ಹುಡುಕಿ

ಡಿಸೆಂಬರ್ 2, 2025 ರಂದು ಜಗದ್ಗುರು XIVನೇ ಲಿಯೋರವರು ಬೈರುತ್ ಭೇಟಿಯ ಸಂದರ್ಭದಲ್ಲಿ ಲೆಬನಾನಿನ ಮಹಿಳೆಯೊಬ್ಬರು ಪ್ರಾರ್ಥಿಸುತ್ತಿದ್ದಾರೆ ಡಿಸೆಂಬರ್ 2, 2025 ರಂದು ಜಗದ್ಗುರು XIVನೇ ಲಿಯೋರವರು ಬೈರುತ್ ಭೇಟಿಯ ಸಂದರ್ಭದಲ್ಲಿ ಲೆಬನಾನಿನ ಮಹಿಳೆಯೊಬ್ಬರು ಪ್ರಾರ್ಥಿಸುತ್ತಿದ್ದಾರೆ  (AFP or Licensors)

"ಲೆಬನಾನ್ ವಿದೇಶಾಂಗ ಸಚಿವರು ದಕ್ಷಿಣ ಭಾಗದ ಕ್ರೈಸ್ತರಿಗೆ ಸಹಾಯ ಮಾಡಲು ಜಗದ್ಗುರುಗಳ ಅಧಿಕಾರ ಸ್ಥಳವು ನೆರವನ್ನು ವಿನಂತಿಸಿದರು.”

ದಕ್ಷಿಣ ಲೆಬನಾನ್ ಪ್ರದೇಶವು ಮತ್ತೆ ಸಂಘರ್ಷ ಮತ್ತು ಅಶಾಂತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಆ ದೇಶದ ವಿದೇಶಾಂಗ ಸಚಿವರು ಇಸ್ರೇಲ್ ಗಡಿಗೆ ಸಮೀಪದಲ್ಲಿರುವ ಕ್ರೈಸ್ತರ ಸಾನ್ನಿಧ್ಯವನ್ನು ಸಂರಕ್ಷಿಸಲು ಜಗದ್ಗುರುಗಳ ಅಧಿಕಾರ ಸ್ಥಳವು ಸಹಾಯವನ್ನು ವಿನಂತಿಸಿದ್ದಾರೆ.

ವ್ಯಾಟಿಕನ್ ವರದಿ

ಲೆಬನಾನ್ ದೇಶವು ತನ್ನ ದಕ್ಷಿಣ ಭಾಗದಲ್ಲಿರುವ ಕ್ರೈಸ್ತರ ಸಾನ್ನಿಧ್ಯವನ್ನು ಉಳಿಸಿಕೊಳ್ಳಲು ಸಹಾಯ ಮಾಡಬೇಕೆಂದು ಜಗದ್ಗುರುಗಳ ಅಧಿಕಾರ ಸ್ಥಳವು ಮನವಿ ಮಾಡಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಆರಂಭವಾದ ಸಂಘರ್ಷದ ನಂತರ, ಇಸ್ರೇಲ್ ಗಡಿಗೆ ಸಮೀಪದಲ್ಲಿರುವ ಕ್ರೈಸ್ತರು ನಿರಂತರ ಬಾಂಬ್ ದಾಳಿಗಳು ಮತ್ತು ಸ್ಥಳಾಂತರ ಆದೇಶಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ದೊಡ್ಡ ಮಾನವೀಯ ಸಂಕಷ್ಟ ಉಂಟಾಗಿದೆ.

ಲೆಬನಾನ್ ವಿದೇಶಾಂಗ ಸಚಿವರಾದ ಯೂಸೆಫ್ ರಗ್ಗಿರವರು ಮಂಗಳವಾರ ದೂರವಾಣಿ ಮೂಲಕ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರೊಂದಿಗೆ ಮಾತುಕತೆ ನಡೆಸಿದರು. ಈ ವಿಷಯವನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮ್ಯಾಟಿಯೊ ಬ್ರೂನಿ ದೃಢಪಡಿಸಿದರು. ರಗ್ಗಿ ಅವರು  ಸಾಮಾಜಿಕ ಜಾಲತಾಣದಲ್ಲಿ, ಲೆಬನಾನ್‌ನ ಇತ್ತೀಚಿನ ಬೆಳವಣಿಗೆಗಳು ಮತ್ತು ದಕ್ಷಿಣ ಗಡಿಯ ಗ್ರಾಮಗಳು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯ ಕುರಿತು ಇಬ್ಬರೂ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅವರು ಹೇಳುವ ಪ್ರಕಾರ ಆ ಗ್ರಾಮಗಳಲ್ಲಿ ಕ್ರೈಸ್ತರ ಸಾನ್ನಿಧ್ಯವನ್ನು ಉಳಿಸಲು ಜಗದ್ಗುರುಗಳ ಅಧಿಕಾರ ಸ್ಥಳವು ಮಧ್ಯಸ್ಥಿಕೆ ವಹಿಸಬೇಕು ಮತ್ತು ಸಹಾಯ ಮಾಡಬೇಕು ಎಂದು ನಾನು ವಿನಂತಿಸಿದೆ. ಆ ಗ್ರಾಮಗಳ ನಿವಾಸಿಗಳು ಸದಾ ಲೆಬನಾನ್ ರಾಜ್ಯ ಮತ್ತು ಅದರ ಅಧಿಕೃತ ಸೇನಾ ಸಂಸ್ಥೆಗಳಿಗೆ ಬೆಂಬಲ ನೀಡಿದ್ದಾರೆ ಮತ್ತು ಈ ನಿಷ್ಠೆಯಿಂದ ಎಂದಿಗೂ ಹಿಂದೆ ಸರಿದಿಲ್ಲ.

ಇದಕ್ಕೆ ಪ್ರತಿಯಾಗಿ ಆರ್ಚ್‌ಬಿಷಪ್ ಗ್ಯಾಲಾಘರ್ ರವರು, ಲೆಬನಾನ್‌ನಲ್ಲಿ ಹಿಂಸಾಚಾರ ಹೆಚ್ಚಳವಾಗದಂತೆ ತಡೆಯಲು ಮತ್ತು ಜನರನ್ನು ತಮ್ಮ ಭೂಮಿಯಿಂದ ಸ್ಥಳಾಂತರಗೊಳ್ಳದಂತೆ ಕಾಪಾಡಲು ಜಗದ್ಗುರುಗಳ ಅಧಿಕಾರ ಸ್ಥಳವು ಅಗತ್ಯವಾದ ರಾಜತಾಂತ್ರಿಕ ಸಂಪರ್ಕಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ಅವರು ತಮ್ಮ ಮತ್ತು ಜಗದ್ಗುರುಗಳ ಪ್ರಾರ್ಥನೆಗಳು ಲೆಬನಾನ್ ಜನರಿಗಾಗಿ ಇರುವುದಾಗಿ ಭರವಸೆ ನೀಡಿದ್ದಾರೆ.

ಇದಕ್ಕೂ ಮೊದಲು ಸೋಮವಾರ, ಲೆಬನಾನ್‌ನ ಕ್ಲಯಾ ಪ್ರದೇಶದಲ್ಲಿ ಮಾರೋನೈಟ್ ಕಥೋಲಿಕ ಗುರುಗಳಾದ ವಂ.ಸ್ವಾಮಿ ಪಿಯರೆ ಎಲ್-ರಾಹಿ ತಮ್ಮ ಧರ್ಮ ಕೇಂದ್ರದ ಸದಸ್ಯರ ಮನೆ ಮೇಲೆ ಟ್ಯಾಂಕ್ ದಾಳಿ ನಡೆದ ನಂತರ ಅವರಿಗೆ ಸಹಾಯ ಮಾಡಲು ಹೋಗಿದ್ದಾಗ ಮೃತಪಟ್ಟಿದ್ದರು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಜಗದ್ಗುರು XIVನೇ ಲಿಯೋರವರು ವಂ.ಸ್ವಾಮಿ ಎಲ್-ರಾಹಿರವರಿಗಾಗಿ, ಯುದ್ಧದಲ್ಲಿ ಸಾವಿಗೀಡಾದ ಅನೇಕ ನಿರಪರಾಧ ಜನರು ಹಾಗೂ ಮಕ್ಕಳಿಗಾಗಿ ಮತ್ತು ಹಿಂಸಾಚಾರ ತಕ್ಷಣ ನಿಲ್ಲಲೆಂದು ಪ್ರಾರ್ಥಿಸಿದರು.

ಜಗದ್ಗುರು XIV ನೇ ಲಿಯೋರವರು 2025 ಡಿಸೆಂಬರ್‌ನಲ್ಲಿ ಲೆಬನಾನ್ ಮತ್ತು ಟರ್ಕಿಯ ದೇಶಗಳಿಗೆ ತಮ್ಮ ಮೊದಲ ಪ್ರೇಷಿತರ  ಪ್ರವಾಸವನ್ನು ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಮಧ್ಯಪ್ರಾಚ್ಯದಲ್ಲಿ ಅತಿ ದೊಡ್ಡ ಕ್ರೈಸ್ತ ಸಮುದಾಯವಿರುವ ಲೆಬನಾನ್‌ನಲ್ಲಿ ಕ್ರೈಸ್ತರು ದೇಶದಿಂದ ಸ್ಥಳಾಂತರಗೊಳ್ಳುತ್ತಿರುವುದನ್ನು ದುಃಖದಿಂದ ಉಲ್ಲೇಖಿಸಿದ್ದರು. ಕ್ರೈಸ್ತರು ಪ್ರೀತಿ ಮತ್ತು ಶಾಂತಿಯ ನಾಗರಿಕತೆಯನ್ನು ನಿರ್ಮಿಸುವ ವಿಶೇಷ ಗುರಿ ಹೊಂದಿದ್ದಾರೆ ಎಂದು ಜಗದ್ಗುರುಗಳು ಆಗಲೇ ಹೇಳಿದ್ದಾರೆ.

11 ಮಾರ್ಚ್ 2026, 17:09