ಹುಡುಕಿ

ಸಂವಹನ ವಿಭಾಗಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಆನ್ ಕಾರ್ಟರ್ ಸಂವಹನ ವಿಭಾಗಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಆನ್ ಕಾರ್ಟರ್ 

ಆನ್ ಕಾರ್ಟರ್: ಧರ್ಮ ಸಭೆಯು ಸಂವಹನಕ್ಕಾಗಿ ಇರುವ ಒಂದು ಹೃದಯವಾಗಿದೆ

ಸಂವಹನ ವಿಭಾಗದ ಸಲಹೆಗಾರ್ತಿಯಾಗಿ ಸೇವೆ ಸಲ್ಲಿಸಿದ್ದ 69 ವರ್ಷದ ಆನ್ ಕಾರ್ಟರ್ ರವರು ನಿಧನರಾಗಿದ್ದಾರೆ. ಅವರು ಆಳವಾದ ನಂಬಿಕೆ, ವೃತ್ತಿಪರ ಶ್ರೇಷ್ಠತೆ ಮತ್ತು ವೈಯಕ್ತಿಕ ಸ್ನೇಹಭಾವದ ಅಮೂಲ್ಯ ಪರಂಪರೆಯನ್ನು ಬಿಟ್ಟುಹೋಗಿದ್ದು, ಅವರನ್ನು ತಿಳಿದಿದ್ದ ಎಲ್ಲರೂ ಅವರನ್ನು ತುಂಬಾ ನೆನಪಿಸಿಕೊಳ್ಳುತ್ತಾರೆ.

ವ್ಯಾಟಿಕನ್ ವರದಿ

ಆನ್ ಕಾರ್ಟರ್ ರವರು ಪ್ರಾವೀಣ್ಯ ಹೊಂದಿದ ಸಂವಹನ ತಂತ್ರಜ್ಞೆಯಾಗಿದ್ದು, ರಾಸ್ಕಿ ಬೇರ್ಲೀನ್ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್ ಸಂಸ್ಥೆಯನ್ನು ಸಹ-ಸ್ಥಾಪಿಸಿದ್ದರು ಮತ್ತು ಬೋಸ್ಟನ್ ಮಹಾಧರ್ಮಪ್ರಾಂತ್ಯ  ಹಾಗೂ ಕಾರ್ಡಿನಲ್ ಸೀನ್ ಓ’ಮಾಲಿರವರಿಗೆ ದೀರ್ಘಕಾಲದ ಸಲಹೆಗಾರ್ತಿಯಾಗಿ ಸೇವೆ ಸಲ್ಲಿಸಿದ್ದರು. 2017ರ ಏಪ್ರಿಲ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಅವರನ್ನು ಸಂವಹನ ವಿಭಾಗದ 13 ಹೊಸ ಸಲಹೆಗಾರರಲ್ಲಿ ಒಬ್ಬರಾಗಿ ನೇಮಿಸಿದರು ಆ ಪಾತ್ರದಲ್ಲಿ ಅವರು ಪ್ರೀತಿಸಿದ ಧರ್ಮ ಸಭೆಗೆ ಅಂತರಂಗದಲ್ಲಿ ವಿಶಾಲ ಸೇವೆಯನ್ನು ಸಲ್ಲಿಸಿದರು.

ಆನ್ ರವರು ವಿಶ್ವಾಸಾರ್ಹತೆಯ ಮಾದರಿಯಾಗಿದ್ದು, ನಂಬಿಕೆಯನ್ನು ಬೆಳೆಸಿದವರು. ಜಗದ್ಗುರು ಫ್ರಾನ್ಸಿಸ್ ರವರ ಮಾತಿನಲ್ಲಿ ಹೇಳುವುದಾದರೆ, ಆ ನಂಬಿಕೆ “ಮಾರ್ಕೆಟಿಂಗ್ ಅಥವಾ ತಂತ್ರ ರೂಪಿಸುವುದರಿಂದ” ಅಲ್ಲ, “ಸುವಾರ್ತೆಯನ್ನು ಹುಡುಕುವ ಹೃದಯದಿಂದ” ಹುಟ್ಟುತ್ತದೆ ಎಂದು ಅವರು ತಿಳಿದಿದ್ದರು. ಅವರ ಸಲಹೆಗಳು ಉತ್ತಮ ಸಂವಹನವು ಅಲಂಕಾರಿಕ ಪ್ರದರ್ಶನದಿಂದ ಅಲ್ಲ, ವಿಷಯದಿಂದ ಆರಂಭವಾಗುತ್ತದೆ ಮತ್ತು ಆ ವಿಷಯವು ಇತರರನ್ನು ನಿಜವಾಗಿ ಆಲಿಸುವುದರಿಂದ ಬೆಳೆಯುತ್ತದೆ ಎಂಬ ದೃಢ ನಂಬಿಕೆಯಲ್ಲಿ ನೆಲೆಯೂರಿದ್ದವು. ಅವರು ಇದನ್ನು ವೃತ್ತಿಪರ ತತ್ವವಾಗಿ ವಿವರಿಸಿದರೂ, ಅದು ಮೊದಲಿಗೆ ವೈಯಕ್ತಿಕ ಗುಣವಾಗಿತ್ತು. ಅವರು ಜನರನ್ನು ಸಹನೆಯಿಂದ ಮತ್ತು ಗಮನದಿಂದ ಆಲಿಸುತ್ತಿದ್ದರು ಇದರಿಂದ ಅವರ ಸುತ್ತಲಿರುವ ಪ್ರತಿಯೊಬ್ಬರೂ ತಾವು ನಿಜವಾಗಿಯೂ ಆಲಿಸಲ್ಪಟ್ಟಿದ್ದೇವೆ ಎಂಬ ಭಾವನೆ ಹೊಂದಿದ್ದರು.

ಆನ್ ರವರ ಕೊಡುಗೆಗಳು ಧರ್ಮ ಸಭೆಯ ಅತ್ಯಂತ ಮಹತ್ವದ ಕ್ಷಣಗಳಿಗೂ ವಿಸ್ತರಿಸಿದವು. 2019ರ ಫೆಬ್ರವರಿಯಲ್ಲಿ ನಡೆದ ಧರ್ಮ ಸಭೆಯಲ್ಲಿ ಅಪ್ರಾಪ್ತರ ರಕ್ಷಣೆಯ ಕುರಿತ ಸಭೆಯ ಆಯೋಜನಾ ಸಮಿತಿಗೆ ಅವರು ಸಲಹೆಗಾರ್ತಿಯಾಗಿ ಸೇವೆ ಸಲ್ಲಿಸಿದರು. ಬೋಸ್ಟನ್ ಮಹಾಧರ್ಮಪ್ರಾಂತ್ಯದಲ್ಲಿ ಹೊಂದಿದ್ದ ದೀರ್ಘ ಅನುಭವದಿಂದ ಪಡೆದ ಕಠಿಣ ಪರಿಶ್ರಮದ ಜ್ಞಾನ ಮತ್ತು ಸ್ಥಿರವಾದ ವಿವೇಕವನ್ನು ಅವರು ಆ ಮಹತ್ವದ ಪ್ರಯತ್ನಕ್ಕೆ ತಂದರು.

ಆನ್ ರವರ ಕಥೋಲಿಕ ನಂಬಿಕೆ ಅವರ ಜೀವನ ಮತ್ತು ಕಾರ್ಯದ ಕೇಂದ್ರವಾಗಿತ್ತು. ಧರ್ಮ ಕೇಂದ್ರದ ಶಾಲೆಯಲ್ಲಿ ಬೆಳೆದ ವಿದ್ಯಾರ್ಥಿನಿ ಆಗಿದ್ದ ಅವರು, ಯುವತಿಯಲ್ಲಿದ್ದಾಗ ತಮ್ಮ ಧರ್ಮ ಕೇಂದ್ರದ ರೆಕ್ಟರಿಯಲ್ಲಿ ಕೆಲಸ ಮಾಡಿದರು ಮತ್ತು ಒಂದು ದಶಕದ ಕಾಲ ಧಾರ್ಮಿಕ ಶಿಕ್ಷಣವನ್ನು ಬೋಧಿಸಿದರು. ವ್ಯಾಟಿಕನ್‌ನ ನೇಮಕಾತಿ ಅವರಿಗೆ ಕೇವಲ ವೃತ್ತಿಪರ ಸಾಧನೆ ಮಾತ್ರವಲ್ಲ, ದೀರ್ಘಕಾಲ ಸೇವೆ ಸಲ್ಲಿಸಿದ್ದ ಧರ್ಮ ಸಭೆಯ ಕರೆಯೂ ಆಗಿತ್ತು.

ಆನ್ ರವರನ್ನು ಪರಿಚಯವಾಗಿದ್ದ ಎಲ್ಲರೂ ಅವರ  ನಗು, ಅವರ ಉದಾರತೆ ಮತ್ತು ಸುಲಭ ಸ್ನೇಹವನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಸಂಸ್ಥಾತ್ಮಕ ಪರಿಸರಗಳನ್ನು ಮಾನವೀಯಗೊಳಿಸುವ ವಿಶೇಷ ಗುಣವು ಅವರಿಗೆ ಇತ್ತು ಮತ್ತು ಪರಿಣಾಮಕಾರಿ ಸಂವಹನದ ಹೃದಯದಲ್ಲಿ ದಯೆ ಮತ್ತು ಸಾಮಾನ್ಯ ವಿವೇಕವೇ ಇವೆ ಎಂಬುದನ್ನು ತಮ್ಮ ಉದಾಹರಣೆಯಿಂದ ಸಹೋದ್ಯೋಗಿಗಳಿಗೆ ನೆನಪಿಸುತ್ತಿದ್ದರು.

ಆನ್ ರವರ ಜೊತೆ ಕೆಲಸ ಮಾಡುವ ಭಾಗ್ಯ ಹೊಂದಿದ್ದ ಎಲ್ಲರ ಹೃದಯಗಳಲ್ಲಿ ಮತ್ತು ಪ್ರಾರ್ಥನೆಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರು ನಿಷ್ಠೆಯಿಂದ ಸೇವೆ ಸಲ್ಲಿಸಿದ ದೇವರ ಶಾಂತಿಯಲ್ಲಿ ವಿಶ್ರಾಂತಿ ಪಡೆಯಲಿ.

ಕಿಮ್ ಡ್ಯಾನಿಯಲ್ಸ್ ರವರು ಸಂವಹನ ವಿಭಾಗದ ಸದಸ್ಯರಾಗಿದ್ದು, ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಕಥೋಲಿಕ ಸಾಮಾಜಿಕ ಚಿಂತನೆ ಮತ್ತು ಸಾರ್ವಜನಿಕ ಜೀವನ ಉಪಕ್ರಮದ ನಿರ್ದೇಶಕರಾಗಿದ್ದಾರೆ.

 

25 ಮಾರ್ಚ್ 2026, 08:47