ಬೆಲ್‌ಗ್ರೇಡ್‌ನಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನ ಬೆಲ್‌ಗ್ರೇಡ್‌ನಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನ 

ಜಗದ್ಗುರಗಳ ಅಧಿಕಾರ ಸ್ಥಳ: ಡೌನ್ ಸಿಂಡ್ರೋಮ್ ಹೊಂದಿರುವ ಜನರೂ ಅದೇ ಪವಿತ್ರ ಮೌಲ್ಯವನ್ನು ಹೊಂದಿದ್ದಾರೆ.

ಆರ್ಚ್‌ಬಿಷಪ್ ಎಟ್ಟೋರ್ ಬಾಲೆಸ್ಟ್ರೆರೊ, ಜಿನೀವಾದಲ್ಲಿ ಇರುವ ಜಗದ್ಗುರುಗಳ ಅಧಿಕಾರ ಸ್ಥಳದ ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಶಾಶ್ವತ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಡೌನ್ ಸಿಂಡ್ರೋಮ್ ಹೊಂದಿರುವ ವ್ಯಕ್ತಿಗಳಿಗೂ ಇತರ ಯಾವುದೇ ವ್ಯಕ್ತಿಗಳಂತೆ ಸಮಾನ ಮಾನವ ಗೌರವ ಮತ್ತು ಪವಿತ್ರ ಮೌಲ್ಯವಿದೆ ಎಂದು ಒತ್ತಿ ಹೇಳುತ್ತಾರೆ.ಅವರು ಮತ್ತಷ್ಟು ಸ್ಪಷ್ಟಪಡಿಸುವುದೇನಂದರೆ, “ಗರ್ಭಪೂರ್ವ ಪರೀಕ್ಷೆಗಳೊಂದಿಗೆ ಸಂಬಂಧಿಸಿದ ಭೇದಭಾವಪೂರ್ಣ ಹಾಗೂ ಯೂಜೆನಿಕ್ (ವಂಶಶುದ್ಧೀಕರಣ) ಕ್ರಮಗಳು, ವಿಶೇಷವಾಗಿ ಡೌನ್ ಸಿಂಡ್ರೋಮ್ ಹೊಂದಿರುವ ಶಿಶುಗಳನ್ನು ಗುರಿಯಾಗಿಸಿಕೊಂಡು ಆಯ್ಕೆಯ ಗರ್ಭಪಾತ ನಡೆಸುವಂತಹ ಕಾರ

ವ್ಯಾಟಿಕನ್ ವರದಿ

ವಿಶ್ವ ಡೌನ್ ಸಿಂಡ್ರೋಮ್ ದಿನ 2026 ಅಂಗವಾಗಿ, ಜೆರೋಮ್ ಲೆಜ್ಯೂನ್ ಫೌಂಡೇಶನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಆರ್ಚ್‌ಬಿಷಪ್ ಎಟ್ಟೋರ್ ಬಾಲೆಸ್ಟ್ರೆರೊ ಮಹತ್ವದ ಸಂದೇಶವನ್ನು ನೀಡಿದರು. ಅವರು, ಡೌನ್ ಸಿಂಡ್ರೋಮ್ ಹೊಂದಿರುವವರು ಕೇವಲ ಒಂದು ರೋಗನಿರ್ಣಯ ಅಥವಾ ಪರಿಸ್ಥಿತಿ ಅಲ್ಲ ಅವರು ಇತರರಂತೆ ಪೂರ್ಣ ಮಾನವರಾಗಿದ್ದು, ಸೃಷ್ಟಿಕರ್ತನಿಂದ ಗರ್ಭಧಾರಣೆಯ ಮೊದಲ ಕ್ಷಣದಿಂದಲೇ ದೊರೆತ ಸಮಾನ ಗೌರವ ಮತ್ತು ಪವಿತ್ರ ಮೌಲ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಈ ವರ್ಷದ ದಿನದ ವಿಷಯ “ಏಕಾಂತದಿಂದ ಒಳಗೊಳ್ಳುವಿಕೆಯತ್ತ ಮಾನವ ಜನನ ವೈವಿಧ್ಯತೆಯನ್ನು ಮೌಲ್ಯೀಕರಿಸಿ, ಡೌನ್ ಸಿಂಡ್ರೋಮ್ ಹೊಂದಿರುವವರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಸಾಧಿಸುವುದು ಎಂಬುದಾಗಿದೆ. ಈ ಹಿನ್ನೆಲೆದಲ್ಲಿ, ಅವರು ಡೌನ್ ಸಿಂಡ್ರೋಮ್ ಹೊಂದಿರುವವರು ಸಮುದಾಯದ ಸಂಪೂರ್ಣ ಸದಸ್ಯರಾಗಿದ್ದು, ಇತರರಂತೆ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದರು.

ಅವರ ಪ್ರಕಾರ, ಒಳಗೊಳ್ಳುವಿಕೆ ಎಂದರೆ ಕೇವಲ ಸೇವೆಗಳು ಅಥವಾ ಸೌಲಭ್ಯಗಳನ್ನು ನೀಡುವುದು ಮಾತ್ರವಲ್ಲ, ಆದರೆ ಡೌನ್ ಸಿಂಡ್ರೋಮ್ ಹೊಂದಿರುವವರನ್ನು ನಮ್ಮ ಸಮುದಾಯದ ಸಂಪೂರ್ಣ ಮತ್ತು ಸಮಾನ ಸದಸ್ಯರಾಗಿ ಗುರುತಿಸುವುದಾಗಿದೆ. ಇದು ಅವರ ಮಾನವೀಯ ಗೌರವವನ್ನು ಸತ್ಯವಾಗಿ ಸ್ವೀಕರಿಸುವುದನ್ನು ಸೂಚಿಸುತ್ತದೆ.

ಅವರು ಮತ್ತಷ್ಟು ಸ್ಪಷ್ಟಪಡಿಸಿದಂತೆ, ಗರ್ಭಪೂರ್ವ ಪರೀಕ್ಷೆಗಳೊಂದಿಗೆ ಸಂಬಂಧಿಸಿದ ಭೇದಭಾವಪೂರ್ಣ ಮತ್ತು ಯೂಜೆನಿಕ್ ಕ್ರಮಗಳು ವಿಶೇಷವಾಗಿ ಡೌನ್ ಸಿಂಡ್ರೋಮ್ ಹೊಂದಿರುವ ಶಿಶುಗಳನ್ನು ಗುರಿಯಾಗಿಸಿಕೊಂಡು ಆಯ್ಕೆಮಾಡಿದ ಗರ್ಭಪಾತ—ದೃಢವಾಗಿ ತಿರಸ್ಕರಿಸಬೇಕು. ಈ ರೀತಿಯ ಕ್ರಮಗಳು ಮಾನವ ಗೌರವಕ್ಕೆ ವಿರುದ್ಧವಾಗಿವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ, ಡೌನ್ ಸಿಂಡ್ರೋಮ್ ಹೊಂದಿರುವವರ ಹಾಗೂ ಅವರ ಕುಟುಂಬಗಳ ಆರೈಕೆಗೆ ಸಮರ್ಪಿತವಾಗಿ ಸೇವೆ ಸಲ್ಲಿಸುತ್ತಿರುವ ಜಗತ್ತಿನ ಅನೇಕ ತಜ್ಞರು ಮತ್ತು ಸಂಸ್ಥೆಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಅವರು ಪ್ರೀತಿಯ ಮಹತ್ವವನ್ನು ಒತ್ತಿ ಹೇಳುತ್ತಾ, ಸೇವಾ ವ್ಯವಸ್ಥೆ ಸಂಪೂರ್ಣವಾಗಿದ್ದರೂ ಅದು ಹೃದಯವಿಲ್ಲದಿದ್ದರೆ ಶೀತ ಮತ್ತು ನಿರ್ಜೀವವಾಗುತ್ತದೆ ಎಂದು ಎಚ್ಚರಿಸಿದರು.

ಕೊನೆಗೆ, ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿ, ಮಾನವ ಜೀವನದ ಗುಣಮಟ್ಟವು ಸಾಧನೆಗಳ ಮೇಲೆ ಅಲ್ಲ, ಪ್ರೀತಿಯ ಮೇಲೆ ಅವಲಂಬಿತವಾಗಿದೆ ಎಂದು ನೆನಪಿಸಿದರು. ಪ್ರತಿಯೊಬ್ಬ ವ್ಯಕ್ತಿಯ ಮೌಲ್ಯವು ಅವರ ಉಪಯೋಗ ಅಥವಾ ಸಾಧನೆಗಳಿಂದ ಅಳೆಯಬಾರದು ಅವರು ಮಾನವರಾಗಿರುವುದರಿಂದಲೇ ಅದಕ್ಕೆ ಅರ್ಥವಿದೆ. ಆದ್ದರಿಂದ, ಡೌನ್ ಸಿಂಡ್ರೋಮ್ ಹೊಂದಿರುವ ಪ್ರತಿಯೊಬ್ಬರನ್ನೂ ವಿಶಿಷ್ಟ ಮತ್ತು ಅಪ್ರತಿಮ ವ್ಯಕ್ತಿಗಳಾಗಿ ಗುರುತಿಸಿ, ಸಮಾನ ಗೌರವ ಮತ್ತು ಮಾನದಿಂದ ಸ್ವೀಕರಿಸುವ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕು ಎಂದು ಅವರು ಸಮಾಪಿಸಿದರು.

20 ಮಾರ್ಚ್ 2026, 15:10