2026.03.07 International Women's Day - St Anne Sodality in South Africa

ಜಗದ್ಗರುಗಳ ಅಧಿಕಾರ ಸ್ಥಳ:ಅಮೆರಿಕ ಖಂಡದ ಡಿಜಿಟಲ್ ಪರಿವರ್ತನೆಯ ಕೇಂದ್ರದಲ್ಲೇ ಮಹಿಳೆಯರು ಇರಬೇಕು.

ಅಮೆರಿಕ ಖಂಡದ ಡಿಜಿಟಲ್ ಪರಿವರ್ತನೆಯ ಕೇಂದ್ರದಲ್ಲಿ ಮಹಿಳೆಯರು ಹಾಗೂ ಮಾನವ ಗೌರವ ಇರಬೇಕು ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಮನವಿ ಮಾಡಿದೆ. ಅಮೇರಿಕನ್ ರಾಜ್ಯಗಳ ಸಂಘಟನೆಯಲ್ಲಿ ನಡೆದ, ಅಂತರರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಆಯೋಜಿಸಲಾದ ಅಧಿವೇಶನದಲ್ಲಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾದ ಮೊನ್ಸಿಂಜರ್ ಜುವಾನ್ ಆಂಟೋನಿಯೊ ಕ್ರೂಜ್ ಸೆರಾನೊ, ಮಹಿಳೆಯರು ಎದುರಿಸುವ ಹಿಂಸಾಚಾರ ಮತ್ತು ಹೊರಗುಳಿಯುವಿಕೆಯ ಬಗ್ಗೆ ಜಗದ್ಗುರು XIVನೇ ಲಿಯೋರವರು ನೀಡಿರುವ ಎಚ್ಚರಿಕೆಯನ್ನು ಕೂಡ ಸ್ಮರಿಸಿದರು.

ವ್ಯಾಟಿಕನ್ ವರದಿ

 ಅಮೇರಿಕನ್ ರಾಜ್ಯಗಳ ಸಂಘಟನೆಯ(ಒಎಎಸ್) ಸಂಸ್ಥೆಯ ವಾಷಿಂಗ್ಟನ್, ಡಿ.ಸಿ.. ನಗರದಲ್ಲಿರುವ ಸಭೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು ಮಹಿಳೆಯರ ಸಮಾನ ಮಾನವ ಗೌರವವನ್ನು ಒತ್ತಿಹೇಳುತ್ತಾ, ಅಮೆರಿಕ ಖಂಡದಾದ್ಯಂತ ಸಾಮೂಹಿಕ ಹಿತಕ್ಕೆ ಸೇವೆ ಮಾಡುವ ನೈತಿಕ ಮತ್ತು ಒಳಗೊಂಡಿರುವ ಡಿಜಿಟಲ್ ಅಭಿವೃದ್ಧಿಗೆ ಕರೆ ನೀಡಿದೆ.

ಅಂತರರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಆಯೋಜಿಸಲಾದ ಒಎಎಸ್‌ನ ಶಾಶ್ವತ ಮಂಡಳಿಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳ, ಈ ಪ್ರದೇಶದ ಡಿಜಿಟಲ್ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಮಹತ್ವದ ಪಾತ್ರವನ್ನು ಚಿಂತನೆಗೆ ತಂದಿತು. ತಂತ್ರಜ್ಞಾನ ಪ್ರಗತಿ ಯಾವಾಗಲೂ ಮಾನವ ವ್ಯಕ್ತಿಯ ಗೌರವವನ್ನು ಕೇಂದ್ರವಾಗಿಟ್ಟುಕೊಂಡಿರಬೇಕು ಎಂದು ಅದು ಒತ್ತಿಹೇಳಿತು.

ಜಗದ್ಗರುಗಳ ಅಧಿಕಾರ ಸ್ಥಳದ ಪರವಾಗಿ ಮಾತನಾಡಿದ ಒಎಎಸ್‌ನ ಶಾಶ್ವತ ವೀಕ್ಷಕರಾದ ಮೊನ್ಸಿಂಜರ್ ಜುವಾನ್ ಆಂಟೋನಿಯೊ ಕ್ರೂಜ್ ಸೆರಾನೊ ಅಮೆರಿಕ ಖಂಡದ ಡಿಜಿಟಲ್ ಪರಿವರ್ತನೆಯಲ್ಲಿ ಮಹಿಳೆಯರು ಎಂಬ ವಿಷಯಕ್ಕೆ ಸಮರ್ಪಿಸಲಾದ ಈ ವಿಶೇಷ ಅಧಿವೇಶನವನ್ನು ಸ್ವಾಗತಿಸಿದರು.

“ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸ್ಮರಿಸಲು ಈ ವಿಶೇಷ ಅಧಿವೇಶನವನ್ನು ಕರೆದಿರುವುದನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪ್ರತಿನಿಧಿ ಮಂಡಳಿ ಸಂತೋಷದಿಂದ ಸ್ವಾಗತಿಸುತ್ತದೆ, ಎಂದು ಅವರು ಹೇಳಿದರು. ಆಳವಾದ ತಂತ್ರಜ್ಞಾನಿಕ ಬದಲಾವಣೆಗಳ ಕಾಲದಲ್ಲಿ ಮಹಿಳೆಯರ ಕೊಡುಗೆಗಳ ಬಗ್ಗೆ ಚಿಂತಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಮೋನ್ಸಿನಿಯರ್ ಕ್ರೂಜ್ ಸೆರಾನೊರವರು ಎಲ್ಲಾ ಮಹಿಳೆಯರು ಮತ್ತು ಪುರುಷರು ಹಂಚಿಕೊಳ್ಳುವ ಮೂಲಭೂತ ಮಾನವ ಗೌರವವನ್ನು ಒತ್ತಿಹೇಳಿದರು. ದೇವರಿಂದ ದೊರೆತ ಮಹಿಳೆಯರ ಸಮಾನ ಗೌರವ ಹಾಗೂ ಸಮಾಜ ನಿರ್ಮಾಣದಲ್ಲಿ ಅವರು ವಹಿಸುವ ಮಹತ್ವದ ಪಾತ್ರವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಇದೇ ವೇಳೆ ಅವರು ಜಗದ್ಗುರುಗಳ ಮಾತುಗಳನ್ನು ಸ್ಮರಿಸಿದರು. ವಿಶ್ವದ ಅನೇಕ ಮಹಿಳೆಯರು ಎದುರಿಸುತ್ತಿರುವ ವಿಶೇಷ ಅಸುರಕ್ಷತೆ ಕುರಿತು ಜಗದ್ಗುರುಗಳು ಗಮನ ಸೆಳೆದಿದ್ದಾರೆ.

ಹೊರಗುಳಿಯುವಿಕೆ, ದುರ್ವ್ಯವಹಾರ ಮತ್ತು ಹಿಂಸಾಚಾರವನ್ನು ಅನುಭವಿಸುವ ಮಹಿಳೆಯರು ಎರಡರಷ್ಟು ಬಡವರಾಗುತ್ತಾರೆ, ಎಂದು ಜಗದ್ಗುರುಗಳು ಹೇಳಿದ್ದಾರೆ. ಯಾಕೆಂದರೆ ತಮ್ಮ ಹಕ್ಕುಗಳನ್ನು ರಕ್ಷಿಸಲು ಅವರಿಗೆ ಬಹುಮಟ್ಟಿಗೆ ಕಡಿಮೆ ಅವಕಾಶಗಳಿರುತ್ತವೆ.

ಇಂದಿನ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಿಕ ಪರಿಸ್ಥಿತಿಯಲ್ಲಿ ಈ ವಾಸ್ತವಿಕತೆ ಇನ್ನಷ್ಟು ಮಹತ್ವ ಪಡೆಯುತ್ತದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಹೇಳಿದೆ. ವಿಶೇಷವಾಗಿ ಎಐ ಉದಯವು ಸಮಗ್ರ ಸಮಾಜಕ್ಕೆ ಹೊಸ ಹಂತವನ್ನು ಸೂಚಿಸುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕಾರಣಕ್ಕಾಗಿ ಡಿಜಿಟಲ್ ಪರಿವರ್ತನೆ ಜವಾಬ್ದಾರಿಯುತ ನಿಯಂತ್ರಣ, ಅಂತರರಾಷ್ಟ್ರೀಯ ಸಹಕಾರ ಹಾಗೂ ಹೊಸ ತಂತ್ರಜ್ಞಾನಗಳ ಸುರಕ್ಷಿತ ಮತ್ತು ನೈತಿಕ ಬಳಕೆಯನ್ನು ಉತ್ತೇಜಿಸುವ ಶಿಕ್ಷಣದ ಮೂಲಕ ಮಾರ್ಗದರ್ಶಿತವಾಗಿರಬೇಕು ಎಂದು ಮೋನ್ಸಿನಿಯರ್ ಕ್ರೂಜ್ ಸೆರಾನೊ ಒತ್ತಿಹೇಳಿದರು.

06 ಮಾರ್ಚ್ 2026, 20:06