ಜಕಾರ್ತದಲ್ಲಿ ಹಣ ಬದಲಾಯಿಸುವ ಸ್ಥಳದಲ್ಲಿ ಉದ್ಯೋಗಿ ಯುಎಸ್ ಡಾಲರ್ ಎಣಿಸುತ್ತಾನೆ. ಜಕಾರ್ತದಲ್ಲಿ ಹಣ ಬದಲಾಯಿಸುವ ಸ್ಥಳದಲ್ಲಿ ಉದ್ಯೋಗಿ ಯುಎಸ್ ಡಾಲರ್ ಎಣಿಸುತ್ತಾನೆ. 

ಜಗದ್ಗರುಗಳ ಅಧಿಕಾರ ಸ್ಥಳ:ವಿದೇಶಿ ಸಾಲವು ದಾರಿದ್ರ್ಯ ಮತ್ತು ಅಸಮಾನತೆಯ ಚಕ್ರವನ್ನು ಮುಂದುವರಿಸುತ್ತದೆ.

ಜಿನೀವಾದಲ್ಲಿರುವ ಜಗದ್ಗುರುಗಳ ಅಧಿಕಾರ ಸ್ಥಳದ ವಿಶ್ವಸಂಸ್ಥೆಯ ಕಚೇರಿ ಶಾಶ್ವತ ವೀಕ್ಷಕರಾದ ಪ್ರತಿನಿಧಿಗಳು, ವಿದೇಶಿ ಸಾಲದಿಂದ ಮತ್ತಷ್ಟು ತೀವ್ರಗೊಂಡಿರುವ ಜಾಗತಿಕ ಅಸಮಾನತೆಗಳನ್ನು ನಿವಾರಿಸಲು ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಆರ್ಚ್‌ಬಿಷಪ್ ಎಟ್ಟೋರ್ ಬಾಲೆಸ್ಟ್ರೆರೊರವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ 61ನೇ ನಿಯಮಿತ ಅಧಿವೇಶನದಲ್ಲಿ, ಜಿನೀವಾದಲ್ಲಿ ಮಾತನಾಡುತ್ತಾ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ವಿದೇಶಿ ಸಾಲವುಂಟುಮಾಡುತ್ತಿರುವ ಪರಿಣಾಮಗಳನ್ನು ವಿಷಾದ ವ್ಯಕ್ತಪಡಿಸಿದರು. ವಿದೇಶಿ ಸಾಲವು ದಾರಿದ್ರ್ಯ ಮತ್ತು ಅಸಮಾನತೆಯ ಚಕ್ರಗಳನ್ನು ಮುಂದುವರಿಸುತ್ತಿದೆ ಎಂದು ಅವರು ಹೇಳಿದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪ್ರೇಷಿತರ ರಾಯಭಾರಿ ಮತ್ತು ಶಾಶ್ವತ ವೀಕ್ಷಕರಾದ ಆರ್ಚ್‌ಬಿಷಪ್ ಬಾಲೆಸ್ತ್ರೆರೊ, ಸಾಲವನ್ನು ಅತ್ಯಂತ ಅಸುರಕ್ಷಿತ ಜನರನ್ನು ಕಾಡುತ್ತಿರುವ ನೈತಿಕ ಹಾಗೂ ಮಾನವ ಹಕ್ಕುಗಳ ಸಮಸ್ಯೆ ಎಂದು ವಿವರಿಸಿದರು.

ನೈತಿಕ ಮತ್ತು ಮಾನವ ಹಕ್ಕುಗಳ ಸಮಸ್ಯೆಯಾಗಿ ಸಾಲ

ಅತಿಯಾದ ರಾಷ್ಟ್ರಗಳಲ್ಲಿ  ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಲ್ಲಿ  ಸಾಲ ಸೇವೆಗಾಗಿ ಮಾಡುವ ಪಾವತಿಗಳು ಸಾಮಾನ್ಯ ಹಿತಕ್ಕಾಗಿ ಬಳಸಬೇಕಾದ ಸಂಪನ್ಮೂಲಗಳನ್ನು ಹೀರಿಕೊಳ್ಳುತ್ತಿವೆ, ಎಂದು ಆರ್ಚ್‌ಬಿಷಪ್ ಹೇಳಿದರು.

ಅವರು ಮುಂದುವರೆದು, “ಆಹಾರ, ಶುದ್ಧ ನೀರು, ಆರೋಗ್ಯ, ವಾಸಸ್ಥಳ ಮತ್ತು ಸಾಮಾಜಿಕ ರಕ್ಷಣೆಯಂತಹ ಮೂಲಭೂತ ಅಗತ್ಯಗಳಿಗೆ ತುರ್ತಾಗಿ ಬೇಕಾದ ನಿಧಿಗಳು ಬೇರೆ ಕಡೆಗೆ ತಿರುಗಿಸಲಾಗುತ್ತಿವೆ ಎಂದು ಗಮನಿಸಿದರು.

ಸಾಲದ ಭಾರ ಅತಿಯಾಗಿ ಹೆಚ್ಚಾದಾಗ, ರಾಷ್ಟ್ರಗಳು ಅಸಾಧ್ಯವಾದ ಆಯ್ಕೆಗಳನ್ನು ಎದುರಿಸಬೇಕಾಗುತ್ತದೆ ಸಾಲದಾತರಿಗೆ ಹಣ ತೀರಿಸಬೇಕೋ ಅಥವಾ ತಮ್ಮ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೋ ಎಂಬ ದ್ವಂದ್ವ ಎದುರಾಗುತ್ತದೆ, ಎಂದು ಅವರು ಹೇಳಿದರು.

ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ ಇದು ಆಳವಾದ ನೈತಿಕ ಮತ್ತು ಮಾನವ ಹಕ್ಕುಗಳ ಸಂಕಟ ಎಂದು ಅವರು ವಿವರಿಸಿದರು.

ಅತಿಯಾದ ಸಾಲವು ಸರ್ಕಾರಗಳ ಹಣಕಾಸು ಸಾಮರ್ಥ್ಯವನ್ನು ಕುಗ್ಗಿಸುತ್ತದೆ, ಕಠಿಣ ಆರ್ಥಿಕ ಮಿತವ್ಯಯ ಕ್ರಮಗಳನ್ನು ಹೇರುತ್ತದೆ ಹಾಗೂ ದಾರಿದ್ರ್ಯ ಮತ್ತು ಅಸಮಾನತೆಯ ಚಕ್ರಗಳನ್ನು ಮುಂದುವರಿಸುತ್ತದೆ, ಎಂದು ಅವರು ಹೇಳಿದರು. ಇದರಿಂದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅನುಷ್ಠಾನಕ್ಕೆ ನೇರ ಪರಿಣಾಮ ಬೀರುತ್ತದೆ.

ಉತ್ತಮ ಆಡಳಿತ ಮತ್ತು ಸಾರ್ವಜನಿಕ ವಿಶ್ವಾಸ

ಆರ್ಚ್‌ಬಿಷಪ್ ಬಾಲೆಸ್ತ್ರೆರೊ ರವರ ಪ್ರಕಾರ, ಸಾಲ ಹೊಂದಿರುವ ರಾಷ್ಟ್ರಗಳು ಉತ್ತಮ ಆಡಳಿತ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜವಾಬ್ದಾರಿತ್ವದ ತತ್ವಗಳನ್ನು ಅನುಸರಿಸುವ ಹಣಕಾಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು.

ಸಾರ್ವಜನಿಕ ಹಣಕಾಸು ವ್ಯವಸ್ಥೆ ಸಂಸ್ಥೆಗಳು ಮತ್ತು ನಾಗರಿಕರ ನಡುವಿನ ವಿಶ್ವಾಸದ ಮೇಲೆ ಆಧಾರಿತವಾಗಿರಬೇಕು ಎಂದು ಅವರು ಹೇಳಿದರು. ತೆರಿಗೆ ಸಂಗ್ರಹಣೆ ಮತ್ತು ಸಾರ್ವಜನಿಕ ವೆಚ್ಚಗಳು ನ್ಯಾಯಸಮ್ಮತವಾಗಿವೆ ಮತ್ತು ಸಾಮಾನ್ಯ ಹಿತಕ್ಕಾಗಿ ಬಳಸಲ್ಪಡುತ್ತಿವೆ ಎಂಬ ನಂಬಿಕೆ ಮೂಡಿದಾಗ ಸಾಮಾಜಿಕ ಏಕತೆ ಮತ್ತು ಸ್ವಯಂಪ್ರೇರಿತ ಅನುಸರಣೆ ಹೆಚ್ಚುತ್ತದೆ, ಇದರಿಂದ ರಾಷ್ಟ್ರಗಳು ಸಂಪನ್ಮೂಲಗಳನ್ನು ಸಂಗ್ರಹಿಸುವ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಬಹುದು ಎಂದು ಅವರು ವಿವರಿಸಿದರು.

ಸಾಲ ತೀರಿಸುವುದಕ್ಕಿಂತ ಮಾನವ ಹಕ್ಕುಗಳಿಗೆ ಆದ್ಯತೆ

ವಿವಾದಗಳು ಉಂಟಾದಾಗ, ಮಾನವ ಹಕ್ಕುಗಳ ಕರ್ತವ್ಯಗಳು ಸಾಲ ತೀರಿಸುವುದಕ್ಕಿಂತ ಮೇಲುಗೈ ಹೊಂದಬೇಕು, ಎಂದು ಅವರು ಹೇಳಿದರು. ದ್ವಿಪಕ್ಷೀಯ, ಬಹುಪಕ್ಷೀಯ ಅಥವಾ ಖಾಸಗಿ ಸಾಲದಾತರಾಗಿರಲಿ, ಸಾಲ ನೀಡುವ ಕ್ರಮಗಳು ಮಾನವ ಗೌರವವನ್ನು ಗೌರವಿಸಬೇಕು ಮತ್ತು ದಾರಿದ್ರ್ಯ ಅಥವಾ ಸಂಕಷ್ಟವನ್ನು ಹೆಚ್ಚಿಸಬಾರದು ಎಂದು ಅವರು ಒತ್ತಿಹೇಳಿದರು.

ಅವರು ಇನ್ನೂ ಮುಂದುವರೆಸುತ್ತಾ: ಅಕ್ರಮ ಸಾಲಗಳು, ತೆರಿಗೆ ಸ್ಪರ್ಧೆ ಮತ್ತು ದೌರ್ಜನ್ಯಮಯ ಸಾಲ ನೀಡುವ ಕ್ರಮಗಳು ಸಾಮಾಜಿಕ ಒಪ್ಪಂದವನ್ನು ದುರ್ಬಲಗೊಳಿಸುತ್ತವೆ ಮತ್ತು ರಾಷ್ಟ್ರಗಳು ತಮ್ಮ ಮೂಲಭೂತ ಕರ್ತವ್ಯಗಳನ್ನು ನೆರವೇರಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತವೆ.

ಜಾಗತಿಕ ಕ್ರಮಕ್ಕೆ ಕರೆ

ಜಗದ್ಗುರು XIV ನೇ ಲಿಯೋರವರುನ್ನು ಉಲ್ಲೇಖಿಸಿ ಆರ್ಚ್‌ಬಿಷಪ್ ಬಾಲೆಸ್ತ್ರೆರೊ ಹೇಳಿದರು:

“ಖಂಡಗಳ ನಡುವೆ, ರಾಷ್ಟ್ರಗಳ ನಡುವೆ ಹಾಗೂ ಒಂದೇ ಸಮಾಜದ ಒಳಗೂ ಆಳವಾದ ವಿಭಜನೆಗಳನ್ನು ಉಂಟುಮಾಡುತ್ತಿರುವ ಜಾಗತಿಕ ಅಸಮಾನತೆಗಳನ್ನು ನಿವಾರಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕು ಎಂದರು.

06 ಮಾರ್ಚ್ 2026, 20:01