ಹುಡುಕಿ

++ Il Papa 'Medio Oriente e Libano, ai responsabili dico, cessate il fuoco!' ++

ವ್ಯಾಟಿಕನ್ ಮೇಲ್ಮನವಿ ನ್ಯಾಯಾಲಯವು ಜಗದ್ಗುರುಗಳ ಅಧಿಕಾರ ಸ್ಥಳದ ನಿಧಿಗಳ ವಿಚಾರಣೆಯಲ್ಲಿ ಭಾಗಶಃ ಮರು ವಿಚಾರಣೆಗೆ ಆದೇಶಿಸುತ್ತದೆ

ವ್ಯಾಟಿಕನ್ ಮೇಲ್ಮನವಿ ನ್ಯಾಯಾಲಯವು ಜಗದ್ಗುರುಗಳ ಅಧಿಕಾರ ಸ್ಥಳದ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಪ್ರಥಮ ಹಂತದ ವಿಚಾರಣೆಯಲ್ಲಿ ಭಾಗಶಃ ಮರು ವಿಚಾರಣೆ (ಪಾರ್ಷಿಯಲ್ ಮಿಸ್ಟ್ರಯಲ್) ಘೋಷಿಸಿ, ಕೆಲವು ನಿರ್ದಿಷ್ಟ ಪ್ರಕ್ರಿಯೆಗಳ ಮರುನಡೆಯನ್ನು ಆದೇಶಿಸಿದೆ. ಈ ತೀರ್ಪು ಮೂಲ ತೀರ್ಪಿನ ಕಾನೂನುಬದ್ಧ ಪರಿಣಾಮಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ರಕ್ಷಣಾ ಪಕ್ಷಕ್ಕೆ ತನಿಖಾ ದಾಖಲೆಗಳಿಗೆ ಸಂಪೂರ್ಣ ಪ್ರವೇಶವನ್ನು ಖಚಿತಪಡಿಸುತ್ತದೆ.

ವ್ಯಾಟಿಕನ್ ವರದಿ

ವ್ಯಾಟಿಕನ್ ನಗರ ರಾಜ್ಯದ ಮೇಲ್ಮನವಿ ನ್ಯಾಯಾಲಯವು ಜಗದ್ಗುರುಗಳ ಅಧಿಕಾರ ಸ್ಥಳದ ಹಣಕಾಸು ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಕರಣದ ಪ್ರಥಮ ಹಂತದ ವಿಚಾರಣೆಯಲ್ಲಿ ಭಾಗಶಃ ಮರು ವಿಚಾರಣೆಯನ್ನು ಆದೇಶಿಸಿದ್ದು, ಮೂಲ ತೀರ್ಪಿನ ಕಾನೂನುಬದ್ಧ ಪರಿಣಾಮಗಳು ಮುಂದುವರಿಯುತ್ತವೆ ಎಂದು ದೃಢಪಡಿಸಿದೆ.

ಮಂಗಳವಾರ ಹೊರಡಿಸಲಾದ ಆದೇಶದಲ್ಲಿ, ಮೊನ್ಸಿನಿಯರ್ ಅಲೆಹಾಂದ್ರೊ ಅರೇಲ್ಯಾನೊ ಸೆಡಿಲ್ಲೋ ರವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿದ ನ್ಯಾಯಾಲಯವು, ಕೆಲವು ನಿರ್ದಿಷ್ಟ ಹಂತಗಳ ಮರು ವಿಚಾರಣೆಯನ್ನು ಸೂಚಿಸಿದೆ. ಇದರಲ್ಲಿ ಕೆಲವು ಸಾಕ್ಷಿಗಳ ಪುನಃ ವಿಚಾರಣೆ ಹಾಗೂ ಸಾಕ್ಷ್ಯಾಧಾರಗಳ ಮರು ಪರಿಶೀಲನೆ ಸೇರಿದ್ದು, ಮೇಲ್ಮನವಿ ಹಂತದಲ್ಲಿ ಸರಿಪಡಿಸಬೇಕಾದ ಪ್ರಕ್ರಿಯಾತ್ಮಕ ದೋಷಗಳನ್ನು ಗುರುತಿಸಿದೆ.

16 ಪುಟಗಳ ತೀರ್ಪಿನಲ್ಲಿ, ವ್ಯಾಟಿಕನ್ ಅಭಿಯೋಜಕರು ಮಾಡಿದ ಪ್ರಕ್ರಿಯಾತ್ಮಕ ದೋಷಗಳು ಕಾರ್ಡಿನಲ್ ಆಂಜೆಲೊ ಬೆಚ್ಚಿಯು ಸೇರಿದಂತೆ ಇತರರ ವಿರುದ್ಧದ ಮೂಲ ಆರೋಪ ಪತ್ರವನ್ನು ಅಮಾನ್ಯಗೊಳಿಸಿದ್ದಾಗಿ ನ್ಯಾಯಾಲಯ ತೀರ್ಮಾನಿಸಿದೆ. ಇದರಿಂದ ಹೊಸ ವಿಚಾರಣೆ ಅಗತ್ಯವಾಗಿದೆ ಎಂದು ಸೂಚಿಸಲಾಗಿದೆ.

ಇದೇ ವೇಳೆ, ಭಾಗಶಃ ಮರು ವಿಚಾರಣೆ ಎಂದರೆ ಪ್ರಥಮ ಹಂತದ ಸಂಪೂರ್ಣ ವಿಚಾರಣೆಯನ್ನು ಅಮಾನ್ಯಗೊಳಿಸುವುದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿಶೇಷವಾಗಿ, ಅಪರಾಧಮುಕ್ತರಾದ ಆರೋಪಿಗಳ ಕುರಿತು ಯಾವುದೇ ಮಾನ್ಯ ಮೇಲ್ಮನವಿ ಸಲ್ಲಿಸದಿರುವ ಸಂದರ್ಭಗಳಲ್ಲಿ, ವಿಚಾರಣೆ ಮತ್ತು ತೀರ್ಪುಗಳ ಕಾನೂನುಬದ್ಧ ಪರಿಣಾಮಗಳು ಮುಂದುವರಿಯುತ್ತವೆ.

ಈ ಆದೇಶದ ಪ್ರಮುಖ ಅಂಶವೆಂದರೆ, ಸಾಕ್ಷ್ಯಾಧಾರಗಳ ಸಂಪೂರ್ಣ ಬಹಿರಂಗೀಕರಣದ ಅವಶ್ಯಕತೆ. ನ್ಯಾಯ ಪ್ರಚಾರಕರ ಕಚೇರಿಗೆ 2026 ಏಪ್ರಿಲ್ 30ರೊಳಗೆ ತನಿಖಾ ಹಂತದ ಎಲ್ಲಾ ದಾಖಲೆಗಳ ಸಂಪೂರ್ಣ ಪ್ರತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ, ಇದರಿಂದ ರಕ್ಷಣಾ ಪಕ್ಷಕ್ಕೆ ಮೊದಲು ವಿವಾದಕ್ಕೊಳಗಾದ ಮಾಹಿತಿಗಳಿಗೆ ಸಂಪೂರ್ಣ ಪ್ರವೇಶ ದೊರೆಯಲಿದೆ.

ಪಕ್ಷಗಳಿಗೆ ಜೂನ್ 15ರವರೆಗೆ ಈ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯಗಳನ್ನು ಸಿದ್ಧಪಡಿಸಲು ಸಮಯ ನೀಡಲಾಗಿದೆ. ಮುಂದಿನ ಪ್ರಕ್ರಿಯೆಗಳ ವೇಳಾಪಟ್ಟಿಯನ್ನು ನಿಗದಿಪಡಿಸಲು ಜೂನ್ 22ರಂದು ವಿಚಾರಣೆಯನ್ನು ನಿಗದಿಪಡಿಸಲಾಗಿದೆ.

ತನಿಖೆಯ ಸಮಯದಲ್ಲಿ ಹೊರಡಿಸಲಾದ ಕೆಲವು ಜಗದ್ಗುರುಗಳ ಶಾಸನಪತ್ರಗಳ ಬಳಕೆಯ ಕುರಿತು ರಕ್ಷಣಾ ಪಕ್ಷ ಎತ್ತಿದ ಆಕ್ಷೇಪಣೆಗಳನ್ನೂ ನ್ಯಾಯಾಲಯ ಪರಿಗಣಿಸಿದೆ. ಇವುಗಳು ಪರಮಪಿತೃರ ಅಧಿಕಾರದ ಮಾನ್ಯ ಅಭಿವ್ಯಕ್ತಿಯಾಗಿವೆ ಎಂದು ದೃಢಪಡಿಸಿದರೂ, ಒಂದು ಶಾಸನ ಪತ್ರ ಸಮಯಕ್ಕೆ ಸರಿಯಾಗಿ ಪ್ರಕಟವಾಗದಿರುವುದರಿಂದ ಅದರ ಆಧಾರದ ಮೇಲೆ ಕೈಗೊಳ್ಳಲಾದ ಕೆಲವು ತನಿಖಾ ಕ್ರಮಗಳ ಮಾನ್ಯತೆಗೆ ಪರಿಣಾಮ ಬೀರಿರಬಹುದು ಎಂದು ಗಮನಿಸಿದೆ.

ಇನ್ನೊಂದೆಡೆ, ಯುರೋಪಿಯನ್ ಮಾನವ ಹಕ್ಕುಗಳ ಒಪ್ಪಂದ ಸೇರಿದಂತೆ ಅಂತರರಾಷ್ಟ್ರೀಯ ನ್ಯಾಯ ಪ್ರಕ್ರಿಯೆಗಳ ಉಲ್ಲಂಘನೆ ಕುರಿತು ಮಂಡಿಸಲಾದ ವಾದಗಳನ್ನು ನ್ಯಾಯಾಲಯ ಅಂಗೀಕರಿಸಲಿಲ್ಲ, ಏಕೆಂದರೆ ಇಂತಹ ಒಪ್ಪಂದಗಳು ವ್ಯಾಟಿಕನ್ ಕಾನೂನು ವ್ಯವಸ್ಥೆಯಲ್ಲಿ ಅಧಿಕೃತವಾಗಿ ಅಳವಡಿಸಲ್ಪಟ್ಟಿಲ್ಲ.

ಈ ತೀರ್ಮಾನವು ನ್ಯಾಯಸಮ್ಮತ ಪ್ರಕ್ರಿಯೆಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಕೈಗೊಳ್ಳಲಾದ ಕ್ರಮವಾಗಿದ್ದು, ಮೇಲ್ಮನವಿ ಹಂತದಲ್ಲಿ ಪರಿಷ್ಕೃತ ಸಾಕ್ಷ್ಯಾಧಾರಗಳ ಚೌಕಟ್ಟಿನಡಿ ಪ್ರಕರಣ ಮುಂದುವರಿಯಲು ಅವಕಾಶ ಮಾಡಿಕೊಡುತ್ತದೆ.

17 ಮಾರ್ಚ್ 2026, 22:35