ಸಂವಹನ ವಿಭಾಗವು ಪೋಲ್ಯಾಂಡ್ ರೇಡಿಯೋ ಕೇಂದ್ರಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ
ವ್ಯಾಟಿಕನ್ ವರದಿ
ಪೋಲ್ಯಾಂಡ್‌ನ ಏಳು ಪ್ರಾದೇಶಿಕ ರೇಡಿಯೋ ಕೇಂದ್ರಗಳ ಮುಖ್ಯಸ್ಥರು ಸ್ವತಃ ರೋಮಿಗೆ ಪ್ರಯಾಣ ಮಾಡಿದರು. ಇನ್ನೂ ರ್ಜೆಶೋವ್, ಬಿಯಾಲಿಸ್ಟೋಕ್ ಮತ್ತು ಕಿಯೆಲ್ಚೆ ನಗರಗಳ ರೇಡಿಯೋ ಕೇಂದ್ರಗಳೊಂದಿಗೆ ಒಪ್ಪಂದಗಳನ್ನು ದೂರದಿಂದ ಸಹಿ ಮಾಡುವ ಯೋಜನೆ ಇದೆ.
ಈ ಸಂದರ್ಭದಲ್ಲಿ, ಪೋಲಿಷ್ ಅತಿಥಿಗಳು ಜಗದ್ಗುರುಗಳ ಬುಧವಾರದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದರು. ನಂತರ ಅವರು ವ್ಯಾಟಿಕನ್ ಮೀಡಿಯಾದ ಸಂಪಾದಕೀಯ ನಿರ್ದೇಶಕರಾದ ಆಂಡ್ರಿಯಾ ಟೋರ್ಣಿಯೆಲ್ಲಿರವರ ಉಪ ನಿರ್ದೇಶಕ ಹಾಗೂ ವ್ಯಾಟಿಕನ್ ರೇಡಿಯೋ/ವಾಟಿಕನ್ ನ್ಯೂಸ್ ನಿರ್ದೇಶಕರಾದ ಮಾಸ್ಸಿಮಿಲಿಯಾನೋ ಮೆನಿಚೆಟ್ಟಿ, ಮತ್ತು ವ್ಯಾಟಿಕನ್ ರೇಡಿಯೋ/ವಾಟಿಕನ್ ನ್ಯೂಸ್‌ನ ಪೋಲಿಷ್ ವಿಭಾಗದ ಮುಖ್ಯಸ್ಥ ಹಾಗೂ ಎಲ್'ಒಸ್ಸೆರ್ವಟೋರ್ ರೊಮಾನೋ ಪತ್ರಿಕೆಯ ಪೋಲಿಷ್ ಆವೃತ್ತಿಯ ಮುಖ್ಯಸ್ಥರಾದ ವಂ.ಸ್ವಾಮಿ. ಪಾವೆಲ್ ರಿಟೆಲ್-ಆಂಡ್ರಿಯಾನಿಕ್ ರವರೊಂದಿಗೆ ಜಗದ್ಗುರುಗಳನ್ನು ಭೇಟಿಯಾದರು.
ಅತಿಥಿಗಳು ಬಾಲ್ಟಿಕ್ ಸಮುದ್ರದ ಕರಾವಳಿಯಲ್ಲಿ ಶತಮಾನಗಳಿಂದ ಸಂಗ್ರಹಿಸಲ್ಪಟ್ಟ ಅಂಬರ್ ಕಲ್ಲಿನಿಂದ ತಯಾರಿಸಿದ ಒಂದು ಪ್ರತಿಕಾತ್ಮಕ ಹಡಗಿನ ಮಾದರಿಯನ್ನು ಜಗದ್ಗುರುಗಳಿಗೆ ಉಡುಗೊರೆಯಾಗಿ ನೀಡಿದರು. ಈ ಉಡುಗೊರೆಯೊಂದಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆಯಲಾದ ಸಮರ್ಪಣೆಯೂ ಸೇರಿತ್ತು ಅತ್ಯುನ್ನತ ಗೌರವ ಮತ್ತು ಆಧ್ಯಾತ್ಮಿಕ ಏಕತೆಯೊಂದಿಗೆ, ಈ ಉಡುಗೊರೆಯನ್ನು ನಿಮ್ಮ ಪವಿತ್ರತೆಯವರಿಗೆ ನಾವು ಕೃತಜ್ಞತೆ ಮತ್ತು ಏಕತೆಯ ಚಿಹ್ನೆಯಾಗಿ ಅರ್ಪಿಸುತ್ತೇವೆ.
ಯುದ್ಧದಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ ನಿರೀಕ್ಷೆಯ ಸಂದೇಶ
ಸಂವಹನ ವಿಭಾಗದಲ್ಲಿ, ಈ ಒಪ್ಪಂದಗಳನ್ನು ಪ್ರಿಫೆಕ್ಟ್ ಪಾವ್ಲೋ ರುಫಿನಿರವರ ಪರವಾಗಿ, ವಿಭಾಗದ ಕಾರ್ಯದರ್ಶಿಯಾದ ವಂ.ಸ್ವಾಮಿ ಲೂಸಿಯೊ ಅಡ್ರಿಯನ್ ರೂಯಿಸ್ ರವರು ಅಧಿಕೃತವಾಗಿ ಸಹಿ ಮಾಡಿದರು.
ಇದು ಮಹತ್ವದ ಕ್ಷಣವಾಗಿದೆ, ಏಕೆಂದರೆ ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವ ನಾವು ಎಲ್ಲರೂ ಜಗತ್ತಿನತ್ತ ದೊಡ್ಡ ಹೊಣೆಗಾರಿಕೆಯನ್ನು ಹೊಂದಿದ್ದೇವೆ—ಸತ್ಯವನ್ನು ಹಂಚಿಕೊಳ್ಳುವುದು ಮತ್ತು ಜನರ ಹೃದಯಗಳಲ್ಲಿ ನಿರೀಕ್ಷೆಯನ್ನು ಬಿತ್ತುವುದು, ಎಂದು ವಂ.ಸ್ವಾಮಿ ರೂಯಿಸ್ ಹೇಳಿದರು.
ಲಕ್ಷಾಂತರ ಕೇಳುಗರಿಗೆ ತಲುಪುವುದು
ಪೋಲಿಷ್ ರೇಡಿಯೋ ಲುಬ್ಲಿನ್‌ನ ಮುಖ್ಯಸ್ಥ ಮಿರೊಸ್ವಾವ್ ಕಾಸ್ಪ್ರ್ಜಾಕ್ ರವರು, ವ್ಯಾಟಿಕನ್ ಮೀಡಿಯಾದ ಸಹಕಾರವು ಪೋಲ್ಯಾಂಡ್‌ನ ಪ್ರಾದೇಶಿಕ ಸಾರ್ವಜನಿಕ ಮಾಧ್ಯಮಗಳ ಧ್ಯೇಯವನ್ನು ನೆರವೇರಿಸುವುದಾಗಿದೆ ಎಂದು ಹೇಳಿದರು.
ಪೋಲ್ಯಾಂಡ್‌ನ ಪ್ರಾದೇಶಿಕ ರೇಡಿಯೋ ಕೇಂದ್ರಗಳ ವಿಷಯವು ಸುಮಾರು 60 ಮಿಲಿಯನ್ ಪೋಲಿಷ್ ಭಾಷಿಕರನ್ನು ತಲುಪುತ್ತದೆ ಅಂದರೆ ದೇಶದೊಳಗೆ ಸುಮಾರು 37 ಮಿಲಿಯನ್ ಜನರು ಮತ್ತು ವಿದೇಶಗಳಲ್ಲಿ ಸುಮಾರು 20 ಮಿಲಿಯನ್ ಜನರಿಗೆ ತಲುಪುವುದಾಗಿ ಹೇಳಿದರು.
ನಮ್ಮ ಉದಾಹರಣೆ, ವ್ಯಾಟಿಕನ್ ರೇಡಿಯೋ ವಾಟಿಕನ್ ನ್ಯೂಸ್‌ನ ಇತರ ಭಾಷಾ ವಿಭಾಗಗಳನ್ನು ಸಹ ಇಂತಹ ಒಪ್ಪಂದಗಳಿಗೆ ಪ್ರೇರೇಪಿಸಲಿ ಎಂಬುದು ನಮ್ಮ ಆಶಯ ಎಂದು ಅವರು ಹೇಳಿದರು.
ಒಂದು ವರ್ಷ ಹಿಂದೆ ಐದು ಪೋಲಿಷ್ ಸಂಪಾದಕೀಯ ತಂಡಗಳು ಇದೇ ರೀತಿಯ ಒಪ್ಪಂದಕ್ಕೆ ಸಹಿ ಮಾಡಿದ್ದವು. ಈ ವರ್ಷ ಆ ಸಂಖ್ಯೆ ದ್ವಿಗುಣವಾಗಿದ್ದು, ಸಹಕಾರದ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸುತ್ತದೆ ಎಂದು ಹೇಳಿದರು.