ಹುಡುಕಿ

“ಕಾರ್ಡಿನಲ್ ಲೂಯಿಸ್ ರಫೇಲ್ ಸಾಕೋರವರು “ಕಾರ್ಡಿನಲ್ ಲೂಯಿಸ್ ರಫೇಲ್ ಸಾಕೋರವರು 

“ಕಾರ್ಡಿನಲ್ ಲೂಯಿಸ್ ರಫೇಲ್ ಸಾಕೋರವರು ಬಗ್ದಾದ್‌ನ ಕಲ್ಡಿಯನ್ ಧರ್ಮ ಸಭೆಯ ಪಿತಾಮಹ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.”

ಬಗ್ದಾದ್‌ನ ಕಲ್ಡಿಯನ್ ಪಿತಾಮಹರಾಗಿದ್ದ ಕಾರ್ಡಿನಲ್ ಲೂಯಿಸ್ ರಫಾಯೇಲ್ ಸಾಕೋರವರ ರಾಜೀನಾಮೆಯನ್ನು ಜಗದ್ಗುರು XIVನೇ ಲಿಯೋರವರು ಸ್ವೀಕರಿಸಿದ ನಂತರ, ಅವರು ತಮ್ಮ ಇರಾಕ್‌ನಲ್ಲಿ ಮಾಡಿದ ವರ್ಷಗಳ ಸೇವೆಯನ್ನು ಕುರಿತು ಒಂದು ಪತ್ರವನ್ನು ಪ್ರಕಟಿಸಿದ್ದಾರೆ. ಆ ಪತ್ರದಲ್ಲಿ ಅವರು ಹೇಳುವಂತೆ, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಮತ್ತು ದೊಡ್ಡ ಸವಾಲುಗಳ ನಡುವೆಯೂ ತಾವು ಕಲ್ಡಿಯನ್ ಕಥೋಲಿಕ ಧರ್ಮ ಸಭೆಗೆ ನಾಯಕತ್ವ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಬಗ್ದಾದ್‌ನ ಕಲ್ಡಿಯನ್ ಪಿತಾಮಹರಾಗಿದ್ದ ಕಾರ್ಡಿನಲ್ ಲೂಯಿಸ್ ರಾಫೆಲ್ ಸಾಕೋರವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಈ ರಾಜೀನಾಮೆ ಪೂರ್ವ ಧರ್ಮ ಸಭೆಗಳ ಕಾನೂನು ಸಂಹಿತೆಯ (ಸಿಸಿಇಒ) ಕಾನನ್ 126 ಪ್ರಕಾರ ಅಂಗೀಕರಿಸಲಾಗಿದೆ.

ಮಂಗಳವಾರ ಬಿಡುಗಡೆಗೊಂಡ ಪತ್ರದಲ್ಲಿ ಕಾರ್ಡಿನಲ್ ಸಾಕೋರವರು, ತಾವು 75 ವರ್ಷ ವಯಸ್ಸು ತಲುಪಿದ ಎರಡು ವರ್ಷಗಳ ಹಿಂದೆಯೇ ರಾಜೀನಾಮೆ ನೀಡುವ ವಿಚಾರವನ್ನು ಆಲೋಚಿಸಿದ್ದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ ಅವರು ಜಗದ್ಗುರು ಫ್ರಾನ್ಸಿಸ್ ರವರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದರು. ಆದರೆ ಆಗ ಪೋಪ್ ಫ್ರಾನ್ಸಿಸ್ ರವರು ಇನ್ನೂ ಸೇವೆಯಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿದ್ದರು.

ಇತ್ತೀಚೆಗೆ ಅವರು ಜಗದ್ಗುರು XIVನೇ ಲಿಯೋರವರಿಗೆ ರಾಜೀನಾಮೆ ಸಲ್ಲಿಸಿದ್ದು, ಈಗಿನಿಂದ ಶಾಂತವಾಗಿ ಪ್ರಾರ್ಥನೆ, ಬರವಣಿಗೆ ಮತ್ತು ಸರಳ ಸೇವೆಯಲ್ಲಿ ತೊಡಗಿಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರವನ್ನು ಯಾರೂ ಒತ್ತಾಯಿಸಿ ಮಾಡಿಸಿಲ್ಲ ಇದು ಸಂಪೂರ್ಣವಾಗಿ ತಮ್ಮ ಸ್ವಂತ ಇಚ್ಛೆಯಿಂದ ಮಾಡಿದ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ

ಕಾರ್ಡಿನಲ್ ಸಾಕೋರವರು ತಮ್ಮ ಪತ್ರದಲ್ಲಿ, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಮತ್ತು ಅನೇಕ ಸವಾಲುಗಳ ನಡುವೆಯೂ ಕಲ್ಡಿಯನ್ ಕಥೋಲಿಕ ಧರ್ಮ ಸಭೆಗೆ ನಾಯಕತ್ವ ನೀಡಿದ್ದೇನೆ ಎಂದು ಹೇಳಿದ್ದಾರೆ. ಧರ್ಮ ಸಭೆಯ ಏಕತೆಯನ್ನು ಕಾಪಾಡಲು ಮತ್ತು ಅದರ ರಕ್ಷಣೆಗೆ ಯಾವುದೇ ಪ್ರಯತ್ನವನ್ನೂ ಬಿಡಲಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ಇರಾಕ್ ಜನರು ಮತ್ತು ಕ್ರೈಸ್ತರ ಹಕ್ಕುಗಳಿಗಾಗಿ ದೇಶದ ಒಳಗಲ್ಲಿಯೂ ಹೊರಗಲ್ಲಿಯೂ ನಿಂತು ಕಾರ್ಯನಿರ್ವಹಿಸಿದ್ದಾಗಿ ತಿಳಿಸಿದ್ದಾರೆ.

ಬಗ್ದಾದ್‌ನಲ್ಲಿ ಕಳೆದ 13 ವರ್ಷಗಳ ಸೇವೆಯನ್ನು ಅವರು ಪ್ರೀತಿ, ಆತ್ಮೀಯ ಮಾರ್ಗದರ್ಶನ ಮತ್ತು ಬೆಳವಣಿಗೆಯ ವರ್ಷಗಳೆಂದು ವಿವರಿಸಿದ್ದಾರೆ. ಮುಂದಿನ ಪಿತಾಮಹನು ಉತ್ತಮ ಧಾರ್ಮಿಕ ಜ್ಞಾನ, ಧೈರ್ಯ ಮತ್ತು ಜ್ಞಾನ ಹೊಂದಿರುವವನಾಗಿರಬೇಕು ಎಂದು ಅವರು ಆಶಿಸಿದ್ದಾರೆ. ಜೊತೆಗೆ ನವೀಕರಣ, ತೆರವು ಮನಸ್ಸು ಮತ್ತು ಸಂವಾದವನ್ನು ನಂಬುವ ನಾಯಕತ್ವ ಧರ್ಮ ಸಭೆಗೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ತಮ್ಮ ಪತ್ರದ ಕೊನೆಯಲ್ಲಿ ಕಾರ್ಡಿನಲ್ ಸಾಕೋರವರು ತಮ್ಮ ವೈಯಕ್ತಿಕ ವಿಷಯವನ್ನೂ ತಿಳಿಸಿದ್ದಾರೆ. ಸುಮಾರು ನಾಲ್ವತ್ತು ಮಿಲಿಯನ್ ಇರಾಕಿ ದಿನಾರ್, ಐದು ಸಾವಿರ ಅಮೆರಿಕನ್ ಡಾಲರ್ ಮತ್ತು ಐದು ಸಾವಿರ ಯೂರೋ ತಮ್ಮ ಬಳಿ ಇರುವುದಾಗಿ ಹೇಳಿದ್ದಾರೆ. 52 ವರ್ಷಗಳ ಯಾಜಕ ಸೇವೆಯಿಂದ ಬಂದ ಸಂಬಳ ಹಾಗೂ ಮೊಸೂಲ್‌ನ ಕುಟುಂಬ ಮನೆಯ ಮಾರಾಟದಿಂದ ಬಂದ ಹಣವೇ ಇದಾಗಿದೆ. ತಮ್ಮ ಬಳಿ ಮನೆ ಅಥವಾ ಕಾರು ಇಲ್ಲ ಎಂದು ಹೇಳಿ, ತಮ್ಮ ನಿಜವಾದ ಸಂಪತ್ತು ಎಂದರೆ ದೇವರ ಸೇವೆ ಮತ್ತು ತಾವು ಬರೆದ 45 ಪುಸ್ತಕಗಳು ಹಾಗೂ ಅನೇಕ ಲೇಖನಗಳು ಎಂದು ತಿಳಿಸಿದ್ದಾರೆ.

10 ಮಾರ್ಚ್ 2026, 15:38