ಹುಡುಕಿ

ಜಗದ್ಗುರುಗಳ ಮನೆಯ ಧರ್ಮೋಪದೇಶಕ ವೀಕ್.ಸ್ವಾಮಿ ಪಸೋಲಿನಿ ರವರು ಮೂರನೇ ತಪಸ್ಸು ಕಾಲದ ಧ್ಯಾನವನ್ನು ನೀಡುತ್ತಾರೆ. ಜಗದ್ಗುರುಗಳ ಮನೆಯ ಧರ್ಮೋಪದೇಶಕ ವೀಕ್.ಸ್ವಾಮಿ ಪಸೋಲಿನಿ ರವರು ಮೂರನೇ ತಪಸ್ಸು ಕಾಲದ ಧ್ಯಾನವನ್ನು ನೀಡುತ್ತಾರೆ.  (ANSA)

ವಂ. ಸ್ವಾಮಿ ಪಾಸೋಲಿನಿ ವ್ಯಾಟಿಕನ್‌ನಲ್ಲಿ ಮೂರನೇ ತಪಸ್ಸು ಕಾಲದ ಧ್ಯಾನವನ್ನು ನೀಡಿದರು

ಜಗದ್ಗುರುಗಳ ಮನೆಯ ಪ್ರಚಾರಕರಾದ ವಂ.ಸ್ವಾಮಿ ರಾಬರ್ಟೊ ಪಸೋಲಿನಿರವರು, “ಗುರಿ: ಪ್ರತಿಯೊಂದು ಸೃಷ್ಟಿಗೂ ಸುವಾರ್ತೆಯನ್ನು ಪ್ರಕಟಿಸುವುದು” ಎಂಬ ವಿಷಯದ ಮೇಲೆ, ಜಗದ್ಗುರು ಲಿಯೋರವರ ಸಾನ್ನಿಧ್ಯದಲ್ಲಿ ರೋಮನ್ ಪ್ರಾಂತ್ಯಕ್ಕೆ ತಮ್ಮ ಮೂರನೇ ತಪಸ್ಸು ಕಾಲದ ಧ್ಯಾನವನ್ನು ನೀಡಿದರು.

ವ್ಯಾಟಿಕನ್ ವರದಿ

“ಸುವಾರ್ತೆ ಗೆಲ್ಲಲು ಪ್ರಕಟಿಸಲಾಗುವುದಿಲ್ಲ, ಭೇಟಿಯಾಗಲು ಪ್ರಕಟಿಸಲಾಗುತ್ತದೆ.”

ಜಗದ್ಗುರುಗಳ ಮನೆಯ ಪ್ರಚಾರಕರಾದ ವಂ.ಸ್ವಾಮಿ ರಾಬರ್ಟೊ ಪಸೋಲಿನಿರವರು  ವ್ಯಾಟಿಕನ್‌ನ  VI ನೇ ಪೌಲ್  ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ತಮ್ಮ ಮೂರನೇ ತಪಸ್ಸು ಧ್ಯಾನದಲ್ಲಿ ಈ ಮಾತನ್ನು ಹೇಳಿದರು. “ಗುರಿ: ಪ್ರತಿಯೊಂದು ಸೃಷ್ಟಿಗೂ ಸುವಾರ್ತೆಯನ್ನು ಪ್ರಕಟಿಸುವುದು” ಎಂಬ ವಿಷಯದ ಮೇಲೆ, ಜಗದ್ಗುರುXUVನೇ  ಲಿಯೋರವರ ಸಾನ್ನಿಧ್ಯದಲ್ಲಿ ರೋಮನ್ ಪ್ರಾಂತ್ಯಕ್ಕೆ ಮಾತನಾಡುತ್ತಾ, ಯೇಸುವಿನೊಂದಿಗೆ ಭೇಟಿಗೆ ನೆಲವನ್ನು ಸಿದ್ಧಗೊಳಿಸುವುದು ಮತ್ತು ಅದು ನಮ್ಮ ಪರಸ್ಪರ ಸಂಬಂಧಗಳಿಗೆ ಹೇಗೆ ಸಂಬಂಧಿಸುತ್ತದೆ ಎಂಬುದನ್ನು ವಿವರಿಸಿದರು.

ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಮಾದರಿ

“ನಮ್ಮ ಅಧಿಕಾರವು ಹುದ್ದೆಯಿಂದ ಅಲ್ಲ, ಪ್ರೀತಿಯ ಈ ಚಲನೆಯಲ್ಲಿ ಪ್ರವೇಶಿಸುವ ಜೀವನದಿಂದ ಬರುತ್ತದೆ,” ಎಂದು ವಂ. ಸ್ವಾಮಿ ಪಾಸೋಲಿನಿರವರು ಹೇಳಿದರು. ಈ ಜೀವನದಲ್ಲಿ ನಾವು ವಿನಯಶೀಲರಾಗಿರಬೇಕು, ಇತರರ ಅಗತ್ಯಗಳಿಗೆ ಸ್ಪಂದಿಸಬೇಕು, ಸಂವಾದಕ್ಕೆ ಸಿದ್ಧರಾಗಿರಬೇಕು ಮತ್ತು ಅವರ ಕೊಡುಗೆಗಳನ್ನು ಸ್ವೀಕರಿಸಬೇಕು. ಅವರು ಅಸಿಸಿಯ ಸಂತ ಫ್ರಾನ್ಸಿಸ್ ರವರನ್ನು ಉದಾಹರಣೆಯಾಗಿ ಉಲ್ಲೇಖಿಸಿ, “ಫ್ರಾನ್ಸಿಸ್ ತಮ್ಮ ಸಹೋದರರನ್ನು ‘ಕಿರಿಯರು’ ಎಂದು ಕರೆಯುವ ಮೂಲಕ, ಅವರಿಗೆ ಹುದ್ದೆಯನ್ನು ನೀಡದೆ, ಜಗತ್ತಿನಲ್ಲಿ ಬದುಕುವ ಒಂದು ವಿಧಾನವನ್ನು ನೀಡಿದರು. ಈ ಸಣ್ಣತನ ಮತ್ತು ಜೀವಂತ ವಿನಯವೇ ಸುವಾರ್ತೆಯ ಘೋಷಣೆಯನ್ನು ಫಲಪ್ರದಗೊಳಿಸುತ್ತದೆ” ಎಂದು ಹೇಳಿದರು.

ಜೀವನದಲ್ಲಿ ರೂಪುಗೊಳ್ಳುವ ಸುವಾರ್ತೆ

ಗುರಿ ಎನ್ನುವುದು ಪರಿವರ್ತನೆ ಮತ್ತು ಸಹೋದರತ್ವದ ಫಲವಾಗಿದ್ದು, ಸುವಾರ್ತೆಯ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಹುಟ್ಟುತ್ತದೆ, ಆದರೆ ಇದರ ಮೂಲ ದೇವರ ವಾಕ್ಯದಲ್ಲಿದೆ. ತಮ್ಮ ಜೀವನದಲ್ಲಿ ಬೇರುಬಿಟ್ಟಿಲ್ಲದ ವಿಷಯದ ಬಗ್ಗೆ ನಿಜವಾಗಿ ಮಾತನಾಡಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು. ನಾವು ಕಂಡು ಕೇಳಿದ್ದನ್ನು ಪ್ರಾರ್ಥನೆಯಲ್ಲಿ ಬೆಳೆಯಲು ಸಹನೆ ಅಗತ್ಯವಿದೆ ಮತ್ತು ದೇವರ ವಿಷಯಗಳನ್ನು ಪ್ರಶಂಸೆ ಅಥವಾ ಮಾನ್ಯತೆ ಪಡೆಯಲು ಬಳಸುವ ಪ್ರಲೋಭನದಿಂದ ದೂರವಿರಬೇಕು ಎಂದು ಎಚ್ಚರಿಸಿದರು.

ದೇವರ ಸಾನ್ನಿಧ್ಯವು ಪರಿವರ್ತಿಸುತ್ತದೆ

ಕ್ರಿಸ್ತನು ಕೇವಲ ಮಾಹಿತಿ ಅಲ್ಲ, ಮಾನವನೊಳಗೆ ವಾಸಿಸುವ ರಹಸ್ಯ ಎಂದು ವಂ. ಸ್ವಾಮಿ ಪಾಸೋಲಿನಿರವರು ಹೇಳಿದರು. ಸುವಾರ್ತೆ ಒಂದು ಸುದ್ದಿಯಂತೆ ಅಲ್ಲ, ಬದಲಾಗಿ ಜೀವನವಾಗಿ ನಿಧಾನವಾಗಿ ರೂಪುಗೊಳ್ಳುತ್ತದೆ. ಇದನ್ನು ವಿವರಿಸಲು ಅವರು ತಾಯಿಯ ಅನುಭವವನ್ನು ಉದಾಹರಣೆಯಾಗಿ ನೀಡಿದರು ತಾಯಿ ಮೊದಲು ಮಗುವನ್ನು ತನ್ನೊಳಗೆ ಧರಿಸಿ, ಅದು ಬೆಳೆಯಲು ಸಮಯ ನೀಡುತ್ತದೆ, ನಂತರ ಜನ್ಮ ನೀಡುತ್ತದೆ. ಹೀಗೆಯೇ ನಂಬಿಕೆಯಲ್ಲಿ ಕೂಡ ಮೊದಲು ಕ್ರಿಸ್ತನು ನಮ್ಮೊಳಗೆ ಮೌನದಲ್ಲಿ, ಪ್ರಾರ್ಥನೆಯಲ್ಲಿ, ದಿನನಿತ್ಯದ ಆಯ್ಕೆಗಳಲ್ಲಿ ಬೆಳೆಯುತ್ತಾನೆ ನಂತರವೇ ಅದು ಹೊರಗೆ ಕಾಣಿಸುತ್ತದೆ ಎಂದು ಹೇಳಿದರು.

ಖಾಲಿ ಮಾತುಗಳು ಯಾರನ್ನೂ ನಂಬಿಸುವುದಿಲ್ಲ

ಇತರರಲ್ಲಿ ದೇವರ ಸಾನ್ನಿಧ್ಯವನ್ನು ಗುರುತಿಸಿ ಗೌರವಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಇತರರನ್ನು ತಲುಪಲು ಮತ್ತು ಸಂವಾದ ನಡೆಸಲು, ಮಾತುಗಳು ಹೃದಯದಿಂದ ಬರಬೇಕು. ಮಾತುಗಳು ನಿರ್ಜೀವ ಮತ್ತು ವೈಯಕ್ತಿಕತೆಯಿಲ್ಲದಾಗ, ಅವು ಯಾರನ್ನೂ ನಂಬಿಸುವುದಿಲ್ಲ ಅವುಗಳನ್ನು ಹೇಳುವವರನ್ನೂ ಸಹ,ಎಂದು ಅವರು ತಿಳಿಸಿದರು.

ದೇವರ ರಹಸ್ಯ

ಇತರರನ್ನು ಭೇಟಿಯಾಗುವುದು ಕೇವಲ ಕೊಡುವುದಲ್ಲ, ಸ್ವೀಕರಿಸುವುದೂ ಆಗಿದೆ ಇದು ಗೌರವ ಮತ್ತು ಸಂವಾದದ ಸ್ವತಂತ್ರ ಆಯ್ಕೆಯಾಗಿದೆ. ದೇವರು ತನ್ನನ್ನು ಮಾನವರಿಗೆ ಬಲವಂತವಾಗಿ ಹೇರಲಿಲ್ಲ ಅವರಿಗೆ ಸ್ಥಳ ಕೊಟ್ಟನು. ತನ್ನ ಮಹತ್ವವನ್ನು ತನ್ನಲ್ಲೇ ಉಳಿಸಿಕೊಳ್ಳದೆ, ಇತರರು ಅದನ್ನು ಸ್ವೀಕರಿಸಿ ಬದುಕಲು ನೀಡಿದರು,ಎಂದು ವಂ. ಸ್ವಾಮಿ ಪಾಸೋಲಿನಿರವರು ತಮ್ಮ ಮಾತುಗಳನ್ನು ಸಮಾಪಿಸಿದರು.

20 ಮಾರ್ಚ್ 2026, 14:49