ಸಂತ ಪೇತ್ರರ ಬಸಿಲಿಕಾದ ಮುಂಭಾಗದ ಎಡಭಾಗದಲ್ಲಿರುವ ಸಂತ ಪೇತ್ರರ ಪ್ರತಿಮೆ. ಸಂತ ಪೇತ್ರರ ಬಸಿಲಿಕಾದ ಮುಂಭಾಗದ ಎಡಭಾಗದಲ್ಲಿರುವ ಸಂತ ಪೇತ್ರರ ಪ್ರತಿಮೆ.  (© - Ruddi Hansen 2015)

ಇಬ್ಬರು ಹೊಸ ಆಶಿವ೯ದಿತರು: ಲೆಬನಾನ್‌ನ ಸನ್ಯಾಸಿ ಮತ್ತು ಫ್ರಾನ್ಸ್‌ನ ಫ್ರಾನ್ಸಿಸ್ಕನ್

ಜಗದ್ಗರುಗಳು ಬೆಚಾರಾ ಅಬು-ಮುರಾದ್ ಮತ್ತು ಗಾಬ್ರಿಯೆಲೆ ಮರಿಯಾರವರ ಧನ್ಯ ಘೋಷಣೆಗೆ ಅನುಮತಿ ನೀಡಿದ್ದು, ಜೊತೆಗೆ ಲಿಗುರಿಯಾದ ಒಬ್ಬ ಯಾಜಕರು, ಭಾರತದ ಒಬ್ಬ ಕ್ಯಾಪುಚಿನ್ ಫ್ರೈಯರ್ ಹಾಗೂ ಬ್ರೆಶಿಯಾದ ಒಬ್ಬ ಸಾಮಾನ್ಯ ಭಕ್ತನ ವೀರಗುಣಗಳನ್ನು ಅಧಿಕೃತವಾಗಿ ಮಾನ್ಯತೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ಸಂತ ಘೋಷಣೆಗಳ ಸಂಬಂಧವಾಗಿ ಹಲವು ಮಹತ್ವದ ಆದೇಶಗಳನ್ನು ಅಂಗೀಕರಿಸಿದ್ದಾರೆ. ಲೆಬನಾನ್ ಮೂಲದ ಯಾಜಕರು ಬೆಚಾರಾ ಅಬು-ಮುರಾದ್ ರವರ ಮಧ್ಯಸ್ಥಿಕೆಯಿಂದ ಸಂಭವಿಸಿದ ಅದ್ಭುತ ಚಿಕಿತ್ಸೆಯನ್ನು ಮಾನ್ಯಗೊಳಿಸಿ ಅವರನ್ನು ಶೀಘ್ರದಲ್ಲೇ “ಧನ್ಯರು” ಎಂದು ಘೋಷಿಸಲಾಗುವುದು. 1983ರಿಂದ ಗಂಭೀರ ಮೊಣಕಾಲಿನ ಕಾಯಿಲೆಯಿಂದ ವೀಲ್ಚೇರ್‌ಗೆ ಸೀಮಿತವಾಗಿದ್ದ ಮಹಿಳೆ 2009ರಲ್ಲಿ ಅವರ ಮಧ್ಯಸ್ಥಿಕೆಗೆ ಪ್ರಾರ್ಥಿಸಿದ ಬಳಿಕ ಸಂಪೂರ್ಣವಾಗಿ ಗುಣಮುಖಳಾದ ಘಟನೆ ಈ ಅದ್ಭುತವಾಗಿ ಗುರುತಿಸಲಾಗಿದೆ.

ಇದೇ ವೇಳೆ ಫ್ರಾನ್ಸ್‌ನ ಫ್ರಾನ್ಸಿಸ್ಕನ್ ಯಾಜಕ ಗಾಬ್ರಿಯೆಲೆ ಮರಿಯಾರವರಿಗೂ ಸಮಾನ  ಧನ್ಯ ಘೋಷಣೆಗೆ ಅನುಮೋದನೆ ದೊರೆತಿದೆ. 15ನೇ ಶತಮಾನದಲ್ಲಿ ಬದುಕಿದ ಅವರು ಪವಿತ್ರ ಕನ್ಯೆ ಮರಿಯಮ್ಮನಿಗೆ ವಿಶೇಷ ಭಕ್ತಿಯುಳ್ಳವರು. ಅವರು 1501ರಲ್ಲಿ “ಅನ್ನನ್ಸಿಯೇಷನ್ ಆಫ್ ದ ಬ್ಲೆಸ್ಡ್ ವರ್ಜಿನ್ ಮೇರಿ” ಸಂಘದ ಸ್ಥಾಪನೆಗೆ ಸಹಕರಿಸಿ, ಫ್ರಾನ್ಸಿಸ್ಕನ್ ಆತ್ಮೀಯತೆಯನ್ನು ಬಲಪಡಿಸಿದರು. ಅವರ ನಿಧನದ ನಂತರವೂ ಜನರಲ್ಲಿ ಸ್ವಾಭಾವಿಕ ಭಕ್ತಿ ಮತ್ತು ಅದ್ಭುತಗಳ ಕೀರ್ತಿ ಮುಂದುವರಿದಿತ್ತು.

ಲಿಗುರಿಯಾದ ಬಸ್ಸಾನಾ ಧರ್ಮ ಕೇಂದ್ರದ ಯಾಜಕರು ಫ್ರಾಂಚೆಸ್ಕೊ ಲೊಂಬಾರ್ಡಿ ರವರ ವೀರಗುಣಗಳನ್ನು ಮಾನ್ಯಗೊಳಿಸಲಾಗಿದೆ. 1887ರ ಭೂಕಂಪದಲ್ಲಿ ಧರ್ಮ ಸಭೆಯ ಧ್ವಂಸವಾಗಿ ಹಲವರು ಮೃತಪಟ್ಟಾಗ ಅವರು ಸಮುದಾಯಕ್ಕೆ ಧೈರ್ಯ ಮತ್ತು ಆಧ್ಯಾತ್ಮಿಕ ಆಶ್ರಯ ನೀಡಿದರು. ಅವರು ಹೊಸ ಪವಿತ್ರ ಹೃದಯ ದೇವಾಲಯವನ್ನು ನಿರ್ಮಿಸಿ, ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಇತರ ಸಮಾಜಸೇವಾ ಕಾರ್ಯಗಳನ್ನು ಪ್ರಾರಂಭಿಸಿದರು.

ಭಾರತದ ಕೇರಳದ ಕಾಪುಚಿನ್ ಸನ್ಯಾಸಿ ಥಿಯೋಫೇನ್ (ಮೂಲ ಹೆಸರು ಮೈಕೆಲ್) ರವರ ವೀರಗುಣಗಳನ್ನೂ ಗುರುತಿಸಲಾಗಿದೆ. 1913ರಲ್ಲಿ ಜನಿಸಿದ ಅವರು ಕಾಪುಚಿನ್ ಸಂಘದಲ್ಲಿ ಸೇರಿ ಬಡವರಿಗಾಗಿ ಸೇವೆ ಸಲ್ಲಿಸಿದರು. ಪ್ರಸಿದ್ಧ ಉಪದೇಶಕರಾಗಿದ್ದ ಅವರು ನಮ್ರತೆ ಮತ್ತು ಪ್ರಾರ್ಥನಾ ಜೀವನಕ್ಕಾಗಿ ಖ್ಯಾತರಾಗಿದ್ದರು. 1968ರಲ್ಲಿ ಅವರು ಪರಲೋಕಸ್ಥರಾದರು.

ಇದಲ್ಲದೆ ಬ್ರೆಶಿಯಾದ ಸಾಮಾನ್ಯ ಭಕ್ತ ಫೌಸ್ಟೋ ಗೆಯಿ ರವರನ್ನೂ “ವಂದನೀಯ” ಎಂದು ಘೋಷಿಸಲಾಗಿದೆ. ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಯಿಲೆಯಿಂದ ದೇಹಶಕ್ತಿಯನ್ನು ಕಳೆದುಕೊಂಡರೂ, ತಮ್ಮ ನೋವನ್ನು ಪ್ರೇಷಿತರ ಸೇವೆಯಾಗಿ ಸ್ವೀಕರಿಸಿದರು. ಅವರು ರೋಗಿಗಳಿಗೆ ಪತ್ರಗಳ ಮೂಲಕ ಧೈರ್ಯ ತುಂಬಿ, ಧರ್ಮ ಸಭೆಯಲ್ಲಿ ಅವರ ಪಾತ್ರವನ್ನು ಬಲಪಡಿಸಲು ಪ್ರಯತ್ನಿಸಿದರು. 1968ರಲ್ಲಿ ಅವರು ನಿಧನರಾದರೂ, ಅವರ ನಂಬಿಕೆ ಮತ್ತು ಮರಿಯಮ್ಮನ ಮೇಲಿನ ಭಕ್ತಿ ಅನೇಕರಿಗೆ ಪ್ರೇರಣೆಯಾಗಿದೆ.

21 ಫೆಬ್ರವರಿ 2026, 19:17