Concistoro: il Papa ai cardinali, 'aiutatemi nella guida della Chiesa'

ಧರ್ಮ ಸಭೆಯಲ್ಲಿ ಮಹಿಳೆಯರ ಪಾತ್ರ ಕುರಿತು ಅಧ್ಯಯನ ಗುಂಪಿನ ಅಂತಿಮ ವರದಿಯನ್ನು ಸೀನೋಡ್ ಬಿಡುಗಡೆ ಮಾಡಿತು.

ಸಿನೊಡ್‌ನ ಪ್ರಧಾನ ಕಾರ್ಯದರ್ಶಿ ಮೂರನೇ ಅಂತಿಮ ವರದಿಯನ್ನು ಪ್ರಕಟಿಸಿದೆ. ಈ ವರದಿ ಅಧ್ಯಯನ ಗುಂಪು ಸಂಖ್ಯೆ 5ರಿಂದ ಬಂದಿದ್ದು, ಅದರ ವಿಷಯವು “ಚರ್ಚಿನ ಜೀವನ ಮತ್ತು ನಾಯಕತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ” ಎಂಬುದಾಗಿದೆ.

ವ್ಯಾಟಿಕನ್ ವರದಿ

 ಸಿನೊಡ್‌ನ ಪ್ರಧಾನ ಕಾರ್ಯದರ್ಶಿ ಇತ್ತೀಚೆಗೆ ಅಧ್ಯಯನ ಗುಂಪುಗಳ ಮೂರನೇ ಅಂತಿಮ ವರದಿಯನ್ನು ಪ್ರಕಟಿಸಿದೆ. ಈ ವರದಿ ಧರ್ಮ ಸಭೆಯ ಜೀವನ ಮತ್ತು ನಾಯಕತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಕೆಲಸ ಮಾಡಿದ ಅಧ್ಯಯನ ಗುಂಪು ಸಂಖ್ಯೆ 5ರಿಂದ ಬಂದಿದೆ. ಈ ವರದಿ ಇಟಾಲಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿದ್ದು, ಐದು ಭಾಷೆಗಳಲ್ಲಿ ಸಂಕ್ಷಿಪ್ತ ಸಾರಾಂಶವೂ ಲಭ್ಯವಿದೆ.

ಈ ಅಧ್ಯಯನ ಗುಂಪುಗಳನ್ನು ಜಗದ್ಗುರು ಫ್ರಾನ್ಸಿಸ್ ರವರು ಬಿಷಪ್‌ಗಳ XVI ನೇ ಸೀನೋಡ್‌ನ ಸಾಮಾನ್ಯ ಸಭೆಯ ಮೊದಲ ಅಧಿವೇಶನದ ನಂತರ ಸ್ಥಾಪಿಸಿದ್ದರು. ಇತ್ತೀಚೆಗೆ ಸೀನೋಡ್ ಕಚೇರಿ ಇನ್ನೆರಡು ವರದಿಗಳನ್ನೂ ಪ್ರಕಟಿಸಿತ್ತು ಡಿಜಿಟಲ್ ಪರಿಸರದಲ್ಲಿ ಧರ್ಮ ಸಭೆಯ ಗುರಿ ಕುರಿತು ಅಧ್ಯಯನ ಗುಂಪು 3 ಮತ್ತು ಯಾಜಕರ ತರಬೇತಿ ಮಾರ್ಗಸೂಚಿಯ ಪರಿಷ್ಕರಣೆ ಕುರಿತು ಅಧ್ಯಯನ ಗುಂಪು 4.

ಜಗದ್ಗುರು ಲಿಯೋರವರ ನಿರ್ದೇಶನದಂತೆ ಈ ಅಂತಿಮ ವರದಿಗಳನ್ನು ಪ್ರಕಟಿಸಲಾಗಿದೆ. ಇದರ ಉದ್ದೇಶ ಸೀನೋಡ್ ಸಮಯದಲ್ಲಿ ನಡೆದ ಚಿಂತನೆ ಮತ್ತು ವಿವೇಚನೆಯ ಫಲಗಳನ್ನು ದೇವರ ಸಮಸ್ತ ಜನರೊಂದಿಗೆ ಹಂಚಿಕೊಳ್ಳುವುದು ಹಾಗೂ ಧರ್ಮ ಸಭೆಯ ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಉತ್ತೇಜಿಸುವುದು.

ಈ ಅಂತಿಮ ವರದಿ ಮೂರು ಭಾಗಗಳಿಂದ ಕೂಡಿದೆ. ಮೊದಲ ಭಾಗದಲ್ಲಿ ಅಧ್ಯಯನ ಗುಂಪು ಸಂಖ್ಯೆ 5 ರ ಇತಿಹಾಸ ಮತ್ತು ಅದರ ಕಾರ್ಯವಿಧಾನದ ಸಂಕ್ಷಿಪ್ತ ವಿವರಣೆ ನೀಡಲಾಗಿದೆ. ಎರಡನೇ ಭಾಗದಲ್ಲಿ ಸೀನೋಡ್ ಅಧ್ಯಯನದಿಂದ ಹೊರಬಂದ ಪ್ರಮುಖ ವಿಷಯಗಳ ಸಮಗ್ರ ಸಾರವನ್ನು ನೀಡಲಾಗಿದೆ. ಇದು ಧರ್ಮ ಸಭೆಯಲ್ಲಿ  ಹೊಣೆಗಾರಿಕೆ ಹೊಂದಿರುವ ಮಹಿಳೆಯರ ಅನುಭವಗಳು ಮತ್ತು ಅವರ ಕೊಡುಗೆಗಳನ್ನು ಆಲಿಸುವ ಮೂಲಕ ರೂಪುಗೊಂಡಿದೆ.

ಈ ಅಧ್ಯಯನದಲ್ಲಿ ಮಹಿಳೆಯರ ಪ್ರಶ್ನೆ ಎಂಬುದು ಕಾಲದ ಮಹತ್ವದ ಸೂಚನೆಯಾಗಿದೆ ಎಂದು ಹೇಳಲಾಗಿದೆ. ಸ್ಥಳೀಯ ಧರ್ಮ ಸಭೆಗಳ ವಿವಿಧ ಸಂಸ್ಕೃತಿ ಮತ್ತು ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರ ಕರಿಷ್ಮಾತ್ಮಕ ಪಾತ್ರವನ್ನು ಗುರುತಿಸುವ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಜೊತೆಗೆ ಮಹಿಳೆಯರಿಗೆ ರೋಮನ್ ಪ್ರಾಂತ್ಯದ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ನೀಡಿರುವ ಜಗದ್ಗುರು ಫ್ರಾನ್ಸಿಸ್ ಮತ್ತು ಜಗದ್ಗುರು XIVನೇ ಲಿಯೋರವರ ನಿರ್ಧಾರಗಳನ್ನು ಧರ್ಮ ಸಭೆಯ ಮಾದರಿಯಂತೆ ಪರಿಗಣಿಸಲಾಗಿದೆ.

ಅಂತಿಮವಾಗಿ, ವರದಿಯ ಮೂರನೇ ಭಾಗದಲ್ಲಿ ವಿವಿಧ ಅಧ್ಯಯನಗಳು ಮತ್ತು ದಾಖಲೆಗಳ ವಿಶಾಲ ಸಂಗ್ರಹವನ್ನು ಸೇರಿಸಲಾಗಿದೆ. ಸೀನೋಡ್ ಕಚೇರಿ ತಿಳಿಸಿದಂತೆ, ಈ ಅಂತಿಮ ವರದಿಗಳು ಕಾರ್ಯಪತ್ರಗಳಾಗಿ ಪರಿಗಣಿಸಲ್ಪಡುತ್ತವೆ ಮತ್ತು ಅವುಗಳ ಆಧಾರದ ಮೇಲೆ ಮುಂದಿನ ಕ್ರಮಗಳಿಗಾಗಿ ಪ್ರಸ್ತಾವನೆಗಳನ್ನು ತಯಾರಿಸಲಾಗುತ್ತದೆ. ನಂತರ ಅವುಗಳನ್ನು ಜಗದ್ಗುರುಗಳಿಗೆ ಸಲ್ಲಿಸಲಾಗುತ್ತದೆ ಮತ್ತು ಅವರು ಅವುಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಅನುಮೋದಿಸಲಿದ್ದಾರೆ.

10 ಮಾರ್ಚ್ 2026, 15:25