Esercizi spirituali di Quaresima per Papa Leone

ತಪಸ್ಸು ಕಾಲದ ಆತ್ಮೀಯ ಶಿಬಿರ: ಬಿಷಪ್ ವಾರ್ಡನ್ ‘ವಾಸ್ತವವಾದಿ ಬರ್ನಾರ್ಡ್’ ಕುರಿತು ಚಿಂತನೆ

ಎರಿಕ್ ವಾರ್ಡನ್ ಬಿಷಪ್ ರವರು, ವ್ಯಾಟಿಕನ್ ನಗರದಲ್ಲಿ ನಡೆಯುತ್ತಿರುವ ಆತ್ಮೀಯ ವ್ಯಾಯಾಮಗಳ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು, ರೋಮ್‌ನಲ್ಲಿ ವಾಸಿಸುವ ಕಾರ್ಡಿನಲ್‌ಗಳು ಹಾಗೂ ಡಿಕಾಸ್ಟರಿಗಳ ಮುಖ್ಯಸ್ಥರಿಗಾಗಿ ತಮ್ಮ ಒಂಬತ್ತನೇ ಚಿಂತನೆಗಳನ್ನು ಮಂಡಿಸಿದರು. ‘ವಾಸ್ತವವಾದಿ ಬರ್ನಾರ್ಡ್’ ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದ ಅವರ ಈ ಧ್ಯಾನಚಿಂತನೆಯ ಸಂಕ್ಷಿಪ್ತ ಸಾರಾಂಶ ಹೀಗಿದೆ.

ವ್ಯಾಟಿಕನ್ ವರದಿ 

ಸಿಸ್ಟರ್‌ಷಿಯನ್ ಚಳುವಳಿಯ ಗುರುತು ಆದರ್ಶ ಮತ್ತು ವಾಸ್ತವ, ಕಾವ್ಯಮಯತೆ ಮತ್ತು ಕಾರ್ಯಪ್ರಜ್ಞೆ ಇವುಗಳ ಸಂಧಿಯಲ್ಲಿ ರೂಪುಗೊಂಡಿದೆ. ಈ ಚಳುವಳಿಯ ಪ್ರಮುಖ ವ್ಯಕ್ತಿಗಳಾದ ಬರ್ನಾರ್ಡ್ ರವರ ಜೀವನದಲ್ಲಿ ಉನ್ನತ ಆದರ್ಶಗಳು ಮತ್ತು ಕಠಿಣ ವಾಸ್ತವತೆಗಳ ನಡುವಿನ ಒತ್ತಡವು ಅವರನ್ನು ಪರಿಶೋಧಿಸಿ ಶುದ್ಧಗೊಳಿಸಿತು. ಆರಂಭದಲ್ಲಿ ಅವರು ತಾವು ರೂಪಿಸಿಕೊಂಡ ದಾರಿಯನ್ನು ದೃಢವಾಗಿ ಅನುಸರಿಸುವ, ಕೆಲವೊಮ್ಮೆ ಕಠೋರತೆಯೊಂದಿಗೆ ನಡೆದುಕೊಳ್ಳುವ ಆದರ್ಶವಾದಿಯಾಗಿದ್ದರು ಆದರೆ ಕಾಲಕ್ರಮೇಣ ಆ ಕಠಿಣತೆ ಮೃದುಗೊಂಡು ಅವರನ್ನು ವಾಸ್ತವವಾದಿಯನ್ನಾಗಿ ರೂಪಿಸಿತು.

ಮನೋವಿಶ್ಲೇಷಕ ಜಾಕ್ವೆಸ್ ಲ್ಯಾಕನ್ ರವರು  ಹೇಳಿದಂತೆ, ವಾಸ್ತವವೆಂದರೆ ನಾವು ಡಿಕ್ಕಿ ಹೊಡೆಯುವ ಸಂಗತಿ. ಬರ್ನಾರ್ಡ್ ರವರ ಸಾರ್ವಜನಿಕ ಮತ್ತು ರಾಜಕೀಯ ಕಾರ್ಯಪ್ರವೃತ್ತಿಗಳಲ್ಲಿ ಅನೇಕ ಸವಾಲುಗಳು ಎದುರಾದವು. ಆದರೆ ಅವರು ಕೇವಲ ಪರಿಸ್ಥಿತಿಗಳನ್ನು ಒಪ್ಪಿಕೊಳ್ಳುವ ವಾಸ್ತವವಾದಿಯಾಗಿರಲಿಲ್ಲ ಮಾನವ ಜೀವನದ ಆಳವಾದ ವಾಸ್ತವಿಕತೆ ಎಂದರೆ ಕರುಣೆಗೆ ಮಾಡುವ ಹಂಬಲ ಎಂದು ಅವರು ಅರಿತುಕೊಂಡರು.

ಮಾನವ ಹೃದಯಗಳ ನೋವು, ಕಣ್ಣೀರು, ಸಂಘರ್ಷಗಳು ಮತ್ತು ಅನ್ಯಾಯಗಳ ಮಧ್ಯೆ ಅವರು ದೇವರ ಕೃಪೆಯ ಪ್ರತಿಕ್ರಿಯೆಯನ್ನು ಕಂಡರು. ವಿಶೇಷವಾಗಿ ಯೇಸುವಿನ ಪವಿತ್ರ ನಾಮದಲ್ಲಿ ಅವರಿಗೆ ದೇವರ ರಕ್ಷಕ ಪ್ರೀತಿಯ ಅನುಭವ ದೊರಕಿತು. ಯೇಸುವಿನ ಮೂಲಕ ದೇವರು ತನ್ನ ರಕ್ಷಕ ಉದ್ದೇಶವನ್ನು ಮಾನವಕುಲದ ಮೇಲೆ ಸುಗಂಧಮಯವಾದ, ಚೇತನಗೊಳಿಸುವ ತೈಲದಂತೆ ಸುರಿಸುತ್ತಾನೆ ಎಂದು ಅವರು ಭಾವಿಸಿದರು. ಯೇಸುವಿನ ನಾಮವಿಲ್ಲದೆ ಬೌದ್ಧಿಕ ಆಹಾರವೂ ನಿರ್ಜೀವವೆಂದು ಅವರು ತಮ್ಮ ಸನ್ಯಾಸಿಗಳಿಗೆ ತಿಳಿಸುತ್ತಿದ್ದರು.

ಬರ್ನಾರ್ಡ್ ರವರ ಚಿಂತನೆಗಳಲ್ಲಿ ಆತ್ಮಸ್ಪರ್ಶಿ ಭಾವನೆಯ ಪರಿಣಾಮ ಪ್ರಮುಖ ಸ್ಥಾನ ಪಡೆದಿತ್ತು. ಕೃಪೆ ಮಾನವನ ಸಂಪೂರ್ಣ ಅಸ್ತಿತ್ವವನ್ನು ಸ್ಪರ್ಶಿಸುತ್ತದೆ ಎಂಬುದನ್ನು ಅವರು ಒತ್ತಿಹೇಳಿದರು. ಯೇಸು ಸತ್ಯದ ಅವತಾರನಾಗಿರುವುದರಿಂದ, ಎಲ್ಲ ವ್ಯಕ್ತಿಗಳು ಮತ್ತು ಪರಿಸ್ಥಿತಿಗಳನ್ನು ಯೇಸುವಿನ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕೆಂದು ಅವರು ನಂಬಿದರು. ಈ ದೃಷ್ಟಿಕೋಣವು ಮಾಟಿ೯ನ್ ಲೂಥರ್ ರಿಂದ ಜಾನ್ ವೆಸ್ಲಿವರಗೂ ಅನೇಕ ಕ್ರೈಸ್ತ ಚಿಂತಕರ ಮೆಚ್ಚುಗೆಯನ್ನು ಗಳಿಸಿತು.

ಅತೀಂದ್ರಿಯ ಬೆಳಕಿನಲ್ಲಿ ಮಾತ್ರ ಮಾನವ ಸ್ವಭಾವದ ನಿಜವಾದ ಸೌಂದರ್ಯ ವ್ಯಕ್ತವಾಗುತ್ತದೆ ಎಂದು ಅವರು ಬೋಧಿಸಿದರು. ಕ್ರಿಸ್ತನ ಪ್ರೀತಿಯ ಶಕ್ತಿಯ ಅರಿವು ಬರ್ನಾರ್ಡ್ ರವರನ್ನು ಕೇವಲ ಸುಧಾರಕನಾಗಿಯೇ ಅಲ್ಲ, ಧರ್ಮ ಸಭೆಯ ನಾಯಕನಾಗಿಯೇ ಅಲ್ಲ, ಒಬ್ಬ ಸಂತ ಮತ್ತು ಗುರುವಾಗಿಯೂ ರೂಪಿಸಿತು. ಜೀವನವು ಅವರಿಗೆ ಒಳಗಿನ ಸ್ವಾತಂತ್ರ್ಯವನ್ನು ನೀಡಿತು ನಿಜವಾದ ಸ್ವಾತಂತ್ರ್ಯ ಹೊಂದಿದ ವ್ಯಕ್ತಿಯು ದರ್ಶನಕ್ಕೆ ಮಹಿಮೆಪೂರ್ಣನಾಗಿರುತ್ತಾನೆ ಎಂಬುದನ್ನು ಅವರ ಜೀವನವೇ ಸಾರುತ್ತದೆ.

26 ಫೆಬ್ರವರಿ 2026, 19:23