ವಂ ಸ್ವಾಮಿ ಪಸೋಲಿನಿ ರವರು ಜಗದ್ಗುರು XIV ನೇ ಲಿಯೋ ರವರು ಮತ್ತು ರೋಮನ್ ಪ್ರಾಂತ್ಯದವರಿಗೆ ತಪಸ್ಸು ಕಾಲದ ಧ್ಯಾನವನ್ನು ತಲುಪಿಸುತ್ತಾರೆ ವಂ ಸ್ವಾಮಿ ಪಸೋಲಿನಿ ರವರು ಜಗದ್ಗುರು XIV ನೇ ಲಿಯೋ ರವರು ಮತ್ತು ರೋಮನ್ ಪ್ರಾಂತ್ಯದವರಿಗೆ ತಪಸ್ಸು ಕಾಲದ ಧ್ಯಾನವನ್ನು ತಲುಪಿಸುತ್ತಾರೆ  (ANSA)

“ವಂ. ಸ್ವಾಮಿ ಪಾಸೋಲಿನಿ: ಯುದ್ಧಗಳಿಂದ ತುಂಬಿದ ಜಗತ್ತಿನಲ್ಲಿ ಸಹೋದರತ್ವವು ಕೇವಲ ಕನಸಿನ ಆದರ್ಶವಲ್ಲ, ಅದು ನಮ್ಮ ಜವಾಬ್ದಾರಿ.”

ರಾಬರ್ಟೊ ಪಸೋಲಿನಿರವರು, ಜಗದ್ಗುರುಗಳ ಸಾನ್ನಿಧ್ಯದಲ್ಲಿ ರೋಮನ್ ಪ್ರಾಂತ್ಯದ ಸದಸ್ಯರಿಗೆ ತಮ್ಮ ದ್ವಿತೀಯ ತಪಸ್ಸು ಕಾಲದ ಧ್ಯಾನಪ್ರಬಂಧವನ್ನು ನೀಡಿದರು. ಈ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಹಾಜರಿದ್ದರು.ಈ ಧ್ಯಾನದಲ್ಲಿ ಅವರು ಏಕತೆಯ ಕೃಪೆ ಮತ್ತು ಹೊಣೆಗಾರಿಕೆ ಕುರಿತು ಚಿಂತನೆ ಮಾಡಿ, ಇತರರೊಂದಿಗೆ ಇರುವ ಸಂಬಂಧಗಳು ಸುವಾರ್ತೆಯ ತತ್ತ್ವವನ್ನು ಕಲಿಯುವ ಅವಕಾಶವೆಂದು ತಿಳಿಸಿದ ಅಸಿಸಿಯ ಸಂತ ಫ್ರಾನ್ಸಿಸ್ ರವರ ಆಲೋಚನೆಗಳನ್ನು ಉದಾಹರಿಸಿದರು.

ವ್ಯಾಟಿಕನ್ ವರದಿ

 ರಾಬರ್ಟೊ ಪಸೋಲಿನಿರವರು ವ್ಯಾಟಿಕನ್‌ನ VI ನೇ ಪೌಲ್ ಸಭಾಂಗಣದಲ್ಲಿ ರೋಮನ್ ಪ್ರಾಂತ್ಯಕ್ಕೆ ನೀಡಿದ ನಾಲ್ಕು ತಪಸ್ಸು ಕಾಲದ ಧ್ಯಾನಗಳಲ್ಲಿ ಎರಡನೆಯ ಧ್ಯಾನವನ್ನು ನಡೆಸಿದರು. ಈ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಕೂಡ ಹಾಜರಿದ್ದರು. ಯಾರಾದರೂ ಕ್ರಿಸ್ತನಲ್ಲಿ ಇದ್ದರೆ ಅವನು ಹೊಸ ಸೃಷ್ಟಿ ಎಂಬ ವಿಷಯದಡಿಯಲ್ಲಿ ಅವರು ಸಹೋದರತ್ವ  ಸಹೋದರೀಯ ಏಕತೆಯ ಕೃಪೆ ಮತ್ತು ಹೊಣೆಗಾರಿಕೆ ಕುರಿತು ಚಿಂತನೆ ಮಂಡಿಸಿದರು.

ವಂ.ಸ್ವಾಮಿ ಪಾಸೋಲಿನಿರವರು ಹೇಳುವಂತೆ, ಸಹೋದರತ್ವವು ಆಧ್ಯಾತ್ಮಿಕ ಜೀವನದ ಒಂದು ಪೂರಕ ಅಂಶ ಮಾತ್ರವಲ್ಲ. ಅದು ನಿಜವಾದ ಪರಿವರ್ತನೆ ನಡೆಯುವ ಸ್ಥಳವಾಗಿದ್ದು, ಸುವಾರ್ತೆಯ ಶಕ್ತಿಯು ನಮ್ಮ ಜೀವನದಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತೋರಿಸುವ ಮಹತ್ವದ ಸಾಕ್ಷಿಯಾಗಿದೆ.

ತಮ್ಮ ಚಿಂತನೆಗಳಲ್ಲಿ ಅವರು ಅಸಿಸಿಯ ಸಂತ ಫ್ರಾನ್ಸಿಸ್ ರವರ  ಪ್ರೇರಣೆಯಿಂದ ರೂಪುಗೊಂಡ ಮೊದಲ ಫ್ರಾನ್ಸಿಸ್ಕನ್ ಸಮುದಾಯಗಳ ಉದಾಹರಣೆಯನ್ನು ಉಲ್ಲೇಖಿಸಿದರು. ಆ ಸಮುದಾಯಗಳು ಅಧಿಕಾರ ಅಥವಾ ಮೇಲಾಟದ ಸಂಬಂಧಗಳಿಲ್ಲದೆ, ಪ್ರಾರಂಭಿಕ ಕ್ರೈಸ್ತ ಸಮುದಾಯಗಳಂತೆ ಬದುಕಲು ಪ್ರಯತ್ನಿಸುತ್ತಿದ್ದವು. ಸಹೋದರರು ದೇವರಿಂದ ದೊರೆಯುವ ವರವಾಗಿದ್ದರೂ, ಅವರು ನಮ್ಮ ಜೀವನವನ್ನು ಬದಲಾಯಿಸಲು ದೇವರು ನಮಗೆ ಒಪ್ಪಿಸಿರುವವರಾಗಿದ್ದಾರೆ ಎಂದು ಅವರು ಹೇಳಿದರು.

ಅವರು ಬೈಬಲ್‌ನ ಕೇನ್ ಮತ್ತು ಅಬೆಲ್ ರವರ ಕಥೆಯನ್ನು ಉದಾಹರಿಸಿ, ಮಾನವನ ಹೃದಯದಲ್ಲಿ ಉಂಟಾಗುವ ಅಸೂಯೆ ಮತ್ತು ಕೋಪವು ಸಂಬಂಧಗಳನ್ನು ಹೇಗೆ ಮುರಿಯುತ್ತದೆ ಎಂಬುದನ್ನು ವಿವರಿಸಿದರು. ದೇವರು ಕಾಯಿನನ ಅರ್ಪಣೆಯನ್ನು ತಿರಸ್ಕರಿಸಿದದ್ದು ಅವನನ್ನು ದಂಡಿಸಲು ಅಲ್ಲ, ಅವನ ಜೀವನವೂ ದೇವರಿಗೆ ಒಂದು ನಿಜವಾದ ಕಾಣಿಕೆಯಾಗಬಹುದು ಎಂಬುದನ್ನು ಅವನಿಗೆ ತಿಳಿಸಲು ಎಂದು ಅವರು ವಿವರಿಸಿದರು.

ಸಂಬಂಧಗಳು ಮುರಿದಾಗ ಸುವಾರ್ತೆಯು ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಮಾತ್ರ ಹೇಳುವುದಿಲ್ಲ ಬದಲಾಗಿ, ಎದುರಾಳಿಯನ್ನಾಗಿ ಕಾಣದೆ ದೇವರಿಂದ ಪ್ರೀತಿಸಲ್ಪಟ್ಟ ಸಹೋದರನಾಗಿ ನೋಡಲು ಕರೆಯುತ್ತದೆ ಎಂದು ಅವರು ಹೇಳಿದರು. ಗಾಯಗಳು, ನಿರಾಶೆಗಳು ಮತ್ತು ವಿರೋಧಗಳ ನಡುವೆ ಸಹ ಇತರರನ್ನು ಸ್ವೀಕರಿಸಲು ಕಲಿಯುವಾಗಲೇ ಕ್ರಿಸ್ತನ ಪುನರುತ್ಥಾನದ ಶಕ್ತಿ ನಮ್ಮೊಳಗೆ ಕಾರ್ಯನಿರ್ವಹಿಸಲು ಆರಂಭಿಸುತ್ತದೆ ಎಂದು ಅವರು ವಿವರಿಸಿದರು.

ಕೊನೆಯಲ್ಲಿ, ಇಂದಿನ ಜಗತ್ತು ವಿಭಜನೆ, ಯುದ್ಧ ಮತ್ತು ಸಂಘರ್ಷಗಳಿಂದ ಗುರುತಿಸಲ್ಪಟ್ಟಿರುವ ಸಂದರ್ಭದಲ್ಲಿ ಕ್ರೈಸ್ತರು ಸಹೋದರತ್ವವನ್ನು ಕೇವಲ ಒಂದು ಆದರ್ಶವಾಗಿ ಮಾತ್ರ ಹೇಳಿಕೊಳ್ಳಬಾರದು ಎಂದು ವಂ.ಸ್ವಾಮಿ ಪಾಸೋಲಿನಿ ಒತ್ತಿಹೇಳಿದರು. ಅದನ್ನು ದೇವರಿಂದ ದೊರೆಯುವ ವರವಾಗಿಯೂ, ಜೊತೆಗೆ ಗಂಭೀರ ಹಾಗೂ ತುರ್ತು ಹೊಣೆಗಾರಿಕೆಯಾಗಿ ಸ್ವೀಕರಿಸಬೇಕೆಂದು ಅವರು ಕರೆ ನೀಡಿದರು.

13 ಮಾರ್ಚ್ 2026, 19:03