ಜಗದ್ಗುರು XIVನೇ ಲಿಯೋರವರು: ಅಪ್ರಾಪ್ತರ ರಕ್ಷಣೆ ‘ಧಮ೯ಸಭೆಯ ಅಂತಃಕರಣಕ್ಕೆ ಸವಾಲು’
ವ್ಯಾಟಿಕನ್ ವರದಿ
ಅತ್ಯಂತ ಸಣ್ಣವರೂ ಮತ್ತು ಅತೀ ದುರ್ಬಲರೂ ಇರುವ ಸಾನ್ನಿಧ್ಯವು ಧರ್ಮ ಸಭೆಯ ಅಂತಃಕರಣವನ್ನು ಸವಾಲು ಮಾಡುತ್ತದೆ ಮತ್ತು ನಿಜವಾದ ಕಾಳಜಿಯನ್ನು ವ್ಯಕ್ತಪಡಿಸುವ ಅದರ ಸಾಮರ್ಥ್ಯವನ್ನು ಅಳೆಯುತ್ತದೆ.
ಜಗದ್ಗುರು XIVನೇ ಲಿಯೋರವರು ಇದನ್ನು ಇಟಾಲಿಯನ್ ಬಿಷಪ್‌ಗಳ ಸಭೆಯು ಆಯೋಜಿಸಿದ ಅಪ್ರಾಪ್ತರು ಮತ್ತು ಅಸಹಾಯಕ ವಯಸ್ಕರ ರಕ್ಷಣೆಗೆ ಸಂಬಂಧಿಸಿದ ಸ್ಥಳೀಯ ಪ್ರತಿನಿಧಿಗಳ ಎರಡನೇ ರಾಷ್ಟ್ರೀಯ ಸಭೆಯ ಭಾಗವಹಿಸುವವರಿಗೆ ಕಳುಹಿಸಿದ ಸಂದೇಶದಲ್ಲಿ ವ್ಯಕ್ತಪಡಿಸಿದರು.
ಪ್ರತಿಯೊಬ್ಬರ ಗೌರವವನ್ನು ಗುರುತಿಸುವುದು ಮತ್ತು ರಕ್ಷಿಸುವುದು
ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆತ್ರೊ ಪಾರೋಲಿನ್ ರವರ ಸಹಿಯೊಂದಿಗೆ ಕಳುಹಿಸಿದ ತಮ್ಮ ಪತ್ರದಲ್ಲಿ, “ನಿಜವಾದ ಸಂಬಂಧಗಳನ್ನು ನಿರ್ಮಿಸುವುದು” ಎಂಬ ವಿಷಯವು ಕ್ರೈಸ್ತ ಸಮುದಾಯಗಳಿಗೆ ಅತ್ಯಂತ ಮುಖ್ಯವಾದ ಕಾರ್ಯವನ್ನು ಸೂಚಿಸುತ್ತದೆ ಎಂದು ಜಗದ್ಗುರುಗಳು ಹೇಳಿದ್ದಾರೆ.
“ಪ್ರತಿಯೊಬ್ಬ ವ್ಯಕ್ತಿಯನ್ನು ಅವರ ಗೌರವದಲ್ಲಿ ಗುರುತಿಸಿ, ಅವರ ಸ್ವಾತಂತ್ರ್ಯವನ್ನು ರಕ್ಷಿಸಿದಾಗ, ಧರ್ಮ ಕೇಂದ್ರಗಳು, ಸಂಘಗಳು ಮತ್ತು ಚಳವಳಿಗಳು ವಿಶ್ವಾಸಾರ್ಹವಾಗುತ್ತವೆ ಮತ್ತು ಮಾರ್ಗದರ್ಶನ ನೀಡಲು, ಶಿಕ್ಷಣ ನೀಡಲು ಮತ್ತು ರಕ್ಷಿಸಲು ಸಾಮರ್ಥ್ಯ ಹೊಂದಿರುತ್ತವೆ, ಎಂದು ಅವರು ಹೇಳಿದರು. “ಗೌರವದ ಕೊರತೆ ಇರುವಲ್ಲಿ, ಸಂಬಂಧಗಳು ಬಡವಾಗುತ್ತವೆ, ವಿಕೃತಗೊಳ್ಳುತ್ತವೆ ಮತ್ತು ಗಂಭೀರ ಹಾನಿಯನ್ನು ಉಂಟುಮಾಡಬಹುದು,ಎಂದು ಅವರು ಸೇರಿಸಿದರು.
ಕ್ರೈಸ್ತ ದೃಷ್ಟಿಯಲ್ಲಿ ಗೌರವವು ಕೇವಲ ಶಿಷ್ಟಾಚಾರವಲ್ಲ, ಅದು ಇತರರನ್ನು ತಮ್ಮದಾಗಿಸಿಕೊಳ್ಳದೆ ರಕ್ಷಿಸುವುದು, ಅವರ ಮೇಲೆ ಅಧಿಪತ್ಯ ಸಾಧಿಸದೆ ಜೊತೆಯಾಗಿ ನಡೆಯುವುದು, ಅವರನ್ನು ಅವಮಾನಗೊಳಿಸದೆ ಅನುಭವಿಸುವುದು ಎಂಬ ಕಠಿಣ ದಯೆಯ ರೂಪವಾಗಿದೆ ಎಂದು ಅವರು ವಿವರಿಸಿದರು.
ಈ ರೀತಿಯ ಗೌರವವು ಸ್ಪಷ್ಟ, ಪರಿಪಕ್ವ ಮತ್ತು ಸುರಕ್ಷಿತ ಸಂಬಂಧಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
“ರಕ್ಷಣೆಯನ್ನು ಕೇವಲ ನಿಯಮಗಳ ಸಮೂಹವಾಗಿ ಅಥವಾ ಅನುಸರಿಸಬೇಕಾದ ಕ್ರಮಗಳಾಗಿ ಮಾತ್ರ ಅರ್ಥೈಸಲಾಗುವುದಿಲ್ಲ ಅದು ಸಮುದಾಯಗಳ ಶೈಲಿಯನ್ನು ರೂಪಿಸುವ ಜ್ಞಾನವನ್ನು, ಅಧಿಕಾರದ ಬಳಕೆಯನ್ನು, ಶಿಕ್ಷಕರ ತರಬೇತಿಯನ್ನು, ಪರಿಸ್ಥಿತಿಗಳ ಮೇಲಿನ ಜಾಗೃತಿಯನ್ನು ಮತ್ತು ವರ್ತನೆಯ ಪಾರದರ್ಶಕತೆಯನ್ನು ಅಗತ್ಯವಿರಿಸುತ್ತದೆ.”ಈ ಕಾರಣಕ್ಕಾಗಿ ಎಂದು ಅವರು ಒತ್ತಿ ಹೇಳಿದರು,
ಧರ್ಮ ಸಭೆಯ ಅಂತಃಕರಣಕ್ಕೆ ಸವಾಲು
ಅತ್ಯಂತ ಸಣ್ಣವರೂ ಮತ್ತು ಅತೀ ದುರ್ಬಲರೂ ಇರುವ ಸಾನ್ನಿಧ್ಯ, ಎಂದು ಜಗದ್ಗುರುಗಳು ಲಿಯೋರವರು ಒತ್ತಿ ಹೇಳಿದರು, “ಧಮ೯ಸಭೆಯ ಅಂತಃಕರಣವನ್ನು ಸವಾಲು ಮಾಡುತ್ತದೆ ಮತ್ತು ನಿಜವಾದ ಕಾಳಜಿಯನ್ನು ವ್ಯಕ್ತಪಡಿಸುವುದರ ಸಾಮರ್ಥ್ಯವನ್ನು ಅಳೆಯುತ್ತದೆ ಅಂದರೆ, ರಕ್ಷಿಸುವುದು, ಕೇಳುವುದು, ತಡೆಯುವುದು ಮತ್ತು ಯಾರನ್ನೂ ಒಂಟಿಯಾಗಿರಿಸದೆ ನೋಡಿಕೊಳ್ಳುವುದು.
ತರಬೇತಿ, ವಿವೇಕ, ಸಂಯೋಜನೆ ಮತ್ತು ಉತ್ತಮ ಕ್ರಮಗಳನ್ನು ಉತ್ತೇಜಿಸುವವರ ಕೆಲಸ,ಎಂದು ಜಗದ್ಗುರುಗಳು ಹೇಳಿದರು, ಹೆಚ್ಚು ಆತ್ಮೀಯ ಮತ್ತು ಜಾಗೃತ ಸಮುದಾಯಗಳ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತದೆ.
ಆದ್ದರಿಂದ, ದುರುಪಯೋಗಕ್ಕೆ ಒಳಗಾದವರ ಕಡೆ ಧರ್ಮ ಸಭೆ ವಿಶೇಷ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು. ಅವರ ಗಾಯಗಳು ನಿಜವಾದ ಹತ್ತಿರಿಕೆಯನ್ನು, ವಿನಯಪೂರ್ಣವಾಗಿ ಕೇಳುವುದನ್ನು ಮತ್ತು ಸರಿಯಾದ ಹಾಗೂ ಸಾಧ್ಯವಾದ ಪರಿಹಾರವನ್ನು ಹುಡುಕುವಲ್ಲಿ ಸ್ಥೈರ್ಯವನ್ನು ಕೋರುತ್ತವೆ, ಎಂದು ಅವರು ಒಪ್ಪಿಕೊಂಡರು.
ಸತ್ಯ, ನ್ಯಾಯ ಮತ್ತು ಗುಣಮುಖತೆಗೆ ಕಠಿಣ ಮಾರ್ಗಗಳನ್ನು ಸ್ವೀಕರಿಸುವ ಅಗತ್ಯ
ಕ್ರೈಸ್ತ ಸಮುದಾಯವು ಸುವಾರ್ತೆಯ ಪರಿವರ್ತನೆಯನ್ನು ಅನುಭವಿಸುವುದು ಯಾವಾಗ ಎಂದರೆ, ದುಃಖ ಅನುಭವಿಸಿದವರ ನೋವಿನಿಂದ ದೂರ ಉಳಿಯದೇ, ಅದರಿಂದಲೇ ಪ್ರಶ್ನಿಸಲ್ಪಡುವಾಗ ಕೆಟ್ಟದನ್ನು ಕಡಿಮೆ ಮಾಡಿ ತೋರಿಸದೇ, ಅದನ್ನು ಒಪ್ಪಿಕೊಳ್ಳುವಾಗ ಕಳಂಕದ ಭಯದಿಂದ ಮುಚ್ಚಿಕೊಳ್ಳದೇ, ಸತ್ಯ, ನ್ಯಾಯ ಮತ್ತು ಗುಣಮುಖತೆಯ ಕಠಿಣ ಮಾರ್ಗಗಳನ್ನು ಸ್ವೀಕರಿಸುವಾಗ, ಎಂದು ಅವರು ವಿವರಿಸಿದರು.
ಆದ್ದರಿಂದ, ಇಟಾಲಿಯನ್ ಬಿಷಪ್‌ಗಳ ಸಭೆಯು ಆಯೋಜಿಸಿದ ಈ ಸಭೆಯು ಕಾರ್ಯನಿರ್ವಹಣಾತ್ಮಕ ವಿಷಯಗಳನ್ನು ಮೀರಿ, ಮುಖ್ಯವಾದ ಅರ್ಥವನ್ನು ಹೊಂದಿದೆ. ಇದು ಧರ್ಮ ಸಭೆಯನ್ನು ತಡೆಗಟ್ಟುವ ಸಂಸ್ಕೃತಿಯಲ್ಲಿ ಬೆಳೆಯಲು ಕರೆಸುತ್ತದೆ ಅದು ಮುಖ್ಯವಾಗಿ ಸುವಾರ್ತೆಯ ಕಾಳಜಿಯ ಸಂಸ್ಕೃತಿಯಾಗಿದೆ,ಎಂದು ಅವರು ಹೇಳಿದರು. ಈ ಪ್ರಯತ್ನಕ್ಕೆ “ಮತ್ತು ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂಬ ನಾಟಕದ ಪೂರ್ವ ಪ್ರದರ್ಶನವೂ ಬೆಂಬಲ ನೀಡುತ್ತದೆ ಎಂದು ಅವರು ಸೂಚಿಸಿದರು.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಸಭೆಯಲ್ಲಿ ಭಾಗವಹಿಸಿದವರನ್ನು ಆತ್ಮವಿಶ್ವಾಸದಿಂದ ತಮ್ಮ ಕಾರ್ಯವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು, ಇಟಾಲಿಯನ್ ಧರ್ಮಪ್ರಾಂತ್ಯಗಳಲ್ಲಿ ಅತೀ ದುರ್ಬಲರನ್ನು ಸ್ವಾಗತಿಸುವ, ರಕ್ಷಿಸುವ ಮತ್ತು ಪ್ರೀತಿಸುವ ಸಮುದಾಯಗಳು ಬೆಳೆಯಲಿ ಎಂದು ಆಶಿಸಿದರು.