ಹುಡುಕಿ

ಇಸ್ಲಾಮೋಫೋಬಿಯಾವನ್ನು ಎದುರಿಸಲು ಅಂತರರಾಷ್ಟ್ರೀಯ ದಿನದ ಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಿನ್ನೆ ವಿಶ್ವಸಂಸ್ಥೆಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ಮಿಷನ್ ಮಾತನಾಡಿದರು. ಇಸ್ಲಾಮೋಫೋಬಿಯಾವನ್ನು ಎದುರಿಸಲು ಅಂತರರಾಷ್ಟ್ರೀಯ ದಿನದ ಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಿನ್ನೆ ವಿಶ್ವಸಂಸ್ಥೆಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ಮಿಷನ್ ಮಾತನಾಡಿದರು.  (ANSA)

ಜಗದ್ಗುರುಗಳ ಅಧಿಕಾರ ಸ್ಥಳ: ಇಸ್ಲಾಮ್ಫೋಬಿಯಾ ಕುರಿತು ನಂಬಿಕೆಯ ಸ್ವಾತಂತ್ರ್ಯ ಆಯ್ಕೆಯ ವಿಷಯವಲ್ಲ

ಸಂಯುಕ್ತ ರಾಷ್ಟ್ರಗಳಿಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ಪ್ರತಿನಿಧಿ ಮಿಷನ್ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮೂಲಭೂತವಾದ ನಂಬಿಕೆಯ ಸ್ವಾತಂತ್ರ್ಯವನ್ನು ನಿರಾಕರಿಸಿದಾಗ ನಂಬಿಕೆ ಭಯಕ್ಕೆ ಜಾಗ ಬಿಡುತ್ತದೆ, ಸಂಭಾಷಣೆಯ ಬದಲಿಗೆ ಅನುಮಾನಗಳು ಉಂಟಾಗುತ್ತವೆ, ಮತ್ತು ಹಿಂಸೆಯನ್ನು ಹುಟ್ಟುಹಾಕುತ್ತದೆ ಎಂದು ಎಚ್ಚರಿಸಿದೆ.

ವ್ಯಾಟಿಕನ್ ವರದಿ

ಮಾರ್ಚ್ 16ರಂದು ವಿಶ್ವಸಂಸ್ಥೆ ನ್ಯೂಯಾರ್ಕ್ ಮುಖ್ಯ ಕಚೇರಿಯಲ್ಲಿ ನಡೆದ “ಇಸ್ಲಾಮ್ಫೋಬಿಯಾ ವಿರುದ್ಧದ ಅಂತರರಾಷ್ಟ್ರೀಯ ದಿನದ ಅಂಗವಾಗಿ ನಡೆದ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಜಗದ್ಗುರುಗ ಅಧಿಕಾರ ಸ್ಥಳದ  ಶಾಶ್ವತ ಪ್ರತಿನಿಧಿ ಮಿಷನ್ ಒಂದು ಮಹತ್ವದ ಹೇಳಿಕೆಯನ್ನು ಪ್ರಕಟಿಸಿತು. ಈ ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ ಹಾಗೂ ಇಸ್ಲಾಮಿಕ್ ಸಹಕಾರ ಸಂಘಟನೆ ಪ್ರತಿನಿಧಿಗಳಿಗೆ ಜಗದ್ಗುರುಗಳ ಅಧಿಕಾರ ಸ್ಥಳವು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿತು.

ಈ ಹೇಳಿಕೆಯಲ್ಲಿ, ಮುಸ್ಲಿಮರು, ಯಹೂದ್ಯರು, ಕ್ರೈಸ್ತರು ಮತ್ತು ಇತರ ಧರ್ಮದ ಅನುಯಾಯಿಗಳ ವಿರುದ್ಧ ಹೆಚ್ಚುತ್ತಿರುವ ಅಸಹಿಷ್ಣುತೆ, ಭೇದಭಾವ ಮತ್ತು ವೈಮನಸ್ಸುಗಳು ಧರ್ಮ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸುವಲ್ಲಿ ವಿಫಲವಾಗಿರುವುದರಿಂದ ಉಂಟಾಗುತ್ತಿವೆ ಎಂದು ಉಲ್ಲೇಖಿಸಲಾಯಿತು. ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯವು ಆಯ್ಕೆಯ ವಿಷಯವಲ್ಲ, ಅದು ನ್ಯಾಯಸಮ್ಮತ ಸಮಾಜದ ಮೂಲಸ್ತಂಭ ಎಂದು ಹೇಳಿಕೆಯಲ್ಲಿ ಒತ್ತಿಹೇಳಲಾಯಿತು.

ಹೇಳಿಕೆಯಲ್ಲಿ ಜಗದ್ಗುರುಗಳು ಮಾತುಗಳನ್ನು ಉಲ್ಲೇಖಿಸಿ, ಈ ಸ್ವಾತಂತ್ರ್ಯವನ್ನು ನಿರಾಕರಿಸಿದಾಗ ವ್ಯಕ್ತಿಯು ಸತ್ಯಕ್ಕೆ ಸ್ವತಂತ್ರವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ ಎಂದು ತಿಳಿಸಲಾಯಿತು. ಇದರ ಪರಿಣಾಮವಾಗಿ ಸಮಾಜದ ನೈತಿಕ ಮತ್ತು ಆತ್ಮೀಯ ಬಂಧಗಳು ನಿಧಾನವಾಗಿ ಕುಸಿಯುತ್ತವೆ ನಂಬಿಕೆಯ ಸ್ಥಳದಲ್ಲಿ ಭಯ, ಸಂವಾದದ ಬದಲು ಅನುಮಾನ ಮತ್ತು ಹಿಂಸೆ ಹೆಚ್ಚಾಗುತ್ತದೆ.

ಇಸ್ಲಾಮ್ಫೋಬಿಯಾ ಕೇವಲ ವ್ಯಕ್ತಿಗಳ ಮೇಲೆ ಮಾತ್ರವಲ್ಲ, ಸಂಪೂರ್ಣ ಸಮಾಜಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿಕೆಯಲ್ಲಿ ಸೂಚಿಸಲಾಯಿತು. ಇದು ಸಮಾಜದ ಆತ್ಮೀಯ, ನೈತಿಕ ಮತ್ತು ಸಾಮಾಜಿಕ ಬಲವನ್ನು ದುರ್ಬಲಗೊಳಿಸಿ, ಪರಸ್ಪರ ನಂಬಿಕೆ ಮತ್ತು ಐಕ್ಯತೆಯ ಬಂಧಗಳನ್ನು ಹಾಳುಮಾಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಈ ಭೇದಭಾವ ಇನ್ನಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನೂ ಗಮನಿಸಲಾಯಿತು.

ಈ ಸಮಸ್ಯೆಯನ್ನು ಎದುರಿಸಲು ಉತ್ತಮ ಶಿಕ್ಷಣ ವ್ಯವಸ್ಥೆ, ವಿಶೇಷವಾಗಿ ಡಿಜಿಟಲ್ ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಯ ಬೆಳವಣಿಗೆ ಅತ್ಯಗತ್ಯ ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಕರೆ ನೀಡಿತು. ಜೊತೆಗೆ, ನಿಜವಾದ ಅಂತರ್‌ಧರ್ಮ ಸಂವಾದವು ವಿಭಿನ್ನತೆಗಳನ್ನು ವಿಭಜನೆಯ ಕಾರಣವಾಗಿಸದೇ, ಸಮೃದ್ಧಿಯ ಮೂಲವಾಗಿಸುವುದಾಗಿ ಹೇಳಿತು.

ಕೊನೆಯಲ್ಲಿ, ಸಂವಾದವು ಕೇವಲ ಉಪಾಯವಲ್ಲ, ಅದು ಬದುಕಿನ ಮಾರ್ಗವಾಗಿದೆ ಎಂದು ಜಗದ್ಗುರು XIVನೇ ಲಿಯೋರವರು ಸಂದೇಶವನ್ನು ಪುನಃ ಉಲ್ಲೇಖಿಸಿ, ಯಾವುದೇ ಧರ್ಮವನ್ನು ದುರುಪಯೋಗಪಡಿಸಿಕೊಳ್ಳದಂತೆ ಮತ್ತು ಎಲ್ಲರಿಗೂ ಗೌರವ ದೊರಕುವ ಸಮಾಜವನ್ನು ನಿರ್ಮಿಸಲು ಕರೆ ನೀಡಲಾಯಿತು.

17 ಮಾರ್ಚ್ 2026, 22:31