ಹುಡುಕಿ

ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಆಚರಿಸಿದ ಆರ್ಚ್‌ಬಿಷಪ್ ರೆಲ್ವೆಂಡೆ ಕಿಸಿಟೊ ಔಡ್ರಾಗೊ ಅವರ ಧಮಾ೯ಧ್ಯಕ್ಷೀಯ ದೀಕ್ಷೆ. ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಆಚರಿಸಿದ ಆರ್ಚ್‌ಬಿಷಪ್ ರೆಲ್ವೆಂಡೆ ಕಿಸಿಟೊ ಔಡ್ರಾಗೊ ಅವರ ಧಮಾ೯ಧ್ಯಕ್ಷೀಯ ದೀಕ್ಷೆ.  (ANSA)

“ವಿಭಜನೆಗಳ ಮಧ್ಯೆ ಶಾಂತಿ ಮತ್ತು ಏಕತೆಯನ್ನು ಕೊಂಡೊಯ್ಯುವುದು ರಾಯಭಾರಿಗಳ ಕರ್ತವ್ಯ ಎಂದು ಕಾರ್ಡಿನಲ್ ಪಾರೋಲಿನ್ ಹೇಳಿದ್ದಾರೆ.”

ಬುರ್ಕಿನಾ ಫಾಸೋದ ಯಾಗ್ಮಾ ನಗರದಲ್ಲಿ, ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ರವರು ಕಾಂಗೋ ಗಣರಾಜ್ಯ ಮತ್ತು ಗ್ಯಾಬೋನ್ ದೇಶಗಳಿಗೆ ಪ್ರೇಷಿತರ ರಾಯಭಾರಿಯಾಗಿ ನೇಮಕಗೊಂಡ ಆರ್ಚ್‌ಬಿಷಪ್ ರೆಲ್ವೆಂಡೆ ಕಿಸಿಟೋ ಒಯೆದ್ರಾಗೊ ರವರ ಧರ್ಮಾಧ್ಯಕ್ಷೀಯ ಅಭಿಷೇಕದ ಬಲಿ ಪೂಜೆಯನ್ನು ನಡೆಸಿದರು. ಅವರು ಹಲವಾರು ವರ್ಷಗಳ ಕಾಲ ಕಾರ್ಡಿನಲ್ ಪಾರೋಲಿನ್ ರವರ ವೈಯಕ್ತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ವ್ಯಾಟಿಕನ್ ವರದಿ

ಬುರ್ಕಿನಾ ಫಾಸೋದ ಯಾಗ್ಮಾ ನಗರದಲ್ಲಿರುವ ನೋಟ್ರೆ-ಡೇಮ್ ಮೈನರ್ ಬಸಿಲಿಕಾದಲ್ಲಿ ಮಾರ್ಚ್ 7 ರಂದು ಆರ್ಚ್‌ಬಿಷಪ್ ರೆಲ್ವೆಂಡೆ ಕಿಸಿಟೋ ಒಯೆದ್ರಾಗೊ ರವರ ಧರ್ಮಾಧ್ಯಕ್ಷೀಯ ಅಭಿಷೇಕದ ಬಲಿ ಪೂಜೆಯನ್ನು ನೆರವೇರಿತು. ಈ ಆಚರಣೆಗೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ಅಧ್ಯಕ್ಷತೆ ವಹಿಸಿದರು. ಹೊಸ ಆರ್ಚ್‌ಬಿಷಪ್ ಕಾಂಗೋ ಗಣರಾಜ್ಯ ಮತ್ತು ಗ್ಯಾಬೋನ್ ದೇಶಗಳಿಗೆ ಪ್ರೇಷಿತರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಅವರು ಹಲವು ವರ್ಷಗಳ ಕಾಲ ಕಾರ್ಡಿನಲ್ ಪಾರೋಲಿನ್ ರವರ ವೈಯಕ್ತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

2010ರಲ್ಲಿ ಆರ್ಚ್‌ಬಿಷಪ್ ಒಯೆದ್ರಾಗೊ ವ್ಯಾಟಿಕನ್ ರಾಜ್ಯ ಕಾರ್ಯಾಲಯದ ಸಾಮಾನ್ಯ ವ್ಯವಹಾರಗಳ ವಿಭಾಗದಲ್ಲಿ ಸೇವೆ ಪ್ರಾರಂಭಿಸಿದರು. ಈ ವರ್ಷದ ಜನವರಿ 28ರಂದು ಜಗದ್ಗುರು XIVನೇ ಲಿಯೋರವರು ಅವರನ್ನು ಬ್ರಾಜಾವಿಲ್ಲೆಯ ಪ್ರೇಷಿತರ ರಾಯಭಾರಿಯಾಗಿ ನೇಮಕ ಮಾಡಿ, ಆರ್ಚ್‌ಬಿಷಪ್ ಗೌರವದೊಂದಿಗೆ ಹಿಲ್ಟಾ ಎಂಬ ತಿತೂಲರ್ ಆಸನಕ್ಕೆ ಉತ್ತೇಜಿಸಿದರು. ಫೆಬ್ರವರಿ 10ರಂದು ಅವರನ್ನು ಲಿಬ್ರೆವಿಲ್ಲೆಯ ಜಗದ್ಗುರುಗಳ ಪ್ರತಿನಿಧಿಯಾಗಿ ಕೂಡ ನೇಮಿಸಲಾಯಿತು.

ಬಲಿಪೂಜೆಯಲ್ಲಿ ಬುರ್ಕಿನಾ ಫಾಸೋ, ಕಾಂಗೋ ಮತ್ತು ಗ್ಯಾಬೋನ್ ದೇಶಗಳಿಂದ ಅನೇಕ ಬಿಷಪ್‌ಗಳು ಮತ್ತು ಗುರುಗಳು ಭಾಗವಹಿಸಿದರು. ಸಾಂಪ್ರದಾಯಿಕ ಹಾಡುಗಳು ಮತ್ತು ನೃತ್ಯಗಳ ನಡುವೆ ಆಚರಣೆ ನಡೆಯಿತು. ತಮ್ಮ ಪ್ರಭೋಧನೆಯಲ್ಲಿ ಕಾರ್ಡಿನಲ್ ಪಾರೋಲಿನ್ ರೋಮ್‌ನಲ್ಲಿ ಆರ್ಚ್‌ಬಿಷಪ್ ಒಯೆದ್ರಾಗೊ ರವರೊಂದಿಗೆ ಕಳೆದ ದೀರ್ಘ ಸೇವೆಯ ವರ್ಷಗಳನ್ನು ನೆನಪಿಸಿಕೊಂಡು, ಜಗದ್ಗುರುಗಳ ವಿಶ್ವವ್ಯಾಪಿ ಸೇವೆಯಲ್ಲಿ ಸಹಕರಿಸುವ ಸಂತೋಷವನ್ನು ಉಲ್ಲೇಖಿಸಿದರು.

ಕಾರ್ಡಿನಲ್ ರವರು ಆರ್ಚ್‌ಬಿಷಪ್ ರವರ ಧ್ಯೇಯವಾಕ್ಯವನ್ನು ಕೂಡ ಉಲ್ಲೇಖಿಸಿದರು: ಅವರು ನಿಮಗೆ ಏನು ಹೇಳುತ್ತಾರೋ ಅದನ್ನೇ ಮಾಡಿ (ಯೋಹಾನ 2:5). ಕಾನಾದ ವಿವಾಹದಲ್ಲಿ ಮರಿಯಮ್ಮನವರು ಹೇಳಿದರು ಎಂಬ ಈ ಮಾತುಗಳು ಅವರ ಭವಿಷ್ಯದ ಸೇವೆಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು. ದೇವರ ಇಚ್ಛೆಯನ್ನು ಅನುಸರಿಸುವುದರಿಂದ ಹೃದಯದಲ್ಲಿ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಅವರು ವಿವರಿಸಿದರು.

ಕಾರ್ಡಿನಲ್ ಪಾರೋಲಿನ್ ರವರ ಪ್ರಕಾರ ಪ್ರೇಷಿತರ ರಾಯಭಾರಿಯ ಕರ್ತವ್ಯವು ವಿಭಜನೆ ಮತ್ತು ತಪ್ಪು ಬೋಧನೆಗಳ ನಡುವೆಯೂ ಸತ್ಯ, ಶಾಂತಿ ಮತ್ತು ಏಕತೆಯನ್ನು ತರಲು ಪ್ರಯತ್ನಿಸುವುದಾಗಿದೆ. ಕೆಲವರು ಅಹಂಕಾರದಿಂದ ಜನರನ್ನು ತಪ್ಪು ದಾರಿಯಲ್ಲಿ ನಡೆಸುವ “ಸುಳ್ಳು ಪ್ರವಾದಿಗಳು” ಆಗಿರಬಹುದು ಎಂದು ಅವರು ಎಚ್ಚರಿಸಿದರು. ಆದ್ದರಿಂದ ರಾಯಭಾರಿಗಳು ಸತ್ಯವನ್ನು ಸಾರುವ ಒಳ್ಳೆಯ ಮೇಯ್ದಾರನಂತೆ ತನ್ನ ಜನರಿಗಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಕೊನೆಯಲ್ಲಿ, ರಾಯಭಾರಿಗಳ ಗುರಿ ಜನರ ನಡುವೆ ಸಂಬಂಧಗಳನ್ನು ಮತ್ತು ಸೇತುವೆಗಳನ್ನು ನಿರ್ಮಿಸುವುದಾಗಿದೆ ಎಂದು ಕಾರ್ಡಿನಲ್ ಹೇಳಿದರು. ಪ್ರಾರ್ಥನೆ ಮತ್ತು ಪ್ರೀತಿ ಅವರ ಸೇವೆಯ ಕೇಂದ್ರವಾಗಿರಬೇಕು. ಅವರು ಮರಿಯಮ್ಮನವರು ಮತ್ತು ಉಗಾಂಡಾ ಶಹೀದರ ಮಧ್ಯಸ್ಥಿಕೆಗೆ ಆರ್ಚ್‌ಬಿಷಪ್ ಒಯೆದ್ರಾಗೊ ಅವರನ್ನು ಒಪ್ಪಿಸಿ, ಅವರ ಹೊಸ ಸೇವೆಗೆ ಆಶೀರ್ವಾದ ಕೋರಿದರು.

07 ಮಾರ್ಚ್ 2026, 21:54