ಬಲಿಪೂಜೆಯ ಸಮಯದಲ್ಲಿ ಧರ್ಮೋಪದೇಶ ನೀಡುತ್ತಿರುವ ಗುರುಗಳು. ಬಲಿಪೂಜೆಯ ಸಮಯದಲ್ಲಿ ಧರ್ಮೋಪದೇಶ ನೀಡುತ್ತಿರುವ ಗುರುಗಳು. 

ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಪ್ರಭೋಧನೆ ನೀಡುವ ಅಧಿಕಾರ ಸಾಮಾನ್ಯ ವಿಶ್ವಾಸಿಗಳಿಗೆ ಇಲ್ಲ ಎಂಬುದನ್ನು ವ್ಯಾಟಿಕನ್ ಡಿಕಾಸ್ಟರಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ದೈವಾರಾಧನೆ ಮತ್ತು ಸಂಸ್ಕಾರಗಳ ಶಿಸ್ತು ವಿಭಾಗ ಜರ್ಮನ್ ಬಿಷಪ್‌ಗಳು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿ, ಅಸಾಧಾರಣ ಸಂದರ್ಭಗಳಲ್ಲಿಯೂ ಸಹ ಸಾಮಾನ್ಯ ವಿಶ್ವಾಸಿಗೆ ಪವಿತ್ರ ಬಲಿಪೂಜೆಯ ವೇಳೆ ಪ್ರಭೋಧನೆ ನೀಡಲು ಅನುಮತಿ ನೀಡುವ ಅವರ ವಿನಂತಿಯನ್ನು ತಿರಸ್ಕರಿಸಿದೆ.

ವ್ಯಾಟಿಕನ್ ವರದಿ

ಪ್ರಭೋಧನೆ ಯಾರು ನೀಡಬಹುದು ಎಂಬುದರ ಕುರಿತು ಸ್ಪಷ್ಟೀಕರಣ ನೀಡುವ ದಾಖಲೆಯನ್ನು ದೈವಿಕ ಆರಾಧನೆ ಮತ್ತು ಸಂಸ್ಕಾರಗಳ ಶಿಸ್ತು ವಿಭಾಗ ಪ್ರಕಟಿಸಿದೆ.

2026ರ ಜೂನ್ 17ರಂದು ಜರ್ಮನ್ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷ ಬಿಷಪ್ ಹೈನರ್ ವಿಲ್ಮರ್ ಅವರಿಗೆ ಕಳುಹಿಸಿದ ಪತ್ರದಲ್ಲಿ, 2026ರ ಮಾರ್ಚ್ 30ರಂದು ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ, ಕೇಳಲಾದ ಇಂಡಲ್ಟ್ (ವಿಶೇಷ ಅನುಮತಿ) ಅನ್ನು ನೀಡುವುದು ಸಾಧ್ಯವಿಲ್ಲ ಎಂದು ಡಿಕಾಸ್ಟರಿ ತಿಳಿಸಿದೆ. ಇಂಡಲ್ಟ್ ಎಂದರೆ, ಜಗದ್ಗುರುಗಳ ಅಧಿಕಾರ ಸ್ಥಳದ (ಅಥವಾ ಸ್ಥಳೀಯ ಧರ್ಮಾಧ್ಯಕ್ಷ)ಯಿಂದ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಕಾನೂನಿನ ಸಾಮಾನ್ಯ ನಿಯಮಗಳಿಗೆ ವಿರುದ್ಧವಾಗಿ ಅಥವಾ ಅವುಗಳ ಮಿತಿಯನ್ನು ಮೀರಿ ನೀಡಲಾಗುವ ವಿಶೇಷ ಹಾಗೂ ಕೆಲವೊಮ್ಮೆ ತಾತ್ಕಾಲಿಕ ಅನುಮತಿ.

ಜರ್ಮನ್ ಬಿಷಪ್‌ಗಳು, “ಅಸಾಧಾರಣ ಸಂದರ್ಭಗಳಲ್ಲಿ, ಸೂಕ್ತವಾಗಿ ನೇಮಕಗೊಂಡಿರುವ ಒಬ್ಬ ಸಾಮಾನ್ಯ ವಿಶ್ವಾಸಿಗೆ (ಲೇ ವ್ಯಕ್ತಿಗೆ) ಯೂಕರಿಸ್ಟಿಯ ಆಚರಣೆಯ ಸಂದರ್ಭದಲ್ಲಿ ಪ್ರಭೋಧನೆಯ ಬದಲಾಗಿ ಪ್ರವಚನ ನೀಡಲು ಅನುಮತಿ ನೀಡಬೇಕು” ಎಂದು ಮನವಿ ಮಾಡಿದ್ದರು.

ಈ ಮನವಿಗೆ ಪ್ರೇರಣೆಯಾದ ಪಾಸ್ಟೋರಲ್ ಕಾಳಜಿಯನ್ನು ಡಿಕಾಸ್ಟರಿ ಮೆಚ್ಚಿಕೊಂಡಿದ್ದರೂ, ಪ್ರಸ್ತುತ ಧರ್ಮ ಸಭೆಯ ನಿಯಮವನ್ನು ಇಂಡಲ್ಟ್ ಮೂಲಕ ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ. ಏಕೆಂದರೆ, ಹೋಮಿಲಿಯನ್ನು ಕೇವಲ ಯಾಜಕ ಅಥವಾ ಧರ್ಮಸೇವಕರಿಗೆ (ಡೀಕನ್) ಮೀಸಲಿಡುವ ನಿಯಮವು ಕೇವಲ ಶಿಸ್ತಿನ ನಿಯಮವಲ್ಲ, ಅದು ಆರಾಧನಾ ವಿಧಿಯ ಸ್ವಭಾವದಿಂದಲೇ ಉದ್ಭವಿಸಿರುವ ತತ್ವವಾಗಿದೆ ಎಂದು ಸ್ಪಷ್ಟಪಡಿಸಿದೆ.

ಈ ದಾಖಲೆಯಲ್ಲಿ, ದೇವರ ವಾಕ್ಯದ ಆರಾಧನಾ ಭಾಗದ ಅವಿಭಾಜ್ಯ ಅಂಗವಾಗಿರುವ ಹೋಮಿಲಿಯು ಸುವಾರ್ತೆಯ ಘೋಷಣೆಯೊಂದಿಗೆ ಆಂತರಿಕವಾಗಿ ಸಂಬಂಧ ಹೊಂದಿದೆ ಎಂದು ಡಿಕಾಸ್ಟರಿ ಪುನರುಚ್ಚರಿಸಿದೆ. ಅಲ್ಲದೆ, ಅದು ಪವಿತ್ರ ಯಾಜಕತ್ವದ ಸಂಸ್ಕಾರದ ಮೂಲಕ ಅಭಿಷೇಕಿತರಾದ ಸೇವಕರಿಗೆ ವಹಿಸಲ್ಪಟ್ಟಿರುವ ಬೋಧನಾ ಕರ್ತವ್ಯದ ಅಭಿವ್ಯಕ್ತಿಯಾಗಿದೆ ಎಂದು ತಿಳಿಸಿದೆ.

ಡಿಕಾಸ್ಟರಿ ಮುಂದುವರಿದು, ಆರಾಧನಾ ಆಚರಣೆಯ ಸಂದರ್ಭದಲ್ಲಿ ದೇವರ ವಾಕ್ಯದ ಘೋಷಣೆಯು ಸಂಸ್ಕಾರದ ಮೂಲಕ ಸ್ವೀಕರಿಸಲ್ಪಟ್ಟ ಸೇವಾ ಧ್ಯೇಯದಿಂದ ಹಾಗೂ ಯೂಕರಿಸ್ಟಿಯ ಆಚರಣೆಯಲ್ಲಿ ವಾಕ್ಯ ಮತ್ತು ಸಂಸ್ಕಾರವನ್ನು ಒಗ್ಗೂಡಿಸುವ ಏಕತೆಯಿಂದ ಬೇರ್ಪಡಿಸಲಾಗದಂತಹದ್ದಾಗಿದೆ ಎಂದು ವಿವರಿಸಿದೆ.

ಪತ್ರವು ಮತ್ತಷ್ಟು, ಅಭಿಷೇಕಿತರಾದ ಸೇವಕರಿಗೆ ನಿರಂತರ ತರಬೇತಿ ಮತ್ತು ರೂಪುಗೊಳಿಸುವಿಕೆಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿಹೇಳಿದೆ. ಇದರಿಂದ ಹೋಮಿಲಿಯು ತನ್ನ ಪಾಸ್ಟೋರಲ್ ಮತ್ತು ಆಧ್ಯಾತ್ಮಿಕ ಪರಿಣಾಮಕಾರಿತ್ವವನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಕೊನೆಯಲ್ಲಿ, ಧರ್ಮ ಸಭೆಯ ಪ್ರಸ್ತುತ ನಿಯಮಾವಳಿಯು ಈಗಾಗಲೇ ದೇವರ ವಾಕ್ಯವನ್ನು ಘೋಷಿಸುವ ಮತ್ತು ಸುವಾರ್ತೆಯನ್ನು ಬೋಧಿಸುವ ಅನೇಕ ರೂಪಗಳನ್ನು ಸಾಮಾನ್ಯ ವಿಶ್ವಾಸಿಗಳಿಗೆ ವಹಿಸಲು ಅವಕಾಶ ನೀಡುತ್ತದೆ ಎಂದು ಡಿಕಾಸ್ಟರಿ ನೆನಪಿಸಿದೆ. ಆದರೆ ಅವು ಹೋಮಿಲಿಯ ಹೊರತಾಗಿ ಹಾಗೂ ಯೂಕರಿಸ್ಟಿಯ ಆಚರಣೆಯ ಹೊರತಾಗಿ, ಕ್ಯಾನನ್ ಕಾನೂನಿನ ನಿಯಮಗಳು ಮತ್ತು ಸುವಾರ್ತೆ ಘೋಷಣೆಯ ವಿವಿಧ ರೂಪಗಳ ಸ್ವಭಾವಕ್ಕೆ ಅನುಗುಣವಾಗಿ ನಡೆಯಬೇಕು ಎಂದು ಅದು ಸ್ಪಷ್ಟಪಡಿಸಿದೆ.

23 ಜೂನ್ 2026, 18:31