘೋಷಿಸಿದೆ.

ವ್ಯಾಟಿಕನ್ ವರದಿ

ಸಿನೋಡ್ ಪ್ರಧಾನ ಕಾರ್ಯದರ್ಶಿ ಕಚೇರಿಯು ಸೋಮವಾರ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸಿನೋಡಾಲಿಟಿ ಕುರಿತ ಸಿನೋಡ್‌ನ ಮುಂದಿನ ಹಂತದ ಕುರಿತು ಚರ್ಚಿಸಲು ಧರ್ಮ ಸಭೆಯ ಖಂಡಮಟ್ಟದ ಸಂಸ್ಥೆಗಳ ಮುಖ್ಯಸ್ಥರು ಈ ವಾರ ರೋಮಿನಲ್ಲಿ ಮೂರು ದಿನಗಳ ಸಭೆಗಾಗಿ ಒಗ್ಗೂಡಿದ್ದಾರೆ.

ಜೂನ್ 23ರಿಂದ 25ರವರೆಗೆ ನಡೆಯುತ್ತಿರುವ ಈ ಸಭೆಯಲ್ಲಿ ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಏಷ್ಯಾ, ಯುರೋಪ್, ಓಷಿಯಾನಿಯಾ, ಮಧ್ಯಪ್ರಾಚ್ಯ ಹಾಗೂ ಉತ್ತರ ಅಮೆರಿಕಾದ ಖಂಡೀಯ ಧರ್ಮ ಸಭೆಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅವರೊಂದಿಗೆ ಖಂಡಮಟ್ಟದ ಸಿನೋಡಲ್ ತಂಡಗಳ ಸಂಯೋಜಕರೂ ಉಪಸ್ಥಿತರಿದ್ದಾರೆ.

ಅನುಷ್ಠಾನ ಹಂತ

ಪತ್ರಿಕಾ ಪ್ರಕಟಣೆಯ ಪ್ರಕಾರ, 2024ರ ಅಕ್ಟೋಬರ್‌ನಲ್ಲಿ ನಡೆದ ಬಿಷಪ್‌ಗಳ ಸಿನೋಡ್‌ನ XVIನೇ ಸಾಮಾನ್ಯ ಸಭೆಯ ಸಮಾಪ್ತಿಯ ನಂತರ, ಧರ್ಮ ಸಭೆಯ ಸಿನೋಡಾಲಿಟಿ ಕುರಿತ ಸಿನೋಡ್‌ನ ಅನುಷ್ಠಾನ ಹಂತವನ್ನು ಮುಂದುವರಿಸುತ್ತಿದೆ. ಈ ಪ್ರಕ್ರಿಯೆಯು 2027–2028ರ ಧರ್ಮ ಸಭೆಯ ಮಹಾಸಭೆಗಳ ಮೂಲಕ ವಿಶೇಷ ರೂಪ ಪಡೆದುಕೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಪ್ರಕಟಗೊಂಡಿರುವ “2027–2028ರ ಮಹಾಸಭೆಗಳತ್ತ ಸಿದ್ಧತೆಗಾಗಿ ಹಂತಗಳು, ಮಾನದಂಡಗಳು ಮತ್ತು ಸಾಧನಗಳು” ಎಂಬ ಮಾರ್ಗದರ್ಶಿ ದಸ್ತಾವೇಜಿನ ಬೆಳಕಿನಲ್ಲಿ ಭಾಗವಹಿಸುವವರು ಸಭೆ ನಡೆಸುತ್ತಿದ್ದಾರೆ. ಈ ದಸ್ತಾವೇಜು ಸಿನೋಡಲ್ ಪಯಣದ ಮುಂದಿನ ಹಂತಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ.

ಮೂರು ದಿನಗಳ ಚರ್ಚೆಗಳು ಮುಖ್ಯವಾಗಿ ಬಿಷಪ್‌ಗಳ ಸಿನೋಡ್‌ನ XVIನೇ ಸಾಮಾನ್ಯ ಸಭೆಯ ಅಂತಿಮ ದಸ್ತಾವೇಜಿನ ಅನುಷ್ಠಾನದಲ್ಲಿ ಕಂಡುಬಂದ ಪ್ರಮುಖ ಬೆಳವಣಿಗೆಗಳನ್ನು ಆಲಿಸುವುದರ ಮೇಲೆ ಕೇಂದ್ರೀಕೃತವಾಗಿವೆ ಎಂದು ಸಿನೋಡ್ ಪ್ರಧಾನ ಕಾರ್ಯದರ್ಶಿ ಕಚೇರಿ ತಿಳಿಸಿದೆ. ಜೊತೆಗೆ, ವಿಶ್ವದ ವಿವಿಧ ಪ್ರದೇಶಗಳ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವುದು ಹಾಗೂ ಹೆಚ್ಚಿನ ಸಾಮೂಹಿಕ ಚಿಂತನೆ ಅಗತ್ಯವಿರುವ ಸಾಮಾನ್ಯ ಸವಾಲುಗಳು ಮತ್ತು ವಿಚಾರಗಳನ್ನು ಗುರುತಿಸುವುದೂ ಇದರ ಉದ್ದೇಶವಾಗಿದೆ.

ಸ್ಥಳೀಯ ಧರ್ಮ ಸಭೆಗಳೊಂದಿಗೆ ಸಹಯಾನ

ಕಾರ್ಯಕ್ರಮದ ಒಂದು ಭಾಗವನ್ನು ಸ್ಥಳೀಯ ಧರ್ಮ ಸಭೆಗಳು ಮತ್ತು ಪ್ರಾದೇಶಿಕ ಧರ್ಮ ಸಭೆಯ ಸಮೂಹಗಳು ಸಿನೋಡಲ್ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುತ್ತಿರುವ ಸಂದರ್ಭದಲ್ಲಿ ಅವುಗಳಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುವ ಕಾರ್ಯಕ್ಕೆ ಮೀಸಲಿಡಲಾಗಿದೆ. ಈ ಕಾರ್ಯದಲ್ಲಿ ಸಂವಹನದ ಪಾತ್ರಕ್ಕೂ ವಿಶೇಷ ಗಮನ ನೀಡಲಾಗುತ್ತಿದೆ.

ಚರ್ಚೆಯ ಅಂತಿಮ ದಿನವು ಖಂಡಮಟ್ಟದ ಮಹಾಸಭೆಗಳ ಮೇಲೆ ಕೇಂದ್ರೀಕರಿಸಲಿದೆ. ಪತ್ರಿಕಾ ಪ್ರಕಟಣೆಯು ಅವುಗಳನ್ನು “2028ರ ಅಕ್ಟೋಬರ್ ಮಹಾಸಭೆಯಲ್ಲಿ ಪರ್ಯವಸಾನಗೊಳ್ಳಲಿರುವ ವಿಶಾಲ ಧರ್ಮ ಸಭೆಯ ಮಹಾಸಭೆಗಳ ಪಯಣದ ಒಂದು ಹಂತ” ಎಂದು ವಿವರಿಸಿದೆ.

ಭಾಗವಹಿಸುವವರು ಪ್ರತಿನಿಧಿತ್ವ ಮತ್ತು ಭಾಗವಹಿಸುವಿಕೆಯ ಪ್ರಶ್ನೆಗಳು, ನಿರೀಕ್ಷಿತ ಫಲಿತಾಂಶಗಳು ಹಾಗೂ ಈ ಸಂಪೂರ್ಣ ಪ್ರಕ್ರಿಯೆಗೆ ಸಿನೋಡ್ ಪ್ರಧಾನ ಕಾರ್ಯದರ್ಶಿ ಕಚೇರಿ ನೀಡಬೇಕಾದ ಮಾರ್ಗದರ್ಶನದ ಪಾತ್ರದ ಕುರಿತು ಚಿಂತನೆ ನಡೆಸಲಿದ್ದಾರೆ.

ಸಭೆಯು ಗುರುವಾರ ಸಂಜೆ ಮುಕ್ತಾಯಗೊಳ್ಳಲಿದೆ. ಸಮಾರೋಪಕ್ಕೂ ಮುನ್ನ, ಜಗದ್ಗುರು XIVನೇ ಲಿಯೋರವರು ಸಿನೋಡ್ ಪ್ರಧಾನ ಕಾರ್ಯದರ್ಶಿ ಕಚೇರಿಯ ಕೇಂದ್ರ ಕಚೇರಿಯಲ್ಲಿ ಭಾಗವಹಿಸುವವರನ್ನು ಭೇಟಿಯಾಗಲಿದ್ದಾರೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, ಜೂನ್ 25ರ ಮಧ್ಯಾಹ್ನ ಜಗದ್ಗುರುಗಳು ಸಭೆಯಲ್ಲಿ ಭಾಗವಹಿಸುತ್ತಿರುವ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

22 ಜೂನ್ 2026, 21:47