2023.04.18 Sister-led-dialogue su ambiente

ವ್ಯಾಟಿಕನ್ ತೋಟಗಳಲ್ಲಿ ನೆಡಲಾದ ಮರ – ಸೃಷ್ಟಿಯತ್ತ ಜವಾಬ್ದಾರಿಯ ಸಂಕೇತ

ರಾಷ್ಟ್ರೀಯ ಕೃಷಿಶಾಸ್ತ್ರಜ್ಞರು ಮತ್ತು ಅರಣ್ಯ ತಜ್ಞರ ಸಂಘವಾದ ಕೃಷಿ ವಿಜ್ಞಾನಿಗಳು ಮತ್ತು ಅರಣ್ಯಾಧಿಕಾರಿಗಳ ರಾಷ್ಟ್ರೀಯ ಆದೇಶ ಸಂಸ್ಥೆ ಜಗದ್ಗುರುಗಳಿಗೆ ಗಿಂಕ್ಗೊ ಬಿಲೋಬ ಮರವನ್ನು ಉಡುಗೊರೆಯಾಗಿ ನೀಡಿದ್ದು, ಆ ಮರವನ್ನು ವ್ಯಾಟಿಕನ್ ಗಾಡ೯ನ್ ನಲ್ಲಿ ನೆಡಲಾಗಿದೆ. ಮರ ನೆಡುವ ಸಮಾರಂಭದ ಸಂದರ್ಭದಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಯಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾದ ಪ್ರತಿನಿಧಿ ಮಾತನಾಡಿ, ಪರಿಸರ ಸಂಬಂಧಿತ ಕೆಡುಕುಗಳ ಎದುರು ಮಾನವಕುಲವೇ ಯಾವಾಗಲೂ ಪರಿಹಾರವಾಗಿರಬೇಕು ಸಮಸ್ಯೆಯಾಗಬಾರದು ಎಂದು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಮಾರ್ಚ್ 6 ರಂದು ಪೂರ್ವ ಏಷ್ಯಾದ ಅತ್ಯಂತ ಹಳೆಯ ಔಷಧೀಯ ಸಸ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಗಿಂಕ್ಗೊ ಬಿಲೋಬ ಮರವನ್ನು ವ್ಯಾಟಿಕನ್ ತೋಟದ ಒಂದು ಮೂಲೆಯಲ್ಲಿ ನೆಡಲಾಯಿತು. ಈ ಮರವನ್ನು ಕೃಷಿ ವಿಜ್ಞಾನಿಗಳು ಮತ್ತು ಅರಣ್ಯಾಧಿಕಾರಿಗಳ ರಾಷ್ಟ್ರೀಯ ಆದೇಶ (CONAF) ಸಂಸ್ಥೆ ಜಗದ್ಗುರುಗಳಿಗೆ ಉಡುಗೊರೆಯಾಗಿ ನೀಡಿತ್ತು. ಜಗದ್ಗರುಗಳಳು ನವೆಂಬರ್ 5 ರಂದು ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿದಾಗ, ಭೂಮಿ ನಮ್ಮ ಸ್ವತ್ತು ಅಲ್ಲ ಅದು ದೇವರಿಂದ ದೊರೆತ ವರ. ಅದನ್ನು ಗೌರವದಿಂದ ಬೆಳೆಸುವುದು ದೇವರ ಸೃಷ್ಟಿಕಾರ್ಯದಲ್ಲಿ ಪಾಲ್ಗೊಳ್ಳುವಂತಾಗಿದೆ ಎಂದು ಹೇಳಿದರು.

ಮರ ನೆಡುವ ಸಮಾರಂಭದಲ್ಲಿ ಆರ್ಚ್‌ಬಿಷಪ್ ಎಮಿಲಿಯೊ ನಪ್ಪಾ, ವ್ಯಾಟಿಕನ್ ನಗರ ಆಡಳಿತದ ಪ್ರಧಾನ ಕಾರ್ಯದರ್ಶಿ, ಮಾತನಾಡಿ ಮರ ನೆಡುವುದು ಸಂಬಂಧ ಮತ್ತು ಜವಾಬ್ದಾರಿಯ ಸಂಕೇತ ಎಂದು ಹೇಳಿದರು. ಪ್ರಕೃತಿಯೊಂದಿಗೆ ಸಮನ್ವಯದಲ್ಲಿ ಬದುಕುವುದು ಹಾಗೂ ಸೃಷ್ಟಿಯತ್ತ ಹೊಣೆಗಾರಿಕೆಯನ್ನು ಹೊಂದುವುದು ಅತ್ಯಂತ ಅಗತ್ಯವೆಂದು ಅವರು ಒತ್ತಿಹೇಳಿದರು. ಪರಿಸರ ಸಂರಕ್ಷಣೆಯ ಉಲ್ಲಂಘನೆಗಳು ಇಟಲಿ ಮತ್ತು ಜಗತ್ತಿನ ಅನೇಕ ಭಾಗಗಳಲ್ಲಿ ನಡೆಯುತ್ತಿರುವುದನ್ನು ಅವರು ವಿಷಾದಿಸಿದರು.

ಅವರು ವಿಶೇಷವಾಗಿ ಪರಿಸರವನ್ನು ಹಾನಿಗೊಳಿಸುವ ಆರ್ಥಿಕ ಸ್ವಾರ್ಥಗಳ ಬಗ್ಗೆ ಎಚ್ಚರಿಸಿದರು. ಇಟಲಿಯ ಕ್ಯಾಂಪಾನಿಯಾ ಪ್ರದೇಶದ ಬೆಂಕಿಯ ಭೂಮಿ ಎಂಬ ಪ್ರದೇಶವನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಭೂಮಿಯನ್ನು ದುರುಪಯೋಗಪಡಿಸಿಕೊಂಡ ಪರಿಣಾಮವಾಗಿ ಮಾಲಿನ್ಯ ಮತ್ತು ಹಾನಿ ಉಂಟಾಗಿರುವುದನ್ನು ಹೇಳಿದರು. ಭವಿಷ್ಯದ ಪೀಳಿಗೆಗಳ ಬಗ್ಗೆ ಯೋಚಿಸುವ ಜವಾಬ್ದಾರಿ ಮಾನವಕುಲದ ಮೇಲೆ ಇದೆ ಎಂದು ಅವರು ಹೇಳಿದರು.

ಈ ಸಮಾರಂಭದಲ್ಲಿ ಮಾತನಾಡಿದ ಆರ್ಚ್‌ಬಿಷಪ್ ಫರ್ನಾಂಡೊ ಚಿಕಾ ಅರೆಲ್ಲಾನೊ, ಜಗದ್ಗುರುಗಳ ಅಧಿಕಾರ ಸ್ಥಳವು ಪ್ರತಿನಿಧಿಯಾಗಿ ಆಹಾರ ಮತ್ತು ಕೃಷಿ ಸಂಸ್ಥೆ, ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ, ಮತ್ತು ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮರ ನೆಡುವುದು ಅರಣ್ಯನಾಶ ಮತ್ತು ಮರುಭೂಮೀಕರಣದ ವಿರುದ್ಧದ ಹೋರಾಟವಾಗಿದ್ದು, ಮಾನವನು ಸಮಸ್ಯೆಯಾಗದೆ ಪರಿಹಾರವಾಗಬೇಕು ಎಂದು ಅವರು ಹೇಳಿದರು.

ಸಿಒಎನ್ಎಎಫ್ ಅಧ್ಯಕ್ಷರಾದ ಮೌರೊ ಯುನಿಫಾರ್ಮಿ ರವರ ಮಾತುಗಳಲ್ಲಿ, ಜಗದ್ಗುರು XIVನೇ ಲಿಯೋರವರ ಪ್ರೇರಣೆಯಿಂದ ಭೂಮಿಯ ಸಂರಕ್ಷಣೆ, ಶಿಕ್ಷಣ ಮತ್ತು ಸ್ಥಿರತೆಯ ಕಡೆಗೆ ಕಾರ್ಯಪ್ರವೃತ್ತರಾಗುವ ಸಂಕಲ್ಪದಿಂದ “ರೂಟ್ಸ್ ಇನ್ ದ ಫ್ಯೂಚರ್” ಎಂಬ ಧ್ಯೇಯದೊಂದಿಗೆ ರೋಮ್ ಚಾರ್ಟರ್ ರೂಪುಗೊಂಡಿದೆ. ಈ ದಸ್ತಾವೇಜು ಕೃಷಿಶಾಸ್ತ್ರ ಮತ್ತು ಅರಣ್ಯ ವೃತ್ತಿಗಳಿಗೆ ಭವಿಷ್ಯದ ದಿಕ್ಕನ್ನು ಸೂಚಿಸುತ್ತದೆ.

ಗಿಂಕೊ ಬಿಲೋಬಾ ಮರವು ತನ್ನದೇ ಆದ ಸಂಕೇತಾರ್ಥವನ್ನು ಹೊಂದಿದೆ. ಸುಮಾರು 200 ಮಿಲಿಯನ್ ವರ್ಷಗಳ ಹಿಂದೆ ಇದ್ದ ಸಸ್ಯಗಳಿಂದ ಬಂದಿರುವುದರಿಂದ ಇದನ್ನು “ಜೀವಂತ ಜೀವಾಶ್ಮ” ಎಂದು ಕರೆಯುತ್ತಾರೆ. ಇದು ಜಪಾನ್‌ನ ಹಿರೋಷಿಮಾದ ಪರಮಾಣು ಬಾಂಬ್ ದಾಳಿ ನಂತರವೂ ಬದುಕಿ ಮತ್ತೆ ಬೆಳೆದ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಈ ಮರ ಸಮತೋಲನ, ನೆನಪು, ಸಹನಶಕ್ತಿ ಮತ್ತು ಪುನರುತ್ಥಾನದ ಸಂಕೇತವಾಗಿದ್ದು, ನಾಶದ ಬಳಿಕವೂ ಹೊಸ ಜೀವವನ್ನು ನೀಡುವ ಭರವಸೆಯ ಪ್ರತಿರೂಪವಾಗಿದೆ.

06 ಮಾರ್ಚ್ 2026, 20:25