ವ್ಯಾಟಿಕನ್‌ನಲ್ಲಿ ನಡೆದ ಸಮ್ಮೇಳನ ವ್ಯಾಟಿಕನ್‌ನಲ್ಲಿ ನಡೆದ ಸಮ್ಮೇಳನ  (2026 Getty Images)

ವ್ಯಾಟಿಕನ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ನೈತಿಕತೆ ಕುರಿತು ಸಮ್ಮೇಳನ ಆಯೋಜನೆ

ಜಗದ್ಗರುಗಳ ಪ್ರಶಂಸೆ ಮತ್ತು ಪ್ರೋತ್ಸಾಹ”ದೊಂದಿಗೆ, ಆರ್ಥಿಕ ಕಾರ್ಯದರ್ಶಾಲಯ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ಕಾರ್ಮಿಕ ಕಚೇರಿ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯಗಳು ಮತ್ತು ಸವಾಲುಗಳ ಕುರಿತು ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿವೆ.

ವ್ಯಾಟಿಕನ್ ವರದಿ

“ಸಾಧನಗಳ ಸಮೃದ್ಧಿ ಮತ್ತು ಗುರಿಗಳ ಗೊಂದಲ.” ಅಲ್ಬರ್ಟ್ ಐನ್‌ಸ್ಟೈನ್ ರವರಿಗೆ ಸಂಬಂಧಿಸಲಾಗಿದೆ ಎಂದು ಹೇಳಲಾಗುವ ಈ ವಾಕ್ಯವು, ಹೊಸ ತಂತ್ರಜ್ಞಾನಗಳಿಂದ ಸವಾಲುಗಳನ್ನು ಎದುರಿಸುತ್ತಾ ಮತ್ತು ಅವುಗಳಿಂದ ರೂಪುಗೊಳ್ಳುತ್ತಿರುವ ಜಗತ್ತಿನ ಒಂದು ಚಿತ್ರಣವನ್ನು ನೀಡುತ್ತದೆ. ಇಲ್ಲಿ ಸಂಬಂಧಪಟ್ಟ ಹಿತಾಸಕ್ತಿಗಳು ಅನೇಕವಾಗಿದ್ದು, ಅವು ತಟಸ್ಥವಾಗಿಲ್ಲ. ಈ ಸಂದರ್ಭದಲ್ಲಿ, ಯಾವುದೇ ಸೈನಿಕ ಅಥವಾ ವಾಣಿಜ್ಯ ಉದ್ದೇಶಗಳನ್ನು ಹೊಂದಿಲ್ಲದ, ಆರಂಭಿಕ ವಿನ್ಯಾಸ ಹಂತದಿಂದಲೇ ನೈತಿಕವಾಗಿರುವ ವ್ಯವಸ್ಥೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದ ಜಾಗತಿಕ ಆಡಳಿತವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.

ಈ ವಿಷಯಗಳು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯಗಳು ಮತ್ತು ಸವಾಲುಗಳು ಎಂಬ ಶೀರ್ಷಿಕೆಯೊಂದಿಗೆ ಇಂದು, ಸೋಮವಾರ  ಮಾರ್ಚ್2ರಂದು , ರೋಮಿನ ವಿಯಾ ದೆಲ್ಲಾ ಕೊಂಚಿಲಿಯಾಜಿಯೋನೇ 5ರಲ್ಲಿ ಇರುವ X ನೇ  ಸಾಲೋನೆ ಸಾನ್ ಪಿಯೋ  ಸಭಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಸ್ತಾಪಿಸಲ್ಪಟ್ಟವು. ಈ ಕಾರ್ಯಕ್ರಮವನ್ನು ಆರ್ಥಿಕ ಕಾರ್ಯದರ್ಶಾಲಯ ಮತ್ತು ಪ್ರೇಷಿತರ ಅಧಿಕಾರ ಸ್ಥಳದ ಕಾರ್ಮಿಕ ಕಚೇರಿ ಸಂಯುಕ್ತವಾಗಿ ಆಯೋಜಿಸಿತು.

ಕಾರ್ಯಕ್ರಮವನ್ನು ಯು ಎಲ್ ಎಸ್ ಎ  ನಿರ್ದೇಶಕರಾದ ಪ್ರೊಫೆಸರ್ ಪಾಸ್ಕ್ವಾಲೆ ಪಸ್ಸಾಲಾಕ್ವಾ ಉದ್ಘಾಟಿಸಿದರು. ಈ ಉಪಕ್ರಮದ ಕುರಿತು ಅದರ ಅಧ್ಯಕ್ಷರಾದ ಮೊನ್ಸಿನಿಯರ್ ಮಾರ್ಕೋ ಸ್ಪ್ರಿಜ್ಜಿ ಜಗದ್ಗುರು XIVನೇ ಲಿಯೋರವರಿಗೆ ತಿಳಿಸಿದಾಗ, ಜಗದ್ಗುರುಗಳು ಸ್ವತಃ ಇದನ್ನು ಪ್ರಶಂಸಿಸಿ ಮತ್ತು ಪ್ರೋತ್ಸಾಹಿಸಿದರು ಎಂದು ಅವರು ತಿಳಿಸಿದರು. ಈ ಅತ್ಯಂತ ಪ್ರಾಮುಖ್ಯತೆಯ ಮತ್ತು ಸಂಕೀರ್ಣ ಕ್ಷೇತ್ರದಲ್ಲಿ ಇನ್ನಷ್ಟು ಆಳವಾದ ಜಾಗೃತಿ ಮೂಡಲಿ ಎಂಬ ಆಶಯವನ್ನೂ ಜಗದ್ಗುರುಗಳು ವ್ಯಕ್ತಪಡಿಸಿದರು. ಚರ್ಚೆಯನ್ನು ಸಂವಹನ ಡಿಕಾಸ್ಟರಿಯ ಉಪ ಸಂಪಾದಕೀಯ ನಿರ್ದೇಶಕರಾದ ಅಲೆಸ್ಸಾಂದ್ರೊ ಜಿಸೋಟ್ಟಿ ನಿರ್ವಹಿಸಿದರು.

ಪ್ರಮುಖ ವಕ್ತಾರರಲ್ಲಿ ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿಯ ಕಾರ್ಯದರ್ಶಿ ಬಿಷಪ್ ಪಾಲ್ ಟೈಘ್; ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯ ಮತ್ತು ಲೂಯಿಸ್ ಗುಯಿಡೋ ಕಾರ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಫ್ರಾನ್ಸಿಸ್ಕನ್ ಸಂನ್ಯಾಸಿ ಪಾವ್ಲೋ ಬೆನಾಂತಿ; ಮತ್ತು ರೋಮ್‌ನ ಕ್ಯಾಂಪಸ್ ಬಯೋ-ಮೆಡಿಕೋ ವಿಶ್ವವಿದ್ಯಾಲಯದ ಇಂಟೆಲಿಜೆಂಟ್ ಸಿಸ್ಟಮ್ಸ್ ಎಂಜಿನಿಯರಿಂಗ್ ಸ್ನಾತಕೋತ್ತರ ಕಾರ್ಯಕ್ರಮದ ಉಪನ್ಯಾಸಕರಾದ ಪ್ರೊಫೆಸರ್ ಕೊರ್ರಾಡೋ ಜಿಯುಸ್ತೊಝ್ಝಿ ಇದ್ದರು.

2022ರಲ್ಲಿ ಚಾಟ್‌ಜಿಪಿಟಿ ವ್ಯಾಪಕವಾಗಿ ಬಳಕೆಗೆ ಬಂದ ಪರಿಣಾಮಗಳನ್ನು ಸಾರಾಂಶಗೊಳಿಸಲು, ಬಿಷಪ್ ಟೈಘ್ “VUCA” ಎಂಬ ಸಂಕ್ಷಿಪ್ತ ರೂಪವನ್ನು ಬಳಿಸಿದರು: ಅಸ್ಥಿರತೆ , ಅನಿಶ್ಚಿತತೆ  ಸಂಕೀರ್ಣತೆ ಮತ್ತು ಅಸ್ಪಷ್ಟತೆ ಈ ಹಿನ್ನೆಲೆದಲ್ಲಿ, ಅವರು ಇತ್ತೀಚಿನ ಬೆಳವಣಿಗೆಗಳು ಹಾಗೂ ಹೆಚ್ಚು ನೈತಿಕ ಎಐ ಅನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿತವಾದ ಅಮೆರಿಕಾದ ಕಂಪನಿ ಅಂಥ್ರೋಪಿಕ್ ಪ್ರಕರಣವನ್ನು ಉಲ್ಲೇಖಿಸಿದರು. ಸೇನಾ ಮತ್ತು ನಿಗಾವಹಿಸುವ ಬಳಕೆಗಳ ಕುರಿತು ತನ್ನ ನೈತಿಕ ಬದ್ಧತೆಗಳನ್ನು ಸಡಿಲಗೊಳಿಸಲು ಆ ಕಂಪನಿಯ ಮೇಲೆ ಸರ್ಕಾರದ ಒತ್ತಡ ಇದ್ದಿರಬಹುದು ಎಂದು ವರದಿಯಾಗಿದೆ.

ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ತಟಸ್ಥ ಸ್ಥಳಗಳಲ್ಲಿ ನಡೆಯುವುದಿಲ್ಲ ಅದು ಭೂರಾಜಕೀಯ ಪೈಪೋಟಿಗಳು, ವಾಣಿಜ್ಯ ಒತ್ತಡಗಳು ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

ಇಂತಹ ಸಂಕೀರ್ಣತೆಗಳ ನಡುವೆ, ಬಿಷಪ್ “ಆಂಟಿಕ್ವಾ ಎಟ್ ನೋವಾ” ಎಂಬ ದಸ್ತಾವೇಜನ್ನು ಉಲ್ಲೇಖಿಸಿ, ಒಟ್ಟಾರೆಯನ್ನೂ ಅದರ ಭಾಗಗಳನ್ನೂ ಏಕೀಕರಿಸಬಲ್ಲ ಹೃದಯದ ಜ್ಞಾನವೇ ಇಂದಿನ ಮಾನವಕುಲಕ್ಕೆ ಅತ್ಯಂತ ಅಗತ್ಯವೆಂದು ತಿಳಿಸಿದರು.

ಧರ್ಮ ಸಭೆ ತನ್ನ ಪಾಲಿಗೆ ನೈತಿಕ ಪ್ರಾಮುಖ್ಯತೆ ಹಾಗೂ ಅರ್ಹ ಸಂವಾದಿಗಳನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಐ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವಲ್ಲಿ ಅರ್ಥಪೂರ್ಣ ಸಹಭಾಗಿಯಾಗಬಹುದು ಎಂದು ಅವರು ಹೇಳಿದರು.

ಹಸ್ತಕ್ಷೇಪಗಳ ವಿಷಯಗಳನ್ನು ಒಟ್ಟುಗೂಡಿಸಿ, ಜಿಸೋಟ್ಟಿ ಈ ಸಮ್ಮೇಳನವು ಧಾರ್ಮಿಕ ಸಮುದಾಯದ ಬದ್ಧತೆಯನ್ನೂ ಪ್ರತಿನಿಧಿಸುತ್ತದೆ ಎಂದು ಒತ್ತಿಹೇಳಿದರು.

ಯಾಜಕರಾದ ಬೆನಾಂತಿಯ ಪ್ರಸ್ತುತಿಕರಣವು ಕೃತಕ ಬುದ್ಧಿಮತ್ತೆಯ ನೈತಿಕ ಸವಾಲುಗಳ ಮೇಲೆ ಕೇಂದ್ರೀಕರಿಸಿತು. ಅವರು ಮಾದರಿಗಳೊಳಗೆ ಅಡಕವಾಗಿರುವ ರಾಜಕೀಯ ಅಂಶಗಳನ್ನು ಪ್ರಶ್ನಿಸುವ ಹೊಸ ತಂತ್ರಜ್ಞಾನ ನೈತಿಕತೆಯನ್ನು ಪ್ರಸ್ತಾಪಿಸಿದರು. ಯಾವುದೇ ತಂತ್ರಜ್ಞಾನ ವಸ್ತು ಒಂದು ಸಾಮಾಜಿಕ ಸಂದರ್ಭವನ್ನು ಪ್ರಭಾವಿಸಿದಾಗ, ಅದು ಶಕ್ತಿಯ ವಿನ್ಯಾಸವಾಗಿಯೂ ಒಂದು ವ್ಯವಸ್ಥೆಯ ರೂಪವಾಗಿಯೂ ಕಾರ್ಯನಿರ್ವಹಿಸುತ್ತದೆ,ಎಂದು ಫ್ರಾನ್ಸಿಸ್ಕನ್ ಹೇಳಿದರು.

ಇದು ತುರ್ತು ಪ್ರಶ್ನೆಯಾಗಿದೆ ಎಂದು ಅವರು ಸೇರಿಸಿದರು. ಜಗದ್ಗರುಗಳ ಅಧಿಕಾರ ಸ್ಥಳದಿಂದ ಯುನೈಟೆಡ್ ನೇಷನ್ಸ್ ತನಕ ವಿವಿಧ ವೇದಿಕೆಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದೆ ಬೆನಾಂತಿರವರು ಯುಎನ್ ಕೃತಕ ಬುದ್ಧಿಮತ್ತೆ ಸಮಿತಿಯ ಏಕೈಕ ಇಟಾಲಿಯನ್ ಸದಸ್ಯರಾಗಿದ್ದಾರೆ  ಮತ್ತು ಈ ಶಕ್ತಿಯ ವಿನ್ಯಾಸಗಳು ಕ್ರಮೇಣ ವಾಣಿಜ್ಯ ಒಪ್ಪಂದಗಳಿಂದ ಪ್ರಭಾವಿತರಾಗುತ್ತಿವೆ. ಇದೇ ಗತಿಶೀಲತೆ ಮಾಹಿತಿ ಕ್ಷೇತ್ರದಲ್ಲಿಯೂ ಕಾಣುತ್ತದೆ ಒಂದು ಲೇಖನದ ಗುಣಮಟ್ಟಕ್ಕಿಂತಲೂ, ವೆಬ್ ಪುಟಗಳಲ್ಲಿ ಅಲ್ಗೋರಿದಮ್ ನೀಡುವ ಸ್ಥಾನಮಾನವೇ ಅದರ ದೃಶ್ಯಮಾನತೆಯನ್ನು ಹೆಚ್ಚಾಗಿ ನಿರ್ಧರಿಸುತ್ತದೆ. ಇದು ಶಕ್ತಿಯ ಮಧ್ಯಸ್ಥಿಕೆ ಎಂದು ಬೆನಾಂತಿ ನಿರ್ಣಯಿಸಿದರು.

ಪ್ರೊಫೆಸರ್ ಜಿಯುಸ್ತೊಝ್ಝಿಯ ಪ್ರಸ್ತಾವನೆ ಎಐ ಯ ಮೂಲಭೂತ ಘಟಕವಾದ ಅಲ್ಗೋರಿದಮ್‌ನ ಸ್ವಭಾವ ಮತ್ತು ಅದನ್ನು ಆಧರಿಸಿದ ನಿರ್ಧಾರ ಪ್ರಕ್ರಿಯೆಗಳ ಸಂಬಂಧಿತ ಗಂಭೀರ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸಿತು. ಅವುಗಳಲ್ಲಿ “ಪಕ್ಷಪಾತ” ಎಂಬ ಸಮಸ್ಯೆಯೂ ಒಂದು ಕೆಲವೊಮ್ಮೆ ಅಲ್ಗೋರಿದಮ್‌ಗಳು ಉದ್ದೇಶಪೂರ್ವಕವಾಗಲಿ ಅಥವಾ ಅನೈಚ್ಛಿಕವಾಗಲಿ ಪೂರ್ವಗ್ರಹಗಳನ್ನು ಒಳಗೊಂಡಿರಬಹುದು ಇದರಿಂದ ಫಲಿತಾಂಶಗಳು ವಕ್ರವಾಗಬಹುದು ಅಥವಾ ಅನ್ಯಾಯಕರವಾಗಬಹುದು.

ಈ ಹಿನ್ನೆಲೆಯಲ್ಲಿ, ಪ್ರಶಿಕ್ಷಣ — ಅಂದರೆ ಡೇಟಾವನ್ನು ನೀಡುವ ಮೂಲಕ ಅಲ್ಗೋರಿದಮ್ ಅಭಿವೃದ್ಧಿಪಡಿಸುವ ಹಂತ  ಅತ್ಯಂತ ಮಹತ್ವದ್ದಾಗಿದೆ. ಡೇಟಾ ಅಪೂರ್ಣವಾಗಿದ್ದರೆ ಅಥವಾ ವಕ್ರಗೊಂಡಿದ್ದರೆ, ಫಲಿತಾಂಶಗಳು ತಪ್ಪಾಗಿಯೇ ಅಥವಾ ಭೇದಭಾವಪೂರ್ಣವಾಗಿಯೇ ಇರಬಹುದು ಎಂದರು.

02 ಮಾರ್ಚ್ 2026, 19:51