ವ್ಯಾಟಿಕನ್‌ನಲ್ಲಿ ನಡೆದ ಆಧ್ಯಾತ್ಮಿಕ ವ್ಯಾಯಾಮಗಳಲ್ಲಿ ತಮ್ಮ ಪ್ರಭೋದನೆಯನ್ನು ನೀಡುತ್ತಿರುವ ಬಿಷಪ್ ಎರಿಕ್ ವಾರ್ಡೆನ್ ರವರು ವ್ಯಾಟಿಕನ್‌ನಲ್ಲಿ ನಡೆದ ಆಧ್ಯಾತ್ಮಿಕ ವ್ಯಾಯಾಮಗಳಲ್ಲಿ ತಮ್ಮ ಪ್ರಭೋದನೆಯನ್ನು ನೀಡುತ್ತಿರುವ ಬಿಷಪ್ ಎರಿಕ್ ವಾರ್ಡೆನ್ ರವರು  (ANSA)

ತಪಸ್ಸು ಕಾಲದ ಧ್ಯಾನ ಶಿಬಿರ: ಬಿಷಪ್ ವಾರ್ಡನ್ ಸತ್ಯದ ಮಹಿಮೆಯ ಕುರಿತು ಚಿಂತನೆ

ಬಿಷಪ್ ಎರಿಕ್ ವರ್ಡಾನ್ ರವರು ವ್ಯಾಟಿಕನ್‌ನಲ್ಲಿ ನಡೆಯುತ್ತಿರುವ ಆತ್ಮೀಯ ಧ್ಯಾನಾಭ್ಯಾಸಗಳಲ್ಲಿ ಜಗದ್ಗುರು ಲಿಯೋರವರು, ರೋಮ್‌ನಲ್ಲಿ ವಾಸಿಸುವ ಕಾರ್ಡಿನಲ್‌ಗಳು ಹಾಗೂ ಡಿಕಾಸ್ಟರಿಗಳ ಮುಖ್ಯಸ್ಥರಿಗಾಗಿ ತಮ್ಮ ಐದನೇ ಧ್ಯಾನಪ್ರಬಂಧವನ್ನು ನೀಡಿದರು. ಅದು “ಸತ್ಯದ ಮಹಿಮೆ” ಎಂಬ ವಿಷಯದ ಮೇಲೆ ಕೇಂದ್ರೀಕರಿಸಿತ್ತು. ಕೆಳಗೆ ಅವರ ಚಿಂತನೆಯ ಸಾರಾಂಶವನ್ನು ನೀಡಲಾಗಿದೆ.

ವ್ಯಾಟಿಕನ್ ವರದಿ

ಬೆರ್ನಾರ್ಡ್ ನಮ್ಮನ್ನು ಸದಾ ಎಚ್ಚರಿಕೆಯಿಂದಿರಲು ಹೇಳುತ್ತಾನೆ: ಭೂಮಿಯಲ್ಲಿ ಯಾರೂ ಪರೀಕ್ಷೆಗಳಿಲ್ಲದೆ ಬದುಕುವುದಿಲ್ಲ ಒಬ್ಬನು ಒಂದು ಪರೀಕ್ಷೆಯಿಂದ ಬಿಡುವು ಪಡೆದರೆ, ಇನ್ನೊಂದು ಖಚಿತವಾಗಿ ಎದುರಾಗುತ್ತದೆ. ದೇವರ ಸಹಾಯದ ಮೇಲಿನ ಭರವಸೆಯನ್ನೂ ನಮ್ಮ ದೌರ್ಬಲ್ಯದ ಅರಿವನ್ನೂ ಸಮತೋಲನದಲ್ಲಿಟ್ಟುಕೊಳ್ಳಬೇಕು. ಪರೀಕ್ಷೆಗಳನ್ನೆದುರಿಸಲು ಹೆದರಬೇಕಾದರೂ, ಅವು ಅನಿವಾರ್ಯವೆಂದು ಒಪ್ಪಿಕೊಳ್ಳಬೇಕು ಏಕೆಂದರೆ ದೇವರು ಅವುಗಳನ್ನು ಅನುಮತಿಸುವುದು ಅವು ಉಪಯುಕ್ತವಾದದ್ದರಿಂದ.

ಯಾವ ಅರ್ಥದಲ್ಲಿ ಉಪಯುಕ್ತ? ಸುಳ್ಳಿನ ತಂದೆ ಎರಚುವ ಬಾಣಗಳಿಗೆ ಪ್ರತಿರೋಧ ನೀಡುವಾಗ ನಮ್ಮ ಸತ್ಯನಿಷ್ಠೆ ಬಲವಾಗುತ್ತದೆ. ದುರ್ಬಲಗೊಳಿಸುವ ಸುಳ್ಳುಗಳಿಂದ ದೂರವಾಗಿರುವ ನಾವು, ಇತರರನ್ನು ಬಲಪಡಿಸಲು ಯೋಗ್ಯರಾಗುತ್ತೇವೆ.

ಆಕಾಂಕ್ಷೆ  ಅಸತ್ಯಕ್ಕೆ ಶರಣಾಗುವ ವಿಶೇಷ ರೂಪವಾಗಿದೆ. ಅದು ಪ್ರಲೋಭನೆಯನ್ನು ಸಣ್ಣದಾಗಿ ಮರೆಮಾಚಿದ ರೂಪ. ಸದಾ ವಾಕ್ಚಾತುರ್ಯದಿಂದ ಮಾತನಾಡುವ ಬೆರ್ನಾರ್ಡ್, ಇದನ್ನು ವರ್ಣಿಸುವಾಗ ಇನ್ನೂ ಉನ್ನತ ಮಟ್ಟ ತಲುಪುತ್ತಾರೆ. “ಆಕಾಂಕ್ಷೆ ಸೂಕ್ಷ್ಮ ರೋಗ, ಗುಪ್ತ ವೈರಸ್, ಮರೆಮಾಚಿದ ಮಹಾಮಾರಿ ಅದು ಮೋಸದ ಕರಕುಶಲಗಾರ್ತಿ; ಕಪಟದ ತಾಯಿ, ಅಸೂಯೆಯ ಮೂಲ, ದೋಷಗಳ ಜನನಿ ಅಪರಾಧಗಳಿಗೆ ಇಂಧನ, ಸತ್ಪ್ರವೃತ್ತಿಗಳನ್ನು ಕುಲುಷಿತಗೊಳಿಸುವುದು, ಪವಿತ್ರತೆಯನ್ನು ಕೊಳೆಯಿಸುವುದು, ಹೃದಯಗಳನ್ನು ಅಂಧಗೊಳಿಸುವುದು. ಔಷಧಿಗಳನ್ನು ರೋಗಗಳಾಗಿ ಮಾಡುವುದು ಚಿಕಿತ್ಸೆಯಿಂದ ನಿರಾಸಕ್ತಿ ಹುಟ್ಟಿಸುವುದು.ಆಕಾಂಕ್ಷೆ ಮನಸ್ಸಿನ ಪರಾಯಿಕರಣದಿಂದ ಹುಟ್ಟುತ್ತದೆ ಸತ್ಯವನ್ನು ಮರೆತಾಗ ಉಂಟಾಗುವ ಹುಚ್ಚುತನ. ವಿಶೇಷವಾಗಿ ನಿಸ್ವಾರ್ಥ ಸೇವೆಗೆ ಕರೆಯಲ್ಪಟ್ಟವರಲ್ಲಿ ಅದು ಕಂಡುಬಂದಾಗ, ಅದು ದುರಂತಕರವಾಗುತ್ತದೆ.

“ಸತ್ಯವೇನು?” — ನಮ್ಮ ಕಾಲದ ಜನರು ಗೊಂದಲ, ಭಯ ಮತ್ತು ಆತುರದ ನಡುವೆಯೂ ಸತ್ಯನಿಷ್ಠೆಯಿಂದ ಈ ಪ್ರಶ್ನೆಯನ್ನು ಕೇಳುತ್ತಾರೆ. ನಾವು ಅದಕ್ಕೆ ಉತ್ತರ ನೀಡಲೇಬೇಕು. ಭಯ, ಅಹಂಕಾರ, ಆಕಾಂಕ್ಷೆ ಎಂಬ ವ್ಯರ್ಥ ಪರೀಕ್ಷೆಗಳಲ್ಲಿ ಶಕ್ತಿ ವ್ಯಯಿಸಲು ನಮಗೆ ಸಮಯವಿಲ್ಲ. ನಾವು ಆಕರ್ಷಕವಾಗಿ ಹೊಳೆಯುವ ಆದರೆ ಮೋಸಪೂರಿತ ಪರ್ಯಾಯಗಳ ವಿರುದ್ಧ, ಮುಕ್ತಿಗೊಳಿಸುವ ನಿಜವಾದ ಸತ್ಯವನ್ನು ಕಾಪಾಡಬೇಕು.

ನಮ್ಮ ಪರಿಸ್ಥಿತಿ ಅವಕಾಶಗಳಿಂದ ಸಮೃದ್ಧವಾಗಿದೆ. ಕ್ರಿಸ್ತನ ಬೆಳಕಿನಲ್ಲಿ ಲೋಕವನ್ನು ನೋಡುವುದು ಮತ್ತು ವಿವರಿಸುವುದು ಅತ್ಯಗತ್ಯ. ಕ್ರಿಸ್ತನೇ ಸತ್ಯ ಆತನು ನಮ್ಮನ್ನು ಕೇವಲ ರಕ್ಷಿಸುವುದಲ್ಲ, ನಮ್ಮ ಮೂಲಕ ತಾನು ವ್ಯಕ್ತವಾಗಲು ಉತ್ಸುಕನಾಗಿರುವನು. ಇಂದಿನ ಸೃಷ್ಟಿ ವ್ಯರ್ಥತೆಯ ಅನುಭವದಲ್ಲಿ ತತ್ತರಿಸುತ್ತಿರುವುದನ್ನು ಹೆಚ್ಚು ಅರಿಯುತ್ತಿದೆ.

ಲೋಕದ ಹೊಸ ಪ್ರಚಲಿತಗಳಿಗೆ ಹೊಂದಿಕೊಳ್ಳಬೇಕು ಎಂಬ ಆಕರ್ಷಣೆ ಇದೆ. ಆದರೆ ಧರ್ಮ ಸಭೆ ತನ್ನ ಸ್ವಂತ ಭಾಷೆಯನ್ನು ಶಾಸ್ತ್ರ, ದೈವಾರಾಧನ ವಿಧಿ, ಪಿತೃಗಳು, ಮಾತೃಗಳು, ಕವಿಗಳು ಮತ್ತು ಸಂತರ ಪರಂಪರೆಯ ಭಾಷೆಯನ್ನು ನಿಷ್ಠೆಯಿಂದ ಮಾತನಾಡಿದರೆ, ಅವರು ನವೀನವಾಗಿಯೇ ಇರುತ್ತಾರೆ. ಹಳೆಯ ಸತ್ಯಗಳನ್ನು ಹೊಸ ರೀತಿಯಲ್ಲಿ ಹೇಳುವ ಮೂಲಕ ಸಂಸ್ಕೃತಿಗೆ ದಿಕ್ಕು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಈ ಕಾರ್ಯಕ್ಕೆ ಬೌದ್ಧಿಕ ಆಯಾಮವಿದೆ ಅದಕ್ಕಿಂತ ಮುಖ್ಯವಾಗಿ ಅಸ್ತಿತ್ವಾತ್ಮಕ ಆಯಾಮವೂ ಇದೆ. ಪವಿತ್ರತೆಯ ಸಾನ್ನಿಧ್ಯದಲ್ಲಿ ಜನರು ಇನ್ನೂ ನಂಬುತ್ತಾರೆ, ಇನ್ನೂ ಮಣಿಯುತ್ತಾರೆ ಮತ್ತು ಪ್ರಾರ್ಥಿಸುತ್ತಾರೆ. ಸತ್ಯವನ್ನು ದೇಹಧಾರಣೆ ಮಾಡುವ ಪವಿತ್ರತೆಯ ವಿಶ್ವವ್ಯಾಪಿ ಕರೆಯೇ ದ್ವಿತೀಯ ವ್ಯಾಟಿಕನ್ ಮಹಾಸಭೆಯ ಘೋಷವಾಗಿರಲಿಲ್ಲವೇ? ತ್ಯಾಗಮಯ ಪ್ರೀತಿಯಲ್ಲಿ ವ್ಯಕ್ತವಾಗುವ ಸತ್ಯದ ಮಹಿಮೆ ಜನರನ್ನು ಆಕರ್ಷಿಸುತ್ತದೆ ಎಂದು ಹೇಳಿದರು.

ಬಿಷಪ್ ಎರಿಕ್ ವರ್ಡೆನ್ ನಾರ್ವೆಯ ಟ್ರೋನ್ಹೈಮ್ ಧರ್ಮಕ್ಷೇತ್ರದ ಬಿಷಪ್, ಜಗದ್ಗುರು XIVನೇ ಲಿಯೋರವರು ರೋಮಿನಲ್ಲಿ ವಾಸಿಸುವ ಕಾರ್ಡಿನಲ್‌ಗಳು ಮತ್ತು ರೋಮನ್ ಧರ್ಮ ಪ್ರಾಂತ್ಯದ  ಡಿಕಾಸ್ಟರಿಗಳ ಮುಖ್ಯಸ್ಥರಿಗಾಗಿ 2026ರ ಫೆಬ್ರವರಿ 22ರಿಂದ 27ರವರೆಗೆ ನಡೆದ ಆತ್ಮೀಯ ಧ್ಯಾನಾಭ್ಯಾಸಗಳಿಗೆ ಉಪದೇಶಿಸಲು ಆಹ್ವಾನಿಸಲ್ಪಟ್ಟಿದ್ದರು.

24 ಫೆಬ್ರವರಿ 2026, 18:07