ಸಂತ ಕಾರ್ಲೋ ಅಕುಟಿಸ್‌ಗೆ ಸಮರ್ಪಿತ ಹೊಸ ಆಪ್ ಬಿಡುಗಡೆ ಮಾಡಿದ ವ್ಯಾಟಿಕನ್
ವ್ಯಾಟಿಕನ್ ವರದಿ
ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್‌ನ ಹೊಸ ಅಧಿಕೃತ ಆಪ್ ಅನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಕೌಶಲ್ಯ ಹೊಂದಿದ್ದ ಸಂತ ಕಾರ್ಲೋ ಅಕುಟಿಸ್‌ಗೆ ಸಮರ್ಪಿಸಲಾಗಿದೆ.
ಈ ಆಪ್ ಸಂಸ್ಥಾತ್ಮಕ ಮಾಹಿತಿ ನೀಡುವ ವೆಬ್‌ಸೈಟ್ www.vaticanstate.va ನಲ್ಲಿ ವಿಷಯಗಳನ್ನು ಒಳಗೊಂಡಿದ್ದು, ಮೊಬೈಲ್ ಸಾಧನಗಳಲ್ಲಿ ಮಾಹಿತಿಯನ್ನು ಅರ್ಥೈಸಲು ಇನ್ನಷ್ಟು ಸುಲಭ, ವೇಗವಾದ ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
ಹೊಸ ಆಪ್ ಬಳಕೆದಾರರಿಗೆ ಸುದ್ದಿ, ಘೋಷಣೆಗಳು ಮತ್ತು ಅಧಿಕೃತ ಪ್ರಕಟಣೆಗಳನ್ನು ವೇಗವಾಗಿ ಹಾಗೂ ಸುಲಭವಾಗಿ ವೀಕ್ಷಿಸಲು ಅವಕಾಶ ನೀಡುತ್ತದೆ. ಇದರಿಂದ ಬ್ರೌಸಿಂಗ್ ಅನುಭವ ಉತ್ತಮಗೊಳ್ಳುತ್ತಿದ್ದು, ಮಾಹಿತಿಯು ಹೆಚ್ಚು ಸುಲಭವಾಗಿ ಲಭ್ಯವಾಗುತ್ತದೆ.
ಈ ಆಪ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ನವೀಕರಿಸಲಾದ ಸುದ್ದಿ ಮತ್ತು ಸಂಸ್ಥಾತ್ಮಕ ಪ್ರಕಟಣೆಗಳಿಗೆ ಪ್ರವೇಶ, ಇತ್ತೀಚಿನ ಸುದ್ದಿಗಳಿಗಾಗಿ ಅಧಿಸೂಚನೆಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಹೊಂದುವಂತೆ ಸರಳೀಕೃತ ನ್ಯಾವಿಗೇಷನ್, ಹಾಗೂ ವಿಷಯಗಳ ಉತ್ತಮ ಪ್ರವೇಶಾರ್ಹತೆ ಮತ್ತು ಬಳಕೆ ಸುಲಭತೆ ಸೇರಿವೆ.
ವ್ಯಾಟಿಕನ್ ಗವರ್ನರೇಟ್‌ನ ಹೊಸ ಆಪ್‌ನ ಸ್ಕ್ರೀನ್‌ಶಾಟ್‌ಗಳ ವೈಶಿಷ್ಟ್ಯಗಳು
ಈ ಆಪ್‌ನಲ್ಲಿ ಹಲವು ವಿಭಾಗಗಳಿವೆ ದಿನದ ಸಂತರ ಸುದ್ದಿ, ಸಂದರ್ಶನಗಳು, ವೀಡಿಯೊಗಳು, ಮತ್ತು ಗವರ್ನರೇಟ್‌ನ ಇತರ ಸಂಸ್ಥೆಗಳೊಂದಿಗೆ ಸಂಪರ್ಕಿಸುವ ಲಿಂಕ್‌ಗಳು. ಅವುಗಳಲ್ಲಿ CFN, ವ್ಯಾಟಿಕನ್ ಮ್ಯೂಸಿಯಂಗಳು, ವ್ಯಾಟಿಕನ್ ಫಾರ್ಮಸಿ, ವ್ಯಾಟಿಕನ್ ಅಂಚೆ ಇಲಾಖೆ, ಜಗದ್ಗುರುಗಳ ಮನೆಗಳು ಮತ್ತು ವ್ಯಾಟಿಕನ್ ವೀಕ್ಷಣಾಲಯ ಸೇರಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎನ್ನಲಾಗಿದೆ.
ಈ ಕ್ರಮವು ಗವರ್ನರೇಟ್ ಪ್ರೋತ್ಸಾಹಿಸುತ್ತಿರುವ ಡಿಜಿಟಲ್ ನವೋತ್ಪಾದನಾ ಪ್ರಯಾಣದ ಭಾಗವಾಗಿದ್ದು, ಆಧುನಿಕ ಮತ್ತು ಸಮಾವೇಶಕಾರಿ ಸಾಧನಗಳ ಮೂಲಕ ಪಾರದರ್ಶಕತೆ, ಭಾಗವಹಿಸುವಿಕೆ ಮತ್ತು ಸಂಸ್ಥಾತ್ಮಕ ಮಾಹಿತಿಯ ವ್ಯಾಪಕ ಪ್ರಸರಣವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ಈ ಹೊಸ ಆಪ್ ಈಗ ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದೆ.