ಮಾರ್ಗ(ಪಾಥ್) ಫೋರಮ್: ವೈಜ್ಞಾನಿಕ ಕಟ್ಟುನಿಟ್ಟಿನೊಂದಿಗೆ ಧರ್ಮಶಾಸ್ತ್ರವು ವಿವಿಧ ವಿದ್ಯಾಶಾಖೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು.
ವ್ಯಾಟಿಕನ್ ವರದಿ
ರೋಮಿನಲ್ಲಿ ಮಾರ್ಚ್ 6–7 ರಂದು ನಡೆದ ಅಂತರರಾಷ್ಟ್ರೀಯ ಫೋರಮ್‌ನ ಸಮಾರೋಪದಲ್ಲಿ, ಮತ್ತು ಆಡ್ ಥಿಯೋಲಾಜಿಯಂ ಪ್ರೊಮೊವೆಂಡಮ್ ಎಂಬ ಜಗದ್ಗುರು ಫ್ರಾನ್ಸಿಸ್ ರವರ ದಸ್ತಾವೇಜಿಗೆ ಸಮರ್ಪಿತವಾಗಿದ್ದ ಈ ಸಭೆಯ ಅಂತ್ಯದಲ್ಲಿ, ಆಂಟೋನಿಯೊ ಸ್ಟಾಗ್ಲಿಯಾನೊ - ಪಾಂಟಿಫಿಕಲ್ ಅಕಾಡೆಮಿ ಆಫ್ ಥಿಯಾಲಜಿ (ಪಾಥ್) ಅಧ್ಯಕ್ಷರು ಸಮಕಾಲೀನ ಧರ್ಮಶಾಸ್ತ್ರಕ್ಕೆ ಮಾರ್ಗದರ್ಶಕವಾಗುವ ಮೂರು ಮೂಲಭೂತ ತತ್ವಗಳನ್ನು ವಿವರಿಸಿದರು.
ಏಕತೆ, ಜ್ಞಾನ ಮತ್ತು ಐಕ್ಯತೆ
ಮೊದಲನೆಯದಾಗಿ, ಬಿಷಪ್ ಸ್ಟಾಗ್ಲಿಯಾನೊರವರು ಧರ್ಮಶಾಸ್ತ್ರದ ವೈಜ್ಞಾನಿಕ, ಜ್ಞಾನಮಯ ಮತ್ತು ಐಕ್ಯತಾಮಯ ಆಯಾಮಗಳ ಏಕತೆಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಇವು ಪರ್ಯಾಯ ಆಯ್ಕೆಗಳು ಅಲ್ಲ ಬದಲಾಗಿ ಒಂದೇ ಕರೆಯ ಮೂಲಭೂತ ಅಂಶಗಳಾಗಿವೆ, ಎಂದು ಅವರು ಹೇಳಿದರು.
ಕೇವಲ ವಿಜ್ಞಾನಕ್ಕೆ ಮಾತ್ರ ಕೇಂದ್ರೀಕರಿಸಿದ ಧರ್ಮಶಾಸ್ತ್ರವು ಜೀವಂತಿಕೆ ಕಳೆದುಕೊಂಡ ಪಾಂಡಿತ್ಯವಾಗುವ ಅಪಾಯವಿದೆ. ಅದೇ ವೇಳೆ ಕೇವಲ ಜ್ಞಾನಕ್ಕೆ ಒತ್ತು ನೀಡುವ ಧರ್ಮಶಾಸ್ತ್ರವು ಭಾವನಾತ್ಮಕತೆಯ ಕಡೆಗೆ ಜಾರಬಹುದು. ಹಾಗೆಯೇ ಕೇವಲ ಐಕ್ಯತೆಯ ಮೇಲೆ ನಿಂತಿರುವ ಧರ್ಮಶಾಸ್ತ್ರವು ಸತ್ಯದ ನೆಲೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಆದ್ದರಿಂದ ಈ ಮೂರು ಆಯಾಮಗಳನ್ನು ಅಧ್ಯಯನ, ಬೋಧನೆ ಮತ್ತು ಜೀವನದಲ್ಲಿ ಒಗ್ಗೂಡಿಸುವುದೇ ಮುಖ್ಯ ಸವಾಲು ಎಂದು ಅವರು ಹೇಳಿದರು.
ಸಂವಾದದಲ್ಲಿ ಧೈರ್ಯ ಮತ್ತು ವಿನಯ
ಎರಡನೆಯದಾಗಿ, ಬಿಷಪ್ ಸ್ಟಾಗ್ಲಿಯಾನೊರವರು ಧರ್ಮಶಾಸ್ತ್ರಜ್ಞರನ್ನು ಧೈರ್ಯ ಮತ್ತು ವಿನಯದೊಂದಿಗೆ ಅಂತರ್ವಿದ್ಯಾಶಾಖಾತ್ಮಕ ಸಂವಾದವನ್ನು ಅಭ್ಯಾಸಿಸುವಂತೆ ಪ್ರೋತ್ಸಾಹಿಸಿದರು.
ಸ್ವಂತ ಆರಾಮ ವಲಯವನ್ನು ಮೀರಿ, ಪರಿಚಯವಿಲ್ಲದ ಬೌದ್ಧಿಕ ಭಾಷೆಗಳೊಂದಿಗೆ ಸಂವಾದ ನಡೆಸುವ ಧೈರ್ಯವು ಅಗತ್ಯವೆಂದು ಅವರು ಹೇಳಿದರು.
ಅದೇ ಸಮಯದಲ್ಲಿ, ವಿನಯವು ಧರ್ಮಶಾಸ್ತ್ರವು ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿಲ್ಲ ಎಂಬುದನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಆದರೆ ಅದು ಜೀವನದ ಅರ್ಥ, ಮಾನವ ಗೌರವ, ಮತ್ತು ಮಾನವಕುಲ ಹಾಗೂ ಜಗತ್ತಿನ ಅಂತಿಮ ಗುರಿ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಲು ಸಹಾಯ ಮಾಡುತ್ತದೆ.
ಧರ್ಮ ಸಭೆ ಮತ್ತು ಜಗತ್ತಿನ ಸೇವೆಯಾಗಿ ಧರ್ಮಶಾಸ್ತ್ರ
ಮೂರನೆಯದಾಗಿ, ಧರ್ಮಶಾಸ್ತ್ರವು ಧರ್ಮ ಸಭೆ ಮತ್ತು ಜಗತ್ತಿನ ಸೇವೆಯಾಗಿದೆ ಎಂಬುದನ್ನು ಅವರು ಭಾಗವಹಿಸಿದವರಿಗೆ ನೆನಪಿಸಿದರು.
ಅವರು ಜಗದ್ಗುರು XIVನೇ ಲಿಯೋರವರು 2025ರಲ್ಲಿ ಅಕಾಡೆಮಿಯೊಂದಿಗೆ ನಡೆಸಿದ ಸಭೆಯನ್ನು ಉಲ್ಲೇಖಿಸಿ, ಧರ್ಮಶಾಸ್ತ್ರಜ್ಞರು ನಂಬಿಕೆಯ “ಜ್ಞಾನ” ಮತ್ತು “ರಸ” ಎರಡನ್ನೂ ಜನರಿಗೆ ತಿಳಿಸುವ ಕರೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಇದರಿಂದ ಮಾನವ ಜೀವನವು ಬೆಳಗುತ್ತದೆ ಮತ್ತು ಹೆಚ್ಚು ಸಹೋದರತ್ವ ಹಾಗೂ ಐಕ್ಯತೆಯ ಜಗತ್ತನ್ನು ನಿರ್ಮಿಸಲು ಸಹಾಯವಾಗುತ್ತದೆ.
ಜ್ಞಾನಮಯ ಧರ್ಮಶಾಸ್ತ್ರದ ಜಾಗತಿಕ ಜಾಲ ನಿರ್ಮಾಣಈ ಫೋರಮ್‌ನಲ್ಲಿ ಪಾಥ್ ಮುಂದಿನ ಉಪಕ್ರಮಗಳನ್ನೂ ಪರಿಚಯಿಸಲಾಯಿತು. ಅವುಗಳಲ್ಲಿಜ್ಞಾನಮಯ ಧರ್ಮಶಾಸ್ತ್ರದ ಜಾಗತಿಕ ಜಾಲವನ್ನು ನಿರ್ಮಿಸುವುದು,ಪ್ರಾದೇಶಿಕ ಪ್ರತಿನಿಧಿಗಳಿಗಾಗಿ ಸಾಮಾನ್ಯ ವಿಧಾನಶಾಸ್ತ್ರೀಯ ರೂಪರೇಖೆ,ಮತ್ತು ಸಮಕಾಲೀನ ಪ್ರಮುಖ ಪ್ರಶ್ನೆಗಳನ್ನು ಚರ್ಚಿಸುವ ವಿಷಯಾಧಾರಿತ ಧರ್ಮಶಾಸ್ತ್ರೀಯ ವಲಯಗಳು ಸೇರಿವೆ.ಚರ್ಚೆಗಳ ಸಾರಾಂಶವನ್ನು ನೀಡುತ್ತಾ, ಬಿಷಪ್ ಸ್ಟಾಗ್ಲಿಯಾನೊರವರು ಹೀಗೆ ಸಮಾರೋಪಿಸಿದರು
“ಭವಿಷ್ಯದ ಧರ್ಮಶಾಸ್ತ್ರವು ಅಂತರ್ವಿದ್ಯಾಶಾಖಾತ್ಮಕವಾಗಿರುತ್ತದೆ ಇಲ್ಲವಾದರೆ ಅದು ಅಸ್ತಿತ್ವದಲ್ಲೇ ಇರುವುದಿಲ್ಲ ಎಂದರು.