ಗಾಜಾ: ಇಟಲಿಯ ಕರಿತಾಸ್ ಸಂಸ್ಥೆ ಜೆರುಸಲೇಮ್‌ನ ಕರಿತಾಸ್ ಸಂಸ್ಥೆಗೆ ಸಂಪೂರ್ಣ ಬೆಂಬಲ
ಇಸ್ರೇಯೆಲ್ ಜೆರುಸಲೇಮಿನ ಕರಿತಾಸ್ ಸಂಸ್ಥೆಗೆ ಮಾನವೀಯ ಸಹಾಯ ನೀಡುವ ಸಾಮರ್ಥ್ಯವನ್ನು ಮಿತಿಗೊಳಿಸಬಹುದಾದ ಕ್ರಮಗಳನ್ನು ಘೋಷಿಸಿರುವ ಹಿನ್ನೆಲೆ, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ನಡೆಸುತ್ತಿರುವ ಜೀವ ಉಳಿಸುವ ಕಾರ್ಯಕ್ರಮಗಳಿಗೆ ದಾನ ನೀಡುವ ಇಟಲಿಯ ಉಪನಿರ್ದೇಶಕರು ಕ್ಯಾಥೊಲಿಕ್ ಸಹಾಯ ಸಂಸ್ಥೆಯ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸ್ಟೆಫಾನೋ ಲೆಶ್ಚಿನ್ಸ್ಕಿ ಬರಹ
ಹೊಸ ನೋಂದಣಿ ನಿಯಮಗಳನ್ನು ಪಾಲಿಸಲು ನಿರಾಕರಿಸಿದಲ್ಲಿ ಗಾಜಾ ಪಟ್ಟಿಯಲ್ಲೂ ಪಶ್ಚಿಮ ದಂಡೆಯಲ್ಲೂ 37 ಮಾನವೀಯ ಸಂಸ್ಥೆಗಳ ಕಾರ್ಯಾಚರಣೆಯನ್ನು ನಿಷೇಧಿಸುವುದಾಗಿ ಇಸ್ರೇಲ್ ಗುರುವಾರ ದೃಢಪಡಿಸಿದೆ. ಈ ನಿಯಮಗಳನ್ನು ಡಯಾಸ್ಪೋರಾ ವ್ಯವಹಾರಗಳು ಮತ್ತು ಯಹೂದಿ ವಿರೋಧಿ ಚಟುವಟಿಕೆಗಳನ್ನು ಎದುರಿಸುವ ಸಚಿವಾಲಯ ಹೇರಿದೆ.ಈ ಕ್ರಮವನ್ನು ಅಂತರರಾಷ್ಟ್ರೀಯ ಸಮುದಾಯದ ಬಹುಪಾಲು ತೀವ್ರವಾಗಿ ಟೀಕಿಸಿದ್ದು, ಜೆರುಸಲೇಮ್‌ನ ಲ್ಯಾಟಿನ್ ಪ್ಯಾಟ್ರಿಯಾರ್ಕೆಟ್ ಕೂಡ ಪ್ರತಿಕ್ರಿಯೆ ನೀಡಿದೆ.
ಇಸ್ರೇಲ್‌ನ ಡಯಾಸ್ಪೋರಾ ವ್ಯವಹಾರಗಳ ಸಚಿವಾಲಯದ ಪ್ರಕಾರ, ಅಧಿಕಾರಿಗಳು ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಎನ್‌ಜಿಓಗಳ ಅನುಮತಿಪತ್ರಗಳು ಅವಧಿ ಮುಗಿದ ನಂತರ ರದ್ದಾಗಲಿದ್ದು, 2026ರ ಮಾರ್ಚ್ 1ರೊಳಗೆ ಗಾಜಾ ಪಟ್ಟಿಯಲ್ಲಿ ಕಾರ್ಯನಿರ್ವಹಣೆ ನಿಲ್ಲಿಸಬೇಕಾಗುತ್ತದೆ.
ಈ ನಿರ್ಧಾರವನ್ನು ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ತಿರಸ್ಕರಿಸಿದ್ದು, ಇದು ಪ್ಯಾಲೆಸ್ಟೈನ್ ಪ್ರದೇಶದಲ್ಲಿನ ಗಂಭೀರ ಮಾನವೀಯ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಬಹುದು ಎಂದು ಎಚ್ಚರಿಸಿವೆ. ಅಲ್ಲಿ ವೈದ್ಯಕೀಯ ಸೇವೆ, ಆಹಾರ ಮತ್ತು ನೀರಿನಂತಹ ಅವಶ್ಯಕ ಸೇವೆಗಳಿಗೆ ಪ್ರವೇಶ ಇನ್ನೂ ತೀರಾ ಅಸಮರ್ಪಕವಾಗಿದೆ.
ಇಸ್ರೇಲ್ ಪ್ರಕಟಿಸಿದ ಪಟ್ಟಿಯಲ್ಲಿ ಜೆರುಸಲೇಮಿನ ಕರಿತಾಸ್ ಸಂಸ್ಥೆ, ನಾರ್ವೇಜಿಯನ್ ರಿಫ್ಯೂಜಿ ಕೌನ್ಸಿಲ್, ಕೇರ್ ಇಂಟರ್‌ನ್ಯಾಷನಲ್, ಆಕ್ಸ್ಫ್ಯಾಮ್ ಮತ್ತು ಆಕ್ಷನ್‌ಏಯ್ಡ್ ಸೇರಿವೆ.
ಜೆರುಸಲೇಮ್‌ನ ಲ್ಯಾಟಿನ್ ಪ್ಯಾಟ್ರಿಯಾರ್ಕೆಟ್‌ನ ಪ್ರತಿಕ್ರಿಯೆ
ಜೆರುಸಲೇಮ್‌ನ ಕಾರಿತಾಸ್ ಸಂಸ್ಥೆ ಅನುಮತಿಪತ್ರ ನವೀಕರಣವಾಗದಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಜೆರುಸಲೇಮ್‌ನ ಲ್ಯಾಟಿನ್ ಪ್ಯಾಟ್ರಿಯಾರ್ಕೆಟ್, ಸಂಸ್ಥೆಯ ಕಾನೂನು ಸ್ಥಾನಮಾನವನ್ನು ಸಮರ್ಥಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಜೆರುಸಲೇಮಿನ ಕರಿತಾಸ್ ಸಂಸ್ಥೆ ಪವಿತ್ರ ಭೂಮಿಯ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ ಅಧೀನದಲ್ಲೂ ಆಡಳಿತದಲ್ಲೂ ಕಾರ್ಯನಿರ್ವಹಿಸುವ ಮಾನವೀಯ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಇಸ್ರೇಲ್‌ನಲ್ಲಿ, ಜೆರುಸಲೇಮೀನ ಕರಿತಾಸ್ ಸಂಸ್ಥೆ ಒಂದು ಧಾರ್ಮಿಕ ಕಾನೂನು ವ್ಯಕ್ತಿಯಾಗಿದ್ದು, ಅದರ ಸ್ಥಾನಮಾನ ಮತ್ತು ಕಾರ್ಯವನ್ನು 1993ರ ಮೂಲ ಒಪ್ಪಂದ ಮತ್ತು ನಂತರ 1997ರ ಕಾನೂನು ವ್ಯಕ್ತಿತ್ವ ಒಪ್ಪಂದಗಳ ಮೂಲಕ ಜಗದ್ಗುರುಗಳು ಮತ್ತು ಇಸ್ರೇಲ್ ರಾಜ್ಯ ಗುರುತಿಸಿವೆ.
ಜೆರುಸಲೇಮಿನ ಕರಿತಾಸ್ ಸಂಸ್ಥೆ ಇಸ್ರೇಲ್ ಅಧಿಕಾರಿಗಳೊಂದಿಗೆ ಯಾವುದೇ ಹೊಸ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿಲ್ಲ ಮತ್ತು ತನ್ನ ಆದೇಶದಂತೆ ಗಾಜಾ, ಪಶ್ಚಿಮ ದಂಡೆ ಹಾಗೂ ಜೆರುಸಲೇಮಿನಲ್ಲಿ ಮಾನವೀಯ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದೆ.
ಇಟಲಿಯ ಐಕ್ಯತೆ
ಜೆರುಸಲೇಮಿನ ಕರಿತಾಸ್ ಸಂಸ್ಥೆ ಇಸ್ರೇಲ್ ಸರ್ಕಾರದ ಈ ಕ್ರಮಗಳು ಇಟಲಿಯ ನಾಯಕತ್ವಕ್ಕೆ ಅಚ್ಚರಿ ಮೂಡಿಸಿದ್ದು, ಜೆರುಸಲೇಮಿನ ಕರಿತಾಸ್ ಸಂಸ್ಥೆ ನೀಡುವ ಬೆಂಬಲ ಅಚಲವಾಗಿರುತ್ತದೆ ಎಂದು ಸಂಸ್ಥೆ ಹೇಳಿದೆ.
ಜೆರುಸಲೇಮಿನ ಕರಿತಾಸ್ ಸಂಸ್ಥೆ ಎಂದು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಉಪನಿರ್ದೇಶಕಿ ಸಿಲ್ವಿಯಾ ಸಿನಿಬಾಲ್ಡಿ ಒತ್ತಿ ಹೇಳಿದರು, ಪವಿತ್ರ ಭೂಮಿಯ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಾನವೀಯ ಸಂಸ್ಥೆಯಾಗಿದೆ ಮತ್ತು ಇಸ್ರೇಲ್ ರಾಜ್ಯ ಹಾಗೂ ಜಗದ್ಗುರುಗಳ ನಡುವಿನ ಒಪ್ಪಂದಗಳಿಂದ ರೂಪುಗೊಂಡ ಕಾನೂನು ಸ್ಥಾನಮಾನವನ್ನು ಹೊಂದಿದೆ. ಇನ್ನು ಇಸ್ರೇಲ್ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿರುವ ಜೆರುಸಲೇಮೀನ ಕರಿತಾಸ್ ಸಂಸ್ಥೆ ಅಂತಾರಾಷ್ಟ್ರೀಯ ದೇಶದೊಳಗೆ ನೇರ ಕಾರ್ಯಾಚರಣೆ ನಡೆಸುವ ಸಂಸ್ಥೆಯಲ್ಲ. ಹೀಗಾಗಿ, ಯಾವುದೇ ನೋಂದಣಿ ಪ್ರಕ್ರಿಯೆಯೇ ನಡೆಯುತ್ತಿರಲಿಲ್ಲ; ಆದ್ದರಿಂದ ಈ ನಿರ್ಧಾರ ಸಂಪೂರ್ಣವಾಗಿ ಅಚ್ಚರಿಯೂ ಅನಿರೀಕ್ಷಿತವೂ ಆಗಿದೆ.
ಅತ್ಯಗತ್ಯ ಮತ್ತು ಅನಿವಾರ್ಯ ಕಾರ್ಯಾಚರಣೆಗಳು
ಗಾಜಾ ಮತ್ತು ಪಶ್ಚಿಮ ದಂಡೆ ಎರಡೂ ಪ್ರದೇಶಗಳಲ್ಲಿ ತನ್ನ ಧ್ಯೇಯವನ್ನು ಮುಂದುವರಿಸುವ ದೃಢನಿಶ್ಚಯವನ್ನು ಜೆರುಸಲೇಮಿನ ಕರಿತಾಸ್ ಸಂಸ್ಥೆ ತಕ್ಷಣವೇ ವ್ಯಕ್ತಪಡಿಸಿದೆ.
ಈ ಬಗ್ಗೆ ಸಿನಿಬಾಲ್ಡಿರವರು, ಇದು ಅಗತ್ಯವಿದ್ದ ಸ್ಪಷ್ಟೀಕರಣವಾಗಿದ್ದು, ಆದರೆ ನೆಲಮಟ್ಟದಲ್ಲಿ ಪ್ರತಿದಿನ ಎದುರಾಗುವ ನೈಜ ಕಷ್ಟಗಳು ಹಾಗೂ ಅಸ್ಥಿರ ಪರಿಸ್ಥಿತಿಗಳನ್ನು ಇದು ಹೊರತುಪಡಿಸುವುದಿಲ್ಲ ಎಂದು ಹೇಳಿದರು.
ದಾನವು ಜಾಲವಾಗಿ, ನಾವು ಪ್ರಾರ್ಥನೆಯ ಮೂಲಕದ ದೈನಂದಿನ ಸಹವಾಸದೊಂದಿಗೆ ಮಾತ್ರವಲ್ಲದೆ, ಗಾಜಾ ಪಟ್ಟಿಯಲ್ಲೂ ಪಶ್ಚಿಮ ದಂಡೆಯಲ್ಲೂ ನಡೆಯುವ ಕಾರ್ಯಗಳಿಗೆ ನೇರ ಬೆಂಬಲ ನೀಡುವ ಮೂಲಕ ಜೆರುಸಲೇಮಿನ ಕರಿತಾಸ್ ಸಂಸ್ಥೆ ಜೊತೆ ನಿಲ್ಲುತ್ತೇವೆ, ಎಂದು ಅವರು ಹೇಳಿದರು.
ಆರೋಗ್ಯ ಸೇವೆಯಿಂದ ಹಿಡಿದು ಮನೋ-ಸಾಮಾಜಿಕ ಬೆಂಬಲದವರೆಗೆ ಈ ಕಾರ್ಯಗಳು ಅತ್ಯಗತ್ಯ ಹಾಗೂ ಅನಿವಾರ್ಯವಾಗಿವೆ ಎಂದು ಅವರು ಹೇಳಿದರು.
ಸ್ಪಷ್ಟವಾದ ಸಹಾಯ ಕಠಿಣ ಚಳಿಗಾಲದ ಈ ಸಮಯದಲ್ಲಿ ಪವಿತ್ರ ಭೂಮಿಯ ಜನರನ್ನು ತಟ್ಟುತ್ತಿರುವ ಅನೇಕ ತುರ್ತು ಪರಿಸ್ಥಿತಿಗಳನ್ನು ಜೆರುಸಲೇಮಿನ ಕರಿತಾಸ್ ಸಂಸ್ಥೆ ಎದುರಿಸುತ್ತಿದ್ದು, ಇದಕ್ಕೆ ದಾನದ ಜಾಲಕ್ಕೆ ದೊರೆಯುವ ದೇಣಿಗೆಗಳು ಸಹಾಯವಾಗಿವೆ ಎಂದು ಸಿನಿಬಾಲ್ಡಿ ಹೇಳಿದರು.
ಅವರು ಕ್ರಿಸ್‌ಮಸ್ ಅವಧಿಯಲ್ಲಿ ಪಶ್ಚಿಮ ದಂಡೆಯ ಕುಟುಂಬಗಳಿಗೆ ನೆರವು ನೀಡುವ ಯೋಜನೆಯನ್ನು ನೆನಪಿಸಿದರು.
ಈ ಯೋಜನೆಯು ಆ ಪ್ರದೇಶಗಳಲ್ಲಿನ 250 ಕುಟುಂಬಗಳಿಗೆ ಆರ್ಥಿಕ, ಸಮುದಾಯ ಆಧಾರಿತ ಬೆಂಬಲವನ್ನು ಒದಗಿಸುತ್ತದೆ. ಇತ್ತ ಗಾಜಾ ಪಟ್ಟಿಯಲ್ಲಿ ನಾವು ತಾಯಿ ಮತ್ತು ಶಿಶು ಆರೋಗ್ಯ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಬೆಂಬಲಿಸುತ್ತೇವೆ, ಎಂದು ಅವರು ಹೇಳಿದರು.
ಜಗದ್ಗುರು ಫ್ರಾನ್ಸಿಸ್ ರವರು ಉಪಯೋಗಿಸುತ್ತಿದ್ದ ಜನ ದರ್ಶಕ ವಾಹನವನ್ನು ಜೆರುಸಲೇಮಿನ ಕರಿತಾಸ್ ಸಂಸ್ಥೆ ಮಕ್ಕಳ ಚಿಕಿತ್ಸಾವಾಹನವನ್ನಾಗಿ ಪರಿವರ್ತಿಸಿದೆ ಎಂದು ಸಿನಿಬಾಲ್ಡಿ ಉಲ್ಲೇಖಿಸಿದ್ದಾರೆ.
ಯಾವುದೇ ಸೌಲಭ್ಯಗಳೇ ಉಳಿದಿಲ್ಲದ ಸ್ಥಳದಲ್ಲಿ ಈ ರೀತಿಯ ಯೋಜನೆಯನ್ನು ಬೆಂಬಲಿಸುವುದು, ಆಶೆಯ ದೀಪವನ್ನು ಬೆಳಗಿಟ್ಟಂತೆ ಎಂದು ಅವರು ಹೇಳಿದರು.