ಹುಡುಕಿ

ರಷ್ಯಾದ ಡ್ರೋನ್ ದಾಳಿಯ ನಂತರ ಜಪೋರಿಝಿಯಾನಲ್ಲಿ ಉಂಟಾದ ಪರಿಣಾಮಗಳು ರಷ್ಯಾದ ಡ್ರೋನ್ ದಾಳಿಯ ನಂತರ ಜಪೋರಿಝಿಯಾನಲ್ಲಿ ಉಂಟಾದ ಪರಿಣಾಮಗಳು 

ಆರ್ಚ್‌ಬಿಷಪ್ ಗ್ಯಾಲಘರ್: ಪ್ರತಿಯೊಂದು ಯುದ್ಧವೂ ನೈತಿಕ ಮತ್ತು ಮಾನವೀಯ ವೈಫಲ್ಯವಾಗಿದೆ

ಪಾಲ್ ಗಲ್ಲಾಘರ್ ಆರ್ಚ್‌ಬಿಷಪ್ ರವರು, ರಷ್ಯಾದ ಸಂಪೂರ್ಣ ಪ್ರಮಾಣದ ಆಕ್ರಮಣದ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಯುರೋಪ್‌ನಲ್ಲಿ ಭದ್ರತೆ ಮತ್ತು ಸಹಕಾರ ಸಂಸ್ಥೆ (ಒ ಎಸ್ ಸಿ ಇ)ಶಾಶ್ವತ ಮಂಡಳಿಗೆ ನೀಡಿದ ಭಾಷಣದಲ್ಲಿ, ಉಕ್ರೇನ್‌ನಲ್ಲಿ ನ್ಯಾಯಸಮ್ಮತ ಮತ್ತು ದೀರ್ಘಕಾಲಿಕ ಶಾಂತಿಯನ್ನು ಸಾಧಿಸಲು ಸೂಕ್ತ ಮಾರ್ಗಗಳನ್ನು ಹುಡುಕುವಂತೆ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ 

ಪಾಲ್ ಗಲ್ಲಾಘರ್, ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳಿಗಾಗಿ ವಾಟಿಕನ್ ಕಾರ್ಯದರ್ಶಿಯಾಗಿ,ಯುರೋಪ್‌ನಲ್ಲಿ ಭದ್ರತೆ ಮತ್ತು ಸಹಕಾರ ಸಂಸ್ಥೆ (ಒ ಎಸ್ ಸಿ ಇ )ಶಾಶ್ವತ ಮಂಡಳಿಯ 1554ನೇ ಬಲಪಡಿಸಿದ ಸಭೆಯಲ್ಲಿ ಉಕ್ರೇನ್‌ನಲ್ಲಿ ಶಾಂತಿ ಸಾಧಿಸಲು ಅಂತರರಾಷ್ಟ್ರೀಯ ಸಮುದಾಯವು ಸ್ಪಷ್ಟ ಮತ್ತು ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು. ರಷ್ಯಾದ ಆಕ್ರಮಣದ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, 2026 ಫೆಬ್ರವರಿ 24ರಂದು ಅವರು ಈ ಸಂದೇಶವನ್ನು ನೀಡಿದರು.

ಜಗದ್ಗರುಗಳ ಅಧಿಕಾರ ಸ್ಥಳದ ಎಲ್ಲಾ ಪಕ್ಷಗಳೂ ನ್ಯಾಯಸಮ್ಮತ ಮತ್ತು ದೀರ್ಘಕಾಲಿಕ ಶಾಂತಿಗಾಗಿ ಪ್ರಾಮಾಣಿಕ ಹಾಗೂ ಎಲ್ಲರನ್ನು ಒಳಗೊಂಡ ರಾಜತಾಂತ್ರಿಕ ಮಾರ್ಗಗಳನ್ನು ಸ್ಥಾಪಿಸಿ ಮುಂದುವರಿಸಲು ಅಗತ್ಯವಾದ ರಾಜಕೀಯ ಧೈರ್ಯ ತೋರಬೇಕು ಎಂದು ಅವರು ಹೇಳಿದರು. ಪ್ರತಿಯೊಂದು ಯುದ್ಧವೂ ನೈತಿಕ ಮತ್ತು ಮಾನವೀಯ ವೈಫಲ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಶಾಂತಿಯತ್ತ ಸಾಗಲು ಕೇವಲ ಮಾತುಗಳು ಸಾಕಾಗುವುದಿಲ್ಲ, ಸ್ಪಷ್ಟ ಕ್ರಮಗಳು ಅಗತ್ಯವೆಂದು ಅವರು ಒತ್ತಿಹೇಳಿದರು. ತಕ್ಷಣದ ಮಾನವೀಯ ವಿರಾಮಗಳನ್ನು ಘೋಷಿಸುವುದರ ಜೊತೆಗೆ, ನಿರಂತರ ರಾಜತಾಂತ್ರಿಕ ಸಂವಾದವನ್ನು ಮುಂದುವರಿಸಬೇಕು ಎಂದು ಹೇಳಿದರು. ಉತ್ತಮ ಮನೋಭಾವವನ್ನು ಪರಿಶೀಲಿಸಬಹುದಾದ ಮತ್ತು ಶಾಶ್ವತ ಶಾಂತಿ ಒಪ್ಪಂದಗಳಾಗಿ ಪರಿವರ್ತಿಸುವುದು ಮುಖ್ಯವೆಂದರು.

ಸಂವಾದವು ಪ್ರಾಮಾಣಿಕತೆ ಮತ್ತು ಒಪ್ಪಂದಗಳ ನಿಷ್ಠಾವಂತ ಅನುಷ್ಠಾನದ ಮೇಲೆ ಆಧಾರಿತವಾಗಿರಬೇಕು ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಸಂವಾದವನ್ನು ಸುಗಮಗೊಳಿಸಲು, ಪರಸ್ಪರ ವಿಶ್ವಾಸವನ್ನು ನಿರ್ಮಿಸಲು ಮತ್ತು ಭದ್ರತೆಯನ್ನು ಪುನಃಸ್ಥಾಪಿಸಲು ಒ ಎಸ್ ಸಿ ಇ  ಮಹತ್ವದ ಪಾತ್ರ ವಹಿಸಬಹುದು ಎಂಬ ನಂಬಿಕೆಯನ್ನು ಜಗದ್ಗುರುಗಳ ಅಧಿಕಾರ ಸ್ಥಳವು ವ್ಯಕ್ತಪಡಿಸಿದೆ. ಮಾನವ ವ್ಯಕ್ತಿಯ ಗೌರವ ಮತ್ತು ದುಃಖ ನಿವಾರಣೆಯನ್ನು ಕೇಂದ್ರವಾಗಿಟ್ಟುಕೊಂಡ ಯಾವುದೇ ನಿಷ್ಠಾವಂತ ರಾಜತಾಂತ್ರಿಕ ಪ್ರಯತ್ನಗಳಿಗೆ ಜಗದ್ಗುರುಗಳ ಅಧಿಕಾರ ಸ್ಥಳವು ಸಿದ್ಧವಿದೆ ಎಂದರು.

ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸುವುದು ಅತ್ಯಂತ ಅಗತ್ಯವೆಂದು ಅವರು ಪುನರುಚ್ಚರಿಸಿದರು. ಇದು ಪರಿಸ್ಥಿತಿಗಳಿಗಾಗಲಿ ಸೈನಿಕ ಅಥವಾ ರಾಜಕೀಯ ಹಿತಾಸಕ್ತಿಗಳಿಗಾಗಲಿ ಅವಲಂಬಿತವಾಗಿರಬಾರದು. ಯುದ್ಧದ ಭೀಕರ ಪರಿಣಾಮಗಳನ್ನು ಕಡಿಮೆ ಮಾಡಲು ಹಾಗೂ ಪುನರ್ ನಿರ್ಮಾಣದ ದೃಷ್ಟಿಯಿಂದ ಮಾನವೀಯ ಕಾನೂನು ಯಾವಾಗಲೂ ಮೇಲುಗೈ ಸಾಧಿಸಬೇಕು ಎಂದು ಅವರು ಹೇಳಿದರು. ಅಂತಿಮವಾಗಿ, ಮಾನವ ಜೀವನದ ಪಾವಿತ್ರ್ಯ ಮತ್ತು ಗೌರವವನ್ನು ಮನದಲ್ಲಿಟ್ಟುಕೊಂಡು, ಎಲ್ಲಾ ಪಕ್ಷಗಳು ತುರ್ತಾಗಿ ಮತ್ತು ಕರುಣೆಯಿಂದ ಶಾಂತಿಯ ಮಾರ್ಗಗಳನ್ನು ಹುಡುಕುವ ಸಂವಾದದಲ್ಲಿ ತೊಡಗಬೇಕು ಎಂದು ಅವರು ಮನವಿ ಮಾಡಿದರು.

26 ಫೆಬ್ರವರಿ 2026, 19:17