ಹುಡುಕಿ

ವೈಮಾನಿಕ ದಾಳಿಯಿಂದ ಟೆಹ್ರಾನ್ ಮೇಲೆ ಹೊಗೆ ಏರುತ್ತಿದೆ ವೈಮಾನಿಕ ದಾಳಿಯಿಂದ ಟೆಹ್ರಾನ್ ಮೇಲೆ ಹೊಗೆ ಏರುತ್ತಿದೆ  (AFP or licensors)

ಕಾರ್ಡಿನಲ್ ಪಾರೊಲಿನ್: ಮುನ್ನೆಚ್ಚರಿಕಾ ಯುದ್ಧಗಳು ವಿಶ್ವವನ್ನು ಅಗ್ನಿಗಾಹುತಿಯಾಗುವ ಅಪಾಯಕ್ಕೆ ತಳ್ಳುತ್ತವೆ

ಕಾರ್ಡಿನಲ್ ಕಾರ್ಯದರ್ಶಿ ಪಿಯೆತ್ರೋ ಪರೋಲಿನ್ ರವರು ಮಧ್ಯಪ್ರಾಚ್ಯದ ಬೆಳವಣಿಗೆಗಳ ಕುರಿತು ವ್ಯಾಟಿಕನ್ ನ್ಯೂಸ್ ಜೊತೆ ಮಾತನಾಡಿದರು. ಶಕ್ತಿಯ ಪ್ರಾಮುಖ್ಯತೆಯಿಂದ ಗುರುತಿಸಲ್ಪಡುವ ಬಹುಧ್ರುವೀಯತೆಯ ಅಪಾಯಕರ ಏರಿಕೆಯನ್ನು ಅವರು ಎಚ್ಚರಿಸಿದರು.

ವ್ಯಾಟಿಕನ್ ವರದಿ

ಅಂತರರಾಷ್ಟ್ರೀಯ ಕಾನೂನಿನ ಈ ಕುಸಿತವು ನಿಜಕ್ಕೂ ಆತಂಕಕಾರಿ ನ್ಯಾಯಕ್ಕೆ ಬದಲಾಗಿ ಬಲ ಪ್ರಾಬಲ್ಯ ಸಾಧಿಸಿದೆ ಕಾನೂನಿನ ಬಲವನ್ನು ಬಲದ ಕಾನೂನು ಬದಲಿಸಿದೆ.

ವ್ಯಾಟಿಕನ್ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ರವರು ಬುಧವಾರ ವ್ಯಾಟಿಕನ್ ನ್ಯೂಸ್ ಜೊತೆ ಮಾತನಾಡುತ್ತಾ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಆಳವಾದ ಚಿಂತೆಯನ್ನು ವ್ಯಕ್ತಪಡಿಸಿದರು. ಶಕ್ತಿಯ ಪ್ರಾಮುಖ್ಯತೆ ಮತ್ತು ಸ್ವಯಂ-ಕೇಂದ್ರೀಕೃತ ಮನೋಭಾವದಿಂದ ಗುರುತಿಸಲ್ಪಡುವ ಬಹುಧ್ರುವೀಯ ವ್ಯವಸ್ಥೆ ಅಪಾಯಕರವಾಗಿ ಬಲ ಪಡೆಯುತ್ತಿದೆ ಎಂದು ಅವರು ಎಚ್ಚರಿಸಿದರು.

ಮಧ್ಯಪ್ರಾಚ್ಯದ ಜನರು ವಿಶೇಷವಾಗಿ ಈಗಾಗಲೇ ದುರ್ಬಲವಾಗಿರುವ ಕ್ರೈಸ್ತ ಸಮುದಾಯಗಳು—ಮತ್ತೊಮ್ಮೆ ಯುದ್ಧದ ಭೀಕರತೆಗೆ ತಳ್ಳಲ್ಪಟ್ಟಿರುವುದನ್ನು ಅವರು ದುಃಖದಿಂದ ಉಲ್ಲೇಖಿಸಿದರು. ಯುದ್ಧವು ಮಾನವ ಜೀವಗಳನ್ನು ನಾಶಮಾಡಿ, ದೇಶಗಳನ್ನು ಅನಿಶ್ಚಿತ ಹಿಂಸಾಚಾರದ ಚಕ್ರದಲ್ಲಿ ತಳ್ಳುತ್ತದೆ ಎಂದು ಹೇಳಿದರು. ಶಾಂತಿ ಮತ್ತು ಭದ್ರತೆ ರಾಜತಾಂತ್ರಿಕ ಮಾರ್ಗಗಳಿಂದ, ವಿಶೇಷವಾಗಿ ಬಹುಪಕ್ಷೀಯ ವೇದಿಕೆಗಳ ಮೂಲಕವೇ ಬೆಳೆಸಬೇಕು ಎಂದು ಅವರು ಒತ್ತಿಹೇಳಿದರು.

ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಯ ಕುರಿತು ಮಾತನಾಡುತ್ತಾ, ಯುದ್ಧಕ್ಕೆ ಮೊರೆಹೋಗುವುದು ಅಂತಿಮ ಮತ್ತು ಗಂಭೀರ ಆಯ್ಕೆಯಾಗಿರಬೇಕು ಎಂದು ಅವರು ಹೇಳಿದರು. ಮುನ್ನೆಚ್ಚರಿಕಾ ಯುದ್ಧ ಎಂಬ ತತ್ವವನ್ನು ದೇಶಗಳು ತಮ್ಮ ಸ್ವಂತ ಮಾನದಂಡದ ಮೇಲೆ ಅನುಸರಿಸಲು ಆರಂಭಿಸಿದರೆ, ವಿಶ್ವವೇ ಅಗ್ನಿಗಾಹುತಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಅಗತ್ಯತೆ, ಪ್ರಮಾಣಬದ್ಧತೆ ಮತ್ತು ಬಹುಪಕ್ಷೀಯ ನಿಯಂತ್ರಣದ ಚೌಕಟ್ಟಿನಲ್ಲಿ ಮಾತ್ರ ಬಲಪ್ರಯೋಗ ಪರಿಗಣಿಸಬೇಕು ಎಂದು ಅವರು ನೆನಪಿಸಿದರು.

ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳ ಕುರಿತು ಅವರು, ಜನರ ಆಶಯಗಳನ್ನು ಕಾನೂನುಬದ್ಧ ವ್ಯವಸ್ಥೆಯೊಳಗೆ ಗೌರವಿಸಬೇಕು ಎಂದರು. ಕ್ಷಿಪಣಿಗಳು ಮತ್ತು ಬಾಂಬ್‌ಗಳು ಪರಿಹಾರವಲ್ಲ ಸಂವಾದ ಮತ್ತು ರಾಜಕೀಯ ಮಾತುಕತೆಗಳೇ ಶಾಶ್ವತ ಪರಿಹಾರ ತರುತ್ತವೆ ಎಂದು ಹೇಳಿದರು. ಯುದ್ಧವು ಯಾವಾಗಲೂ ನಿರಪರಾಧಿಗಳ ಜೀವಹಾನಿಗೆ ಕಾರಣವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಅಂತರರಾಷ್ಟ್ರೀಯ ಕಾನೂನು ಮತ್ತು ರಾಜತಾಂತ್ರಿಕ ವ್ಯವಸ್ಥೆಯ ಕುಸಿತದ ಬಗ್ಗೆ ಮಾತನಾಡುತ್ತಾ, ಸಾಮೂಹಿಕ ಹಿತವೇ ಎಲ್ಲರ ಹಿತ ಎಂಬ ಅರಿವು ಕಳೆದುಹೋಗಿರುವುದೇ ಮೂಲ ಕಾರಣ ಎಂದು ಹೇಳಿದರು. ಕೆಲವು ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಸಮುದಾಯ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ, ಇತರ ಸಂದರ್ಭಗಳಲ್ಲಿ ಮೌನವಾಗುತ್ತದೆ ಇದು ನ್ಯಾಯದ ಸಮಾನತೆಯ ತತ್ವಕ್ಕೆ ಧಕ್ಕೆ ತರುತ್ತದೆ ಎಂದು ಅವರು ಸೂಚಿಸಿದರು. ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಮರಣಗಳಿಲ್ಲ ಪ್ರತಿಯೊಬ್ಬ ಮಾನವ ಜೀವಕ್ಕೂ ಸಮಾನ ಮೌಲ್ಯವಿದೆ ಎಂದು ಅವರು ಒತ್ತಿಹೇಳಿದರು.

ಮಾನವ ಗೌರವ ಮತ್ತು ಜೀವದ ಪವಿತ್ರತೆಯನ್ನು ಯಾವ ಪರಿಸ್ಥಿತಿಯಲ್ಲೂ ಕಾಪಾಡಬೇಕು ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಪುನರುಚ್ಚರಿಸುತ್ತದೆ ಎಂದು ಹೇಳಿದರು. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಪೂಜಾಸ್ಥಳಗಳನ್ನು ಯುದ್ಧದ ಗುರಿಗಳನ್ನಾಗಿಸುವುದನ್ನು ಅವರು ಖಂಡಿಸಿದರು.

ಕೊನೆಯಲ್ಲಿ, ಜಗದ್ಗುರು XIV ನೇ ಲಿಯೋರವರು ನೀಡಿದ ಜವಾಬ್ದಾರಿಯ ಕರೆಗೆ ಸ್ಪಂದನೆ ದೊರೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು. ಶಸ್ತ್ರಗಳ ಘೋಷ ಶೀಘ್ರವೇ ನಿಲ್ಲಲಿ, ಮಾತುಕತೆಗಳಿಗೆ ಅವಕಾಶ ಸಿಗಲಿ ಎಂದು ಅವರು ಪ್ರಾರ್ಥಿಸಿದರು. ಕ್ರೈಸ್ತರು ಆಶಿಸುತ್ತಾರೆ, ಏಕೆಂದರೆ ಅವರು ಮಾನವರೂಪಿಯಾದ ದೇವರಲ್ಲಿ ನಂಬಿಕೆ ಇಟ್ಟಿದ್ದಾರೆ—ಹಿಂಸಾಚಾರಕ್ಕಿಂತ ಶಾಂತಿಯ ಮಾರ್ಗವೇ ಶಾಶ್ವತ ಪರಿಹಾರ ಎಂದು ವಿಶ್ವಾಸಪಡುತ್ತಾರೆ. ನಮ್ಮ ಜನರು ಶಾಂತಿಯನ್ನು ಬೇಡುತ್ತಿದ್ದಾರೆ ಈ ಕೂಗು ರಾಷ್ಟ್ರ ನಾಯಕರ ಮನಸ್ಸನ್ನು ಕದಲಿಸಲಿ ಎಂದು ಅವರು ಕೋರಿದರು.

04 ಮಾರ್ಚ್ 2026, 14:14