ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲವು ಹೊಸ ಸಾಮಾನ್ಯ ನಿಯಮಗಳನ್ನು ಪ್ರಕಟಿಸುತ್ತದೆ ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲವು ಹೊಸ ಸಾಮಾನ್ಯ ನಿಯಮಗಳನ್ನು ಪ್ರಕಟಿಸುತ್ತದೆ 

ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲವು ಹೊಸ ಸಾಮಾನ್ಯ ನಿಯಮಾವಳಿಗಳನ್ನು ಪ್ರಕಟಿಸಿದೆ

ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲವು ಮಾರ್ಚ್ 19ರಂದು, ಸಂತ ಜೋಸೇಫರ ಹಬ್ಬದಂದು, ತನ್ನ ಹೊಸ ಸಾಮಾನ್ಯ ನಿಯಮಾವಳಿಗಳನ್ನು ಪ್ರಕಟಿಸಿದೆ. ಇದರಿಂದ ಸಂಸ್ಥೆಯ ಗುರುತು, ಧ್ಯೇಯ ಮತ್ತು ರಚನೆಯ ನವೀಕರಿತ ರೂಪವನ್ನು ಪರಿಚಯಿಸಲಾಗಿದೆ.

ವ್ಯಾಟಿಕನ್ ವರದಿ

 ಜಗದ್ಗರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲವುತನ್ನ ಹೊಸ ಸಾಮಾನ್ಯ ನಿಯಮಾವಳಿಗಳನ್ನು ಮಾರ್ಚ್ 19ರಂದು, ಸಂತ ಜೋಸೇಫರ ಹಬ್ಬದಂದು ಪ್ರಕಟಿಸಿದೆ. ಈ ದಾಖಲೆ ಸಂಸ್ಥೆಯ ಗುರುತು, ಧ್ಯೇಯ ಮತ್ತು ರಚನೆಗೆ ನವೀಕರಿತ ಮತ್ತು ಸಮಗ್ರ ದೃಷ್ಟಿಕೋಣವನ್ನು ನೀಡುತ್ತದೆ. ಇದು ಕೇವಲ ಧರ್ಮ ಸಭೆಯ ಮತ್ತೊಂದು ಚಳವಳಿ ಅಲ್ಲ, ಬದಲಾಗಿ ಜಗದ್ಗುರುಗಳ ನೇರ ಸೇವೆಯಲ್ಲಿ ಕಾರ್ಯನಿರ್ವಹಿಸುವ ವಿಶ್ವವ್ಯಾಪಿ ಪ್ರಾರ್ಥನಾ ಜಾಲವಾಗಿದೆ ಎಂದು ವಿಶೇಷವಾಗಿ ಒತ್ತಿ ಹೇಳಲಾಗಿದೆ.

ಈ ಜಾಲವು ರೋಮಿನಲ್ಲಿರುವ ವ್ಯಾಟಿಕನ್ ಫೌಂಡೇಶನ್ ಮೂಲಕ ಮತ್ತು ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ಇರುವ ಸುಮಾರು 22 ಮಿಲಿಯನ್ ಜನರ ಸಹಭಾಗಿತ್ವದ ಮೂಲಕ ತನ್ನ ಸೇವೆಯನ್ನು ನೆರವೇರಿಸುತ್ತದೆ. ಇದು ಕ್ರೈಸ್ತರನ್ನು ಪ್ರಾರ್ಥನೆ, ಆಧ್ಯಾತ್ಮಿಕ ರೂಪುಗೊಳಿಸುವಿಕೆ ಮತ್ತು ಸೇವೆಯ ಮೂಲಕ ಮಾನವಕುಲ ಮತ್ತು ಧರ್ಮ ಸಭೆಯ ಸವಾಲುಗಳಿಗೆ ಪ್ರತಿಕ್ರಿಯಿಸಲು ಪ್ರೇರೇಪಿಸುತ್ತದೆ.

ಹೊಸ ನಿಯಮಾವಳಿಗಳು ಈ ಜಾಲವನ್ನು ಜಗದ್ಗುರುಗಳ ಪ್ರೇಷಿತರ ಕಾರ್ಯ ಮತ್ತು ವ್ಯಾಟಿಕನ್ ಫೌಂಡೇಶನ್ ಎಂದು ವಿವರಿಸುತ್ತವೆ. ಇದರ ಧ್ಯೇಯವು ಯೇಸುವಿನ ಹೃದಯದ ಆಧ್ಯಾತ್ಮಿಕತೆಯಲ್ಲಿ ನೆಲೆಗೊಂಡಿದ್ದು, ಹೃದಯದ ಮಾರ್ಗ ಎಂಬ ರೂಪುಗೊಳಿಸುವಿಕೆಯ ಮೂಲಕ ಕ್ರಿಸ್ತನೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು ಮತ್ತು ಪ್ರಾರ್ಥನೆಯ ಮೂಲಕ ಜಗತ್ತಿನ ಸಮಸ್ಯೆಗಳತ್ತ ಹೆಚ್ಚು ಸ್ಪಂದಿಸುವಂತೆ ಮಾಡುವುದು.

ಈ ನಿಯಮಾವಳಿಗಳು ಇತಿಹಾಸ ಪ್ರಸಿದ್ಧ “ಅಪೋಸ್ತೋಲಿಕ್ ಪ್ರೇಯರ್” (ಪ್ರೇಷಿತರ ಪ್ರಾರ್ಥನೆ) ಪರಂಪರೆಯನ್ನು ಆಧುನಿಕ ಸವಾಲುಗಳೊಂದಿಗೆ ಹೊಂದಾಣಿಕೆ ಮಾಡುತ್ತವೆ. ಜೊತೆಗೆ, ಜಾಲದ ಸದಸ್ಯರು ಒಟ್ಟಾಗಿ ನಡೆಯಲು ಮಾರ್ಗದರ್ಶನ ನೀಡುತ್ತವೆ ಮತ್ತು ಎರಡು ವರ್ಷಗಳ ಪ್ರಾರಂಭಿಕ ಅವಧಿಗೆ ಮಾನ್ಯವಾಗುವ ನಿಯಮಾತ್ಮಕ ರೂಪುರೇಷೆಯನ್ನು ಸ್ಥಾಪಿಸುತ್ತವೆ.

ನಿಯಮಾವಳಿಗಳ ರಚನೆ ನಾಲ್ಕು ಭಾಗಗಳಾಗಿದೆ ಮೊದಲ ಭಾಗದಲ್ಲಿ ಸಂಸ್ಥೆಯ ಸ್ವಭಾವ ಮತ್ತು ಗುರುತನ್ನು ವಿವರಿಸಲಾಗಿದ್ದು, ಎರಡನೇ ಭಾಗದಲ್ಲಿ ಅದರ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ರಚನೆ ವಿವರಿಸಲಾಗಿದೆ. ಮೂರನೇ ಭಾಗದಲ್ಲಿ ಸದಸ್ಯತ್ವ ಮತ್ತು ಭಾಗವಹಿಸುವಿಕೆ ವಿಧಾನಗಳನ್ನು ವಿವರಿಸಲಾಗಿದ್ದು, ನಾಲ್ಕನೇ ಭಾಗದಲ್ಲಿ ಮಕ್ಕಳ ಮತ್ತು ದುರ್ಬಲ ವಯಸ್ಕರ ರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ನಿರ್ಧರಿಸಲಾಗಿದೆ.

ಈ ಜಾಲವು ಒಂದು ಮುಚ್ಚಿದ ಸಂಘಟನೆ ಅಥವಾ ಸ್ವತಂತ್ರ ಚಳವಳಿ ಅಲ್ಲ, ಬದಲಾಗಿ ವಿವಿಧ ಸಮುದಾಯಗಳಿಂದ ಬಂದ ಕ್ರೈಸ್ತರ ವಿಶಾಲ ಜಾಲವಾಗಿದೆ. ಎಲ್ಲರೂ ಜಗದ್ಗುರುಗಳ ಪ್ರಾರ್ಥನಾ ಉದ್ದೇಶಗಳ ಪ್ರಕಾರ ಪ್ರಾರ್ಥನೆ ಮತ್ತು ಸೇವೆಯಲ್ಲಿ ಭಾಗವಹಿಸಬಹುದು. ಜೊತೆಗೆ, ಹೆಚ್ಚಿನ ನಿಷ್ಠೆಯೊಂದಿಗೆ ಪ್ರತಿದಿನ ಪ್ರಾರ್ಥನೆ ಮಾಡುವ ಮತ್ತು ಯೇಸುವಿನ ಹೃದಯಕ್ಕೆ ಸಮರ್ಪಣೆ ಮಾಡುವ ಅವಕಾಶವೂ ಇದೆ. ಯುವಕರಿಗಾಗಿ ಯೂಕರಿಸ್ಟಿಕ್ ಯೂತ್ ಮೂವ್ಮೆಂಟ್ ಎಂಬ ವಿಶೇಷ ಉಪಕ್ರಮವೂ ಇದರ ಭಾಗವಾಗಿದೆ.

19 ಮಾರ್ಚ್ 2026, 19:01