ಕ್ಷಾಮವನ್ನು ನೀಗಿಸಲು ಪ್ರಯತ್ನಿಸುತ್ತಿರುವ ಸುಡಾನ್‌ನ ತಳಮಟ್ಟದ ಸಹಾಯ ಜಾಲವನ್ನು ಗುರಿಯಾಗಿಸಲಾಗಿದೆ ಕ್ಷಾಮವನ್ನು ನೀಗಿಸಲು ಪ್ರಯತ್ನಿಸುತ್ತಿರುವ ಸುಡಾನ್‌ನ ತಳಮಟ್ಟದ ಸಹಾಯ ಜಾಲವನ್ನು ಗುರಿಯಾಗಿಸಲಾಗಿದೆ 

“ಹಸಿವು ನಿರ್ಮೂಲನೆಯಾಗಲು ಶಾಂತಿ ಅತ್ಯಾವಶ್ಯಕ” ಎಫ್ಎಒ ಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರ ಹೇಳಿಕೆ.

ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ವ್ಯವಸ್ಥಾತ್ಮಕ ಆಘಾತಗಳ ಹಿನ್ನೆಲೆಯಲ್ಲಿ, ಎಫ್ಎಒಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರು ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಮತ್ತು ಅಸುರಕ್ಷಿತ ಜನಸಮೂಹಗಳನ್ನು ರಕ್ಷಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡುತ್ತಾರೆ. ಜೊತೆಗೆ, “ಸತತ ಅಭಿವೃದ್ಧಿಯನ್ನು ಖಚಿತಪಡಿಸಲು ನಾವು ರಾಜತಾಂತ್ರಿಕತೆಯನ್ನು ಅಳವಡಿಸಿಕೊಳ್ಳೋಣ ಎಂಬ ಜಗದ್ಗುರುಗಳ ಕರೆಗೂ ಅವರು ಪ್ರತಿಧ್ವನಿಸುತ್ತಾರೆ.

ವ್ಯಾಟಿಕನ್ ವರದಿ

ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಪ್ರದೇಶಗಳ ಜನರನ್ನು ಅನೇಕ ಸಂಕಷ್ಟಗಳ ಬಗ್ಗೆ, ಹಾಗೂ ಅವು ಕೃಷಿ-ಆಹಾರ ಉತ್ಪಾದನಾ ವ್ಯವಸ್ಥೆಗಳ ಮೇಲೆ ಉಂಟುಮಾಡುತ್ತಿರುವ ಗಂಭೀರ ಪರಿಣಾಮಗಳ ಕುರಿತು, ಜಗದ್ಗುರುಗಳ ಅಧಿಕಾರ ಸ್ಥಳವು ತನ್ನ ಆಳವಾದ ಚಿಂತೆಯನ್ನು ವ್ಯಕ್ತಪಡಿಸಿದೆ. ಮುಂದುವರಿಯುತ್ತಿರುವ ಸಂಘರ್ಷಗಳು ಮತ್ತು ತೀವ್ರ ಹವಾಮಾನ ಘಟನೆಗಳು ಹೆಚ್ಚುತ್ತಿರುವ ಸಂಖ್ಯೆಯ ಜನರನ್ನು ದಾರಿದ್ರ್ಯ, ಹಸಿವು ಮತ್ತು ಆಹಾರ ಅಸುರಕ್ಷಿತತೆಯ ಕಡೆಗೆ ತಳ್ಳುತ್ತಿವೆ.

ಎಫ್ಎಒ,ಐಎಫ್ಎಡಿ,ಮತ್ತು ಡಬ್ಲ್ಯೂ ಎಫ್ ಪಿಗಳಿಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾದ ಆರ್ಚ್‌ಬಿಷಪ್ ಫೆರ್ನಾಂಡೋ ಚಿಕಾ ಅರೇಲ್ಯಾನೋರವರು ಈ ಚಿಂತನೆಯನ್ನು ಮಧ್ಯಪ್ರಾಚ್ಯ ಪ್ರಾದೇಶಿಕ ಸಮ್ಮೇಳನದ 38ನೇ ಅಧಿವೇಶನ (ಎನ್ಇಆರ್ ಸಿ)ಯಲ್ಲಿ ವ್ಯಕ್ತಪಡಿಸಿದರು. ಈ ಸಭೆಯ ಒಂದು ಮುಖ್ಯ ವಿಷಯವಾಗಿ ಮುಂದುವರಿಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿರುವ ಕೃಷಿ-ಆಹಾರ ವ್ಯವಸ್ಥೆಗಳನ್ನು ನಿವ೯ಹಿಸುವ ವ್ಯವಸ್ಥಾತ್ಮಕ ಸಂಕಷ್ಟಗಳಿಗೆ ಪ್ರತಿಕ್ರಿಯೆ ರೂಪಿಸಲು ಕೈಗೊಳ್ಳಬೇಕಾದ ತಂತ್ರಾತ್ಮಕ ಕ್ರಮಗಳು ಎಂಬುದು ಒಳಗೊಂಡಿತ್ತು.

ಸಮನ್ವತ ರಾಜಕೀಯ ಪ್ರತಿಕ್ರಿಯೆ

ಆರ್ಚ್‌ಬಿಷಪ್ ಚಿಕಾ ಅರೇಲ್ಯಾನೋ ರವರ ಪ್ರಕಾರ, ಶಕ್ತಿ ಮತ್ತು ರಸಗೊಬ್ಬರಗಳ ಹೆಚ್ಚುತ್ತಿರುವ ವೆಚ್ಚಗಳು, ಜೊತೆಗೆ ಸರಬರಾಜು ಸರಪಳಿಗಳಲ್ಲಿನ ಅನಿಶ್ಚಿತತೆಗಳು ಉತ್ಪಾದನಾ ವೆಚ್ಚಗಳನ್ನು ಹೆಚ್ಚಿಸುತ್ತಿದ್ದು, ಆಹಾರದ ಬೆಲೆಗಳಲ್ಲಿ ಅಸ್ಥಿರತೆಯನ್ನು ಹೆಚ್ಚಿಸುತ್ತಿವೆ. ಇದು ವಿಶೇಷವಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಅಸುರಕ್ಷಿತ ದೇಶಗಳಲ್ಲಿ ಹೆಚ್ಚು ಪರಿಣಾಮ ಬೀರುತ್ತಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ತೀವ್ರತೆ ಹೆಚ್ಚಾಗುವುದು,ಎಂದು ಅವರು ವಿವರಿಸಿದಂತೆ, ಸೀಮೆಗಳಾಚೆಗೆ ಪರಿಣಾಮ ಬೀರಿ ಜಾಗತಿಕ ಮಟ್ಟದಲ್ಲಿ ಹಸಿವನ್ನು ಮತ್ತಷ್ಟು ತೀವ್ರಗೊಳಿಸುತ್ತದೆ, ವಿಶೇಷವಾಗಿ ಅತಿ ದುರ್ಬಲ ಜನಸಮೂಹಗಳ ನಡುವೆ ಆದ್ದರಿಂದ, “ನಾವು ಎದುರಿಸುತ್ತಿರುವ ಸಂಕಷ್ಟಗಳನ್ನು ನಿರ್ವಹಿಸಲು, ಜನರನ್ನು ರಕ್ಷಿಸಲು ಮತ್ತು ದೀರ್ಘಕಾಲೀನ ಸ್ಥೈರ್ಯವನ್ನು ಬಲಪಡಿಸಲು ಸಮನ್ವಿತ ಮತ್ತು ಬಹುಮಟ್ಟದ ರಾಜಕೀಯ ಪ್ರತಿಕ್ರಿಯೆಯನ್ನು ತುರ್ತಾಗಿ ಜಾರಿಗೆ ತರಬೇಕು” ಎಂದು ಅವರು ಒತ್ತಿ ಹೇಳಿದರು.

ಶಕ್ತಿ ಮತ್ತು ಆಹಾರ ಭದ್ರತೆಯ ಸಂರಕ್ಷಣೆ

“ಸ್ಥಳೀಯ ಅಶಾಂತಿಗಳು ವ್ಯಾಪಕ ಆರ್ಥಿಕ ಮತ್ತು ಮಾನವೀಯ ಸಂಕಷ್ಟಗಳಿಗೆ ವಿಸ್ತರಿಸದಂತೆ ತಡೆಯುವುದು ಅತ್ಯಂತ ಮುಖ್ಯ,” ಎಂದು ಆರ್ಚ್‌ಬಿಷಪ್ ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ, “ಸರಬರಾಜು ಸರಪಳಿಗಳನ್ನು ಸ್ಥಿರಗೊಳಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ದೀರ್ಘಕಾಲೀನವಾಗಿ ಸ್ಥಿರ ಕೃಷಿ, ನವೀಕರಿಸಬಹುದಾದ ಶಕ್ತಿ ಹಾಗೂ ರಚನಾತ್ಮಕ ಸುಧಾರಣೆಗಳ ಮೇಲೆ ಕೇಂದ್ರೀಕೃತ ತಂತ್ರಗಳನ್ನು ರೂಪಿಸಬೇಕು, ಇದರಿಂದ ಜಾಗತಿಕ ಶಕ್ತಿ ಮತ್ತು ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಬಹುದು ಎಂದು ಅವರು ಸೂಚಿಸಿದರು.

ಪೋಪ್ ಅವರ ಮನವಿ

ಸಭೆಯಲ್ಲಿ ಭಾಗವಹಿಸಿದ್ದವರಿಗೆ ಶಾಶ್ವತ ವೀಕ್ಷಕರು ನೆನಪಿಸಿದರು ದಾರಿದ್ರ್ಯ ಮತ್ತು ಆಹಾರ ಅಸುರಕ್ಷಿತತೆಯನ್ನು ಹೆಚ್ಚಿಸುತ್ತಿರುವ ಅನೇಕ ಅಸ್ಥಿರತೆಯ ಕಾರಣಗಳ ನಡುವೆಯೂ, ಜಗದ್ಗುರು XIVನೇ ಲಿಯೋರವರು ನಿರಂತರವಾಗಿ ಶಾಂತಿಗೆ ಕರೆ ನೀಡುತ್ತಿದ್ದಾರೆ.

ವಿಭಜನೆಗಳು ಮತ್ತು ವೈಮನಸ್ಯಗಳ ಅಂತ್ಯವು ನಿಷ್ಠಾವಂತ ಸಂವಾದ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಗೌರವಕ್ಕೆ ಆಧಾರಿತವಾದ ಶಾಂತಿಯ ಮಾರ್ಗಗಳನ್ನು ತೆರೆಯಲು ಅತ್ಯಾವಶ್ಯಕ,ಎಂದು ಅವರು ಹೇಳಿದರು. ಜೊತೆಗೆ, ನಿರಪರಾಧರಾಗಿದ್ದರೂ ಇತರರಿಂದ ಉಂಟಾದ ಸಂಘರ್ಷಗಳ ಬಲಿಯಾಗುತ್ತಿರುವ ಜನರ ನೋವನ್ನು ಕಡಿಮೆ ಮಾಡುವುದು ಕೂಡ ಒಂದು ದೊಡ್ಡ ಸವಾಲಾಗಿದೆ ಎಂದು ಸೇರಿಸಿದರು.

ಆರ್ಚ್‌ಬಿಷಪ್ ಚಿಕಾ ಅರೇಲ್ಯಾನೋ ರವರು ಮುಂದುವರೆದು, ಯುದ್ಧ ಮತ್ತು ಹಿಂಸೆಯಿಂದ ನಾಶವಾಗುತ್ತಿರುವ ಜಗತ್ತಿನ ಅನೇಕ ಪ್ರದೇಶಗಳ ಪರಿಸ್ಥಿತಿಯನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಸಮೀಪದಿಂದಲೇ ಗಮನಿಸುತ್ತಿದೆ ಎಂದು ಹೇಳಿದರು.

ಜಗದ್ಗುರಗಳು ಒತ್ತಿಹೇಳಿದಂತೆ, ಈ ಯುದ್ಧಗಳಿಂದ ಉಂಟಾಗುತ್ತಿರುವ ಸಾವು-ನೋವು ಮಾನವಕುಲದ ಸಂಪೂರ್ಣತೆಗೆ ಅವಮಾನವಾಗಿದ್ದು, ದೇವರತ್ತೆ ಒಬ್ಬ ಕಿರುಚಾಟವಾಗಿದೆ,” ಎಂದು ಅವರು ಹೇಳಿದರು. “ಬಾಂಬ್‌ಗಳ ಶಬ್ದ ನಿಲ್ಲುವಂತೆ, ಆಯುಧಗಳು ಮೌನವಾಗುವಂತೆ ಮತ್ತು ಜನರ ಧ್ವನಿಗಳು ಕೇಳಿಸಿಕೊಳ್ಳುವ ಸಂವಾದಕ್ಕೆ ಅವಕಾಶ ಸೃಷ್ಟಿಯಾಗುವಂತೆ, ಶಾಂತಿಯ ಉತ್ತೇಜನವು ಎಲ್ಲಾ ರಾಜತಾಂತ್ರಿಕ ಕ್ರಮಗಳ ಕೇಂದ್ರಬಿಂದು ಆಗಿರಬೇಕು ಎಂದು ಅವರು ಗಮನಿಸಿದರು.

ಪರಿಹಾರಗಳ ಕುರಿತು ಮಾತುಕತೆ

ಸಂಘರ್ಷಗಳಿಗೆ ಶೀಘ್ರದಲ್ಲೇ ಮಾತುಕತೆಯ ಮೂಲಕ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯೊಂದಿಗೆ, ಎಂದು ಆರ್ಚ್‌ಬಿಷಪ್ ಚಿಕಾ ಅರೇಲ್ಯಾನೋ ಒತ್ತಿಹೇಳಿದರು, ಈ ಪ್ರಾದೇಶಿಕ ಸಮ್ಮೇಳನದ ಕಾರ್ಯವು ಎಲ್ಲರಿಗೂ ಆಹಾರ ಭದ್ರತೆಯನ್ನು ಬಲಪಡಿಸಲು ಹಾಗೂ ಶಾಂತಿಯನ್ನು ಉತ್ತೇಜಿಸಲು ಉದ್ದೇಶಿತವಾದ ತತ್ವಗಳು ಮತ್ತು ಕ್ರಮಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪ್ರತಿನಿಧಿ ಮಂಡಳಿ ಹೊಂದಿದೆ. ಇವು ನಿಜವಾದ ಸತತ ಅಭಿವೃದ್ಧಿಯನ್ನು ಖಚಿತಪಡಿಸಲು ಮತ್ತು ಜಗತ್ತಿನಲ್ಲಿ ಹಸಿವು ನಿರ್ಮೂಲನೆಯಾಗಲು ಅತ್ಯಾವಶ್ಯಕ ಅಂಶಗಳಾಗಿವೆ.

20 ಏಪ್ರಿಲ್ 2026, 22:07