ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಶಾಂತಿಗಾಗಿ ಏಪ್ರಿಲ್ 11 ರಂದು ಪ್ರಾರ್ಥನೆ ಜಾಗರಣೆಯಲ್ಲಿ ಜಗದ್ಗುರು XIVನೇ ಲಿಯೋರವರು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಶಾಂತಿಗಾಗಿ ಏಪ್ರಿಲ್ 11 ರಂದು ಪ್ರಾರ್ಥನೆ ಜಾಗರಣೆಯಲ್ಲಿ ಜಗದ್ಗುರು XIVನೇ ಲಿಯೋರವರು  (ANSA)

ಆಧುನಿಕ ಯುಗದಲ್ಲಿ ಜಗದ್ಗುರುಗಳು ಮತ್ತು ಯುದ್ಧಗಳು

ಆಧುನಿಕ ಶಸ್ತ್ರಾಸ್ತ್ರಗಳ ವಿನಾಶಕಾರಿ ಶಕ್ತಿಯನ್ನು ಗಮನಿಸಿದರೆ, ಹಿಂದಿನ ಶತಮಾನಗಳಲ್ಲಿ ಮಾಡುತ್ತಿದ್ದಂತೆ ‘ನ್ಯಾಯಯುತ ಯುದ್ಧ’ ಎಂಬ ಸಾಧ್ಯತೆಯ ಬಗ್ಗೆ ಮಾತನಾಡುವುದು ಬಹಳ ಕಷ್ಟವಾಗಿದೆ. 1963ರಲ್ಲೇ, ಜಗದ್ಗುರು XXIIIನೇ ಜಾನ್ ರವರು ‘ಪಾಚೆಮ್ ಇನ್ ಟೆರಿಸ್,' ಅಣುಯುಗದಲ್ಲಿ ಯುದ್ಧವನ್ನು ನ್ಯಾಯದ ಸಾಧನವೆಂದು ಪರಿಗಣಿಸುವುದು ಬಹುತೇಕ ಅಸಾಧ್ಯವಾಗುತ್ತದೆ ಎಂದು ಬರೆದಿದ್ದರು. ಇದೇ ಆತ್ಮದಲ್ಲಿ ಜಗದ್ಗುರು XIVನೇ ಲಿಯೋರವರು ನಿಂತಿದ್ದು, ಅವರು ತಮ್ಮ ಅಧಿಕಾರ ಕಾಲದ ಪ್ರಮುಖ ವಿಷಯಗಳಲ್ಲಿ ಒಂದಾಗಿ ಶಾಂತಿಯನ್ನು ರೂಪಿಸುತ್ತಿದ್ದಾರೆ.

ವ್ಯಾಟಿಕನ್ ವರದಿ

ಜನರು ಮತ್ತೆ ನ್ಯಾಯಯುತ ಯುದ್ಧ ಎಂಬ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಈ ಸಂದರ್ಭದಲ್ಲಿ, ಕಳೆದ ನೂರು ವರ್ಷಗಳಲ್ಲಿ ಪೇತ್ರನ ಸಿಂಹಾಸನವನ್ನು ಅಲಂಕರಿಸಿದ ಜಗದ್ಗುರುಗಳ ಶಾಂತಿ ಕುರಿತು ನೀಡಿದ ಪ್ರಭೋಧನೆಗಳನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಈ ಉಪದೇಶವು ಕ್ರಮೇಣ ಸಮೃದ್ಧಗೊಂಡು, ಆಳವಾದ ಅರ್ಥ ಪಡೆದುಕೊಂಡಿದ್ದು, “ನ್ಯಾಯಯುತ ಯುದ್ಧ” ಎಂಬುದನ್ನು ಸಮರ್ಥಿಸುವುದು ದಿನೇದಿನೇ ಕಷ್ಟವಾಗುತ್ತಿದೆ ಎಂಬ ಅರಿವಿಗೆ ತಲುಪಿದೆ. ಹಿಂದಿನ ಶತಮಾನಗಳ ತತ್ವಶಾಸ್ತ್ರದ ಆಧಾರದ ಮೇಲೆ ಯುದ್ಧವನ್ನು ನ್ಯಾಯೀಕರಿಸುವ ಪ್ರಯತ್ನಗಳು ಇಂದಿನ ವಾಸ್ತವಿಕತೆಯನ್ನು ಪರಿಗಣಿಸುತ್ತಿಲ್ಲ ಏಕೆಂದರೆ ಆಗ ಯುದ್ಧಗಳು ಕತ್ತಿಗಳು ಮತ್ತು ಕೋಲುಗಳಿಂದ ನಡೆಯುತ್ತಿದ್ದವು, ಆದರೆ ಇಂದು ಮರಣಕಾರಿ ಆಯುಧಗಳು ಮತ್ತು ಯಂತ್ರನಿಯಂತ್ರಿತ ಡ್ರೋನ್‌ಗಳ ಮೂಲಕ ನಡೆಯುತ್ತಿವೆ ಇವು ಗಂಭೀರ ನೈತಿಕ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಯುದ್ಧವು ಅನುಸರಿಸಬೇಕಾದ ಮಾರ್ಗವಲ್ಲ ಎಂಬ ಅರಿವು ಹೆಚ್ಚುತ್ತಿದೆ.

1917ರಲ್ಲಿ ಜಗದ್ಗುರು XVನೇ ಬೆನೆಡಿಕ್ಟ್ ರವರು ಯುದ್ಧದಲ್ಲಿ ತೊಡಗಿದ್ದ ರಾಷ್ಟ್ರಗಳಿಗೆ ಬರೆದ ಪತ್ರದಲ್ಲಿ ಪ್ರಥಮ ವಿಶ್ವಯುದ್ಧವನ್ನು “ನಿಷ್ಫಲ ಹತ್ಯಾಕಾಂಡ” ಎಂದು ಕರೆಯುವುದರಿಂದ ಹಿಡಿದು, ದ್ವಿತೀಯ ವಿಶ್ವಯುದ್ಧವನ್ನು ತಡೆಯಲು ಜಗದ್ಗುರು XIIನೇ ಪಿಯಸ್ ಮಾಡಿದ ಪ್ರಯತ್ನಗಳು 1963ರಲ್ಲಿ ಪಾಚೆಮ್ ಇನ್ ಟೆరిಸ್ “ನಲ್ಲಿ ಅಣುಯುಗದಲ್ಲಿ ಯುದ್ಧವನ್ನು ನ್ಯಾಯದ ಸಾಧನವೆಂದು ಪರಿಗಣಿಸುವುದು ಬಹುತೇಕ ಅಸಾಧ್ಯ ಎಂದು ಜಗದ್ಗುರು XXIIIನೇ ಜಾನ್ ಹೇಳಿದ್ದರಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಜಗದ್ಗುರು VIನೇ ಪಾಲ್ ನೀಡಿದ “ಇನ್ನು ಯುದ್ಧ ಬೇಡ!” ಎಂಬ ಘೋಷಣೆ ಹಾಗೂ ಮಧ್ಯಪ್ರಾಚ್ಯದ ಸಂಘರ್ಷಗಳನ್ನು ತಡೆಯಲು ಜಗದ್ಗುರು ದ್ವಿತೀಯ ಜಾನ್ ಪಾಲ್ ಮಾಡಿದ ಹಲವಾರು ಮನವಿಗಳವರೆಗೆ ಪೇತ್ರನ ಉತ್ತರಾಧಿಕಾರಿಗಳು ಸದಾ ಪ್ರವಾದಿ ದೃಷ್ಟಿಯೊಂದಿಗೆ ಮತ್ತು ವಾಸ್ತವಿಕತೆಯೊಂದಿಗೆ ತಮ್ಮ ಧ್ವನಿಯನ್ನು ಎತ್ತಿದ್ದಾರೆ, ಆದರೆ ದುರದೃಷ್ಟವಶಾತ್ ಅದು ಬಹುಮಟ್ಟಿಗೆ ಕೇಳಿಸಲಿಲ್ಲ.

ಮುಖ್ಯವಾಗಿ ಉಲ್ಲೇಖಿಸಬೇಕಾದ ಗ್ರಂಥವೆಂದರೆ ಕಥೋಲಿಕ್ ಧರ್ಮ ಸಭೆಯ ಧರ್ಮೋಪದೇಶ ಇದು ಕಾನೂನುಬದ್ಧ ಆತ್ಮರಕ್ಷಣೆಯ ಹಕ್ಕನ್ನು ಒಪ್ಪಿಕೊಂಡರೂ, ರಕ್ಷಣಾತ್ಮಕ ಯುದ್ಧಕ್ಕೂ ಕಠಿಣ ನಿಯಮಗಳನ್ನು ವಿಧಿಸುತ್ತದೆ ಆಕ್ರಮಣಕಾರರಿಂದ ರಾಷ್ಟ್ರಕ್ಕೆ ಅಥವಾ ರಾಷ್ಟ್ರಗಳ ಸಮುದಾಯಕ್ಕೆ ಉಂಟಾಗುವ ಹಾನಿ ದೀರ್ಘಕಾಲಿಕ, ಗಂಭೀರ ಮತ್ತು ನಿಶ್ಚಿತವಾಗಿರಬೇಕು ಅದನ್ನು ತಡೆಯಲು ಇತರ ಎಲ್ಲ ಮಾರ್ಗಗಳು ಪ್ರಯೋಜನಕಾರಿಯಾಗಿಲ್ಲವೆಂದು ತೋರಿಸಬೇಕು ಯಶಸ್ಸಿನ ಗಂಭೀರ ಸಾಧ್ಯತೆ ಇರಬೇಕು ಮತ್ತು ಶಸ್ತ್ರಾಸ್ತ್ರಗಳ ಬಳಕೆಯಿಂದ ಉಂಟಾಗುವ ಕೆಡುಕುಗಳು ನಿವಾರಿಸಬೇಕಾದ ಕೆಡುಕಿಗಿಂತ ಹೆಚ್ಚಾಗಬಾರದು. ಆಧುನಿಕ ವಿನಾಶಕಾರಿ ಸಾಧನಗಳ ಶಕ್ತಿ ಈ ಮೌಲ್ಯಮಾಪನದಲ್ಲಿ ಅತ್ಯಂತ ಭಾರವಾಗಿ ಪರಿಗಣಿಸಲಾಗುತ್ತದೆ.

ಇಂದು ಹೆಚ್ಚುತ್ತಿರುವ ಸಂಘರ್ಷಗಳು ಮತ್ತು ಈ ಆಧುನಿಕ ವಿನಾಶಕಾರಿ ಸಾಧನಗಳ ಶಕ್ತಿಯ ಕಾರಣದಿಂದ ಮಾನವಕುಲವು ಅಪಾಯದ ಅಂಚಿನಲ್ಲಿ ನಿಂತಿದೆ ಎಂಬುದನ್ನು ಯಾರು ನಿರಾಕರಿಸಬಹುದು?

ಯುದ್ಧದ ವಿರುದ್ಧದ ಇಲ್ಲ ಎಂಬ ಸಂದೇಶವು ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾರ ಕಾಲಾವಧಿಯಲ್ಲಿ ಇನ್ನಷ್ಟು ಬಲವಾಗಿ ಕೇಳಿಬಂತು. 2020ರ ಫ್ರಾಟೆಲ್ಲಿ ತುಟ್ಟಿ ಎಂಬ ಎನ್‌ಸೈಕ್ಲಿಕಲ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ “ಯುದ್ಧವನ್ನು ಹಲವಾರು ಬಾರಿ ಮಾನವೀಯತೆ, ರಕ್ಷಣಾತ್ಮಕತೆ ಅಥವಾ ಮುನ್ನೆಚ್ಚರಿಕೆಯ ಹೆಸರಿನಲ್ಲಿ ಸುಲಭವಾಗಿ ನ್ಯಾಯೀಕರಿಸಲಾಗುತ್ತದೆ. ಇತ್ತೀಚಿನ ದಶಕಗಳಲ್ಲಿ ನಡೆದ ಪ್ರತಿಯೊಂದು ಯುದ್ಧಕ್ಕೂ ನ್ಯಾಯ ಎಂಬ ಹೆಸರನ್ನು ನೀಡಲಾಗಿದೆ. ಆದರೆ ಅಣು, ರಾಸಾಯನಿಕ ಮತ್ತು ಜೈವಿಕ ಆಯುಧಗಳ ಅಭಿವೃದ್ಧಿ ಹಾಗೂ ಹೊಸ ತಂತ್ರಜ್ಞಾನಗಳು ಯುದ್ಧಕ್ಕೆ ನಿಯಂತ್ರಣಾತೀತ ವಿನಾಶಕಾರಿ ಶಕ್ತಿಯನ್ನು ನೀಡಿವೆ. ಸತ್ಯವೆಂದರೆ ‘ಮಾನವಕುಲವು ತನ್ನ ಮೇಲೆ ಇಷ್ಟು ಶಕ್ತಿಯನ್ನು ಎಂದಿಗೂ ಹೊಂದಿರಲಿಲ್ಲ, ಆದರೆ ಅದನ್ನು ಜ್ಞಾನದಿಂದ ಬಳಸಲಾಗುತ್ತದೆ ಎಂಬುದಕ್ಕೆ ಯಾವುದೇ ಭರವಸೆ ಇಲ್ಲ.’ ನಾವು ಇನ್ನು ಯುದ್ಧವನ್ನು ಪರಿಹಾರವೆಂದು ಪರಿಗಣಿಸಲು ಸಾಧ್ಯವಿಲ್ಲ, ಏಕೆಂದರೆ ಅದರ ಅಪಾಯಗಳು ಅದರ ಪ್ರಯೋಜನಗಳಿಗಿಂತ ಹೆಚ್ಚಾಗಿರುತ್ತವೆ. ಇನ್ನು ಮುಂದೆ ಯುದ್ಧವೇ ಬೇಡ!”

ಅವರ ಉತ್ತರಾಧಿಕಾರಿಯಾದ ಜಗದ್ಗುರು XIVನೇ ಲಿಯೋರವರು ತಮ್ಮ ಅಧಿಕಾರ ಅವಧಿಯಲ್ಲಿ ಕೇಂದ್ರ ವಿಷಯಗಳಲ್ಲಿ ಒಂದಾಗಿ ಶಾಂತಿಯನ್ನು ರೂಪಿಸಿದ್ದಾರೆ. ಹೆಚ್ಚುತ್ತಿರುವ ಸಂಘರ್ಷಗಳು ಮತ್ತು ಶಸ್ತ್ರಾಸ್ತ್ರಗಳ ಮೇಲಿನ ಅತಿಯಾದ ವೆಚ್ಚದ ನಡುವೆ, ಅವರು ತಮ್ಮ ಪೂರ್ವಾಧಿಕಾರಿಗಳು ತೋರಿಸಿದ ಮಾರ್ಗದಲ್ಲೇ ಮುಂದುವರಿದು, ವಾಸ್ತವಿಕತೆ ಮತ್ತು ಪ್ರವಾದಿ ಸ್ಪಷ್ಟತೆಯೊಂದಿಗೆ ಶಾಂತಿ, ಸಂವಾದ ಮತ್ತು ಮಾತುಕತೆಯ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಹತ್ಯಾಕಾಂಡಗಳು ವಿಶ್ವದ ಕೋಟ್ಯಾಂತರ ಜನರ ಮನಸ್ಸನ್ನು ಕದಡಿವೆ, ಮತ್ತು ಅವರು ರೋಮಿನ ಬಿಷಪ್ ಕಡೆಗೆ ನೋಡುತ್ತಿದ್ದಾರೆ.

ಗೇತ್ಸೆಮನಿ ತೋಟದಲ್ಲಿ ಯೇಸು ಮಾಡಿದಂತೆ, ಜಗದ್ಗುರು XIVನೇ ಲಿಯೋರವರು ಕೂಡ “ಕತ್ತಿಯನ್ನು ಅದರ ಹೊದಿಕೆಗೆ ಹಿಂತಿರುಗಿಸಿ” ಎಂದು ನಮಗೆ ಕರೆ ನೀಡುತ್ತಾರೆ. ಏಪ್ರಿಲ್ 11ರಂದು ನಡೆದ ಪ್ರಾರ್ಥನಾ ಜಾಗರಣೆಯಲ್ಲಿ ಅವರು ಹೀಗೆ ಹೇಳಿದರು: “ನಾವು ಕೇಳುವ ಮತ್ತು ಒಂದಾಗುವ ಆಹ್ವಾನಕ್ಕಿಂತ ಹೆಚ್ಚು ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ.” ಅವರು ಮುಂದುವರಿದು, “ಪ್ರಾರ್ಥಿಸುವವರು ತಮ್ಮ ಮಿತಿಗಳನ್ನು ಅರಿಯುತ್ತಾರೆ; ಅವರು ಕೊಲ್ಲುವುದಿಲ್ಲ ಅಥವಾ ಮರಣದ ಬೆದರಿಕೆ ನೀಡುವುದಿಲ್ಲ. ಬದಲಾಗಿ, ಜೀವಂತ ದೇವರನ್ನು ತಿರಸ್ಕರಿಸಿದವರನ್ನು ಮರಣವೇ ಬಂಧಿಸುತ್ತದೆ ಅವರು ತಮ್ಮ ಶಕ್ತಿಯನ್ನು ಮೂಕ, ಕುರುಡ ಮತ್ತು ಕಿವುಡವಾದ ಮೂರ್ತಿಯಾಗಿ ಮಾಡಿಕೊಳ್ಳುತ್ತಾರೆ ಮತ್ತು ಅದಕ್ಕೆ ಎಲ್ಲವನ್ನೂ ಬಲಿಯಾಗಿಸುತ್ತಾರೆ. ಸ್ವಾರ್ಥ ಮತ್ತು ಹಣದ ಆರಾಧನೆ ಸಾಕು ಶಕ್ತಿಯ ಪ್ರದರ್ಶನ ಸಾಕು ಯುದ್ಧ ಸಾಕು ನಿಜವಾದ ಶಕ್ತಿ ಜೀವನವನ್ನು ಸೇವಿಸುವುದರಲ್ಲಿ ಇದೆ ಎಂದು ಹೇಳಿದರು.

15 ಏಪ್ರಿಲ್ 2026, 13:24