ತಪಸ್ಸು ಕಾಲದ ಧ್ಯಾನ ಶಿಬಿರ: ‘ಸ್ವತಂತ್ರರಾಗುವುದು’ ಕುರಿತು ಬಿಷಪ್ ವಾರ್ಡನ್
ವ್ಯಾಟಿಕನ್ ವರದಿ
‘ಸ್ವಾತಂತ್ರ್ಯ’ ಎಂಬ ಕಲ್ಪನೆ ಸಾರ್ವಜನಿಕ ಚರ್ಚೆಯಲ್ಲಿ ವಿವಾದಾತ್ಮಕ ವಿಷಯವಾಗಿದೆ. ಸ್ವಾತಂತ್ರ್ಯವೆಂಬುದು ನಾವು ಎಲ್ಲರೂ ಆಶಿಸುವ ಮೌಲ್ಯ ನಮ್ಮ ಸ್ವಾತಂತ್ರ್ಯವನ್ನು ಕಡಿತಗೊಳಿಸುವ ಅಥವಾ ಮಿತಿಗೊಳಿಸುವ ಯಾವುದರ ವಿರುದ್ಧವೂ ನಾವು ಎದ್ದು ನಿಲ್ಲುತ್ತೇವೆ. ಅದರ ಪರಿಣಾಮವಾಗಿ, ‘ಸ್ವಾತಂತ್ರ್ಯ’ ಎಂಬ ಪದಪ್ರಯೋಗವು ಪರಿಣಾಮಕಾರಿ ವಾಕ್ಚಾತುರ್ಯದ ಸಾಧನವಾಗಿ ಪರಿಣಮಿಸಿದೆ.
ಯಾವುದೇ ನಿರ್ದಿಷ್ಟ ಗುಂಪಿನ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂಬ ಸೂಚನೆ ಬಂದ ಕೂಡಲೇ, ಅಂತರ್ಜಾಲದಲ್ಲಿ ತೀವ್ರ ಆಕ್ರೋಶದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಕೆಲವೊಮ್ಮೆ ಅದು ಜನರನ್ನು ಪಿಯಾಝ್ಜಾ (ಸಾರ್ವಜನಿಕ ಚೌಕ) ಗಳಿಗೂ ಒಗ್ಗೂಡಿಸಬಹುದು.
ಇಂದಿನ ಯೂರೋಪಿನಲ್ಲಿ ಹಲವಾರು ರಾಜಕೀಯ ಚಳವಳಿಗಳು ‘ಸ್ವಾತಂತ್ರ್ಯ’ ಎಂಬ ಪದಸಂಪತ್ತನ್ನು ತಮ್ಮ ಘೋಷಣೆಯಾಗಿ ಬಳಸುತ್ತಿವೆ. ಇದರಿಂದ ಉದ್ವಿಗ್ನತೆಗಳು ಉಂಟಾಗುತ್ತವೆ. ಸಮಾಜದ ಒಂದು ವರ್ಗಕ್ಕೆ ‘ಮುಕ್ತಿಗೊಳಿಸುವ' ಮತ್ತೊಬ್ಬರಿಗೆ ದಮನಕಾರಿ ಎಂದು ತೋರುತ್ತದೆ. ‘ಸ್ವಾತಂತ್ರ್ಯ’ ಎಂಬ ಧ್ವಜವನ್ನು ಎಲ್ಲರೂ ಎತ್ತಿಹಿಡಿದಿರುವಾಗ ಪರಸ್ಪರ ವಿರೋಧಿ ಕಾಯ೯ಸೂಚಿಗಳಿಂದ ಕಹಿ ಸಂಘರ್ಷಗಳು ಉಂಟಾಗುತ್ತವೆ.
ಈ ಪರಿಸ್ಥಿತಿ ಕ್ರೈಸ್ತರಿಗೆ ಒಂದು ಸವಾಲಾಗುತ್ತದೆ. ನಂಬಿಕೆಯ ಸಂದರ್ಭದಲ್ಲಿಯೇ ‘ಸ್ವತಂತ್ರರಾಗುವುದು’ ಎಂದು ನಾವು ಹೇಳುವಾಗ ಅದರ ಅರ್ಥವನ್ನು ಸ್ಪಷ್ಟಗೊಳಿಸುವುದು ಅತ್ಯಾವಶ್ಯಕ. ಅವನು ನನ್ನನ್ನು ಬೇಟೆಗಾರರ ಬಲೆಯಿಂದಲೂ ಕಹಿ ಮಾತಿನಿಂದಲೂ ಬಿಡುಗಡೆ ಮಾಡಿದನು ಎಂಬ ವಾಕ್ಯದ ಕುರಿತು ಚಿಂತಿಸುವಾಗ ಪವಿತ್ರ ಕ್ಲೈರ್ವಾಕ್ಸ್‌ನ ಬರ್ನಾರ್ಡ್ ಇದೇ ಕಾರ್ಯವನ್ನು ಮಾಡುತ್ತಾರೆ.
ಬೆರ್ನಾರ್ಡ್ ಲವರ ಪ್ರಕಾರ, ನಿಜವಾದ ಸ್ವಾತಂತ್ರ್ಯವು ಪತನಗೊಂಡ ಮನುಷ್ಯನಿಗೆ ಸ್ವಾಭಾವಿಕವಲ್ಲ. ನಮಗೆ ಸ್ವಾಭಾವಿಕವೆಂದು ತೋರುವುದು ನಮ್ಮ ಇಚ್ಛೆಯಂತೆ ನಡೆಯುವುದು, ನಮ್ಮ ಆಸೆಗಳನ್ನು ತೃಪ್ತಿಪಡಿಸಿಕೊಳ್ಳುವುದು, ಅಡ್ಡಿಯಿಲ್ಲದೆ ನಮ್ಮ ಯೋಜನೆಗಳನ್ನು ಸಾಧಿಸುವುದು, ನಮ್ಮದೇ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಂಸಿಸಲ್ಪಡುವುದಾಗಿದೆ. ಈ ಮೋಸದ ಸ್ಥಿತಿಯಲ್ಲಿರುವ ಮನುಷ್ಯನನ್ನು ಉದ್ದೇಶಿಸಿ ಅವರು ವ್ಯಂಗ್ಯವಾಗಿ ಹೇಳುತ್ತಾರೆ: ನಿನ್ನನ್ನು ನೀನು ಏನೆಂದು ಭಾವಿಸುತ್ತೀಯೋ, ಅಜ್ಞಾನದವನೇ? ನೀನು ಬೇಟೆಗಾರರ ಬಲೆಗೆ ಸಿಕ್ಕುವ ಪ್ರಾಣಿಯಾಗಿದ್ದೀಯೆ!
ನಾವು ಎಷ್ಟು ಸುಲಭವಾಗಿ ಜಾರಿಬೀಳುತ್ತೇವೆಯೋ, ಬಲೆಗಳು ಎಲ್ಲಿವೆ ಎಂಬುದು ಗೊತ್ತಿದ್ದರೂ ಮತ್ತೆ ಮತ್ತೆ ಅದೇ ಬಲೆಗೆ ಸಿಲುಕುತ್ತೇವೆಯೋ ಇದನ್ನೇ ಅವರು ನಮ್ಮ ಅಸ್ವಾತಂತ್ರ್ಯದ ಸಾಕ್ಷಿಯಾಗಿ ಕಾಣುತ್ತಾರೆ. ನಮ್ಮ ಜೀವನದ ನಿಜವಾದ ಗುರಿಯತ್ತ ಸ್ಥಿರವಾಗಿ ಸಾಗಲು ನಾವು ಸ್ವತಃ ಅಸಮರ್ಥರಾಗಿದ್ದೇವೆ ಬದಲಿಗೆ ಅನೇಕ ಅಡ್ಡಿಗಳು ಮತ್ತು ವಿಚಲನಗಳಿಗೆ ಒಳಗಾಗುತ್ತೇವೆ.
ಸ್ವಾತಂತ್ರ್ಯದ ಅರಿವನ್ನು ತಂದೆಯ ಇಚ್ಛೆಗೆ ಮಗನ “ಹೌದು!” ಎಂಬ ಸಮರ್ಪಣೆಯಲ್ಲಿ ನೆಲೆಗೊಳಿಸಿ, ಬೆರ್ನಾರ್ಡ್ ನಮ್ಮ ಸ್ವಾತಂತ್ರ್ಯದ ಅರ್ಥವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತಾರೆ. ಕ್ರೈಸ್ತ ಸ್ವಾತಂತ್ರ್ಯವು ಬಲಪ್ರಯೋಗದಿಂದ ಜಗತ್ತನ್ನು ಹಿಡಿಯುವುದಲ್ಲ ಅದು ಶಿಲುಬೆಯ ಪ್ರೀತಿಯಿಂದ ಜಗತ್ತನ್ನು ಪ್ರೀತಿಸುವುದಾಗಿದೆ ಕ್ರಿಸ್ತನೊಡನೆ ಒಂದಾಗಿ, ಜಗತ್ತಿಗಾಗಿ ನಮ್ಮ ಪ್ರಾಣವನ್ನೇ ಸ್ವಯಂಸಮ್ಮತಿಯಿಂದ ಅರ್ಪಿಸಲು ಸಿದ್ಧರಾಗುವಷ್ಟು ಉದಾರವಾದ ಪ್ರೀತಿ, ಜಗತ್ತು ನಿಜವಾದ ಸ್ವಾತಂತ್ರ್ಯವನ್ನು ಪಡೆಯಲೆಂದು.
ಬಲದಿಂದ ಬಂಧಿತವಾಗಿರುವ ಸ್ವಾತಂತ್ರ್ಯವನ್ನು ‘ಆರ್ಥಿಕತೆ’, ಅಥವಾ ‘ಇತಿಹಾಸ’ ಮುಂತಾದ ನಿರ್ಜೀವ ಘಟಕಗಳ ಕಾರ್ಯಗಳನ್ನು ಸಮರ್ಥಿಸಲು ಬಳಸುವಾಗ ಎಚ್ಚರಿಕೆ ಅಗತ್ಯ. ಕ್ರೈಸ್ತ ಚಿಂತನೆ ಪ್ರಕಾರ, ಯಾವುದೇ ದಮನಕಾರಿ ನೀತಿಯನ್ನು ಸಿದ್ಧಾಂತಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಅರ್ಥಪೂರ್ಣ ಸ್ವಾತಂತ್ರ್ಯವು ವೈಯಕ್ತಿಕವಾದುದು ಒಬ್ಬರ ಸ್ವಾತಂತ್ರ್ಯ ಮತ್ತೊಬ್ಬರ ಸ್ವಾತಂತ್ರ್ಯವನ್ನು ರದ್ದುಗೊಳಿಸಲು ಸಾಧ್ಯವಿಲ್ಲ.
ಕ್ರೈಸ್ತ ಸ್ವಾತಂತ್ರ್ಯದ ಕಲ್ಪನೆಯನ್ನು ಅಂಗೀಕರಿಸುವುದು ಎಂದರೆ ನೋವನ್ನೂ ಸ್ವೀಕರಿಸುವುದು. ಕ್ರಿಸ್ತನು ದುಷ್ಟತೆಗೆ ಪ್ರತಿರೋಧ ಮಾಡಬೇಡಿರಿ ಎಂದು ಹೇಳುವಾಗ, ಅನ್ಯಾಯವನ್ನು ಒಪ್ಪಿಕೊಳ್ಳಿ ಎಂದಲ್ಲ. ಕೆಲವೊಮ್ಮೆ ನ್ಯಾಯದ ಕಾರ್ಯಕ್ಕಾಗಿ ನೋವು ಅನುಭವಿಸುವುದೇ ಉತ್ತಮ ಸೇವೆಯಾಗಬಹುದು ಬಲಕ್ಕೆ ಬಲದಿಂದ ಪ್ರತಿಕ್ರಿಯಿಸದೆ ಇರುವುದರಲ್ಲಿ ಅದರ ಅರ್ಥ ಇದೆ ಎಂಬುದನ್ನು ಅವರು ತೋರಿಸುತ್ತಾರೆ.
ನಮ್ಮ ಸ್ವಾತಂತ್ರ್ಯದ ಚಿಹ್ನೆ ಎಂದಿಗೂ “ತನ್ನನ್ನು ತಾನೇ ಶೂನ್ಯಗೊಳಿಸಿದ” ದೇವಪುತ್ರನಾಗಿಯೇ ಉಳಿಯುತ್ತಾನೆ.
ನಾರ್ವೆಯ ಟ್ರೋನ್ಹೈಮ್‌ನ ಬಿಷಪ್ ಎರಿಕ್ ವರ್ಡೆನ್ ರವರನ್ನು ಜಗದ್ಗುರು XIVನೇ ಲಿಯೋರವರು, ರೋಮ್‌ನಲ್ಲಿ ವಾಸಿಸುವ ಕಾರ್ಡಿನಲ್‌ಗಳು ಮತ್ತು ರೋಮನ್ ಧರ್ಮ ಪ್ರಾಂತ್ಯದ ಡಿಕಾಸ್ಟರಿಗಳ ಮುಖ್ಯಸ್ಥರಿಗಾಗಿ 2026ರ ಆಧ್ಯಾತ್ಮಿಕ ವ್ಯಾಯಾಮಗಳನ್ನು (ಫೆಬ್ರವರಿ 22ರಿಂದ 27ರವರೆಗೆ) ಬೋಧಿಸಲು ಆಹ್ವಾನಿಸಲಾಯಿತು.