ಹುಡುಕಿ

ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು  (AFP or licensors)

ಕಾರ್ಡಿನಲ್ ಕೊಚ್ ರವರು ಮೊದಲ ಜಗದ್ಗುರುಗಳ ಸೈನಗೋಗ್(ಯೆಹೂದಿಯರ ಗುಡಿ) ಭೇಟಿ 40ನೇ ವಾರ್ಷಿಕೋತ್ಸವವನ್ನು ಸ್ಮರಿಸಿದರು.

ಕ್ರೈಸ್ತ ಏಕತೆ ಉತ್ತೇಜನಕ್ಕಾಗಿ ಡಿಕಾಸ್ಟರಿ ಮತ್ತು ಯಹೂದಿ ಧರ್ಮದೊಂದಿಗೆ ಧಾರ್ಮಿಕ ಸಂಬಂಧಗಳ ಆಯೋಗದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಕುರ್ಟ್ ಕೊಚ್ ರವರು, ವ್ಯಾಟಿಕನ್ ನ್ಯೂಸ್ ಮತ್ತು ಎಲ್'ಒಸ್ಸೆರ್ವಟೋರ್ ರೊಮಾನೋಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಕಥೋಲಿಕ ಧರ್ಮ ಸಭೆ ಮತ್ತು ಯಹೂದಿ ಧರ್ಮದ ನಡುವಿನ ಭವಿಷ್ಯದ ಸೌಹಾರ್ದತೆಗೆ ಮಹತ್ವದ ದಾರಿಯನ್ನು ನಿರ್ಮಿಸಿದರು” ಎಂದು ಸ್ಮರಿಸಿದರು.ಇಂದು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ರೋಮಿನ ಮಹಾ ಸೈನಗೋಗ್‌ಗೆ (ಯೆಹೂದಿಯರ ಗುಡಿ)ಭೇಟಿ ನೀಡಿದ 40ನೇ ವಾರ್ಷಿಕೋತ್ಸವವಾಗಿದೆ. ಇದು ಇತಿಹಾಸದಲ್ಲಿ ಮೊದಲ ಬಾರಿಗೆ ಜಗದ್ಗುರು ಒಬ್ಬರ

ವ್ಯಾಟಿಕನ್ ವರದಿ

1986ರ ಏಪ್ರಿಲ್ 13ರಂದು ಸಂತ ಜಾನ್ ಪಾಲ್ II ಅವರು ರೋಮ್‌ನ ಸೈನಗೋಗ್‌ಗೆ (ಯೆಹೂದಿಯರ ಗುಡಿ)ನೀಡಿದ ಭೇಟಿ ಅತ್ಯಂತ ಅಪೂರ್ವ ಘಟನೆವಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ರೋಮಿನ ಬಿಷಪ್ ಒಬ್ಬರು ಸೈನಗೋಗ್‌ಗೆ (ಯೆಹೂದಿಯರ ಗುಡಿ) ಪ್ರವೇಶಿಸಿ, ಯಹೂದಿ ಧರ್ಮ ಮತ್ತು ಯಹೂದಿ ಜನರ ಬಗ್ಗೆ ತನ್ನ ಗೌರವವನ್ನು ವಿಶ್ವದ ಮುಂದೆ ವ್ಯಕ್ತಪಡಿಸಿದರು.

ಜಗದ್ಗುರುಗಳು ಕಥೋಲಿಕ ಧರ್ಮ ಸಭೆಗೆ ಯಹೂದಿ ಧರ್ಮದೊಂದಿಗೆ ಇರುವ ಸಂಬಂಧವು ಇತರ ಯಾವುದೇ ಧರ್ಮಗಳೊಂದಿಗೆ ಇರುವ ಸಂಬಂಧಕ್ಕಿಂತ ವಿಭಿನ್ನವಾಗಿದೆ ಎಂದು ಒತ್ತಿಹೇಳಿದರು ಯಹೂದಿ ಧರ್ಮವು ನಮಗೆ ಬಾಹ್ಯವಾದುದಲ್ಲ, ಒಂದು ಅರ್ಥದಲ್ಲಿ ಅದು ನಮ್ಮದೇ ಧರ್ಮದೊಳಗಿನ ಭಾಗವಾಗಿದೆ.ಅವರು ಯಹೂದಿಗಳನ್ನು ಅತ್ಯಂತ ಪ್ರಿಯ ಸಹೋದರರು ಮತ್ತು ಒಂದು ಅರ್ಥದಲ್ಲಿ  ನಮ್ಮ ಹಿರಿಯ ಸಹೋದರರು ಎಂದು ಕರೆಯುತ್ತ, ಪರಿಷತ್ತಿನಲ್ಲಿ ಹೇಳಲಾದ ವಿಚಾರವನ್ನು ಸ್ಪಷ್ಟವಾಗಿ ಸಾರಿದರು.

ವಿಶೇಷವಾಗಿ, ನಲ್ವತ್ತು ವರ್ಷಗಳ ಹಿಂದೆ ರೋಮಿನ ಸೈನಗೋಗ್‌ಗೆ (ಯೆಹೂದಿಯರ ಗುಡಿ)ನೀಡಿದ ಈ ಭೇಟಿಯ ಮೂಲಕ ಹಾಗೂ ಕಥೋಲಿಕ ಯಹೂದಿ ಸಂವಾದದ ಕುರಿತು ಅವರು ಮಾಡಿದ ಅನೇಕ ಮಹತ್ವದ ಹೇಳಿಕೆಗಳು, ಅರ್ಥಪೂರ್ಣ ನಡೆಗಳು ಮತ್ತು ಯಹೂದಿ ಜನರೊಂದಿಗೆ ಬೆಳೆಸಿದ ವೈಯಕ್ತಿಕ ಸ್ನೇಹದ ಮೂಲಕ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಕಥೋಲಿಕ ಧರ್ಮ ಸಭೆ ಮತ್ತು ಯಹೂದಿ ಧರ್ಮದ ನಡುವಿನ ಭವಿಷ್ಯದ ಸೌಹಾರ್ದತೆಗೆ ಮಹತ್ವದ ದಾರಿಯನ್ನು ರೂಪಿಸಿದರು.

13 ಏಪ್ರಿಲ್ 2026, 19:32