ಕಾರ್ಡಿನಲ್ ಜೋಸ್ ಟೊಲೆಂಟಿನೋ ಡಿ ಮೆಂಡೋನ್ಸಾ ರವರು ವಿಶ್ವ ಕಾವ್ಯ ದಿನ ಸಂದರ್ಭದಲ್ಲಿ “ಕಾವ್ಯವು ಶಾಂತಿಯ ಪರದಲ್ಲಿದೆ.”
ವ್ಯಾಟಿಕನ್ ವರದಿ
ಕಾರ್ಡಿನಲ್ ಜೋಸ್ ಟೊಲೆಂಟಿನೋ ಡಿ ಮೆಂಡೋನ್ಸಾ ರವರ ಪ್ರಕಾರ, ಕಾವ್ಯವು ಆಳವಾದ ಆಲಿಸುವಿಕೆಯ ಒಂದು ರೂಪವಾಗಿದೆ. ಅದು ಮೌನದಿಂದ ಹುಟ್ಟುತ್ತದೆ ಮತ್ತು ಕವಿಗಳು ಕೇವಲ ರಚನೆಕಾರಾಗುವ ಬದಲು ವಿಶ್ವದ ದೃಶ್ಯ ಮತ್ತು ಅದೃಶ್ಯ ಅಂಶಗಳನ್ನು ಗ್ರಹಿಸುವ ಅನುವಾದಕರಾಗಬೇಕು. ಈ ರೀತಿಯಾಗಿ ಕಾವ್ಯವು ಮಾನವನೊಳಗಿನ ಸ್ಥಳವನ್ನು ವಿಸ್ತರಿಸಿ, ಶಾಂತಿಯ ಶಿಕ್ಷಣವಾಗುತ್ತದೆ.
ಕಾರ್ಡಿನಲ್ ರವರು ಹೇಳುವಂತೆ, ಕಾವ್ಯವು ಮಾನವ ಹೃದಯದಲ್ಲಿ ಅರ್ಥ, ಬೆಳಕು ಮತ್ತು ಕತ್ತಲೆಯ ಚಲನೆಗಳನ್ನು ಉಂಟುಮಾಡುತ್ತದೆ. ಅದು ಅಸ್ತ್ರವಿಲ್ಲದ ಪದಗಳನ್ನು ನೀಡುತ್ತದೆ ಮತ್ತು ಆಶ್ಚರ್ಯದಿಂದ ಕೆಲಸ ಮಾಡುತ್ತದೆ. ಆದ್ದರಿಂದ ಕಾವ್ಯವು ಶಾಂತಿಯ ಕಲೆಯ ಮುಂಚೂಣಿಯಲ್ಲಿರುವ ಶಕ್ತಿ ಎಂದು ಅವರು ವಿವರಿಸುತ್ತಾರೆ.
ಅವರು ಫ್ರೆಂಚ್ ಕವಿ ಚಾರ್ಲ್ಸ್ ಬೌಡೆಲೇರ್ ಮತ್ತು ಪಾಲ್ ಸೆಲಾನ್ ರವರ ಉದಾಹರಣೆಗಳನ್ನು ಉಲ್ಲೇಖಿಸಿ, ಕಾವ್ಯವು ಸತ್ಯದೊಂದಿಗೆ ಆಳವಾದ ಸಂಬಂಧ ಹೊಂದಿದೆ ಎಂದು ಹೇಳಿದರು. ಕಾವ್ಯವು ಹೃದಯವನ್ನು ತೆರೆದಿಡುತ್ತದೆ ಮತ್ತು ಮಾನವ ಜೀವನದ ಮಹತ್ವದ ಪ್ರಶ್ನೆಗಳ ಮೂಲಕ ಸತ್ಯದತ್ತ ಕರೆದೊಯ್ಯುತ್ತದೆ.
ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿ, ಯಾವುದೇ ಆಲ್ಗೊರಿಥಮ್ ಮಾನವೀಯ ಶಿಕ್ಷಣವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕಾವ್ಯವು ಹೊಸ ದಾರಿಗಳನ್ನು ತೆರೆದಿಡುತ್ತದೆ, ಭವಿಷ್ಯದತ್ತ ಕರೆದೊಯ್ಯುತ್ತದೆ, ಆದರೆ ಆಲ್ಗೊರಿಥಮ್ ಹಳೆಯದನ್ನೇ ಪುನರಾವರ್ತಿಸುತ್ತದೆ. ಆದ್ದರಿಂದ ಕಾವ್ಯವು ಮಾನವನ ಕಲ್ಪನೆ ಮತ್ತು ಭವಿಷ್ಯದ ಆಶೆಯನ್ನು ಜೀವಂತವಾಗಿಡುತ್ತದೆ.
ಜಗದ್ಗುರು ಫ್ರಾನ್ಸಿಸ್ ರವರು ಮತ್ತು ಪೋಚು೯ಗೀಸ್ ಕವಿ ಫರ್ನಾಂಡೊ ಪೆಸ್ಸೋವಾ ರವರ ಉದಾಹರಣೆಗಳನ್ನು ನೀಡುತ್ತಾ, ಕಾವ್ಯವು ಮಾನವ ಜೀವನದ ಆಂತರಿಕ ಅನುಭವಗಳನ್ನು ವ್ಯಕ್ತಪಡಿಸುವುದಲ್ಲದೆ, ಆತ್ಮೀಯ ಶಿಕ್ಷಣಕ್ಕೂ ಸಹಾಯಕವಾಗುತ್ತದೆ ಎಂದು ಅವರು ಹೇಳಿದರು. ಮೌನ, ಧ್ಯಾನ ಮತ್ತು ಜೀವನದ ಪವಿತ್ರತೆಯನ್ನು ಅರಿಯುವ ಮೂಲಕ ಕಾವ್ಯವು ವ್ಯಕ್ತಿಯನ್ನು ರೂಪಿಸುತ್ತದೆ.
ಕೊನೆಯಲ್ಲಿ, ಕಾರ್ಡಿನಲ್ ರವರು ಕಾವ್ಯವು ಎಲ್ಲರಿಗೂ ಸಾಮಾನ್ಯವಾದ ಮೌಲ್ಯಗಳನ್ನು ಕಲಿಸುವ ವಿಶ್ವವ್ಯಾಪಕ ಶಾಲೆಯಂತಿದೆ ಎಂದು ಹೇಳಿದರು. ಅದು ದೇಶಗಳ ಗಡಿ ಮೀರಿಸಿ ಮಾನವರನ್ನು ಒಂದಾಗಿಸುತ್ತದೆ. ಮೌನವಿಲ್ಲದೆ ಕಾವ್ಯ ಸಾಧ್ಯವಿಲ್ಲ ಮೌನವೇ ಆಲಿಸುವಿಕೆ ಮತ್ತು ಸ್ವೀಕಾರದ ಮೂಲ. ಆದ್ದರಿಂದ ಕಾವ್ಯವು ಸತ್ಯವನ್ನು ಬಲವಂತವಾಗಿ ಹೇಳುವುದಿಲ್ಲ, ಆದರೆ ಅದನ್ನು ವಿನಮ್ರತೆಯಿಂದ ಅನುಭವಿಸಲು ಅವಕಾಶ ನೀಡುತ್ತದೆ.