ಹುಡುಕಿ

2026.02.18 widget Vatican News Inglese

ಜಗದ್ಗುರುಗಳ ಆಫ್ರಿಕಾ ಭೇಟಿ ವ್ಯಾಟಿಕನ್ ನ್ಯೂಸ್ ವಿಜೆಟ್‌ನಲ್ಲಿ ನೇರಪ್ರಸಾರವಾಗಿ ಕಾಣಿಸಿಕೊಳ್ಳಲಿದೆ.

ಜಗದ್ಗುರು XIVನೇ ಲಿಯೋರವರ ನಾಲ್ಕು ಆಫ್ರಿಕಾ ದೇಶಗಳಿಗೆ ನಡೆಯುವ ಪ್ರೇಷಿತರ ಭೇಟಿ ಮೊದಲ ಬಾರಿಗೆ ವ್ಯಾಟಿಕನ್ ನ್ಯೂಸ್ ವಿಜೆಟ್‌ನಲ್ಲಿ ನೇರಪ್ರಸಾರವಾಗಿ ಕಾಣಿಸಿಕೊಳ್ಳಲಿದೆ. ಈ ವಿಜೆಟ್ ಕಥೋಲಿಕ ವೆಬ್‌ಸೈಟ್‌ಗಳಿಗೆ ಜಗದ್ಗುರುಗಳ ಕುರಿತ ತಾಜಾ ಸುದ್ದಿಗಳನ್ನು ತಕ್ಷಣವೇ ಪಡೆಯುವ ಅವಕಾಶವನ್ನು ಒದಗಿಸುತ್ತದೆ.

ವ್ಯಾಟಿಕನ್ ವರದಿ

ವ್ಯಾಟಿಕನ್ ನ್ಯೂಸ್ ಫೆಬ್ರವರಿಯಲ್ಲಿ ತನ್ನ ವಿಡಿಯೋ ವಿಜೆಟ್ ಅನ್ನು ಪ್ರಾರಂಭಿಸಿದೆ, ಮತ್ತು ಅದು ಈಗಾಗಲೇ ವಿಶ್ವದ ಸಾವಿರಾರು ವೆಬ್‌ಸೈಟ್‌ಗಳಲ್ಲಿ ಅಳವಡಿಸಲಾಗಿದೆ.

ಸುವಾರ್ತಾ ಪ್ರಸಾರಕ್ಕಾಗಿ ಈ ಹೊಸ ಸಾಧನದ ಮೂಲಕ, ಆ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವವರು ಏಪ್ರಿಲ್ 13 ರಿಂದ 23ರವರೆಗೆ ನಡೆಯುವ ಜಗದ್ಗುರು XIVನೇ ಲಿಯೋರವರ ಆಫ್ರಿಕಾ ಯಾತ್ರೆಗೆ ಸಂಬಂಧಿಸಿದ ಎಲ್ಲಾ ಮಲ್ಟಿಮೀಡಿಯಾ ವಿಷಯಗಳಿಗೆ ನೇರ ಮತ್ತು ಸುಲಭ ಪ್ರವೇಶವನ್ನು ಪಡೆಯುತ್ತಾರೆ.

ಈ ವಿಷಯಗಳಲ್ಲಿ ಸುದ್ದಿ ವರದಿಗಳು, ವಿಡಿಯೋಗಳು ಮತ್ತು ಜಗದ್ಗುರುಗಳ ಕಾರ್ಯಕ್ರಮಗಳ ನೇರ ವಿವರಣೆಗಳು ಸೇರಿವೆ, ಇವು ವಿಶ್ವಾಸಾರ್ಹ ಮತ್ತು ಪರಿಶೀಲಿತ ಮಾಹಿತಿಯನ್ನು ಒದಗಿಸುತ್ತವೆ.

ಜಗದ್ಗುರಗಳು ವಾಟಿಕನ್ ನ್ಯೂಸ್ ವಿಜೆಟ್ ಸುವಾರ್ತಾ ಪ್ರಸಾರದ ಸಾಧನ

ಫೆಬ್ರವರಿಯಲ್ಲಿ ಬಿಷಪ್‌ಗಳಿಗೆ ಕಳುಹಿಸಿದ ತನ್ನ ಪತ್ರದಲ್ಲಿ, ಜಗದ್ಗುರು XIVನೇ ಲಿಯೋರವರು ಈ ಹೊಸ ವಿಜೆಟ್ ಅನ್ನು ಅಳವಡಿಸಲು ಪ್ರೋತ್ಸಾಹಿಸಿದರು.

ಪ್ರಿಯ ಸಹೋದರರೇ, ಈ ವ್ಯಾಟಿಕನ್ ನ್ಯೂಸ್ ಉಪಕ್ರಮವು ಸುವಾರ್ತಾ ಪ್ರಸಾರದ ಸಾಧನವಾಗಿದೆ, ಎಂದು ಅವರು ಹೇಳಿದರು. ಇದು ರೋಮಿನ ಮತ್ತು ನಿಮ್ಮ ದೇಶದ ಧರ್ಮ ಸಭೆಯ ನಡುವೆ ಸಂಪರ್ಕವನ್ನು ನಿರ್ಮಿಸಿ, ಪರಸ್ಪರ ಕೊಡುಗೆಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ. ನಿಮ್ಮ ಧರ್ಮ ಕೇಂದ್ರಗಳು ಮತ್ತು ಸಮುದಾಯಗಳು ಮೂಲದಿಂದ ನಿರಂತರವಾಗಿ ಮಾಹಿತಿಯನ್ನು ಪಡೆಯುವ ಮಾರ್ಗ ಇದಾಗಿದೆ.

ಆಯ್ಕೆ ಮಾಡಿದ ಭಾಷೆಯಲ್ಲಿ ಪ್ರಸಾರಗಳು ಮತ್ತು ವರದಿಗಳು

ಈ ವಿಜೆಟ್ ಅನ್ನು ಇನ್ನೂ ಸುಲಭವಾಗಿ ಮತ್ತು ಉಚಿತವಾಗಿ ಅಳವಡಿಸಬಹುದು ಎಂದು ಸಂವಹನ ವಿಭಾಗದ ಸಂಪಾದಕೀಯ ನಿರ್ದೇಶಕ ಆಂಡ್ರಿಯಾ ಟೋರ್ನಿಯೆಲ್ಲಿ ಒತ್ತಿಹೇಳಿದರು.

ಕಥೋಲಿಕ ಧರ್ಮ ಕೇಂದ್ರಗಳು ಮತ್ತು ಧರ್ಮ ಪ್ರಾಂತ್ಯದ ವೆಬ್‌ಮಾಸ್ಟರ್‌ಗಳಿಗೆ ಉದ್ದೇಶಿಸಿ ಅವರು ಹೇಳಿದರು ಜಗದ್ಗುರು ಲಿಯೋರವರು ನಿಮ್ಮ ದೇಶಕ್ಕೆ ಭೇಟಿ ನೀಡುವ ಮುನ್ನದ ಸಂದರ್ಭದಲ್ಲಿ, ಈ ಹೊಸ ಸಾಧನವನ್ನು ನಿಮಗೆ ಒದಗಿಸಲು ನಾವು ಸಂತೋಷಪಡುತ್ತೇವೆ. ಇದು ಎಲ್ಲಾ ವೆಬ್‌ಸೈಟ್‌ಗಳು ಮತ್ತು ಧರ್ಮ ಸಭೆಯ ಸಂಬಂಧಿತ ಸುದ್ದಿ ಸೇವೆಗಳಿಗೆ (ಧರ್ಮ ಕೇಂದ್ರ, ಧರ್ಮ ಪ್ರಾಂತ್ಯ ಮತ್ತು ಇತರ ಮಾಧ್ಯಮಗಳು) ಜಗದ್ಗುರು XIVನೇ ಲಿಯೋರವರ ಭೇಟಿಯ ನೇರ ಪ್ರಸಾರಗಳನ್ನು ಹಾಗೂ ನಿಮ್ಮ ಆಯ್ಕೆಯ ಭಾಷೆಯಲ್ಲಿ ವ್ಯಾಟಿಕನ್ ನ್ಯೂಸ್ ನವೀಕರಣಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಉಚಿತ ಅಳವಡಿಕೆ

ಈ ವಿಜೆಟ್ ಅನ್ನು ನಿಮ್ಮ ವೆಬ್‌ಸೈಟ್‌ನಲ್ಲಿ ಅಳವಡಿಸಲು ಕೆಳಗಿನ ಲಿಂಕ್ ಅನ್ನು ಡೌನ್‌ಲೋಡ್ ಮಾಡಬಹುದು:

https://www.vaticannews.va/widget/embed.html

ಜಗದ್ಗುರುಗಳ ಯಾತ್ರೆಯ ಮಾರ್ಗ

ಜಗದ್ಗುರು XIVನೇ ಲಿಯೋರವರ ಎರಡನೇ ಪ್ರೇಷಿತರ ವಿದೇಶ ಯಾತ್ರೆ ಏಪ್ರಿಲ್ 13 ರಿಂದ 23ರವರೆಗೆ ನಡೆಯಲಿದೆ. ಈ ಯಾತ್ರೆಯಲ್ಲಿ ಅವರು ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವಟೋರಿಯಲ್ ಗಿನಿ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಅವರು ನಾಲ್ಕು ಭಾಷೆಗಳಲ್ಲಿ ಮಾತನಾಡಲಿದ್ದು, ಶಾಂತಿ, ಪರಿಸರ, ವಲಸೆ, ಕುಟುಂಬ, ಯುವಕರು ಮತ್ತು ವಸಾಹತುಶಾಹಿ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ.

10 ಏಪ್ರಿಲ್ 2026, 14:51