ಹುಡುಕಿ

ರೋಮಿನಲ್ಲಿ ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯ ಪ್ರೊ-ಪ್ರಿಫೆಕ್ಟ್ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟ್ಯಾಗ್ಲೆ ಅವರನ್ನು ವಂ.ಸ್ವಾಮಿ ಫ್ರೆಡ್ರಿಕ್ ಬೆಚಿನಾ, ಒಎಸ್ಆರ್, ವಂ.ಸ್ವಾಮಿ ಒಕುಸಿಟಿನೊ ಉಲುಪಾನೊ, ಆರ್ಚ್‌ಬಿಷಪ್ ರಯಾನ್ ಜಿಮೆನೆಜ್ ಮತ್ತು ಅಡ್ಜಂಕ್ಟ್ ಪ್ರೊಫೆಸರ್ ಸುಸಾನ್ ಪಾಸ್ಕೋ ಭೇಟಿಯಾಗುತ್ತಾರೆ. ರೋಮಿನಲ್ಲಿ ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯ ಪ್ರೊ-ಪ್ರಿಫೆಕ್ಟ್ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟ್ಯಾಗ್ಲೆ ಅವರನ್ನು ವಂ.ಸ್ವಾಮಿ ಫ್ರೆಡ್ರಿಕ್ ಬೆಚಿನಾ, ಒಎಸ್ಆರ್, ವಂ.ಸ್ವಾಮಿ ಒಕುಸಿಟಿನೊ ಉಲುಪಾನೊ, ಆರ್ಚ್‌ಬಿಷಪ್ ರಯಾನ್ ಜಿಮೆನೆಜ್ ಮತ್ತು ಅಡ್ಜಂಕ್ಟ್ ಪ್ರೊಫೆಸರ್ ಸುಸಾನ್ ಪಾಸ್ಕೋ ಭೇಟಿಯಾಗುತ್ತಾರೆ.  (© CEPAC )

ಗುರುವಿದ್ಯಾರ್ಥಿ ತರಬೇತಿಯನ್ನು ಬಲಪಡಿಸಲು ಪೆಸಿಫಿಕ್ ಪ್ರದೇಶದ ಬಿಷಪ್‌ಗಳ ನಿಯೋಗವು ವ್ಯಾಟಿಕನ್‌ಗೆ ಭೇಟಿ ನೀಡಿದೆ.

ಪೆಸಿಫಿಕ್ ಎಪಿಸ್ಕೋಪಲ್ ಸಮ್ಮೇಳನದ ಅಧ್ಯಕ್ಷರಾದ ಆರ್ಚ್‌ಬಿಷಪ್ ರಯಾನ್ ಜಿಮೆನೆಸ್ ರವರ ನೇತೃತ್ವದ ನಿಯೋಗವು, ಓಷಿಯಾನಿಯಾ ಪ್ರದೇಶದಲ್ಲಿ ಯಾಜಕ ತರಬೇತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪೆಸಿಫಿಕ್ ಪ್ರಾದೇಶಿಕ ಗುರುವಿದ್ಯಾರ್ಥಿಮಂದಿರದ ಸಮಗ್ರ ಪರಿಶೀಲನೆಯಿಂದ ರೂಪುಗೊಂಡ ಶಿಫಾರಸುಗಳನ್ನು ವ್ಯಾಟಿಕನ್‌ನ ವಿವಿಧ ಡಿಕಾಸ್ಟರಿಗಳಿಗೆ ಸಲ್ಲಿಸಿದೆ.

ವ್ಯಾಟಿಕನ್ ವರದಿ

ಫಿಜಿಯ ಸುವಾದಲ್ಲಿರುವ ಸೇಂಟ್ ಪೀಟರ್ ಶಾನೆಲ್ ಪೆಸಿಫಿಕ್ ಪ್ರಾದೇಶಿಕ ಗುರು ವಿದ್ಯಾರ್ಥಿಮಂದಿರದ ಪಾಲಿನೇಷಿಯಾ, ಮೆಲನೇಷಿಯಾ ಮತ್ತು ಮೈಕ್ರೋನೇಷಿಯಾ ಪ್ರದೇಶಗಳಾದ್ಯಂತ ಧರ್ಮ ಸಭೆಗೆ ಸೇವೆ ಸಲ್ಲಿಸುವ ಏಕೈಕ ಪ್ರಾದೇಶಿಕ ಗುರು ವಿದ್ಯಾರ್ಥಿಮಂದಿರವಾಗಿದೆ.

1970ರಲ್ಲಿ ಸ್ಥಾಪನೆಯಾಗಿ, 1972ರಲ್ಲಿ ಗುರು ವಿದ್ಯಾರ್ಥಿ ಮಂದಿರವು ವಿದ್ಯಾರ್ಥಿಗಳಿಗೆ ತನ್ನ ಬಾಗಿಲು ತೆರೆದ ಈ ಸಂಸ್ಥೆಯು, ಪೆಸಿಫಿಕ್ ಪ್ರದೇಶದ ಸ್ಥಳೀಯ ಧರ್ಮಗುರುಗಳ ರೂಪುಗೊಳಿಸುವಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

2025ರಲ್ಲಿ ಪೆಸಿಫಿಕ್ ಎಪಿಸ್ಕೋಪಲ್ ಸಮ್ಮೇಳನ ಆರಂಭಿಸಿದ ಸಮಗ್ರ ಪರಿಶೀಲನೆಯ ಬಳಿಕ, ಸಿಇಪಿಎಸಿ ಅಧ್ಯಕ್ಷ ಹಾಗೂ ಗುವಾಮ್‌ನ ಆಗಾನ್ಯಾದ ಆರ್ಚ್‌ಬಿಷಪ್ ರಯಾನ್ ಜಿಮೆನೆಸ್ ಅವರ ನೇತೃತ್ವದ ನಿಯೋಗವು ಜೂನ್ 9 ಮತ್ತು 10ರಂದು ರೋಮಿಗೆ ಭೇಟಿ ನೀಡಿ, ಪರಿಶೀಲನೆಯ ವರದಿ ಮತ್ತು ಶಿಫಾರಸುಗಳನ್ನು ಮಂಡಿಸಿತು ಹಾಗೂ ಗುರು ವಿದ್ಯಾರ್ಥಿ ಮಂದಿರದ ಭವಿಷ್ಯದ ಅಭಿವೃದ್ಧಿಗೆ ಮಾರ್ಗದರ್ಶನವನ್ನು ಕೋರಿತು.

ಆರ್ಚ್‌ಬಿಷಪ್ ಜಿಮೆನೆಸ್ ರವರೊಂದಿಗೆ ಗುರು ವಿದ್ಯಾರ್ಥಿ ಮಂದಿರದ ಪರಿಶೀಲನಾ ತಂಡದ ಅಧ್ಯಕ್ಷೆ ಹಾಗೂ ಸಹಾಯಕ ಪ್ರಾಧ್ಯಾಪಕಿ ಸುಸನ್ ಪಾಸ್ಕೋ, ವೀಕ್.ಸ್ವಾಮಿ ಫ್ರಿಡ್ರಿಕ್ ಬೆಚಿನಾ (OSR) ಮತ್ತು ಗುರು ವಿದ್ಯಾರ್ಥಿ ಮಂದಿರದ ರೆಕ್ಟರ್ ವಂ. ಸ್ವಾಮಿ ಒಕುಸಿಟಿನೋ ಉಲುಪ್ ಉಪಸ್ಥಿತರಿದ್ದರು.

ರೋಮಿಗೆ ಭೇಟಿಯ ಸಂದರ್ಭದಲ್ಲಿ, ನಿಯೋಗವು ವ್ಯಾಟಿಕನ್‌ನ ವಿವಿಧ ಡಿಕಾಸ್ಟರಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ, ಪರಿಶೀಲನೆಯ ಪ್ರಮುಖ ಅಂಶಗಳ ಕುರಿತು ಚರ್ಚಿಸಿತು ಹಾಗೂ ಪೆಸಿಫಿಕ್ ಪ್ರದೇಶದಲ್ಲಿ ಯಾಜಕ ರೂಪುಗೊಳಿಸುವಿಕೆಯ ನವೀಕರಣ ಕಾರ್ಯದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳವು ಸಹಕಾರವನ್ನು ಮತ್ತಷ್ಟು ಬಲಪಡಿಸಿತು.

ಗುರು ವಿದ್ಯಾರ್ಥಿ ಮಂದಿರದ ವಿದ್ಯಾರ್ಥಿಗಳ ಆಂತರಿಕ ಜೀವನದ ಬೆಳವಣಿಗೆ

ನಿಯೋಗದ ಮೊದಲ ಸಭೆಯು ಸುವಾರ್ತಾಪ್ರಚಾರ ಡಿಕಾಸ್ಟರಿಯಲ್ಲಿ ನಡೆಯಿತು. ಅಲ್ಲಿ ಪ್ರೋ-ಪ್ರಿಫೆಕ್ಟ್ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟಾಗ್ಲೆ ಅವರು, ಗುರು ವಿದ್ಯಾರ್ಥಿ ಮಂದಿರದ ಶಿಕ್ಷಣದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸ್ಥಳೀಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಾಸ್ತವತೆಗಳತ್ತವೂ ಗಮನಹರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು.

ಆಧ್ಯಾತ್ಮಿಕ ರೂಪುಗೊಳಿಸುವಿಕೆ ಮತ್ತು ವೈಯಕ್ತಿಕ ಮಾರ್ಗದರ್ಶನವು ಗುರು ವಿದ್ಯಾರ್ಥಿ ಮಂದಿರದ ವಿದ್ಯಾರ್ಥಿಗಳ ಆಂತರಿಕ ಜೀವನವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು. ನಿಜವಾದ ಧರ್ಮಾಧ್ಯಕ್ಷೀಯ ನಾಯಕರನ್ನು ರೂಪಿಸಲು ಇಂತಹ ತರಬೇತಿ ಅತ್ಯಗತ್ಯ ಎಂದು ಕಾರ್ಡಿನಲ್ ಟಾಗ್ಲೆ ಹೇಳಿದರು.

ಸಭೆಯಲ್ಲಿ ಸೇಂಟ್ ಪೀಟರ್ ಪ್ರೇಷಿತರ ಸಂಘ ಹಾಗೂ ಇತರ ಮಿಷನ್‌ಸಂಬಂಧಿತ ಯೋಜನೆಗಳ ಮೂಲಕ ಗುರು ವಿದ್ಯಾರ್ಥಿ ಮಂದಿರಕ್ಕೆ ಬೆಂಬಲ ಒದಗಿಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಯಿತು.

ನಂತರ ನಡೆದ ಸಭೆಗಳಲ್ಲಿ, ಮಿಷನ್ ಮತ್ತು ರೂಪುಗೊಳಿಸುವಿಕೆ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳು ಪೆಸಿಫಿಕ್ ಪ್ರದೇಶಕ್ಕಾಗಿ ಸ್ಥಳೀಯ ಧರ್ಮಗುರುಗಳನ್ನು ರೂಪಿಸುವ ಕಾರ್ಯದಲ್ಲಿ ನಿಯೋಗವನ್ನು ಪ್ರೋತ್ಸಾಹಿಸಿದರು ಹಾಗೂ ಲಭ್ಯವಿರುವ ಬೆಂಬಲ ವ್ಯವಸ್ಥೆಗಳು ಮತ್ತು ಆರ್ಥಿಕ ನೆರವಿನ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು.

ಜೀವಮಾನದ ಪಯಣವಾಗಿ ಯಾಜಕ ರೂಪುಗೊಳಿಸುವಿಕೆ

ಮೊನ್ಸಿನಿಯೊರ್ ಸಿಮೋನೆ ರೆನ್ನಾ ಸೇರಿದಂತೆ ಧರ್ಮಗುರುಗಳ ಡಿಕಾಸ್ಟರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಗಳಲ್ಲಿ, ಯಾಜಕ ರೂಪುಗೊಳಿಸುವಿಕೆ ಎಂಬುದು ಕೇವಲ ಯಾಜಕಾಭಿಷೇಕದವರೆಗೆ ಸೀಮಿತವಾಗಿರದೆ, ಮಾನವೀಯ, ಆಧ್ಯಾತ್ಮಿಕ, ಬೌದ್ಧಿಕ ಹಾಗೂ ಧರ್ಮಾಧ್ಯಕ್ಷೀಯ ಆಯಾಮಗಳನ್ನು ಒಳಗೊಂಡ ಜೀವಮಾನದ ಪಯಣವಾಗಿದೆ ಎಂಬ ವಿಚಾರಕ್ಕೆ ವಿಶೇಷ ಒತ್ತು ನೀಡಲಾಯಿತು.

ರೂಪುಗೊಳಿಸುವವರ ತರಬೇತಿ, ಗುರು ವಿದ್ಯಾರ್ಥಿ ಮಂದಿರದ ಜೀವನದಲ್ಲಿ ಸ್ಥಳೀಯ ಸಂಸ್ಕೃತಿಗಳ ಸಮನ್ವಯ ಹಾಗೂ ಸ್ಪಷ್ಟ ಆಡಳಿತಾತ್ಮಕ ವ್ಯವಸ್ಥೆಗಳ ಅಗತ್ಯತೆ ಕುರಿತು ವಿಶೇಷವಾಗಿ ಚರ್ಚಿಸಲಾಯಿತು.

ಅಧಿಕಾರಿಗಳು ಸಿನೋಡಲ್ ವಿಧಾನಗಳ ಮಹತ್ವವನ್ನೂ ಎತ್ತಿ ತೋರಿಸಿದರು. ವಿವೇಚನಾ ಪ್ರಕ್ರಿಯೆಗಳು ಮತ್ತು ಗುರು ವಿದ್ಯಾರ್ಥಿ ಮಂದಿರದ ಜೀವನದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯಂತಹ ಅಂಶಗಳು ಯಾಜಕ ರೂಪುಗೊಳಿಸುವಿಕೆಯನ್ನು ಶ್ರೀಮಂತಗೊಳಿಸುತ್ತವೆ ಎಂದು ಅವರು ತಿಳಿಸಿದರು. ರೋಮಿನಲ್ಲಿ ನಡೆಯುವ ನಿರಂತರ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರು ಪ್ರೋತ್ಸಾಹಿಸಿದರು ಹಾಗೂ ಪೆಸಿಫಿಕ್ ಪ್ರದೇಶದಲ್ಲಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯನ್ನೂ ತೆರೆದಿಟ್ಟರು.

ನವೀಕೃತ ಬದ್ಧತೆ

ಈ ಭೇಟಿಯ ವೇಳೆ ವಂ. ಸ್ವಾಮಿ ಉಲುಪ್ ರವರು ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನು ಭೇಟಿಯಾಗಿ, ಗುರು ವಿದ್ಯಾರ್ಥಿ ಮಂದಿರದ ಅಧಿಕೃತ ಶೈಕ್ಷಣಿಕ ಸಂಬಂಧವನ್ನು ಸ್ಥಾಪಿಸುವ ಸಾಧ್ಯತೆಗಳ ಕುರಿತು ಚರ್ಚಿಸಿದರು.

ವ್ಯಾಟಿಕನ್ ಅಧಿಕಾರಿಗಳು ಓಷಿಯಾನಿಯಾದ ಧರ್ಮ ಸಭೆಯ ಜೀವನದಲ್ಲಿ ಪೆಸಿಫಿಕ್ ಪ್ರಾದೇಶಿಕ ಗುರು ವಿದ್ಯಾರ್ಥಿ ಮಂದಿರ ನೀಡಿರುವ ಮಹತ್ವದ ಕೊಡುಗೆಯನ್ನು ಶ್ಲಾಘಿಸಿದರು. ಅದೇ ವೇಳೆ, ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ರೀತಿಯಲ್ಲಿ ಅದರ ನಿರಂತರ ಅಭಿವೃದ್ಧಿಗೆ ಉತ್ತೇಜನ ನೀಡಿದರು.

ಆರ್ಚ್‌ಬಿಷಪ್ ರಯಾನ್ ಜಿಮೆನೆಸ್ ಮತ್ತು ಅವರ ನಿಯೋಗವು, ಜಗದ್ಗುರುಗಳ ಅಧಿಕಾರ ಸ್ಥಳದ ಪ್ರೋತ್ಸಾಹ ಮತ್ತು ಬೆಂಬಲದಿಂದ ಬಲಗೊಂಡು, ಪರಿಶೀಲನೆಯ ಶಿಫಾರಸುಗಳನ್ನು ಜಾರಿಗೆ ತರುವ ಕಾರ್ಯವನ್ನು ಮುಂದುವರಿಸಲು ತಮ್ಮ ತಾಯ್ನಾಡಿಗೆ ಮರಳಲಿದ್ದಾರೆ. ಇದರ ಮೂಲಕ ಪೆಸಿಫಿಕ್ ಪ್ರದೇಶಕ್ಕೆ ಸಮರ್ಥ, ನಿಷ್ಠಾವಂತ ಹಾಗೂ ಉತ್ತಮವಾಗಿ ರೂಪುಗೊಂಡ ಯಾಜಕರನ್ನು ಸಿದ್ಧಗೊಳಿಸುವ ಗುರಿಯನ್ನು ಅವರು ಮುಂದುವರಿಸಲಿದ್ದಾರೆ.

16 ಜೂನ್ 2026, 16:37