ಹುಡುಕಿ

ಪತ್ರಿಕಾಗೋಷ್ಠಿಯಲ್ಲಿ ಯೋಲಂಡಾ ಫ್ಲೋರ್ಸ್ ಪತ್ರಿಕಾಗೋಷ್ಠಿಯಲ್ಲಿ ಯೋಲಂಡಾ ಫ್ಲೋರ್ಸ್ 

ಸ್ಥಳೀಯ ಜನಾಂಗಗಳು ಮತ್ತು ಧರ್ಮ ಸಭೆ ಗಣಿಗಾರಿಕೆ ಹೂಡಿಕೆ ಹಿಂತೆಗೆದುಕೊಳ್ಳುವ ವೇದಿಕೆಯನ್ನು ಪ್ರಾರಂಭಿಸುತ್ತವೆ.

ಧರ್ಮ ಸಭೆಯ ಪ್ರತಿನಿಧಿಗಳು ಮತ್ತು ಸ್ಥಳೀಯ ಜನಾಂಗಗಳ ಹಕ್ಕುಗಳ ಹೋರಾಟಗಾರರು, ಲ್ಯಾಟಿನ್ ಅಮೆರಿಕಾದ ಸ್ಥಳೀಯ ಸಮುದಾಯಗಳಿಗೆ ಪರಿಣಾಮ ಬೀರುವ ಗಣಿಗಾರಿಕೆ ಚಟುವಟಿಕೆಗಳಿಂದ ಹೂಡಿಕೆಗಳನ್ನು ಹಿಂತೆಗೆದುಕೊಳ್ಳಲು ಜಾಗತಿಕ ವೇದಿಕೆಯನ್ನು ಪ್ರಾರಂಭಿಸಿದರು.

ವ್ಯಾಟಿಕನ್ ವರದಿ

ಇಗ್ಲೇಷಿಯಸ್ ವೈ ಮಿನೇರಿಯಾ ಎಂಬ ಎಕ್ಯುಮೆನಿಕಲ್ ಜಾಲವು ಲ್ಯಾಟಿನ್ ಅಮೆರಿಕಾದ ಸ್ಥಳೀಯ ಜನಾಂಗಗಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಈ ಜಾಲವು ಧರ್ಮ ಸಭೆಯ ಪ್ರತಿನಿಧಿಗಳೊಂದಿಗೆ ಸೇರಿ, ಸ್ಥಳೀಯ ಸಮುದಾಯಗಳಿಗೆ ಹಾನಿ ಉಂಟುಮಾಡುವ ಗಣಿಗಾರಿಕೆ ಮತ್ತು ಹೊರತೆಗೆಯುವ ಚಟುವಟಿಕೆಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಜಾಗತಿಕ ವೇದಿಕೆಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಪ್ರಾರಂಭಿಸಿತು.

ಪೆರುವಿನ ಆಯ್ಮಾರಾ ನಾಯಕಿ ಯೋಲಂಡಾ ಫ್ಲೋರ್ಸ್ ರವರು ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದರು. ವಿಶೇಷವಾಗಿ ಭಾರೀ ಲೋಹಗಳಿಂದ ಉಂಟಾಗುವ ಮಾಲಿನ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. ಜೊತೆಗೆ, ಶಿಕ್ಷಣ, ಆತ್ಮೀಯ ಮಾರ್ಗದರ್ಶನ ಮತ್ತು ಸ್ಥಳೀಯ ಜನಾಂಗಗಳ ಹಕ್ಕುಗಳಿಗೆ ಹೆಚ್ಚಿನ ಗುರುತಿನ ಅಗತ್ಯವಿದೆ ಎಂದು ಹೇಳಿದರು.

ಕಾರ್ಡಿನಲ್ ಫ್ಯಾಬಿಯೊ ಬ್ಯಾಗಿಯೊರವರು ಗಣಿಗಾರಿಕೆ ಚಟುವಟಿಕೆಗಳು ಹಲವಾರು ಬಾರಿ ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚನೆ ಇಲ್ಲದೆ ನಡೆಯುತ್ತಿವೆ ಎಂದು ಹೇಳಿದರು. ಹೂಡಿಕೆ ಹಿಂತೆಗೆದುಕೊಳ್ಳುವ ಈ ವೇದಿಕೆ ಕೇವಲ ಆರ್ಥಿಕ ಕ್ರಮವಲ್ಲ, ಅದು ಮಾನವ ಗೌರವವನ್ನು ರಕ್ಷಿಸುವ ಮತ್ತು ಭೂಮಿಯನ್ನು ಕಾಪಾಡುವ ನಂಬಿಕೆಯ ಅಭಿವ್ಯಕ್ತಿ ಎಂದು ಅವರು ಹೇಳಿದರು. ನಾವು ಅನ್ಯಾಯದ ಮುಂದೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಗುಯಾಟೆಮಾಲಾದ ಬಿಷಪ್ ಅಲ್ವಾರೋ ರಾಮಾಝಿನಿರವರು ಸ್ಥಳೀಯ ಜನಾಂಗಗಳ ಭೂಮಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಡಿಮೆ ಬೆಲೆಗೆ ಭೂಮಿ ಪಡೆದು, ಕಂಪನಿಗಳು ಲಾಭ ಪಡೆಯುತ್ತಿದ್ದರೂ, ಸ್ಥಳೀಯ ಜನರಿಗೆ ನ್ಯಾಯಯುತ ಪ್ರಯೋಜನಗಳು ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಬ್ರೆಜಿಲ್‌ನ ಬಿಷಪ್ ವಿಸೆಂಟೆ ಫೆರೀರಾರವರು ಗಣಿಗಾರಿಕೆ ವಿಸ್ತರಣೆ ಜಾಗತಿಕ ಆರ್ಥಿಕ ಬೇಡಿಕೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು. “ಹಸಿರು ಬಂಡವಾಳಶಾಹಿ” ಎಂಬ ತಪ್ಪು ಪರಿಹಾರಗಳ ಬಗ್ಗೆ ಅವರು ಎಚ್ಚರಿಸಿ, ಸ್ಥಳೀಯ ಪ್ರದೇಶಗಳು ಹೊಸ ರೀತಿಯ ಆರ್ಥಿಕ ಮತ್ತು ಸೈನಿಕ ಒತ್ತಡಗಳಿಗೆ ಒಳಗಾಗುತ್ತಿವೆ ಎಂದು ಹೇಳಿದರು.

ಕೊನೆಯಲ್ಲಿ, ವಂ.ಸ್ವಾಮಿ ಡೇರಿಯೊ ಬಾಸ್ಸಿರವರು ಹೂಡಿಕೆ ಹಿಂತೆಗೆದುಕೊಳ್ಳುವಿಕೆಯನ್ನು ಮಾನವ ಹಕ್ಕುಗಳ ಉಲ್ಲಂಘನೆಗೆ ವಿರುದ್ಧವಾದ ನೈತಿಕ ಮತ್ತು ಪರಿಣಾಮಕಾರಿ ಮಾರ್ಗವೆಂದು ವಿವರಿಸಿದರು. ಈ ವೇದಿಕೆ ಮಾಹಿತಿ ವಿನಿಮಯ, ಸಂಶೋಧನೆ ಮತ್ತು ಸಹಕಾರಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಪರಿಸರ ಮತ್ತು ಸಮಾಜದ ರಕ್ಷಣೆಗೆ ನೆರವಾಗಲಿದೆ ಎಂದು ಹೇಳಿದರು.

20 ಮಾರ್ಚ್ 2026, 19:55